ಕೋಲಾರಕ್ಕೆ ಕೆಸಿ ವ್ಯಾಲಿ ನೀರಿಗೆ ಅಡ್ಡಗಾಲಾಕಿರುವುದು ಯಾರು? ಸ್ಪೀಕರ್ ರಮೇಶ್ ಕುಮಾರ್ ಹೊಸ ಬಾಂಬ್

ಕೆಸಿ ವ್ಯಾಲಿ ಯೋಜನೆ ನೀರಿನ ವಿವಾದ ಸದ್ಯ ಹೈಕೋರ್ಟ್ ಮೆಟ್ಟಿಲೇರಿದೆ. ಈ ಮಧ್ಯೆ ಯೋಜನೆ ನಿಂತಿರುವ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿದೆ. ಸ್ವತಃ ಸ್ಪೀಕರ್ ರಮೇಶ್ಕುಮಾರ್ ಮಾತನಾಡಿದ್ದು, ಯೋಜನೆ ವಿರುದ್ದ ದೂರು ನೀಡಿರುವ ಉದ್ದೇಶದ ಹಿಂದೆ ದೊಡ್ಡ ರಾಜಕಾರಣಿ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ, ಹಾಗಾದ್ರೆ ಯೋಜನೆ ವಿರುದ್ದ ಪಿತೂರಿ ನಡೆದಿದ್ಯಾ ಎನ್ನುವ ಗುಮಾನಿಗಳು ದಟ್ಟವಾಗಿ ಕಾಡ್ತಿದೆ,


Updated:September 9, 2018, 6:02 PM IST
ಕೋಲಾರಕ್ಕೆ ಕೆಸಿ ವ್ಯಾಲಿ ನೀರಿಗೆ ಅಡ್ಡಗಾಲಾಕಿರುವುದು ಯಾರು? ಸ್ಪೀಕರ್ ರಮೇಶ್ ಕುಮಾರ್ ಹೊಸ ಬಾಂಬ್
ಕೆಸಿ ವ್ಯಾಲಿ ಯೋಜನೆ ನೀರಿನ ವಿವಾದ ಸದ್ಯ ಹೈಕೋರ್ಟ್ ಮೆಟ್ಟಿಲೇರಿದೆ. ಈ ಮಧ್ಯೆ ಯೋಜನೆ ನಿಂತಿರುವ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿದೆ. ಸ್ವತಃ ಸ್ಪೀಕರ್ ರಮೇಶ್ಕುಮಾರ್ ಮಾತನಾಡಿದ್ದು, ಯೋಜನೆ ವಿರುದ್ದ ದೂರು ನೀಡಿರುವ ಉದ್ದೇಶದ ಹಿಂದೆ ದೊಡ್ಡ ರಾಜಕಾರಣಿ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ, ಹಾಗಾದ್ರೆ ಯೋಜನೆ ವಿರುದ್ದ ಪಿತೂರಿ ನಡೆದಿದ್ಯಾ ಎನ್ನುವ ಗುಮಾನಿಗಳು ದಟ್ಟವಾಗಿ ಕಾಡ್ತಿದೆ,

Updated: September 9, 2018, 6:02 PM IST
- ರಘುರಾಜ್, ನ್ಯೂಸ್18 ಕನ್ನಡ

ಕೋಲಾರ: ಬಯಲುಸೀಮೆ ಜಿಲ್ಲೆ ಕೋಲಾರಕ್ಕೆ ಇಲ್ಲಿವರೆಗೂ ಸಾಕಷ್ಟು ನೀರಾವರಿ ಯೋಜನೆಗಳು ಜಾರಿಯಾಗಿವೆ. ಆದ್ರೆ ನೀರಾವರಿ ಯೋಜನೆ ಘೋಷಣೆ ಮಾಡೋವಾಗ ಇರೋ ಉತ್ಸಾಹ ಕಾಲಕ್ರಮೇಣ ಇಳಿಕೆಯಾಗುತ್ತೆ ಎಂಬುದು ಈಗಾಗಲೇ ಸಾಬೀತಾಗಿದೆ. ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2016 ರಲ್ಲಿ ಘೋಷಿಸಿದ್ದ ಕೋರಮಂಗಲ ಚೆಲ್ಲಘಟ್ಟದಿಂದ 1400 ಕೋಟಿ ವೆಚ್ಚದ ಕೆಸಿ ವ್ಯಾಲಿ ನೀರಿನ ಯೋಜನೆ ಒಂದು ವರ್ಷ ತಡವಾದರೂ ಜಿಲ್ಲೆಗೆ ಹರಿದಿದೆ. ಆದ್ರೆ ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಕೆರೆಗೆ ಹರಿಸುತ್ತಿರುವ ನೀರಲ್ಲಿ ಅಗಾಧವಾದ ರಾಸಾಯನಿಕ ನೊರೆಮಿಶ್ರಿತ ನೀರು ಬಂದ ಹಿನ್ನೆಲೆ ನೀರನ್ನ ತಾತ್ಕಾಲಿಕವಾಗಿ ಹರಿಸೋದನ್ನ ಬೆಂಗಳೂರಿನ ಬಿಡಬ್ಲುಎಸ್‍ಎಸ್‍ಬಿ ಅಧಿಕಾರಿಗಳು ತಡಹಿಡಿದಿದ್ದರು. ಇನ್ನು ನೀರು ಗುಣಮಟ್ಟ ಪ್ರಶ್ನಿಸಿ ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಸಲ್ಲಿಸಿದ್ದ ಪಿಎಎಲ್ ವಿಚಾರಣೆ ನಡೆಸಿದ್ದ ಹೈಕೋರ್ಟ್, ನೀರು ಗುಣಮಟ್ಟದ ವರದಿ ಸಹಿತ ಪ್ರಮಾಣಪತ್ರ ಸಲ್ಲಿಸುವ ತನಕ ಕೆಸಿ ವ್ಯಾಲಿ ನೀರು ಕೋಲಾರಕ್ಕೆ ಹರಿಸದಂತೆ ಆದೇಶಿಸಿ 2 ತಿಂಗಳೇ ಕಳೆದಿದೆ. ಆದ್ರೆ ನೀರಿನ ಗುಣಮಟ್ಟ ವರದಿ ಸಲ್ಲಿಸೋದ್ರಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಇದು ಹೀಗಿದ್ರೆ, ಮತ್ತೊಂದೆಡೆ ಯೋಜನೆ ವಿರುದ್ದ ಹಲವು ದೊಡ್ಡ ಮನುಷ್ಯರು ಕುತಂತ್ರ ನಡೆಸಿರುವ ಆರೋಪ ಕೇಳಿಬಂದಿದೆ. ಯೋಜನೆ ಜಾರಿಗೆ ಪಣ ತೊಟ್ಟಿದ್ದ ಸ್ಪೀಕರ್ ರಮೇಶ್‍ಕುಮಾರ್ ಸ್ವತಃ ಈ ಕುರಿತು ಆರೋಪಿಸಿದ್ದು, ಯೋಜನೆ ವಿರುದ್ದ ಜಿಲ್ಲೆಯ ದೊಡ್ಡ ಜನಪ್ರತಿನಿಧಿ ಇದ್ದಾರೆ. ಅವರೇ ಹೈಕೋರ್ಟ್‍ನಲ್ಲಿ ಪಿಟೀಷನ್ ಹಾಕಿರುವವರ ಹಿಂದೆಯೇ ಇದ್ದಾರೆ. ಬೇಕಾದ್ರೆ, ದೂರುದಾರ ಆಂಜನೇಯರೆಡ್ಡಿ ಅವರ ಪೋನ್‍ಕಾಲ್ ಲಿಸ್ಟ್ ತೆಗೆಸಿ ತನಿಖೆ ನಡೆಸಿ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಇನ್ನು, ರಮೇಶ್‍ಕುಮಾರ್ ಅವರ ಹೇಳಿಕೆ ಕೋಲಾರ ರಾಜಕೀಯದಲ್ಲಿ ಭಾರೀ ರಾದ್ದಾಂತ ಸೃಷ್ಟಿಸುವ ಲಕ್ಷಣಗಳು ಕಾಣ್ತಿದೆ. ದೊಡ್ಡ ರಾಜಕಾರಣಿ ಎಂಬ ಹೆಸರೇಳದೆ ರಮೇಶ್‍ಕುಮಾರ್ ನೀಢಿರುವ ಹೇಳಿಕೆ ಯಾವ ಮಟ್ಟಕ್ಕೆ ಹೋಗುತ್ತೋ ನೋಡಬೇಕಿದೆ. ಆದ್ರೆ ರಮೇಶ್‍ಕುಮಾರ್ ಅವ್ರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಹೋರಾಟ ಸಮಿತಿ ಸಂಚಾಲಕರು, ಹೇಳಿಕೆಯಲ್ಲಿ ನಿಜಾಂಶ ಇದ್ದಲ್ಲಿ ತನಿಖೆಯಾಗಲಿ ಎಂದಿದ್ದಾರೆ. ಆದ್ರೆ ಮತ್ತೆ ಕೆಲವು ರೈತಪರ ಮುಖಂಡರು ಯೋಜನೆ ನಿಲ್ಲಿಸುವುದರ ಹಿಂದೆ ಗುತ್ತಿಗೆದಾರರ ಕೈವಾಡ ಇದೆಯೆಂದು ಆರೋಪಿಸಿದ್ದಾರೆ.

ಗಂಭೀರ ಆರೋಪಗಳ ಮಧ್ಯೆ ಸೆಪ್ಟೆಂಬರ್ 11, ಮಂಗಳವಾದಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಕೆಸಿ ವ್ಯಾಲಿ ಕುರಿತಾಗಿ ವಿಚಾರಣೆ ನಡೆಯಲಿದ್ದು, ಬೆಂಗಳೂರಿನ ಬಿಡಬ್ಲುಎಸ್‍ಎಸ್‍ಬಿ ಇಲಾಖೆ ಹಾಗು ಪರಿಸರ ನಿಯಂತ್ರಣ ಮಂಡಳಿ ರಚಿಸಿರುವ ನೀರು ಗುಣಮಟ್ಟ ವರದಿಯನ್ನ ಕೆಸಿ ವ್ಯಾಲಿ ಅಧಿಕಾರಿಗಳು ಸಲ್ಲಿಸಲಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ನ್ಯಾಯಾಲಯಕ್ಕೆ ವರದಿ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ದಶಕಗಳ ಕನಸಾಗಿದ್ದ ಶಾಶ್ವತ ನೀರಾವರಿಯಂತೂ ಸದ್ಯ ಚಿನ್ನದನಾಡಿನ ಜನರ ಪಾಲಿಗೆ ದಕ್ಕಿಲ್ಲ. ಕೊಳಚೆ ನೀರನ್ನ ಶುದ್ದೀಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆ ಯಶಸ್ವಿಯಾದಾಗ ಎಲ್ಲರೂ ಭಾವುಕರಾಗಿ ಹರ್ಷ ವ್ಯಕ್ತಪಡಿಸಿದ್ರು. ಆದ್ರೀಗ ಯೋಜನೆ ನಿಂತು ನ್ಯಾಯಾಲಯದಲ್ಲಿ ತೀವ್ರ ವಿಚಾರಣೆ ನಡೆಯುತ್ತಿರುವಾಗ ಯೋಜನೆ ವಿರುದ್ದ ದೊಡ್ಡ ರಾಜಕಾರಣಿಯೊಬ್ಬರು ಪಿತೂರಿ ನಡೆಸಿ ಗುತ್ತಿಗೆದಾರರನ್ನ ಎತ್ತಿಕಟ್ಟಿರುವ ಆರೋಪ ಕೇಳಿಬಂದಿದೆ. ಆದ್ರೆ ಜನರ ತೆರಿಗೆ ಹಣದಲ್ಲಿ ಬರೋಬ್ಬರಿ 1400 ಕೋಟಿ ರೂ.ನಿಂದ ನಿರ್ಮಾಣವಾಗಿರುವ ಕೆಸಿ ವ್ಯಾಲಿ ಯೋಜನೆ ಸದ್ಯಕ್ಕಂತು ನಿಂತಿದ್ದು ಯಾರಿಗೂ ಉಪಯೋಗಕ್ಕೆ ಬಾರದಂತಾಗಿದೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ