HOME » NEWS » State » BIG RELIEF FOR MOHAMMED NALAPAD

ವಿದ್ವತ್​ ಹಲ್ಲೆ ಪ್ರಕರಣ: ಮೊಹಮ್ಮದ್ ನಲಪಾಡ್​​ಗೆ ತಾತ್ಕಾಲಿಕ ರಿಲೀಫ್

116 ದಿನಗಳ ಜೈಲುವಾಸದ ನಂತರ ಷರತ್ತು ಬದ್ಧ ಜಾಮೀನಿನ ಮೇಲೆ ಮೊಹಮ್ಮದ್ ನಲಪಾಡ್ ಹೊರಬಂದಿದ್ದರು.

zahir | news18
Updated:December 16, 2018, 9:57 AM IST
ವಿದ್ವತ್​ ಹಲ್ಲೆ ಪ್ರಕರಣ: ಮೊಹಮ್ಮದ್ ನಲಪಾಡ್​​ಗೆ ತಾತ್ಕಾಲಿಕ ರಿಲೀಫ್
ಮೊಹಮ್ಮದ್ ನಲಪಾಡ್
  • News18
  • Last Updated: December 16, 2018, 9:57 AM IST
  • Share this:
ಬೆಂಗಳೂರು: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್​ ಪುತ್ರ ಮೊಹಮ್ಮದ್ ನಲಪಾಡ್‌ಗೆ ದೊಡ್ಡದೊಂದು ರಿಲೀಫ್ ಸಿಕ್ಕಿದೆ. ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಹೈಕೋರ್ಟ್​ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದಾರೆ. ವಿದ್ವತ್ ಮೇಲಿನ ಹಲ್ಲೆ ಪ್ರಕರಣವನ್ನು ತನಿಖೆ ನಡೆಸಲು ಸಿಸಿಬಿ ಇಲಾಖೆಗೆ ಪೊಲೀಸ್ ಠಾಣೆ ಮಾನ್ಯತೆ ಇಲ್ಲವೆಂದು ವಾದದಲ್ಲಿ ಮಂಡಿಸಲಾಗಿದೆ. ಹಾಗಾಗಿ ನಲಪಾಡ್‌ ವಿರುದ್ಧ ನಡೆಯುತ್ತಿದ್ದ ಸಿಸಿಬಿ ತನಿಖೆಗೆ ಮಧ್ಯಂತರ ತಡೆ ನೀಡಲು ಸಿಸಿಬಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಗಾಗಿ ಸಿಸಿಬಿ ಸಲ್ಲಿಸಿದ್ದ ಚಾರ್ಚ್ ಶೀಟ್ ಅನ್ನು ಪ್ರಶ್ನಿಸಿ ಮೊಹಮ್ಮದ್ ನಲಪಾಡ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಮೊಹಮ್ಮದ್ ನಲಪಾಡ್​ ಪರವಾಗಿ ತೀರ್ಪು ನೀಡಿರುವುದು ಪ್ರಕರಣದಿಂದ ತಾತ್ಕಾಲಿಕ ರಿಲೀಫ್​ ಸಿಕ್ಕಂತಾಗಿದೆ.

ಏನಿದು ಪ್ರಕರಣ?
ಫೆಬ್ರವರಿ 17, 2018 ರಂದು ಮೊಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದರು. ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ತೆರಳಿದ್ದ ವೇಳೆ ವಿದ್ವತ್ ಮತ್ತು ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್​ರನ್ನು ಮನಸ್ಸೋ ಇಚ್ಛೆ ಥಳಿಸಿದ್ದರು.

ಇದನ್ನೂ ಓದಿ: ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಅತಿ ಎತ್ತರದಲ್ಲೂ ಸಿಗಲಿದೆ ವೈ-ಫೈ ಸೇವೆ

ಬಳಿಕ ವಿದ್ವತ್ ರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅಲ್ಲಿಗೆ ತೆರಳಿದ ನಲಪಾಡ್ ಮತ್ತು ತಂಡ ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಇತರೆ 6 ಆರೋಪಿಗಳನ್ನು ಬಂಧಿಸಲಾಗಿತ್ತು. 116 ದಿನಗಳ ಜೈಲುವಾಸದ ನಂತರ ಷರತ್ತು ಬದ್ಧ ಜಾಮೀನಿನ ಮೇಲೆ ಮೊಹಮ್ಮದ್ ನಲಪಾಡ್ ಹೊರಬಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆಯನ್ನು ಹೈಕೋರ್ಟ್​ ತಡೆ ಹಿಡಿದಿದೆ.ಇದನ್ನೂ ಓದಿ: ಕನ್ನಡತಿಗೆ ಸಂದ ಗೌರವ: ಗರ್ಭಪಾತ ಕಾನೂನು ಬದ್ಧಗೊಳಿಸಿದ ಐರ್ಲೆಂಡ್ ಸರ್ಕಾರ
First published: December 16, 2018, 9:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories