ಬೀದರ್ : ಆ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಅಪಘಾತ (Accident) ನಡೆದಿದೆಂದು ಮಾಹಿತಿ ಮೇರೆಗೆ ಪೊಲೀಸರು(Police) ಸ್ಥಳಕ್ಕೆ ದೌಡಾಯಿಸಿದ್ದಾರೆ. ವಾಹನದ ಅಪಘಾತ ಕಂಡು ಯಾರಿಗೆ ಏನೋ ಆಗಿದೆ ಎಂದುಕೊಂಡಿದ್ದಾರೆ. ಆದ್ರೆ ಕಾರಿನ ಹತ್ತಿರಕ್ಕೆ ಹೋದಾಗ ಚಾಲಕ ಇರಲಿಲ್ಲ. ವಾಹನದ ಸುತ್ತಲೂ ಪರೀಕ್ಷಿಸಿದಾಗ ಪೊಲೀಸರಿಗೆ ಮತ್ತೊಂದು ಶಾಕ್ ಕಾದಿತ್ತು. ಬೀದರ್ ಎರಡು ರಾಜ್ಯದ ಗಡಿಭಾಗ ಹಂಚಿಕೊಂಡಿರುವ ಜಿಲ್ಲೆ, ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಹೋಗಬೇಕೆಂದ್ರೆ ಬೀದರ್ ಜಿಲ್ಲೆಯ ಮಾರ್ಗವಾಗಿಯೇ ಹೋಗಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಎಂದಾಕ್ಷಣ ಅಲ್ಲಿ ವಾಹನಗಳ ಓಡಾಟವು ಬಲು ಜೋರಾಗಿರುತ್ತದೆ. ಹಾಗೆ ಇಲ್ಲಿ ಸಂಚರಿಸುವ ವಾಹನಗಳು ಕಡಿಮೆ ಇಲ್ಲವೆಂದ್ರು 100-150 ಕಿಲೊಮೀಟರ್ ವೇಗದಲ್ಲಿ ಸಂಚರಿಸುತ್ತವೆ. ಒಂದು ವಾಹನವನ್ನು ಓವರ್ ಟೆಕ್ ಮಾಡಬೇಕು ಅಂದ್ರು ಆ ವಾಹನದ ವೇಗಕಿಂತ ವಾಹನವನ್ನು ಚಲಾಯಿಸಬೇಕಾಗುತ್ತದೆ. ಹಾಗೆ ಓವರ್ ಟೆಕ್ ಮಾಡಲು ಹೋಗಿ ಒಂದು ಇನೊವಾ ಕಾರ ಮಗುಚಿಕೊಂಡು ಅಪಘಾತಕ್ಕೀಡಾಗಿದೆ.
ಇದನ್ನೂ ಓದಿ: Crime News: 2 ಮಕ್ಕಳ ತಾಯಿ ಜೊತೆ ಅಕ್ರಮ ಸಂಬಂಧ: ರೊಚ್ಚಿಗೆದ್ದ ಗಂಡ ಬೀಸಿಯೇ ಬಿಟ್ಟ ಮಚ್ಚು..!
ಗಾಂಜಾ ತುಂಬಿದ ಪ್ಯಾಕೆಟ್ಗಳು ಪತ್ತೆ
ಬಸವಕಲ್ಯಾಣ ತಾಲೂಕಿನ ಗ್ರಾಮೀಣ ಪೊಲೀಸರಿಗೆ ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ಒಂದು ವಾಹನ ಅಪಘಾತಗೊಂಡಿದೆ ಎಂದು ಮಾಹಿತಿಯನ್ನು ಪಡೆದ ಪೊಲೀಸರು ಅಪಘಾತಕ್ಕೊಳಗಾದ ಕಾರನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದ್ರೆ ಇನೊವಾ ಕಾರ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಸಮೀಪ ಮಗುಚಿಕೊಂಡಿರುವ ಕಾರ ಪೊಲೀಸರು ಕಣ್ಣಿಗೆ ಬೀಳುತ್ತದೆ. ಕಾರಿನಲ್ಲಿ ಇದ್ದವರಿಗೆ ಏನೋ ಆಗಿದೆ ಎಂದು ತಿಳಿದು ವಾಹನದ ಸುತ್ತಮುತ್ತಲು ಪರೀಕ್ಷಿಸುತ್ತಾರೆ. ಆದ್ರೆ ಪೊಲೀಸರು ಕಣ್ಣಿಗೆ ಮಾತ್ರ ಯಾರು ಬಿಳುವುದಿಲ್ಲ. ಹಾಗಾದ್ರೆ ವಾಹನದಲ್ಲಿವರು ಎಲ್ಲಿಗೆ ಹೋದ್ರು ಏನಾದ್ರು ಎಂದು ತೆಲೆಕೆಡಿಕೊಂಡ ಪೊಲೀಸರಿಗೆ ಮತ್ತೊಂದು ಶಾಕ್ ಕಾದಿತ್ತು. ವಾಹನದ ಒಳಗೆ 29 ಲಕ್ಷ ಮೌಲ್ಯದ ಗಾಂಜಾ ತುಂಬಿದ ಪ್ಯಾಕೆಟ್ ಗಳಿದ್ದವು. ಇದನ್ನು ಗಮನಿಸಿದ ಪೋಲಿಸರು ವಾಹನದಲ್ಲಿದ್ದವರು ನಾಪತ್ತೆಯಾಗಿದ್ದಾರೆ ಎಂದು ತಿಳಿಯುತ್ತದೆ.
ತೆಲಂಗಾಣ to ಮಹಾರಾಷ್ಟ್ರ..
ಇನ್ನು ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದಾಗ ವಾಹನ ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮಗುಚಿಕೊಂಡಿದೆ. ಹೀಗಾಗಿ ಘಟನೆ ನಡೆದ ನಂತರ ಚಾಲಕ ನಾಪತ್ತೆಯಾಗಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಗಾಂಜಾ ಪತ್ತೆಯಾಗಿದೆ. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹುಮನಾದ ಡಿವೈಎಸ್ಪಿ ಸೋಮಲಿಂಗ ಕುಂಬಾರ, ಗ್ರಾಮೀಣ ಠಾಣೆಯ ಪಿಎಸ್ಐ ಕಿರಣ ದೋತ್ರೆ ಹಾಗೂ ಬೆರಳಚ್ಚು ತಜ್ಞರ ತಂಡ ಪರಿಶೀಲನೆಯನ್ನು ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವೈದ್ಯನ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; Blackmailಗೆ ಹೆದರಿ ಜೀವ ಕಳೆದುಕೊಂಡ Doctor
ಹಾಗಾದ್ರೆ ಬೀದರ್ ಜಿಲ್ಲೆಯು ತೆಲಂಗಾಣ ದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುವ ಮಾರ್ಗವಾಯ್ತೆ ಅನ್ನುವ ಮಾತುಗಳು ಬೀದರ್ ಜಿಲ್ಲೆಯ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದ ಪೊಲೀಸರು ಏಕೆ ತಲೆಕೆಡಿಸಿಕೊಳ್ಳುತ್ತಿಲ್ಲ.ಹಾಗಾದ್ರೆ ಗಡಿಭಾಗದಲ್ಲಿ ವಾಹನಗಳನ್ನು ತಪಾಸಣೆ ಗೊಳಿಸುತ್ತಿಲ್ಲವೆ ಗಾಂಜಾ ಸಾಗಾಟ ಮಾಡುವವರಿಗೆ ಇದೊಂದು ಒಳ್ಳೆಯ ಮಾರ್ಗವಾಗಿದೆ .
ಸಲಿಸಾಗಿ ಗಾಂಜಾ ಸಾಗಿಸುವುಕ್ಕೆ ಬೀದರ್ ಜಿಲ್ಲೆಯ ಮಾರ್ಗವಾಗಿಯ್ತೆ..?
ಇನೊವಾ ಕಾರನ್ನು ಓವರ್ ಟೆಕ್ ಮಾಡಲು ಹೋಗಿ ಈಗ ಮಗುಚಿಕೊಂಡ ಬಿದ್ದ ನಂತರ ಗಾಂಜಾ ಸಾಗಾಟ ಮಾಡುವ ವಿಚಾರ ಪೊಲೀಸರಿಗೆ ಗೊತ್ತಿಗಿದೆ. ಹಾಗಾದ್ರೆ ರಾಷ್ಟ್ರೀಯ ಹೆದ್ದಾರಿ ಮೂಲಕ ಅದೆಷ್ಟು ವಾಹನಗಳಲ್ಲಿ ಗಾಂಜಾ ಸಾಗಿಸಲಾಗುತ್ತದೆ ಅನ್ನೋ ಪ್ರಶ್ನೆ ಗಳು ಬೀದರ್ ಜಿಲ್ಲೆಯಲ್ಲಿ ಎದ್ದಿದೆ.ಅದೇನೇ ಇರಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗುವ ವಾಹನಗಳನ್ನು ತಪಾಸಣೆ ಗೊಳಿಸಬೇಕು ಅಂದಾಗ ಮಾತ್ರ ಇಂತಹ ಘಟನೆ ಗಳನ್ನು ತಡೆಯಲು ಸಾದ್ಯವಾಗುತ್ತದೆ ಅಂತಾರೆ ಪ್ರಜ್ಞಾವಂತ ಜನ್ರು.
ವರದಿ: ಚಮನ್ ಹೊಸಮನಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ