DK Shivakumar: ದೆಹಲಿ ನ್ಯಾಯಾಲಯದಿಂದ ಡಿಕೆ ಶಿವಕುಮಾರ್​ಗೆ ಜಾಮೀನು ಮಂಜೂರು

DK Shivakumar: ಜಾರಿ ನಿರ್ದೇಶನಾಲಯ ಮತ್ತು ಡಿಕೆಶಿ ಪರ ವಕೀಲರ ವಾದ - ಪ್ರತಿವಾದಗಳನ್ನು ಆಲಿಸಿದ್ದ ದೆಹಲಿ ಹೈಕೋರ್ಟ್​ ನ್ಯಾಯಾಧೀಶ ಸುರೇಶ್​ ಕುಮಾರ್​ ಕೈಟಾ ಆದೇಶ ಕಾಯ್ದಿರಿಸಿದ್ದರು. ಇದೀಗ ಆದೇಶ ಪ್ರಕಟಿಸಿರುವ ನ್ಯಾ. ಕೈಟಾ ಡಿಕೆಶಿಗೆ ಬಿಗ್​ ರಿಲೀಫ್​ ನೀಡಿದ್ದಾರೆ. 

G Hareeshkumar | news18-kannada
Updated:October 23, 2019, 9:57 PM IST
  • Share this:
ನವದೆಹಲಿ (ಅ.23) : ದೆಹಲಿ ನಿವಾಸದಲ್ಲಿ ಪತ್ತೆಯಾದ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್​ ಜಾಮೀನು ನೀಡಿದೆ. ಈ ಮೂಲಕ ತಿಂಗಳ ನಂತರ ಮಾಜಿ ಸಚಿವ ಡಿ ಕೆ ಶಿವಕುಮಾರ್​ಗೆ ಕೋರ್ಟ್​ ಬಿಗ್​ ರಿಲೀಫ್​ ನೀಡಿದೆ.

ಜಾರಿ ನಿರ್ದೇಶನಾಲಯ ಮತ್ತು ಡಿಕೆಶಿ ಪರ ವಕೀಲರ ವಾದ - ಪ್ರತಿವಾದಗಳನ್ನು ಆಲಿಸಿದ್ದ ದೆಹಲಿ ಹೈಕೋರ್ಟ್​ ನ್ಯಾಯಾಧೀಶ ಸುರೇಶ್​ ಕುಮಾರ್​ ಕೈಟಾ ಆದೇಶ ಕಾಯ್ದಿರಿಸಿದ್ದರು. ಇದೀಗ ಆದೇಶ ಪ್ರಕಟಿಸಿರುವ ನ್ಯಾ. ಕೈಟ್​ ಡಿಕೆಶಿಗೆ ಬಿಗ್​ ರಿಲೀಫ್​ ನೀಡಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಡಿ.ಕೆ ಶಿವಕುಮಾರ್ ಅವರಿಂದ ಸಾಕ್ಷ್ಯನಾಶದ ಸಾಧ್ಯತೆಗಳು ಕಡಿಮೆ ಇರುವುದನ್ನು ಮನಗಂಡ ನ್ಯಾಯಾಲಯ ಜಾಮೀನು ಮಂಜೂರು ಮಾಡಲು ಅನುಮತಿ ನೀಡಿದೆ. 25 ಲಕ್ಷ ರೂಪಾಯಿ ಬಾಂಡ್ ನೀಡುವುದು, ಪಾಸ್​​ಪೋರ್ಟ್​​ನ್ನು ನ್ಯಾಯಾಲಯದ ವಶಕ್ಕೆ ನೀಡಬೇಕು ಹಾಗೂ ವಿಚಾರಣೆಗೆ ಅಗತ್ಯವಿದ್ದಾಗ ಹಾಜರಾಗಬೇಕೆಂಬ ಷರತ್ತುಗಳನ್ನು ಕೋರ್ಟ್ ವಿಧಿಸಿದೆ.

ಡಿ ಕೆ ಶಿವಕುಮಾರ್ ಅವರನ್ನು ಸೆ. 3ರಂದು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿತ್ತು. ಬಳಿಕ ಅ.17ರಂದು ನ್ಯಾಯಾಲಯವು ತನ್ನ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಅ. 25 ರಿಂದ ಡಿಕೆಶಿಯನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು

ಇದನ್ನೂ ಓದಿ : ದೆಹಲಿಯ ತಿಹಾರ್ ಜೈಲಿನಲ್ಲಿ ಡಿಕೆಶಿಯನ್ನು ಭೇಟಿಯಾದ ಸೋನಿಯಾ ಗಾಂಧಿ; ಜಾಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್​ಗೆ ಮೊರೆ?

ನ್ಯಾಯಾಲಯ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿದ ಬಳಿಕ ದೆಹಲಿ ಹೈಕೋರ್ಟ್​​ ಆದೇಶ ರೋಸ್​​ ಅವೆನ್ಯೂ ರಸ್ತೆಯ ಇಡಿ ವಿಶೇಷ ನ್ಯಾಯಾಲಯಕ್ಕೆ ರವಾನೆಯಾಗುತ್ತದೆ. ಈ ವೇಳೆ ಡಿಕೆ ಶಿವಕುಮಾರ್​​ ಪರ ವಕೀಲರು ಇಬ್ಬರು ಶ್ಯೂರಿಟಿಗಳನ್ನು ವಿಶೇಷ ನ್ಯಾಯಾಲಯಕ್ಕೆ  ಒದಗಿಸಬೇಕು ಆ ಬಳಿಕ, ಇಡಿ ವಿಶೇಷ ನ್ಯಾಯಾಲಯ ಡಿ ಕೆ ಶಿ ಅವರನ್ನು ಬಿಡುಗಡೆ ಮಾಡಿ ಎಂದು ತಿಹಾರ್​​ ಜೈಲಿಗೆ ಆದೇಶದ ಪ್ರತಿ ಕಳುಹಿಸುತ್ತಾರೆ. ನಂತರ ಡಿ ಕೆ ಶಿವಕುಮಾರ್​ ಬಿಡುಗಡೆ ಆಗಲಿದ್ದಾರೆ.

ಇನ್ನೂ ಡಿಕೆಶಿಗೆ ಜಾಮೀನು ಸಿಕ್ಕಿರುವುದಕ್ಕೆ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ,  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂವಾರ್​ ಸೇರಿದಂತೆ ಹಲವರು ಹರ್ಷ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.ಏನಿದು ಡಿಕೆಶಿ ಪ್ರಕರಣ?: ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಡಿಕೆಶಿ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿಕೆಶಿ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು.

(ವರದಿ: ಧರಣೀಶ್​ ಬೂಕನಕೆರೆ) 
First published: October 23, 2019, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading