Chinese App: ಬೆಂಗಳೂರಿನಲ್ಲಿ ಚೈನೀಸ್ ಆ್ಯಪ್​​ಗಳಿಗೆ ಶಾಕ್! ಇಡಿ ದಾಳಿ, 17 ಕೋಟಿ ವಶಕ್ಕೆ

ಲೋನ್ ಕೊಡ್ತೀವಿ ಅಂತಾ ಆಮಿಷವೊಡ್ಡಿ ನಂತರ ಬ್ಲ್ಯಾಕ್​ಮೇಲ್ ಪ್ರಕರಣಗಳು ಹೆಚ್ಚಾಗ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಹಲವು ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಈಗ ಚೈನೀಸ್ ಆ್ಯಪ್​​ಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿ 17 ಕೋಟಿ ವಶಕ್ಕೆ ಪಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಧಾನಿ ಮೋದಿ (Modi Government) ನೇತೃತ್ವದ ಸರ್ಕಾರ ಕಳೆದ ವರ್ಷ ಒಂದಷ್ಟು ಚೀನಾ ಆ್ಯಪ್​​ಗಳನ್ನು (China App Ban) ನಿಷೇಧಿಸಿತ್ತು. ಎರಡು ದೇಶದ ನಡುವೆ ಯುದ್ಧದ ಕಾರ್ಮೋಡದ ಹಿನ್ನೆಲೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು. ಹೀಗಿರೋವಾಗ ಬೆಂಗಳೂರಿನಲ್ಲಿ (Bengaluru) ಚೈನೀಸ್ ಆಪ್ (Chinese App) ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ (ED Raid) ಮಾಡಿದೆ. ರೇಡ್ ಮಾಡಿ ಒಂದಲ್ಲ ಎರಡಲ್ಲ ಬರೋಬ್ಬರಿ 17 ಕೋಟಿ ವಶಕ್ಕೆ ಪಡೆದಿದೆ. ಹೆಚ್.ಎಸ್.ಆರ್ ಲೇಔಟ್ ಹಾಗೂ ಕೋರಮಂಗಲ ಸೇರಿ ಬೆಂಗಳೂರಿನ 7 ಕಡೆ ಇಡಿ ದಾಳಿ ನಡೆಸಿದೆ. ಸಾರ್ವಜನಿಕರಿಂದ ಹಲವು ದೂರು ಬಂದ ಹಿನ್ನಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಈ ಲೋನ್ ಆ್ಯಪ್​​ಗಳಿಂದ ನಿದ್ದೆನೇ ದೂರಾಗಿದೆ. ಲೋನ್ ಕೊಡ್ತೀವಿ ಅಂತಾ ಆಮಿಷವೊಡ್ಡಿ ನಂತರ ಬ್ಲ್ಯಾಕ್​ಮೇಲ್ ಪ್ರಕರಣಗಳು ಹೆಚ್ಚಾಗ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಹಲವು ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಈಗ ಚೈನೀಸ್ ಆ್ಯಪ್​​ಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿ 17 ಕೋಟಿ ವಶಕ್ಕೆ ಪಡೆದಿದೆ.

Big Shock for Chinese apps in Bengaluru ED raid and 17 crore seized
ಲೋನ್ ಆ್ಯಪ್‌ಗಳು


ಬೆಂಗಳೂರಿನಲ್ಲಿ 18 ಎಫ್ಐಆರ್ ದಾಖಲು
ಲೋನ್ ಕಿರಿಕಿರಿ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ 18 FIR ದಾಖಲಾಗಿತ್ತು. ಲೋನ್ ನೀಡಿ ನಂತರ ಪಾವತಿಸಿದರೂ ಕೂಡ ಕಿರುಕುಳ ನಿಂತಿರಲಿಲ್ಲ. ಈ ಹಿನ್ನೆಲೆ ಸಾರ್ವಜನಿಕರು ಚೈನೀಸ್ ಲೋನ್ ಆಪ್ ಗಳ ವಿರುದ್ದ ದೂರು ದಾಖಲಿಸಿದ್ದರು. ಈಗ ದಾಳಿ ನಡೆದು PMLA ಆಕ್ಟ್ ಅಡಿ ಚೈನೀಸ್ ಆಪ್ ಗಳ ವಿರುದ್ದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸಿಕ್ಕ ಎಟಿಎಂ ಕಾರ್ಡ್​ನಿಂದ ಹಣ ಡ್ರಾ ಮಾಡಿದ; ತಗ್ಲಾಕೊಂಡಿದ್ದು ಹೇಗೆ ಗೊತ್ತಾ?

ಭಾರತೀಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮೋಸ
ಭಾರತೀಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಚೀನಾದ ಹಲವು ಸಂಸ್ಥೆಗಳು ಲೋನ್ ಆಪ್ ತಯಾರಿಸಿತ್ತು. ಚೀನಾದ ಕಂಪನಿಗಳು ನಕಲಿ ನಿರ್ದೇಶಕರನ್ನ ಸೃಷ್ಟಿಸಿ ಲೋನ್ ಆಪ್ ನಡೆಸುತ್ತಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆ ಇಡಿ ದಾಳಿ ಮಾಡಿ ಬ್ಯಾಂಕ್ ದಾಖಲೆಗಳು, ಅಕೌಂಟ್ಸ್ ಗಳನ್ನು ಸೀಜ್ ಮಾಡಿದೆ.

ಬೆಂಗಳೂರಿನಲ್ಲಿ ಪತಿಯಿಂದ ಪತ್ನಿ, ಮಗಳ ಕೊಲೆ!
ಕೋಣನಕುಂಟೆಯಲ್ಲಿ ನಡೆದಿದ್ದ ಒಂದೇ ಕುಟುಂಬದ ಮೂವರು ಸಾವು ಪ್ರಕರಣದ ಅಸಲಿ ಸತ್ಯ ಬಯಲಾಗಿದೆ. ಮರಣೋತ್ತರ ಪರಿಕ್ಷಾ ವರದಿಯಲ್ಲಿ ತಾಯಿ ಹಾಗೂ ಒಂಬತ್ತು ವರ್ಷದ ಮಗುವಿನ ಸಾವಿನ ಸತ್ಯ ಹೊರಬಿದ್ದಿದೆ. ಪತಿಯೇ ಕೊಂದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಉಲ್ಲೇಖವಾಗಿದೆ.

ಮೊದಲು ಪತಿ ಮಹೇಶ್, ಪತ್ನಿ ಹಾಗೂ ಮಗುವಿನ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ನಂತರ ಡೆತ್ ನೋಟ್ ಬರೆದಿಟ್ಟು ಮಹೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಣನಕುಂಟೆಯ ಮೈಸೂರು ಬ್ಯಾಂಕ್ ಕಾಲೊನಿಯಲ್ಲಿ ಈ ಘಟನೆ ನಡೆದಿತ್ತು. ಮಹೇಶ್ ಕ್ಯಾನ್ಸರ್ ನಿಂದ ಬಳಲುತಿದ್ದರು.

ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಬೈಕ್ ಕಳ್ಳತನ!
ಬೆಂಗಳೂರಿನಲ್ಲಿ ವಾಹನಗಳನ್ನು ಹೊಂದೋದರ ಜೊತೆಗೆ ಅದನ್ನು ಕಾಪಾಡಿಕೊಳ್ಳೋದು ಕೂಡ ಅಷ್ಟೇ ಸವಾಲಿನ ಕೆಲಸ. ಯಾಕೆಂದರೆ ಈ ಕಳ್ಳರ ಕಾಟದಿಂದ ಬೈಕ್ ನ್ನು ಕಾಪಾಡೋದಂದ್ರೆ ಸುಮ್ನೆ ಮಾತಲ್ಲ. ಬೆಂಗಳೂರಿನಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಷ್ಪ-3! ಒಂದು ಸಿಗರೇಟ್ ಸೇದೋವಷ್ಟರಲ್ಲಿ ಶ್ರೀಗಂಧ ಮರ ಕಡೀತಿದ್ದ ಗ್ಯಾಂಗ್ ಖೆಡ್ಡಾಕ್ಕೆ

ನಕಲಿ ಕೀಗಳನ್ನು ಬಳಸಿ ಬೈಕ್ ಕಳ್ಳತನ

ಜಯನಗರ ಪೊಲೀಸರು ಅಫ್ರೋಜ್ ಪಾಷಾ, ಹುಸೇನ್ ಸೌದದ್ ಎಂಬಾತನನ್ನು ಬಂಧಿಸಿದ್ದಾರೆ. ಇವರಿಬ್ಬರು ನಕಲಿ ಕೀ ಬಳಸಿ ಕಳ್ಳತನ ಮಾಡ್ತಿದ್ದರು. ಆರೋಪಿಗಳಿಂದ 20 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ಮಾಡ್ತಿದ್ದಾರೆ.

ಶಿವಾಜಿನಗರದಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಅಫ್ರೋಜ್, ಕಳ್ಳತನ ಮಾಡಿದ ವಾಹನದ ಬಿಡಿಭಾಗವನ್ನ ಮಾರಾಟ ಮಾಡುತ್ತಿದ್ದ. ಕಳೆದ ಆರೇಳು ತಿಂಗಳಿನಿಂದ ಆರೋಪಿಗಳು ಬನಶಂಕರಿ, ಜೆಪಿ ನಗರ, ಬಸವನಗುಡಿ, ಶಿವಾಜಿನಗರ ಸೇರಿ ಹಲವೆಡೆ ಬೈಕ್ ಕಳ್ಳತನ ಮಾಡುತ್ತಿದ್ದರು.
Published by:Thara Kemmara
First published: