• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Medical Student: ಏಳನೇ ಅಂತಸ್ತಿನಿಂದ ಜಿಗಿದು ಪ್ರಾಣ ಕಳೆದುಕೊಂಡ MBBS ಟಾಪರ್ ವಿದ್ಯಾರ್ಥಿ

Medical Student: ಏಳನೇ ಅಂತಸ್ತಿನಿಂದ ಜಿಗಿದು ಪ್ರಾಣ ಕಳೆದುಕೊಂಡ MBBS ಟಾಪರ್ ವಿದ್ಯಾರ್ಥಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೃತ ಶ್ರೀರಾಮ್ ಬೀದರ್ ಜಿಲ್ಲೆ ಚಿಟ್ಟಗುಪ್ಪ ಪಟ್ಟಣದ ನಿವಾಸಿಯಾಗಿದ್ದು, ಕಾಲೇಜಿನಲ್ಲಿ ಟಾಪರ್ ವಿದ್ಯಾರ್ಥಿಯಾಗಿದ್ದನು. ಆಸ್ಪತ್ರೆ ಆವರಣದಲ್ಲಿ ಸೂತಕದ ಛಾಯೆ ಆವರಿಸಿದ್ದು, ಗೆಳೆಯನ ಸಾವು ಕಂಡು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿದ್ದಾರೆ.

 • News18 Kannada
 • 4-MIN READ
 • Last Updated :
 • Bidar, India
 • Share this:

ಬೀದರ್: ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು ಎಂಬಿಬಿಎಸ್​ ವಿದ್ಯಾರ್ಥಿ (MBBS Student) ಪ್ರಾಣ ಕಳೆದುಕೊಂಡಿರುವ ಘಟನೆ ಬೀದರ್ ನಗರ ಬ್ರಿಮ್ಸ್​ ನಲ್ಲಿ (BRIMS, Bidar) ನಡೆದಿದೆ. 22 ವರ್ಷದ ಶ್ರೀರಾಮ್ ತುಳಸಿದಾಸ್ ಕಾಡಗೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿರುವ MBBS ಹಾಸ್ಟೆಲ್​ನಿಂದ (Hostel Building) ಜಿಗಿದು ಶ್ರೀರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶ್ರೀರಾಮ್ ಕಳೆದ ಕೆಲವು ದಿನಗಳ ಮಾನಸಿಕ ಒತ್ತಡದಿಂದ (Mentally Illness) ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಮಾನಸಿಕ ಒತ್ತಡಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಶ್ರೀರಾಮ್ ಬೀದರ್ ಜಿಲ್ಲೆ ಚಿಟ್ಟಗುಪ್ಪ ಪಟ್ಟಣದ ನಿವಾಸಿಯಾಗಿದ್ದು, ಕಾಲೇಜಿನಲ್ಲಿ ಟಾಪರ್ ವಿದ್ಯಾರ್ಥಿಯಾಗಿದ್ದನು. ಆಸ್ಪತ್ರೆ ಆವರಣದಲ್ಲಿ ಸೂತಕದ ಛಾಯೆ ಆವರಿಸಿದ್ದು, ಗೆಳೆಯನ ಸಾವು ಕಂಡು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿದ್ದಾರೆ.


ಬೆಂಗಳೂರಿನಲ್ಲಿ ವ್ಯಕ್ತಿಯ ಬರ್ಬರ ಕೊಲೆ 


ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆ ನೆತ್ತರು ಹರಿದಿದೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ರೆ, ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ. ಲಿಯಾಖತ್ ಅಲಿಖಾನ್( 44) ಕೊಲೆಯಾದ ವ್ಯಕ್ತಿ. ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೊಲ್ ಬಂಕ್ ಬಳಿಯ ಮನೆಯೊಂದರಲ್ಲಿ ಬರ್ಬರ ಹತ್ಯೆ ನಡೆದಿದೆ.


ಸೋಮವಾರ ರಾತ್ರಿ 8 ಗಂಟೆಗೆ ಜಿಮ್​ಗೆ ಹೋಗ್ತೀನಿ ಅಂತ ಹೇಳಿ ಲಿಯಾಖತ್ ಮನೆಯಿಂದ ಹೊರಗೆ ಹೋಗಿದ್ದರು. ರಾತ್ರಿ 11 ಗಂಟೆಯಾದ್ರೂ ಲಿಯಾಖತ್ ಮನೆಗೆ ಹಿಂದಿರುಗಿರಲಿಲ್ಲ.ಮನೆಗೆ ಬರದ ಹಿನ್ನೆಲೆ ಕುಟುಂಬಸ್ಥರು ಕಾಳ್ ಮಾಡಿದ್ದ್ದಾರೆ. ಆದರೆ ಲಿಯಾಖತ್ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಆತಂಕದಲ್ಲಿ ಕುಟುಂಬಸ್ಥರು ರಾತ್ರಿ ಲಿಯಾಖತ್​​ಗಾಗಿ ಹುಡುಕಾಟ ನಡೆಸಿದ್ದರು.


ಮನೆಯೊಂದರಲ್ಲಿ ಲಿಯಾಖತ್ ಶವ ಪತ್ತೆ


ಇಂದು ಬೆಳಗಿನ ಜಾವ ಲಿಯಾಖತ್ ಶವ ನಾಯಂಡಹಳ್ಳಿಯ ಮನೆಯೊಂದರಲ್ಲಿ ಪತ್ತೆಯಾಗಿದೆ. ಸದ್ಯ ಶವವನ್ನ ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿದ್ದಾರೆ. ಲಿಯಾಖತ್ ಸ್ನೇಹಿತರಾದ ವಾಸೀಂ ಮತ್ತು  ಜೋಹರ್ ಎಂಬವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಣಕಾಸಿನ ವೈಷಮ್ಯ ಹಿನ್ನೆಲೆ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.


ಈ ಸಂಬಂಧ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ವಾಸೀಂ ಮತ್ತು ಜೋಹರ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.


ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ


ಬೆಳಗಿನ ಜಾವ  ಗಾರೇಬಾವಿಪಾಳ್ಯ ಮುಖ್ಯ ರಸ್ತೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾಡ್​ನಿಂದ ಹೊಡೆದು ವ್ಯಕ್ತಿಯ ಕೊಲೆ ಮಾಡಲಾಗಿತ್ತು. ರಾತ್ರಿ ಎರಡು ಗಂಟೆ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Bengaluru: 400 KM ಎತ್ತರದಿಂದ ಸೆರೆಯಾಯ್ತು ಸಿಲಿಕಾನ್‌ ಸಿಟಿಯ ಸುಂದರ ಫೋಟೋ, ಎಷ್ಟು ಚಂದ ಅಲ್ವಾ ನಮ್ಮ ಬೆಂಗಳೂರು


ಕೊಲೆಯಾದ ವ್ಯಕ್ತಿಯನ್ನು ಶರವಣ ಎಂದು ಗುರುತಿಸಲಾಗಿದ್ದು, ಮೃತ ವ್ಯಕ್ತಿ ಪುಟ್ಟೇನಹಳ್ಳಿಯಲ್ಲಿ ಹೊಟೇಲ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ.
ಬೊಲೆರೋ ವಾಹನ ಪಲ್ಟಿ


ಬೊಲೆರೋ ವಾಹನ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೇನ್ನೂರ ನಗರದ ಎನ್ ಎಚ್-4 ಹಲಗೇರಿ ಬ್ರಿಡ್ಜ್ ಬಳಿ ನಡೆದಿದೆ. ಆರು ಜನರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವ ಚಿನ್ನಮಾರೇಪ್ಪ(34) ಹಾಗೂ ಹನುಮಂತ ಬಾಪೂಡಿ (45) ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.


ಮೃತರು ಮಂತ್ರಾಲಯ ತಾಲೂಕಿನ ಮಚ್ಚಿಕೇರಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಹರಿಹರ ಕಡೆಯಿಂದ ಹಾವೇರಿ ಕಡೆ ತೆರಳುತ್ತಿದ್ದ ವಾಹನ ಪಲ್ಪಿಯಾಗಿದೆ. ಲಾರಿಯೊಂದನ್ನು ಓವರ್​ಟೇಕ್ ಮಾಡುವ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ರಾಣೇಬೆನ್ನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Published by:Mahmadrafik K
First published: