• Home
  • »
  • News
  • »
  • state
  • »
  • Surathkal Murder: ಫಾಜಿಲ್ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸುಳಿವು; ಕೃತ್ಯ ನಡೆಸಿದ ನಾಲ್ವರ ಮಾಹಿತಿ ಲಭ್ಯ

Surathkal Murder: ಫಾಜಿಲ್ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸುಳಿವು; ಕೃತ್ಯ ನಡೆಸಿದ ನಾಲ್ವರ ಮಾಹಿತಿ ಲಭ್ಯ

ಫಾಜಿಲ್

ಫಾಜಿಲ್

ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಎಂಬುದಾಗಿ ಹೇಳಲಾಗುತ್ತಿದೆ. ಕೃತ್ಯ ನಡೆಸುವ ಸಂದರ್ಭ ಅಮಿತ್ ಎಂಬಾತ ಕಾರು ಚಾಲಕನಾಗಿದ್ದ (Car Driver) ಎಂದು ತಿಳಿದು ಬಂದಿದೆ.

  • Share this:

ಮಂಗಳೂರಿನ ಸುರತ್ಕಲ್ ನಲ್ಲಿ (Surathkal Murder) ನಡೆದ ಮೊಹಮ್ಮದ್ ಫಾಜಿಲ್ ಹತ್ಯೆಗೆ (Fazil Murder) ಸಂಬಂಧಿಸಿದಂತೆ ಪೊಲೀಸರಿಗೆ (Mangaluru Police) ಸ್ಫೋಟಕ ಸುಳಿವು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಕೃತ್ಯದಲ್ಲಿ ಭಾಗಿಯಾದ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಸುಹಾಸ್, ಮೋಹನ್, ಗಿರಿ, ಅಮಿತ್ ಎಂಬ ನಾಲ್ವರಿಂದ ಕೃತ್ಯ ನಡೆದಿರುವ ಮಾಹಿತಿ ಮಂಗಳೂರು ಪೊಲೀಸರಿಗೆ ಸುಳಿವು ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಎಂಬುದಾಗಿ ಹೇಳಲಾಗುತ್ತಿದೆ. ಕೃತ್ಯ ನಡೆಸುವ ಸಂದರ್ಭ ಅಮಿತ್ ಎಂಬಾತ ಕಾರು ಚಾಲಕನಾಗಿದ್ದ (Car Driver) ಎಂದು ತಿಳಿದು ಬಂದಿದೆ. ಇಂದು ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು (CCB Police) ಬಂಧಿಸುವ ಸಾಧ್ಯತೆಗಳಿವೆ.


ಇನ್ನು ಎಕ್ಕಾರಿನಲ್ಲಿ ನಡೆದ ಕೊಲೆ ಹಾಗೂ ಎರಡು ಕೊಲೆ ಯತ್ನದ ಕೇಸ್ ಸುಹಾಸ್ ಮೇಲಿದೆ ಎಂದು ತಿಳಿದು ಬಂದಿದೆ. ಸದ್ಯ ಈ ನಾಲ್ವರಿಂದಲೇ ಫಾಝಿಲ್ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.


ನಿರ್ಜನ ಪ್ರದೇಶದಲ್ಲಿ ಕಾರ್ ಪತ್ತೆ


ಫಾಜಿಲ್ ಕೊಲೆಗೆ ಬಳಸಲಾದ ಎನ್ನಲಾದ ಕಾರ್ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಡುಬಿದ್ರಿ ವ್ಯಾಪ್ತಿಯ ಇನ್ನಾ ಗ್ರಾಮದಲ್ಲಿ ಪತ್ತೆಯಾಗಿತ್ತು. ಎರಡು ದಿನಗಳಿಂದ ನಿರ್ಜನ ಪ್ರದೇಶದಲ್ಲಿ ಕಾರ್ ನಿಂತಿರುವ ವಿಷಯ ತಿಳಿದು ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.


ಇದನ್ನೂ ಓದಿ:  Surathkal murder: ಫಾಜಿಲ್ ಕೊಲೆ ಕೇಸ್; ಕಾರ್ ಮಾಲೀಕ ಪೊಲೀಸರ ವಶಕ್ಕೆ; ಸುಳ್ಳು ಸುದ್ದಿ ಹಬ್ಬಿಸಬೇಡಿ; ಕಮಿಷನರ್ ಮನವಿ


ಈ ಕಾರ್ ನ್ನು ಟೋಯಿಂಗ್ ಮೂಲಕ ಪೊಲೀಸ್ ಠಾಣಾ ಆವರಣಕ್ಕೆ ತರಲಾಗಿದೆ. ಇಂದು ಎಫ್ಎಸ್ಎಲ್ ತಂಡ ಕಾರ್ ಪರಿಶೀಲನೆ ನಡೆಸಲಿದೆ. ಈ ಕಾರ್ ಹಂತಕರ ಬಗ್ಗೆ ಹೆಚ್ಚಿನ ಸುಳಿವು ನೀಡುವ ಸಾಧ್ಯತೆಗಳಿವೆ. ವಾಹನದ ಸ್ಟೇರಿಂಗ್ ಮತ್ತು ಹ್ಯಾಂಡ್ ಬ್ರೇಕ್ ಮೇಲೆ ಇರುವ ಬೆರಳಚ್ಚನ್ನು ಎಫ್ಎಸ್ಎಲ್ ತಂಡ ಸಂಗ್ರಹಸಲಿದೆ.


ತನಿಖಾಧಿಕಾರಿಯಾಗಿ ಎಸಿಪಿ ಮಹೇಶ್ ಕುಮಾರ್ ನೇಮಕ


ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಲು ಫಾಜಿಲ್ ಪೋಷಕರಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಪ್ರಕರಣದ ತನಿಖಾಧಿಕಾರಿಯಾಗಿ ಮಂಗಳೂರು ಉತ್ತರ ವಿಭಾಗ ಎಸಿಪಿ ಮಹೇಶ್ ಕುಮಾರ್ ಅವರನ್ನು ನೇಮಕ ಮಾಡಿ ಎನ್ ಶಶಿಕುಮಾರ್ ಆದೇಶ ಮಾಡಿದ್ದಾರೆ.


ಫಾಜಿಲ್ ಕೊಲೆಗೆ (Fazil Murder) ಸಂಬಂಧಿಸಿದಂತೆ ಪೊಲೀಸರು (Police) ಕಾರ್ ಮಾಲೀಕ (Car Owner) ಅಜಿತ್ ಡಿಸೋಜಾ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ (Investigation) ಒಳಪಡಿಸಿದ್ದಾರೆ. ಅಜಿತ್ ವೈಟ್ ಬೋರ್ಡ್ ಕಾರ್ ಗಳನ್ನು (White Board Cars) ಬಾಡಿಗೆ (Rent) ನೀಡುವ ಕೆಲಸ ಮಾಡಿಕೊಂಡಿದ್ದು, ಇವರ ಬಳಿಯೇ ಹಂತಕರು ಕಾರ್ ಬಾಡಿಗೆಗೆ ಪಡೆದುಕೊಂಡಿದ್ದರು.


ಅಜಿತ್ ಡಿಸೋಜಾ ನಿವಾಸಕ್ಕೆ ಪೊಲೀಸ್ ಭದ್ರತೆ


ಈ ಹಿನ್ನೆಲೆ ಪೊಲೀಸರು ಅಜಿತ್ ಡಿಸೋಜಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು  ಮುಂಜಾಗ್ರತ ಕ್ರಮವಾಗಿ ಸುರತ್ಕಲ್ ಚೊಕ್ಕಬೆಟ್ಟುವಿನಲ್ಲಿರುವ ಅಜಿತ್ ಡಿಸೋಜಾ ನಿವಾಸಕ್ಕೆ ಪೊಲೀಸ್ ಭದ್ರತೆ (Police Protection) ಕಲ್ಪಿಸಲಾಗಿದೆ.


ನೆಟ್ಟಾರು ಕೊಲೆ, ಮತ್ತೆ ಮೂವರ ಬಂಧನ


ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಇಬ್ಬರು ಹಾಗೂ ಕೇರಳದಲ್ಲಿ ಓರ್ವನನ್ನು ಬಂಧನ ಮಾಡಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧಿಸಿದಂತೆ ಇದುವರೆಗೆ ಐವರನ್ನು ಬಂಧಿಸಲಾಗಿದೆ. ಬೆಳ್ಳಾರೆಯ ಶಫೀಕ್ ಹಾಗೂ ಸವಣೂರಿನ ಝಾಕೀರ್ ಮೊದಲು ಬಂಧನಕ್ಕೀಡಾಗಿದ್ದರು.


ಇದನ್ನೂ ಓದಿ:  Surathkal Murder: ಹತ್ಯೆಗೆ ಬಳಸಿದ ಕಾರ್ ಮಾಲೀಕ ವಶಕ್ಕೆ ಪಡೆದ ಬಳಿಕ ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿ


ಕೇರಳ-ಕರ್ನಾಟಕ ಗಡಿಯಲ್ಲಿ ಭದ್ರತೆ


ಕರವಾಳಿಯಲ್ಲಿ ನಡೆದಿರುವ ಕೊಲೆಗಳಿಗೆ ಕೇರಳ ಲಿಂಕ್ ಹಿನ್ನೆಲೆ ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಳ ಮಾಡಲಾಗಿದೆ. ದ.ಕ ಮತ್ತು ಕೇರಳ ಗಡಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.  ತಲಪಾಡಿ, ಉಳ್ಳಾಲ, ವಿಟ್ಲ, ಈಶ್ಚರಮಂಗಲ, ಸುಳ್ಯ, ಪಾಣಾಜೆ ಗಡಿಭಾಗದಲ್ಲಿ ತಪಾಸಣೆ ಹೆಚ್ಚಳ ಮಾಡಲಾಗಿದೆ.

Published by:Mahmadrafik K
First published: