Bidar Lok Sabha Election Result Live: ಬೀದರ್; ಪ್ರತಿಷ್ಠೆಯ ಕಣದಲ್ಲಿ ಖಂಡ್ರೆ ವಿರುದ್ಧ ಭಗವಂತ ಖೂಬಾಗೆ ಭಾರೀ ಮುನ್ನಡೆ

ಬೀದರ್​ನಲ್ಲಿ ಆರನೇ ಸುತ್ತಿನ ಮತ ಎಣಿಕೆ ಅಂತ್ಯವಾಗಿದ್ದು, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ 42,469 ಮತಗಳ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.

Ganesh Nachikethu | news18
Updated:May 23, 2019, 11:43 AM IST
Bidar Lok Sabha Election Result Live: ಬೀದರ್; ಪ್ರತಿಷ್ಠೆಯ ಕಣದಲ್ಲಿ ಖಂಡ್ರೆ ವಿರುದ್ಧ ಭಗವಂತ ಖೂಬಾಗೆ ಭಾರೀ ಮುನ್ನಡೆ
ಭಗವಂತ ಖೂಬಾ, ಈಶ್ವರ್​​ ಖಂಡ್ರೆ
  • News18
  • Last Updated: May 23, 2019, 11:43 AM IST
  • Share this:
ಬೀದರ್​​(ಮೇ.23): ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರೇ ಚುನಾವಣಾ ಕಣಕ್ಕಿಳಿದಿರುವ ಕ್ಷೇತ್ರ ಬೀದರ್. ಬಿಜೆಪಿ ವಶದಲ್ಲಿರುವ ಈ ಕ್ಷೇತ್ರವನ್ನು ವಶಕ್ಕೆ ಪಡೆಯಲು ಕಾಂಗ್ರೆಸ್​-ಜೆಡಿಎಸ್​​ ಭಾರೀ ತಂತ್ರ ರೂಪಿಸಿವೆ. ಮೂರನೇ ಹಂತದ ಚುನಾವಣೆಯಲ್ಲಿಯೇ ಬೀದರ್​​ ಕ್ಷೇತ್ರಕ್ಕೆ ಮತದಾನ ಮುಗಿದಿದೆ.

ಬಿಜೆಪಿಯಿಂದ ಹಾಲಿ ಸಂಸದ ಭಗವಂತ ಖೂಬಾ ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆ ಅವರು ಕಣದಲ್ಲಿದ್ದಾರೆ. ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಬಿಜೆಪಿಯ ಗೆಲುವಿಗೆ ತಡೆ ಹಾಕಲಿದೆಯೇ? ಎಂಬುದನ್ನು  ಕಾದು ನೋಡಬೇಕಿದೆ.

ಭಗವಂತ ಖೂಬಾಗೆ ಮುನ್ನಡೆ : 8 ಗಂಟೆಗೆ ಆರಂಭವಾದ ಅಂಚೆ ಮತ ಎಣಿಕೆಯಲ್ಲಿ ಈಶ್ವರ್ ಖಂಡ್ರೆ ವಿರುದ್ಧ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾಗೆ ಆರಂಭಿಕ ಮುನ್ನಡೆ ಲಭ್ಯವಾಗಿತ್ತು. ಹೀಗಾಗಿ ಕಾಂಗ್ರೆಸ್​ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ವಿಶ್ವಾಸವಿತ್ತು. ಆದರೆ, ಇದೀಗ 6 ಸುತ್ತಿನ ಮತ ಎಣಿಕೆ ಮುಗಿದಿದ್ದು ಆರೂ ಸುತ್ತಿನಲ್ಲಿಯೂ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಿನ್ನಡೆ ಅನುಭವಿಸಿದ್ದಾರೆ.

ಬೀದರ್​ನಲ್ಲಿ ಆರನೇ ಸುತ್ತಿನ ಮತ ಎಣಿಕೆ ಅಂತ್ಯವಾಗಿದ್ದು, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ 42,469 ಮತಗಳ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.
First published:May 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading