ಬೆಂಗಳೂರು: ನಿರ್ಮಾಪಕ ಕೆ.ಮಂಜು (Producer K.Manju) ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ (Padmanabhanagara Constituency) ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ನಾನು ಜೆಡಿಎಸ್ (JDS) ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಕೆ.ಮಂಜು ಶುಕ್ರವಾರ ಹೇಳಿದ್ದರು. ಕೆ.ಮಂಜು ಹೇಳಿಕೆ ಬೆನ್ನಲ್ಲೇ ಜೆಡಿಎಸ್ ಮುಖಂಡ ಬಂಜಾರಪಾಳ್ಯ ಮಂಜುನಾಥ್ (Banajarapalya Manjunath) ತಿರುಗೇಟು ನೀಡಿದ್ದಾರೆ. ಬಂಜಾರಪಾಳ್ಯ ಮಂಜುನಾಥ್ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (Former PM HD Deve Gowda) ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನನ್ನ ಮಗ ಕಾರ್ತಿಕ್ ಗೌಡಗೆ (Kartik Gowda) ಪದ್ಮನಾಭ ನಗರ ಟಿಕೆಟ್ ಫೈನಲ್ ಆಗಿದೆ. ದೇವೇಗೌಡರ ಈ ಬಗ್ಗೆ ಹೇಳಿ ತೀರ್ಮಾನ ಮಾಡಿ ಆಗಿದೆ ಎಂದು ತಿಳಿಸಿದರು.
ಕೆ. ಮಂಜು ಅವರಿಗೆ ಜೆಡಿಎಸ್ ಟಿಕೆಟ್ ನೀಡುವುದಾಗಿ ಯಾರು ಭರವಸೆ ನೀಡಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ದೇವೇಗೌಡರ ಜೊತೆ ಮಾತಾಡಿ, ಗೊಂದಲ ಬಗೆಹರಿಸಿಕೊಳ್ಳುತ್ತೇನೆ ಎಂದು ಬಂಜಾರಪಾಳ್ಯ ಮಂಜುನಾಥ್ ಹೇಳಿದರು.
ನನ್ನ ಮಗನಿಗೆ ಟಿಕೆಟ್ ಫೈನಲ್ ಆಗಿದೆ
ನಾನು 30 ವರ್ಷ ದಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನ ಮಗ ಈಗಾಗಲೇ ಕ್ಷೇತ್ರದಲ್ಲಿ ಹಲವು ಜನಪರ ಕೆಲಸ ಮಾಡಿದ್ದು, ಪಕ್ಷದ ಪರ ಪ್ರಚಾರ ಕಾರ್ಯ ಆರಂಭ ಮಾಡಿದ್ದಾನೆ. ನನಗೆ ಟಿಕೆಟ್ ಬೇಡ, ನನ್ನ ಮಗನಿಗೆ ಟಿಕೆಟ್ ನೀಡಲು ದೇವೇಗೌಡರನ್ನ ಕೇಳಿದ್ದೆ. ನನ್ನ ಮಗನಿಗೆ ಟಿಕೆಟ್ ಫೈನಲ್ ಆಗಿದೆ, ಕೆ. ಮಂಜು ಜೆಡಿಎಸ್ ನಿಂದ ಸ್ಪರ್ಧೆ ಅಸಾಧ್ಯ ಎಂದು ಡ್ಡಿ ಮುರಿದಂತೆ ಹೇಳಿದರು.
30 ವರ್ಷದಿಂದ ಪಕ್ಷ ಸಂಘಟನೆ
ಕೆ.ಮಂಜು ಹೇಳಿಕೆಗೆ ಪ್ರತಿಕ್ರಿಯಿಸಿದ ಬಂಜಾರಪಾಳ್ಯ ಮಂಜುನಾಥ್ ಮಗ ಕಾರ್ತಿಕ್ ಗೌಡ, ನನಗೆ ಕೇವಲ 27 ವರ್ಷ ಆಗಿದ್ರು, ಆರ್ ಅಶೋಕ್ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುವ ಸಾಮರ್ಥ್ಯ ಇದೆ. ನನ್ನ ತಂದೆ 30 ವರ್ಷದಿಂದ ಪಕ್ಷ ಸಂಘಟನೆ ಮಾಡಿದ್ದಾರೆ. ನನ್ನ ತಂದೆ ಅನುಭವ ಅವರ ಸಲಹೆಯನ್ನ ಅನುಸರಿಸಿ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿಯ ಪದ್ಮನಾಭ ನಗರ ಟಿಕೆಟ್ ನನಗೆ ಫೈನಲ್ ಆಗಿದೆ. ದೇವೇಗೌಡರ, ಕುಮಾರಸ್ವಾಮಿಯವರ ಆಶೀರ್ವಾದ ನನ್ನ ಮೇಲಿದೆ ಎಂದು ಕಾರ್ತಿಕ ಗೌಡ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ