Motamma: ತನ್ನ ಆತ್ಮಕಥೆಯಲ್ಲಿ ಸಿದ್ದು ವಿರುದ್ಧ ಸಿಡಿದೆದ್ದ ಮೋಟಮ್ಮ; ಕೈ ನಾಯಕರ ಮೇಲೇಕೆ ಈ ಪರಿ ಸಿಟ್ಟು

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮಕತೆ ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್​ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತ್ಮಕತೆ ಲೋಕಾರ್ಪಣೆಗೊಳಿಸಿದ್ದರು.

ಮೋಟಮ್ಮ, ಸಿದ್ದರಾಮಯ್ಯ

ಮೋಟಮ್ಮ, ಸಿದ್ದರಾಮಯ್ಯ

  • Share this:
ಬೆಂಗಳೂರು (ಜೂ.12) : ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಮೋಟಮ್ಮ (Motamma) ಅವರ ಆತ್ಮಕಥೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಕೆಲ ಕಾಂಗ್ರೆಸ್​ ನಾಯಕರ (Congress) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.  ಮಾಜಿ ಸಚಿವೆ ಮೋಟಮ್ಮ ಅವರು ಬರೆದಿರುವ ‘ಬಿದಿರು ನೀನ್ಯಾರಿಗಲ್ಲದವಳು’ ಹೆಸರಿನ ಆತ್ಮಕತೆ (Biography) ಲೋಕಾರ್ಪಣೆಗೊಂಡಿದೆ. ಇದರಲ್ಲಿ ಮಾಜಿ ಸಿಎಂ ಸೇರಿದಂತೆ ಹಲವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಮೋಟಮ್ಮ ಆತ್ಮಕಥೆ ಬಿಡುಗಡೆ

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮಕತೆ ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್​ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತ್ಮಕತೆ ಲೋಕಾರ್ಪಣೆಗೊಳಿಸಿದ್ದರು.

ಸಿದ್ದರಾಮಯ್ಯ ವಿರುದ್ಧ ಮೋಟಮ್ಮ ಅಸಮಾಧಾನ

ಆತ್ಮಕತೆಯ ‘ಬಿಸಿಲುಗುದುರೆ ಬೆನ್ನೇರಿ’ ಎಂಬ ಭಾಗದಲ್ಲಿ ಸಿದ್ದರಾಮಯ್ಯ ವಿರುದ್ಧ ಮೋಟಮ್ಮ ಅಸಮಾಧಾನ ಹೊರಹಾಕಿದ್ದಾರೆ. ನನ್ನನ್ನು ಮಂತ್ರಿ ಮಾಡಬಹುದಿತ್ತು. ಆದರೂ ಮಾಡಲಿಲ್ಲ. ಸಭಾಧ್ಯಕ್ಷೆ ಆಗುವ ಅವಕಾಶವೂ ಇತ್ತು. ಅದನ್ನು ಮಾಡಲಿಲ್ಲ. ಈ ಬಗ್ಗೆ ನನಗೆ ಇನ್ನೂ ಬೇಸರ ಇದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Gunaranjan Shetty: ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸ್ಕೆಚ್! ಸಂಚು ರೂಪಿಸಿದ್ದು ಯಾರು ಗೊತ್ತಾ?

ರಾಜಕಾರಣಿಯಾಗಿ ನನ್ನದು ಸಿಹಿಕಹಿಯ ಮಿಶ್ರ ಅನುಭವ. ರಾಜಕೀಯದ ಗಂಧಗಾಳಿಯೇ ಇರದಿದ್ದ ನನ್ನನ್ನು ಸಬ್‌ ರಿಜಿಸ್ಟ್ರಾರ್‌ ಕೆಲಸದಿಂದ ಬಿಡಿಸಿ ಒತ್ತಾಯಪೂರ್ವಕವಾಗಿ ರಾಜಕೀಯಕ್ಕೆ ಕರೆತಂದವರು ಡಿ.ಬಿ.ಚಂದ್ರೇಗೌಡರು. ಅದಾದ ಕೆಲವೇ ವರ್ಷಗಳಲ್ಲಿ ಅವರು ದೇವರಾಜ ಅರಸು ಅವರೊಂದಿಗೆ ಗುರುತಿಸಿಕೊಂಡು ಕಾಂಗ್ರೆಸ್‌ (ಐ) ಪಕ್ಷವನ್ನೇ ತೊರೆದರು.

ನಾನು ಇಂದಿರಾ ಕಾಂಗ್ರೆಸ್‌ನಲ್ಲಿಯೇ ಉಳಿದೆ

ನಾನು ಇಂದಿರಾ ಕಾಂಗ್ರೆಸ್‌ನಲ್ಲಿಯೇ ಉಳಿದೆ. ಹೀಗಾಗಿ ರಾಜಕೀಯ ಮಾರ್ಗದರ್ಶಕರೇ ಇಲ್ಲದೆ ‘ನಾಯಿ ಹಡೆದು ನಾಡ ಮೇಲೆ ಬಿಸಾಡಿದಂತೆ’ ದಿಕ್ಕೇ ತೋಚದಂತಾಯಿತು ನನ್ನ ಸ್ಥಿತಿ. ಆದರೂ ಎದೆಗುಂದದೆ ಜನಪರ ಕಾರ್ಯಗಳನ್ನೇ ನೆಚ್ಚಿ ರಾಜಕೀಯ ಗರಡಿಯಲ್ಲಿ ಸೆಣಸಿದೆ. ಅಂತಹ ಅನುಭವಗಳ ಮೂಸೆಯಿಂದ ಬಂದಿರುವ ನನ್ನ ಆತ್ಮಕಥನ ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ, ಅದರಲ್ಲೂ ಮಹಿಳಾ ರಾಜಕಾರಣಿಗಳಿಗೆ ಒಂದು ಗೈಡ್‌ ಆಗಬೇಕು. ಅದನ್ನು ಓದಿದ ಮತದಾರರಿಗೂ ರಾಜಕಾರಣದ ವಸ್ತುಸ್ಥಿತಿ ಮನವರಿಕೆ ಆಗಬೇಕು.

ಎಸ್‌.ಎಂ.ಕೃಷ್ಣ ಸಹಾಯದಿಂದ ನಾನು ಮನೆ ಕಟ್ಟಿದ್ದು

ಇಲ್ಲಿ ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ. ನಾನು ಮನೆ ಕಟ್ಟಿದ್ದು ಎಸ್‌.ಎಂ.ಕೃಷ್ಣ ಅವರ ಸಹಾಯದಿಂದ ಎಂಬುದನ್ನೂ ನೇರವಾಗಿ ಹೇಳಿದ್ದೇನೆ. ಆಗಿನ ರಾಜಕೀಯಕ್ಕೂ ಈಗಿನ ರಾಜಕೀಯಕ್ಕೂ ಅಜಗಜಾಂತರ ಇದೆ ಎನ್ನುವುದು ಸಹ ಎಲ್ಲರಿಗೂ ತಿಳಿಯಬೇಕು. ನನ್ನ ಹೋರಾಟದ ಬದುಕನ್ನು ಹತ್ತಿರದಿಂದ ಕಂಡ ಹಿ.ಶಿ.ರಾಮಚಂದ್ರೇಗೌಡ ಅವರಂತಹ ಹಿತೈಷಿಗಳು ಈ ಬರವಣಿಗೆಗೆ ಒತ್ತಾಸೆಯಾಗಿ ನಿಂತರು.

ಒಬ್ಬ ದಲಿತ ನಾಯಕಿಯಾಗಿ ಅನುಭವಿಸಿದ ಕಷ್ಟ

ದಲಿತರ ಮೇಲಿನ ದೌರ್ಜನ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಹುತ್ತದಿಂದ ಹಾವನ್ನು ಹೊರಗೆಳೆಯಬೇಕಾದರೆ ಹೊಗೆ ಅಥವಾ ನೀರು ಹಾಕಬೇಕು, ಆಗ ಉಸಿರುಗಟ್ಟಿದಂತಾಗಿ ಅದು ಹೊರಬರುತ್ತದೆ. ಅಂತಹ ಕಠಿಣ ಕಾಯ್ದೆಯನ್ನು ನಾವೆಲ್ಲಿ ತಂದಿದ್ದೇವೆ? ಕೆಲವು ಕಾಯ್ದೆಗಳು ಇವೆಯಾದರೂ ದೌರ್ಜನ್ಯ ಎಸಗಿದ ಎಷ್ಟು ಮಂದಿ ಶಿಕ್ಷೆಗೆ ಒಳಗಾಗಿದ್ದಾರೆ? ವೈಯಕ್ತಿಕವಾಗಿ ನನಗೆ ದೌರ್ಜನ್ಯದ ಅನುಭವ ಆಗಿಲ್ಲ. ನನ್ನ ಬೆಳವಣಿಗೆಯಲ್ಲಿ ಹೆಚ್ಚು ಒತ್ತಾಸೆಯಾಗಿ ನಿಂತವರು ಸವರ್ಣೀಯರು.

ಇದನ್ನೂ ಓದಿ:  Mysuru Yoga Politics: ಮೈಲೇಜ್ ಪಾಲಿಟಿಕ್ಸ್;  ಪ್ರತಾಪ್ ಸಿಂಹ, ರಾಮದಾಸ್ ನಡುವೆ ಪೈಪೋಟಿ

ಅದರ ನಡುವೆ ಅಸ್ಪೃಶ್ಯತೆಯನ್ನೂ ಅನುಭವಿಸಿದ್ದೇನೆ. ರಾಜಕೀಯ ಪ್ರವೇಶಕ್ಕೆ ಮುನ್ನ ಬಿಡದಿ ಸಮೀಪದ ಶಾಲೆಯೊಂದಕ್ಕೆ ಶಿಕ್ಷಕಿಯಾಗಿ ಸೇರಿದಾಗ, ಬಾಡಿಗೆಗೆ ಮನೆ ಕೊಡಲು ಒಪ್ಪಿದ್ದವರು ನಾನು ದಲಿತೆ ಎಂದು ತಿಳಿದು ಕೊನೇ ಕ್ಷಣದಲ್ಲಿ ಕೊಡಲು ನಿರಾಕರಿಸಿದರು. ಆದರೆ ಇಷ್ಟು ವರ್ಷಗಳಾದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂಬುದು ಇನ್ನಷ್ಟು ನೋವು ಕೊಡುವ ಸಂಗತಿ ಎಂದು ಮೊಟ್ಟಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
Published by:Pavana HS
First published: