Independence Day 2022: ಬೀದರ್‌ನಲ್ಲಿ ಈಗ ಸ್ವಾತಂತ್ರ್ಯದ ರಂಗು, ತ್ರಿವರ್ಣ ಬೆಳಕಿನಿಂದ ಕೋಟೆಗೆ ಮೆರುಗು!

75th independence day: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಇಡೀ ಬೀದರ್‌ನ ಬಹಮನಿ ಕೋಟೆಯೇ ಮದುವಣಗಿತ್ತಿಯಂತೆ ಅಲಂಕಾರಗೊಂಡಿದೆ. ಕೋಟೆಯ ವೈಭವ ನೋಡಲು ಜನಸಾಗರವೇ ಹರಿದು ಬರುತ್ತಿದೆ.

ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಕೋಟೆ

ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಕೋಟೆ

  • Share this:
    ಬೀದರ್: ಅದು ಕರ್ನಾಟದ ಮುಕುಟ (Crown of Karnataka) ಅಂತ ಕರೆಸಿಕೊಳ್ಳುವ ಜಿಲ್ಲೆ. ಆ ಜಿಲ್ಲೆಗೆ ಆ ಕೋಟೆಯೇ (Fort) ಮೇರಗು ನೀಡುತ್ತದೆ.  ಭಾರತ (India) ದೇಶ ಸ್ವಾತಂತ್ರ್ಯ (Freedom) ಪಡೆದು 75 ವರ್ಷಗಳಾಗಿದ್ದು, ಈಗ  ಅಮೃತ ಮಹೋತ್ಸವದ (Amrit Mahotsav) ಆಚರಣೆಯಲ್ಲಿದೆ. ಅದರ ಅಂಗವಾಗಿ ಬಹಮನಿ ಸುಲ್ತಾನರ (Bahmani Sultan) ಕಾಲದ ಐತಿಹಾಸಿಕ ಕೋಟೆ ಈಗ ತ್ರಿವರ್ಣ ರಂಗಿನಿಂದ (Tri-Colors) ಜಗಮಗಿಸುತ್ತಿದೆ. ಬೀದರ್‌ನ (Bidar) ಬಹಮನಿ ಸುಲ್ತಾನ್‌ ಕೋಟೆಗೆ ತ್ರಿವರ್ಣ ವಿದ್ಯುತ್‌ ದೀಪಾಲಂಕಾರ (Electric Light) ಮಾಡಿದ್ದು ಕೇಸರಿ ಬಿಳಿ ಹಸಿರಿನಿಂದ ಕೋಟೆಗೆ ಮತ್ತೊಮ್ಮೆ ಮೆರುಗು ಬಂದಿದೆ.

    ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಕೋಟೆಗೆ ತ್ರಿವರ್ಣ ಬೆಳಕು

    ಬಹುಮನಿ ಸುಲ್ತಾನರ ಕಾಲದ ಕೋಟೆಯನ್ನು ಬಣ್ಣದ ಲೈಟ್ ಗಳಿಂದ ಅಲಂಕರಿಸಲಾಗಿದೆ. ತ್ರಿವರ್ಣ ವಿದ್ಯುತ್ ದೀಪಗಳಿಂದ ಸ್ಮಾರಕ ಕಂಗೊಳಿಸುತ್ತಿದೆ. ಬೀದರ್ ಐತಿಹಾಸಿಕ ಕೋಟೆಯ ತರ್ಕಿಶ್ ಮಹಲ್, ಗುಂಬಜ್, ದರ್ವಾಜಾ, ಸೋಲಾಹ ಕಂಬ, ಮಸೀದಿ, ಸ್ಮಾರಕಗಳ ಮೇಲೆ ತ್ರಿವರ್ಣ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬಹಮನಿ ಕೋಟೆಗೆ ಕೆಸರಿ, ಬಿಳಿ, ಹಸಿರಿನಿಂದ ಹೊದಿಕೆ ಹಾಕಲಾಗಿದೆ.

    bidar s bahmani fort lit up with tri color lights on the occasion of 75th independence day
    ಬೀದರ್ ಕೋಟೆಗೆ ಹೊಸ ಮೆರುಗು


    ಸಂಜೆ 7ರಿಂದ ರಾತ್ರಿ 9ರವರೆಗೆ ಲೈಟಿಂಗ್

    ಕೋಟೆ ಕೊತ್ತಲಗಳ ನಾಡು ಅಂತಲೆ ಕರೆಸಿಕೊಳ್ಳುವ ಬೀದರ್ ಜಿಲ್ಲೆಯಲ್ಲಿ ಈಗ ವಿದ್ಯುತ್‌ ದೀಪಾಲಂಕಾರದಿಂದ ಬೃಹತ್‌ ಕೋಟೆಯು ನವ ವಧುವಿನಂತೆ ಕಂಗೊಳಿಸುತ್ತಿದೆ. 14ನೇ ಶತಮಾನದ ಬಹಮನಿ ಸುಲ್ತಾನ್‌ ರ ಕೋಟೆಯನ್ನು ವಿದ್ಯುತ್‌ ದೀಪಾಲಂಕಾರಗೊಳಿಸಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಭಾರತಿಯ ಪುರಾತತ್ವ ಇಲಾಖೆಯಿಂದ ತ್ರಿವರ್ಣ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು ಸಂಜೆ 7 ರಿಂದ ರಾತ್ರಿ 9 ರ ವರೆಗೆ ಬಹಮನಿ ಸುಲ್ತಾನರ್‌ ಕೋಟೆಯನ್ನು ವೀಕ್ಷಿಸಲು ಪ್ರವಾಸಿಗರಿಗೆ ಪುರಾತತ್ವ ಇಲಾಖೆ ಅನುಕೂಲತೆಯನ್ನು ಮಾಡಿದೆ.

    ತ್ರಿವರ್ಣ ಬೆಳಕಿನಿಂದ ಕಂಗೊಳಿಸುತ್ತಿರುವ ಬಹಮನಿ ಕೋಟೆ


    ಇದನ್ನೂ ಓದಿ: Independence Day 2022: ಮೊದಲ ಬಾರಿ ರಾಷ್ಟ್ರಧ್ವಜ ಹಾರಾಡಿದ್ದು ಎಲ್ಲಿ ಗೊತ್ತಾ? ಇಲ್ಲಿವೆ ನೋಡಿ ಅಪರೂಪದ ಫೋಟೋಗಳು

     ಕೋಟೆ ನೋಡಲು ಜನಸಾಗರ

    ಬಹಮನಿ ಸುಲ್ತಾನ್‌ ಕೋಟೆಯು 14 ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಕೋಟೆಯು ಅಷ್ಟೆ ಈಗಲು ಗಟ್ಟಿ ಮುಟ್ಟಾಗಿದೆ. ಐತಿಹಾಸಿಕ ಕೋಟೆಯು ಸಾಮಾನ್ಯ ವೇಳೆಯಲ್ಲಿಯೇ  ಸಾವಿರಾರೂ ಜನ್ರನ್ನು ತನ್ನತ್ತ ಸೇಳೆಯುತ್ತದೆ. ಭಾರತ ದೇಶವು ಸ್ವಾತಂತ್ರ್ಯ ಗೊಂಡು ಈಗ  ಅಮೃತ್‌ ಮಹೋತ್ಸದ ಆಚರಣೆಯಲ್ಲಿದೆ. ಹೀಗಿರುವಾಗ ಬಹಮನಿ ಸುಲ್ತಾನ್‌ ಕೋಟೆಗೆ ಕೇಸರಿ, ಬಿಳಿ, ಹಸಿರು ವಿದ್ಯುತ್‌ ಬಣ್ಣದ ದೀಪಗಳಿಂದ ಅಲಂಕರಿಸಿರುವುದರಿಂದ ಇಡೀ ಕೋಟೆಯು ನೋಡುಗರನ್ನು ತನ್ನತ್ತ ಸೇಳೆಯುವಂತೆ ಮಾಡುತ್ತಿದೆ.

    ಸಾಮಾನ್ಯ ದಿನಗಳಲ್ಲಿ ಹೀಗಿರುತ್ತದೆ ಕೋಟೆ


    14ನೇ ಶತಮಾನದ ವೈಭವದ ಮೆರುಗು

    14 ನೇ ಶತಮಾನದ ಸೊಬಗನ್ನು ಮತ್ತೊಮ್ಮ ನೆನಪಿಸುವಂತೆ ಮಾಡಿದೆ. ಬೃಹತ್‌ ಕೋಟೆಯು ರಂಗು ರಂಗಿನಿಂದ ಕೂಡಿದ್ದರಿಂದ ನವ ವಧುವಿನಂತೆ ಕಂಗೊಳಿಸುತ್ತಿದೆ ಇದನ್ನು ವೀಕ್ಷಣೆಯನ್ನು ಮಾಡಲು ಕೋಟೆಯತ್ತ ಜನ್ರು ಸಾಗುತ್ತಿದ್ದಾರೆ.

    ರಾಷ್ಟ್ರಧ್ವಜ ಹಾಕಿಸಲು ಧ್ವಜಸ್ತಂಭ ನಿರ್ಮಾಣ

    ಇನ್ನು ಬೀದರ್‌ ನ ಐತಿಹಾಸಿಕ ಕೋಟೆಯ ತರ್ಕಿಶ್‌ ಮಹಲ್‌, ಗುಂಬಜ್‌ ದರ್ವಾಜ್‌, ಸೋಲಾಹ ಕಂಭ ಮಸೀದಿ ಸ್ಮಾರಕಗಳ ಮೇಲೆ ತ್ರಿರ್ವಣ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಆ 6 ರಿಂದ 15 ರ ವರೆಗೆ ರಾತ್ರಿ 9 ಗಂಟೆ ವರೆಗೆ ವೀಕ್ಷಣೆಗೆ ಸ್ಥಳಿಯರಿಗೆ ಹಾಗೂ ಪ್ರವಾಸಿಗರಿಗೂ ಅವಕಾಶವನ್ನು ಕಲ್ಪಿಸಲಾಗಿದ್ದು ಕೋಟೆಯ ಕ್ಯಾಂಟೀನ್‌ ಪರಿಸರದಲ್ಲಿ 15 ಮೀಟರ್‌ ಉದ್ದದ ರಾಷ್ಟ್ರದ್ವಜ ಹಾರಿಸಲು ದ್ವಜ ಸ್ಥಂಭ ನಿರ್ಮಾಣ ಮಾಡಲಾಗಿದೆ.

    ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಕೋಟೆ

    75ನೇ ಅಮೃತ್‌ ಮಹೋತ್ಸವಕ್ಕೆ ಇಡೀ ಕೋಟೆಯೇ ಮದುವಣಗಿತ್ತಿಯಂತೆ ಅಲಂಕಾರ ಗೊಂಡಿದೆ. ಈ ಹಿಂದೆ ದೇಶದಲ್ಲಿ 100 ಕೋಟಿ ಜನರಿಗೆ ಕೋವಿಡ್‌ ಲಸಿಕೆಯನ್ನು ನೀಡಿದ್ದ ಸ್ಮರಣಾರ್ಥವಾಗಿ ಬಹಮನಿ ಸುಲ್ತಾನ್‌ ಕೋಟೆಗೆ ತ್ರಿವರ್ಣ ವಿದ್ಯುತ್‌ ದೀಪಾಲಂಕಾರವನ್ನು ಮಾಡಲಾಗಿತ್ತು. ಇದೀಗ ಮತ್ತೋಮ್ಮ ಎರಡನೆ ಬಾರಿಗೆ ಕೋಟೆಯು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ.

    ಇದನ್ನೂ ಓದಿ: Independence Day 2022: 42 ವರ್ಷಗಳಲ್ಲಿ 3 ಮಿಲಿಯನ್ ರಾಷ್ಟ್ರಧ್ವಜ ತಯಾರಿ! ಇದರ ಹಿಂದಿದ್ದಾರೆ ಅಬ್ದುಲ್ ಚಾಚಾ

    ಪಕ್ಕದ ರಾಜ್ಯಗಳಿಂದಲೂ ಬರುತ್ತಿರುವ ಜನ

    ಐತಿಹಾಸಿಕ ಕೋಟೆಯನ್ನು ನೋಡಲು ಜನ್ರು  ತೆಲಂಗಾಣ ಹಾಗೂ ಮಹಾರಾಷ್ಟ್ರ ದಿಂದ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ವಿದ್ಯುತ್ ದೀಪಗಳಿಂದ ಕಂಗೊಳಿಸುವ ಸ್ಮಾರಕಗಳನ್ನು ಕಂಡು ಕಣ್ತುಂಬಿಕೊಂಡ ಪ್ರವಾಸಿಗರು.

    (ವರದಿ: ಚಮನ್‌ ಹೊಸಮನಿ,  ನ್ಯೂಸ್‌ 18 ಕನ್ನಡ, ಬೀದರ್)
    Published by:Annappa Achari
    First published: