ಆಗ್ನೇಯ ಪದವೀಧರ ಕ್ಷೇತ್ರ: ಬಿಜೆಪಿಯಲ್ಲಿ ಬಿಗ್ ಫೈಟ್; ಹಾಲನೂರು ಲೇಪಾಕ್ಷ್​ಗೆ ಟಿಕೆಟ್ ನೀಡಲು ಒತ್ತಾಯ

ಆಗ್ನೇಯ ಪದವೀಧರ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್​ನ ಚೌಡರೆಡ್ಡಿ ಅವರ ಅವಧಿ ಜೂನ್​ನಲ್ಲಿ ಅಂತ್ಯವಾಗುತ್ತಿದೆ. ಆ ಸ್ಥಾನಕ್ಕಾಗಿ ಲೇಪಾಕ್ಷ್ ಮತ್ತು ಚಿದಾನಂದ್ ಸೇರಿದಂತೆ ಕೆಲವರು ಕಣ್ಣಿಟ್ಟಿದ್ಧಾರೆ.

news18-kannada
Updated:March 18, 2020, 1:00 PM IST
ಆಗ್ನೇಯ ಪದವೀಧರ ಕ್ಷೇತ್ರ: ಬಿಜೆಪಿಯಲ್ಲಿ ಬಿಗ್ ಫೈಟ್; ಹಾಲನೂರು ಲೇಪಾಕ್ಷ್​ಗೆ ಟಿಕೆಟ್ ನೀಡಲು ಒತ್ತಾಯ
ಹಾಲನೂರು ಲೇಪಾಕ್ಷ್
  • Share this:
ಬೆಂಗಳೂರು(ಮಾ. 18): ವಿಧಾನಪರಿಷತ್​ನ ಸದಸ್ಯತ್ವಕ್ಕಾಗಿ ಜೂನ್ ತಿಂಗಳಲ್ಲಿ ನಡೆಯಲಿರುವ ಆಗ್ನೇಯ ಪದವೀಧರ (South East Graduate constituency) ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ನಡೆದಿದೆ. ತುಮಕೂರಿನ ಬಿಜೆಪಿ ಮುಖಂಡ ಹಾಲನೂರು ಲೇಪಾಕ್ಷ್ ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಒತ್ತಡ ಹೇರುತ್ತಿದ್ದಾರೆ. ತುಮಕೂರಿನವರೇ ಆದ ಮತ್ತೊಬ್ಬ ಬಿಜೆಪಿ ಮುಖಂಡ ಚಿದಾನಂದ್ ಕೂಡ ಇದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ಧಾರೆ. ಇದು ರಾಜ್ಯ ಬಿಜೆಪಿ ನಾಯಕರಿಗೆ ತಲೆ ನೋವು ಸೃಷ್ಟಿ ಮಾಡುವ ಸಾಧ್ಯತೆ ಇದೆ.

ಹಾಲನೂರು ಲೇಪಾಕ್ಷ್ ಅವರು ಎರಡು ವರ್ಷದ ಹಿಂದೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಟಿಕೆಟ್​ಗೆ ವಿಫಲ ಪ್ರಯತ್ನ ನಡೆಸಿದ್ದರು. ಕೊನೆಯ ಕ್ಷಣದಲ್ಲಿ ಆ ಕ್ಷೇತ್ರದ ಟಿಕೆಟ್ ವೈ.ಎ. ನಾರಾಯಣಸ್ವಾಮಿ ಅವರ ಪಾಲಾಗಿತ್ತು. ಇದರಿಂದ ಲೇಪಾಕ್ಷ್ ತೀವ್ರ ಅಸಮಾಧಾನಗೊಂಡಿದ್ದರು. ಲೇಪಾಕ್ಷ್​ಗೆ ಆಗಿರುವ ಆ ಅನ್ಯಾಯವನ್ನು ಸರಿಪಡಿಸಲು ಈಗ ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಕೊಡುವಂತೆ ಬೆಂಬಲಿಗರು ವಾದ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಓಡಾಟ ನಡೆಸಿದ ಕೊರೋನಾ ಸೋಂಕಿತೆ; ಕಂಗಾಲಾದ ವೈದ್ಯರು

ಆಗ್ನೇಯ ಪದವೀಧರ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್​ನ ಚೌಡರೆಡ್ಡಿ ಅವರ ಅವಧಿ ಜೂನ್​ನಲ್ಲಿ ಅಂತ್ಯವಾಗುತ್ತಿದೆ. ಆ ಸ್ಥಾನಕ್ಕಾಗಿ ಲೇಪಾಕ್ಷ್ ಮತ್ತು ಚಿದಾನಂದ್ ಸೇರಿದಂತೆ ಕೆಲವರು ಕಣ್ಣಿಟ್ಟಿದ್ಧಾರೆ.

ಜೂನ್ ತಿಂಗಳಲ್ಲಿ 11 ವಿಧಾನಪರಿಷತ್ ಸ್ಥಾನಗಳು ಖಾಲಿ ಬೀಳಲಿವೆ. ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಈಶಾನ್ಯ ಶಿಕ್ಷಕ, ಬೆಂಗಳೂರು ಶಿಕ್ಷಕ ಕ್ಷೇತ್ರಗಳೂ ಇದರಲ್ಲಿ ಒಳಗೊಂಡಿವೆ. ಸಿ.ಪಿ. ಯೋಗೇಶ್ವರ್ ಅವರಿಗೂ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆ ಇದೆ.

First published:March 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading