• Home
 • »
 • News
 • »
 • state
 • »
 • World Champion: ಗ್ಲೋಬಲ್ ಚಾಂಪ್ಸ್! ಹಳ್ಳಿ ಮಕ್ಕಳ ಮುಡಿಗೆ ಚಾಂಪಿಯನ್ ಕಿರೀಟ!

World Champion: ಗ್ಲೋಬಲ್ ಚಾಂಪ್ಸ್! ಹಳ್ಳಿ ಮಕ್ಕಳ ಮುಡಿಗೆ ಚಾಂಪಿಯನ್ ಕಿರೀಟ!

ಪ್ರಶಸ್ತಿ ಗೆದ್ದ​ ವಿದ್ಯಾರ್ಥಿಗಳು

ಪ್ರಶಸ್ತಿ ಗೆದ್ದ​ ವಿದ್ಯಾರ್ಥಿಗಳು

ವಿಶ್ವದ ಅತ್ಯುತ್ತಮ ಕಾಲೇಜು ವಿಶ್ವವಿದ್ಯಾಲಯದ ಮಕ್ಕಳೊಂದಿಗೆ ಸ್ಫರ್ಧೆಯೊಡ್ಡಿ ಯಂಗ್ ಅರ್ಥ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡು ಭಾರತದ ಕೀರ್ತಿಯನ್ನ ಹೆಚ್ಚಿಸಿದ್ದಾರೆ.

 • Share this:

  ಬೀದರ್‌ (ನ.28): ಅವರೆಲ್ಲರೂ ಗಡಿ ನಾಡಿನ ಅಪ್ಪಟ ಪ್ರತಿಭಾನ್ವಿತ ವಿದ್ಯಾರ್ಥಿಗಳು. ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಅನ್ನೋ ಅದಮ್ಯ ಕನಸು (Dream) ಕಾಣುತ್ತಿರುವ ತುಂಬು ಉತ್ಸಾಹದ ಚಿಲುಮೆಗಳು. ಹೀಗಾಗಿಯೇ ನಿತ್ಯ ಏನಾದರೊಂದು ಹೊಸ ವಿಷಯದ ಕುರಿತಾಗಿ ತಿಳಿದುಕೊಳ್ಳುತ್ತಲೇ, ಈಗ ವಿಶೇಷ ಸಾಧನೆಗೆ ಭಾಜನಾಗಿದ್ದಾರೆ. ಗಡಿನಾಡ ವಿದ್ಯಾರ್ಥಿಗಳು (Student) ಸದ್ಯ ಯಂಗ್ ಅರ್ಥ ಚಾಂಪಿಯನ್ಸ್ ಪಟ್ಟವನ್ನ ಮುಡಿಗೇರಿಸಿಕೊಂಡು ವಿಶ್ವ ಚಾಂಪಿಯನ್ (World Champion) ಆಗಿ ಹೊರ ಹೊಮ್ಮಿದ್ದಾರೆ. ಇದನ್ನೆಲ್ಲಾ ಕೇಳ್ತಿದ್ದರೆ, ಅವರು ಮಾಡಿರೋ ಸಾಧನೆ ಆದರೂ ಏನು ಅನ್ನೋ ಕುತೂಹಲ ನಿಮಗೂ ಕಾಡುತ್ತಿದೆಯಾ? ಹಾಗಾದರೆ ಈ ಸುದ್ದಿ ಓದಿ.


  ಹಳ್ಳಿ ಮಕ್ಕಳು ಯಂಗ್ ಚಾಂಪಿಯನ್!


  ಯಂಗ್ ಅರ್ಥ್ ಚಾಂಪಿಯನ್ಸ್ ಪ್ರಶಸ್ತಿ ಗೆದ್ದು, ಗ್ಲೋಬಲ್ ಚಾಂಪ್ಸ್ ಆಗಿ ಹೊರಹೊಮ್ಮಿದ ಭಾರತದ ವಿದ್ಯಾರ್ಥಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸೆ ಗ್ರಾಮದ ವೇದಾಂತ ಅಲ್ಲಮಪ್ರಭು ಆನಂದವಾಡಿ ಹಾಗೂ ಆತನ ಸ್ನೇಹಿತರ ಐದು ಜನರ ತಂಡ 2022ರ ಯಂಗ್ ಅರ್ಥ್ ಚಾಂಪಿಯನ್ಸ್ (Young Earth Champions) ಪ್ರಶಸ್ತಿಯನ್ನು ಗೆದ್ದು ಕೊಂಡಿದ್ದು ಭಾರತದ ವಿದ್ಯಾರ್ಥಿಗಳು ಗ್ಲೋಬಲ್ ಚಾಂಪ್ಸ್ ಆಗಿ ಹೊರಹೊಮ್ಮಿದ್ದಾರೆ. ಪ್ಯಾರಿಸ್‌ನಲ್ಲಿರುವ ಯುನೆಸ್ಕೋ ಪ್ರಧಾನ ಕಚೇರಿಗೆ ಪ್ರಶಸ್ತಿ ಜೊತೆಗೆ ನಗದು ಹಣವನ್ನ ಸ್ವೀಕರಿಸಿದ್ದಾರೆ.
  ಪ್ರಶಸ್ತಿ ಗೆದ್ದು ಬೀಗಿದ ವಿದ್ಯಾರ್ಥಿಗಳು


  ಅಸ್ಸಾಂನಲ್ಲಿ ಹವಾಮಾನ ಬದಲಾವಣೆಯ ಪ್ರವಾಹದಿಂದಾಗಿ ಮನೆಗಳು ನಾಶವಾಗಿದ್ದವು, ಹೀಗಾಗಿ ಈ ವಿದ್ಯಾರ್ಥಿಗಳು ಪ್ರವಾಹದಿಂದ ನಾಶವಾಗದ ಮತ್ತು ಪ್ರವಾಹಕ್ಕೆ ಒಳಗಾಗದ ಮನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಈ ಅಂತರ್ ರಾಷ್ಟ್ರೀಯ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಈ ಒಂದು ಸ್ಪರ್ಧೆಯಲ್ಲಿ ವಿಶ್ವದ ಕೆಲವು ಅತ್ಯುತ್ತಮ ಐನ್ನೂರಕ್ಕೂ ಹೆಚ್ಚು ಕಾಲೇಜುಗಳು 15 ಕ್ಕೂ ಹೆಚ್ಚು ವಿಶ್ವದ ಟಾಪ್ 15ರಲ್ಲಿ ಗುರುತಿಸಿಕೊಂಡಿದ್ದ ವಿಶ್ವವಿದ್ಯಾಲಯದ ಮಕ್ಕಳು ಭಾಗವಹಿಸಿದ್ದರು.


  ಯಂಗ್ ಅರ್ಥ್ ಚಾಂಪಿಯನ್ ಸ್ಪರ್ಧೆ


  ವಿಶ್ವದ ಅತ್ಯುತ್ತಮ ಕಾಲೇಜು ವಿಶ್ವವಿದ್ಯಾಲಯದ ಮಕ್ಕಳೊಂದಿಗೆ ಸ್ಫರ್ಧೆಯೊಡ್ಡಿ ಯಂಗ್ ಅರ್ಥ್ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡು ಭಾರತದ ಕೀರ್ತಿಯನ್ನ ಹೆಚ್ಚಿಸಿದ್ದಾರೆ. ಕಳೆದ 2021 ಮಾರ್ಚ್ EGiS ಫೌಂಡೇಶನ್ ನಿಂದ ಈ ಸ್ಪರ್ಧೆಯನ್ನ ಆಯೋಜನೆ ಮಾಡಿದ್ದರು ಕೋವಿಡ್ ಇರುವ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಸ್ಫರ್ಧೆಯನ್ನ ನಡೆಸಿದ್ದರು. ಈ ಯಂಗ್ ಅರ್ಥ್ ಚಾಂಪಿಯನ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.


  ಇನ್ನೂ ಬೀದರ್ ಮೂಲದ ವಿದ್ಯಾರ್ಥಿ ವೇದಾಂತ್ ಡಾ. ಪ್ರಭು ಮತ್ತು ಡಾ. ವಿಜಯಲಕ್ಷ್ಮಿ ಆನಂದವಾಡೆ ಅವರ ಮಗನಾದ ವೇದಾಂತ್ ಮೂಲತಃ ಬೀದರ್ ಜಿಲ್ಲೆಯವರು. ಅವರ ಹೆತ್ತವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಅವರು ಸದ್ಯ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ.


  ಇನ್ನೂ ವೇದಾಂತ ಸಂಶೋಧನೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು ದೇಶಕ್ಕೆ ಏನಾದರೂ ಸಾಧನೆ ಮಾಡಬೇಕು ಅಂತಾ ಅಂದು ಕೊಂಡಿರುವ ಈ ಬಾಲಕ ಹೆಚ್ಚಿನ ವಿದ್ಯಾಭ್ಯಾಸವನ್ನ ಅಮೆರಿಕಾದಲ್ಲಿ ಓದಿ ಸಾಧನೆ ಮಾಡಬೇಕು ಅಂದುಕೊಂಡಿದ್ದಾರೆ. ಇನ್ನೂ ಈ ಬುದ್ಧಿವಂತ ವಿದ್ಯಾರ್ಥಿಗೆ ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರ ವಿದ್ಯಾರ್ಥಿ ವೇತನವನ್ನ ಕೊಟ್ಟರೆ ಇವರು ಇನ್ನೂ ಹೆಚ್ಚಿನ‌ ಸಾಧನೆ ಮಾಡಬಹುದು.


  ಇದನ್ನೂ ಓದಿ: Fighter Ravi: ಸೈಲೆಂಟ್​ ಸುನೀಲ ಬೆನ್ನಲ್ಲೇ ಮತ್ತೊಬ್ಬ ರೌಡಿಶೀಟರ್​ ಬಿಜೆಪಿ ಸೇರ್ಪಡೆ, ಕಮಲ ಹಿಡಿದ ಫೈಟರ್​ ರವಿ


  ಇನ್ನೂ ಈ ಬೀದರ್ ಮೂಲದ ವೇದಾಂತ್ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಈ ಯಂಗ್ ಅರ್ಥ್ ಚಾಂಪಿಯನ್ ಶೀಫ್ ಗೆದ್ದು ಕೊಂಡ ಮೊದಲ ವಿದ್ಯಾರ್ಥಿಯಾಗಿದ್ದಾನೆ. ಬೀದರ್ ಜಿಲ್ಲೆಯವರೆ ಆದ ಕೇಂದ್ರ ಸಚಿವ ಭಗವಂತ್ ಖೂಬಾ ಈ ವಿದ್ಯಾರ್ಥಿಯ ಸಾಧನೆ ನೋಡಿ ಈತನ ಹೆಚ್ಚಿನ‌ ವಿದ್ಯಾಭ್ಯಾಸಕ್ಕೆ ಕೇಂದ್ರ ಸರಕಾರದಿಂದ ನೇರವು ಕೊಡಿಸುವ ಜವಬ್ದಾರಿ ಇವರ ಮೇಲಿದೆ.


  ವರದಿ: ಚಮನ್‌ ಹೊಸಮನಿ, ಬೀದರ್

  Published by:ಪಾವನ ಎಚ್ ಎಸ್
  First published: