ಬೀದರ್​ನಲ್ಲಿ ಕೋತಿಗಳ ಕಾಟಕ್ಕೆ ರೈತರು ಹೈರಾಣ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲ ಹಿಪ್ಪರಗಾ  ಗ್ರಾಮದಲ್ಲಂತೂ ಕೋತಿಗಳ ಹಾವಳಿಯಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಈ ಗ್ರಾಮದ ಸುತ್ತಮುತ್ತ ಏನಿಲ್ಲ ಅಂದರೂ 200ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕೋತಿಗಳು ಹೊಲದಲ್ಲಿ ಹಾಕಿದ ಬೆಳೆಯನ್ನೆಲ್ಲ ತಿಂದು ನಾಶ ಮಾಡುತ್ತಿವೆ.

ಬೀದರ್​ನಲ್ಲಿ ಕೋತಿಗಳ ಕಾಟ

ಬೀದರ್​ನಲ್ಲಿ ಕೋತಿಗಳ ಕಾಟ

  • Share this:
ಬೀದರ್ (ಆ. 19): ಕಳೆದ ನಾಲ್ಕೈದು ವರ್ಷದಿಂದ ಬೀದರ್ ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ರೈತರು ಹೈರಾಣಾಗಿದ್ದರು. ಈ ವರ್ಷ ಮಳೆ ಉತ್ತಮವಾಗಿದ್ದು, ಹೊಲಗಳಲ್ಲಿ ಬೆಳೆ ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಹೆಸರು, ಉದ್ದು, ಸೋಯಾ ಬೆಳೆಗಳ ಫಸಲು ಚೆನ್ನಾಗಿ ಬಂದಿದ್ದು, ರೈತರ ಮೊಗದಲ್ಲಿ ನಗು ಮೂಡಿದೆ. ಆದರೆ ಬೆಳೆಗಳಿಗೆ ಕೋತಿಗಳ ಕಾಟ ಜಾಸ್ತಿಯಾಗಿದ್ದು ರೈತರನ್ನು ಹೈರಾಣಾಗಿಸಿದೆ.

ಕೋತಿಗಳ ಕಾಟದಿಂದ ತಮ್ಮ ಬೆಳೆಗಳನ್ನ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಗಡಿ ಜಿಲ್ಲೆ‌ ಬೀದರ್ ನಲ್ಲಿ ಕಳೆದ ನಾಲ್ಕೈದು ವರ್ಷದಿಂದ ಮಳೆಯಾಗದೆ ರೈತರು ಬರಗಾಲಕ್ಕೆ ತುತ್ತಾಗಿ ನಾಟಿ ಮಾಡಿದ ಯಾವುದೇ ಬೆಳೆ ರೈತನ ಕೈಗೆ ಬಾರದೆ ನಷ್ಟವನ್ನ ಅನುಭವಿಸಿದ್ದರು. ಆದರೆ ಈ ವರ್ಷ ಜಿಲ್ಲೆಯಲ್ಲಿ ಉತ್ತಮವಾದ ಮಳೆಯಾಗಿದೆ. ರೈತರು ಬಿತ್ತಿದ ಬೆಳೆ ಉತ್ತಮವಾಗಿ ಬಂದಿದ್ದು, ಆ ಬೆಳೆಯನ್ನ ಉಳಿಸಿಕೊಳ್ಳಲು ರೈತರು ಕಷ್ಟ ಪಡುತ್ತಿದ್ದಾರೆ. ಬೆಳೆದು ನಿಂತ ಉದ್ದು, ಹೆಸರು, ಸೋಯಾ ಹೊಲಕ್ಕೆ ಗುಂಪು ಗುಂಪಾಗಿ ದಾಳಿ ಮಾಡೋ ಕೋತಿಗಳು ಬೆಳೆಯನ್ನ ತಿಂದು ಖಾಲಿ ಮಾಡುತ್ತಿವೆ.

ಇದನ್ನೂ ಓದಿ: ಟಾಪರ್ ಆಗಬೇಕಿದ್ದ ಮಂಡ್ಯದ ವಿದ್ಯಾರ್ಥಿನಿ ಎಸ್​ಎಸ್​ಎಲ್​ಸಿಯಲ್ಲಿ ಫೇಲ್; ಪರೀಕ್ಷಾ ಮಂಡಳಿಯ ಎಡವಟ್ಟು ಬಯಲು

ಬೆಳಿಗ್ಗೆಯಾದರೆ ಕೋತಿಗಳ ಕಾಟ ರಾತ್ರಿಯಾದರೆ ಜಿಂಕೆಗಳ ಕಾಟ, ಇದರಿಂದ ಸಾಕಾಗಿ ಹೋಗಿದೆ ಎಂದು ರೈತರು ಅವಲತ್ತುಕೊಳ್ಳುತ್ತಿದ್ದಾರೆ‌. ಅಲ್ಲದೇ ಈ ಕೋತಿಗಳನ್ನು ಓಡಿಸಲು ಹೋಗಿ ರೈತರೊಬ್ಬರು ಬಿದ್ದು ಪ್ರಾಣ ಸಹ ಕಳೆದುಕೊಂಡಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲ ಹಿಪ್ಪರಗಾ  ಗ್ರಾಮದಲ್ಲಂತೂ ಕೋತಿಗಳ ಹಾವಳಿಯಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಈ ಗ್ರಾಮದ ಸುತ್ತಮುತ್ತ ಏನಿಲ್ಲ ಅಂದರೂ 200ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕೋತಿಗಳು ಹೊಲದಲ್ಲಿ ಹಾಕಿದ ಬೆಳೆಯನ್ನೆಲ್ಲ ತಿಂದು ನಾಶ ಮಾಡುತ್ತಿವೆ. ಇದು ರೈತರನ್ನ ಕಂಗಾಲು ಮಾಡಿದೆ. ಪ್ರತಿದಿನ ಹೊಲಕ್ಕೆ ಹೋದರೆ ಸಾಕು ಕೋತಿಗಳನ್ನು ಓಡಿಸುವುದೇ ಕೆಲಸವಾಗಿ ಬಿಟ್ಟಿದೆ ಎನ್ನುತ್ತಾರೆ ರೈತರು‌.

ಒಟ್ಟಾರೆ ಗಡಿ ಜಿಲ್ಲೆ ಬೀದರ್ ರೈತರ ಹೊಲದಲ್ಲಿ‌ ಈಗ ಕೋತಿಗಳದ್ದೆ ಕಾರುಬಾರು. ಭಾಲ್ಕಿ, ಹುಮ್ನಾಬಾದ್, ಬಸವಕಲ್ಯಾಣ, ಔರಾದ್ ತಾಲೂಕಿನಾದ್ಯಂತಕೋತಿಗಳ ಕಾಟಕ್ಕೆ ರೈತರು ಕಂಗಾಲಾಗಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಎರಡ್ಮೂರು ಹೊಲಗಳಿಗೆ ದಾಂಗುಡಿ ಇಡುವ ಕೋತಿಗಳ ಕಾಟವಲ್ಲದೆ, ರಾತ್ರಿ ಜಿಂಕೆ ಗುಂಪಿನ ಆಟಾಟೋಪದಿಂದ ಫಸಲಿಗೆ ಬಂಪರ್ ಬೆಲೆಯ ನಿರೀಕ್ಷೆಯ ಜೊತೆಗೆ ಉತ್ತಮ ಆದಾಯದ ಕನಸು ಕಂಡಿದ್ದ ಬೀದರ್ ಜಿಲ್ಲೆಯ ರೈತರ ಎಣಿಕೆಗಳು ಬುಡಮೇಲಾಗಿದ್ದು, ಫಸಲಿನ ಆದಾಯಕ್ಕೆ ತಣ್ಣೀರೆರಚಿದೆ.
Published by:Sushma Chakre
First published: