ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ವರ್ಷ ಐಟಿ ಅಧಿಕಾರಿಗಳು (IT Officers) ದಾಖಲಿಸಿದ್ದ ಕೇಸ್ಗಳ ತನಿಖೆ ರದ್ದುಗೊಳಿಸಿ ಕೋರ್ಟ್ ಆದೇಶ (Court Order) ನೀಡಿದೆ. ಹಿಂದೆ ಸುಪ್ರೀಂ ಕೋರ್ಟ್ (Supreme Court) ತೀರ್ಪು ಆಧರಿಸಿ ಕೇಸ್ ಕ್ಲೋಸ್ ಮಾಡಿದ್ದಾರೆ. 2009 ರಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಐಟಿ ಅಧಿಕಾರಿಗಳು ಆರೋಪಿಸಿ ಕೇಸ್ ದಾಖಲಿಸಿದ್ರು. ಇದೀಗ ನಾಲ್ಕು ಪ್ರಕರಣಗಳಿಂದ ರೆಡ್ಡಿಗೆ ಕೋರ್ಟ್ ಬಿಗ್ ರಿಲೀಫ್ (Big Relief) ನೀಡಿದೆ.
ರೆಡ್ಡಿ ಮೇಲಿದ್ದ 4 ಕೇಸ್ಗಳು
ಗಣಪತಿ ಡೀಲ್ಕಾಮ್ PVT LTD V.S ಕೇಂದ್ರ ಸರ್ಕಾರದ ಕೇಸ್, 2016 ರ ಬೇನಾಮಿ ವ್ಯವಹಾರ ನಿರ್ಬಂಧ ಕಾಯ್ದೆಯಡಿ ಕೇಸ್ ಹಾಗೂ 2021 ರ ಮೇ 28 ನೇ ತಾರೀಖಿನಂದು ನಾಲ್ಕು ಕೇಸ್ ದಾಖಲಾಗಿತ್ತು. ಸದ್ಯ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆ ಕೇಸ್ ಮುಕ್ತಾಯಗೊಂಡಿದೆ. ಸಿಸಿಹೆಚ್ 47 ನೇ ನ್ಯಾಯಾಧೀಶೆ ಈ ಚಂದ್ರಕಲಾ ಆದೇಶ ನೀಡಿದೆ. ನಾಲ್ಕು ಪ್ರಕರಣಗಳಲ್ಲಿ ಬೇಲ್ ಪಡೆದು ಹೊರಗಿರುವ ಜನಾರ್ದನ ರೆಡ್ಡಿಗೆ ಪಾಸ್ ಪೋರ್ಟ್ ಕೋರ್ಟ್ ಗೆ ಸಲ್ಲಿಸಲು ಷರತ್ತು ನೀಡಿತ್ತು.
ಗಾಲಿ ಜನಾರ್ದನ ರೆಡ್ಡಿ ಮೇಲಿರೋ ಕೇಸ್
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಆಪ್ತ ಕಾರ್ಯದರ್ಶಿ ಮೆಹಫೂಜ್ ಅಲಿಖಾನ್ ಹಾಗೂ ಓಬಳಾಪುರಂ ಮೈನಿಂಗ್ ಕಂಪನಿ ಮತ್ತು ಶ್ರೀ ಮಿನರಲ್ಸ್ ಪಾಲುದಾರ ಬಿ.ವಿ. ಶ್ರೀನಿವಾಸ ರೆಡ್ಡಿ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯಿದೆ-1957ರ ಸೆಕ್ಷನ್ 21, 23 ಹಾಗೂ 4(1) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು
ಗಣಿ ಅಕ್ರಮಕ್ಕೆ ಕುರಿತಾಗಿ ನ್ಯಾ. ಎನ್. ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ವರದಿ ಸಲ್ಲಿಸಲಾಗಿತ್ತು. ಆದರೆ, ಲೋಕಾಯುಕ್ತ ವರದಿಯನ್ನು ಅಂದಿನ ಸರಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಂತರದ ಬೆಳವಣಿಗೆಯಲ್ಲಿ ಪ್ರಕರಣ ಸಿಬಿಐ ಅಂಗಳ ಸೇರಿತ್ತು.
ಜೈಲು ಸೇರಿದ್ದ ಜನಾರ್ದನ ರೆಡ್ಡಿ
ಗಾಲಿ ಜನಾರ್ದನರೆಡ್ಡಿ ಸೇರಿದಂತೆ ಹಲವರು ಬಂಧನಕ್ಕೆ ಒಳಗಾಗಿದ್ದರು. 2011ರ ಸೆ.5 ರಂದು ರೆಡ್ಡಿಯನ್ನು ಸಿಬಿಐ ಬಂಧಿಸಿತ್ತು. ಬಳಿಕ ಜೈಲು ಸೇರಿದ್ದ ಅವರಿಗೆ, 2015ರ ಜ.21ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
ರೆಡ್ಡಿ ಅಸಮಾಧಾನಕ್ಕೆ ರಾಮುಲು ಮುಲಾಂ
ವಿಧಾನಸಭೆ ಚುನಾವಣೆ (Assembly Election) ಹತ್ತಿರ ಬರ್ತಿದ್ದಂತೆ ಮತ್ತೆ ರಾಜಕೀಯವಾಗಿ ಸಕ್ರಿಯರಾಗಲು ಜನಾರ್ದನ ರೆಡ್ಡಿ ಶತಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಬಿಜೆಪಿ ನಾಯಕರಿಂದ (BJP Leaders) ಯಾವುದೇ ಆಹ್ವಾನ ಸಿಕ್ಕಿಲ್ಲ. ಇದ್ರಿಂದ ರಾಜ್ಯ ಬಿಜೆಪಿ ಬಗ್ಗೆ ಕೊಂಚ ಬೇಸತ್ತಿರುವ ಜನಾರ್ದನ ರೆಡ್ಡಿ, ಹೊಸ ಪಕ್ಷ (News Party) ಕಟ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ. ಜನಾರ್ದನ ರೆಡ್ಡಿ (Janardhana Reddy) ರೆಬಲ್ ಹೇಳಿಕೆ ನೀಡ್ತಿದ್ದಂತೆ ಬೆನ್ನಲ್ಲೇ ಸಚಿವ ಹಾಗೂ ರೆಡ್ಡಿ ದೋಸ್ತು ಶ್ರೀರಾಮುಲು (Minister Sriramulu) ಅವರು ಮತ್ತೆ ಸ್ನೇಹದ ಮಂತ್ರ ಪಟಿಸಿದ್ದಾರೆ.
ಇದನ್ನೂ ಓದಿ: Maharashtra Villages: ನಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ; ಜಿಲ್ಲಾಧಿಕಾರಿ ಪತ್ರ ಬರೆದ ಗ್ರಾಮಸ್ಥರು
ಸ್ನೇಹಕ್ಕಾಗಿ ಜೀವ ಕೊಡಲು ಸಹ ನಾನು ರೆಡಿ
ಜನಾರ್ದನ ರೆಡ್ಡಿ ಮನವೊಲಿಸಲು ಸಚಿವ ಶ್ರೀರಾಮುಲು ಮುಂದಾಗಿದ್ದಾರೆ. ಬಳ್ಳಾರಿಯ ಕಂಪ್ಲಿಯಲ್ಲಿ ಈ ಬಗ್ಗೆ ಮಾತಾಡಿದ ಸಾರಿಗೆ ಸಚಿವ ಶ್ರೀರಾಮುಲು ಅವರು ಸ್ನೇಹಕ್ಕಾಗಿ ಜೀವ ಕೊಡಲು ಸಹ ನಾನು ರೆಡಿ ಎಂದು ಹೇಳಿದ್ದಾರೆ. ಜನಾರ್ದನ ರೆಡ್ಡಿ ಅಸಮಾಧಾನ ಕೇಳಿ ಸಮಸ್ಯೆ ಬಗೆಹರಿಸೋದಾಗಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ