HOME » NEWS » State » BIDAR FARMER GROWING VARIOUS CROPS IN HIS LAND AND GET SUCCESS LG

ಮಿಶ್ರ ಬೇಸಾಯ ಪದ್ಧತಿ ಮೂಲಕ ಬರಕ್ಕೆ ಸೆಡ್ಡು ಹೊಡೆದ ಬೀದರ್ ರೈತ

ಕಬ್ಬು ಬೆಳೆಗೆ ಸೀಮಿತವಾಗಿದ್ದ ಭೂಮಿಯಲ್ಲಿ ಈಗ ಶ್ರೀಗಂಧ, ಮಾವು, ಪಪ್ಪಾಯಿ, ಸೀತಾಫಲ, ಬೆಳೆಸಿದ್ದಾನೆ. ಮಿಶ್ರ ಬೇಸಾಯವು ಅವರಿಗೆ ಮೇಲಿಂದ ಮೇಲೆ ಆದಾಯ ತಂದುಕೊಡುತ್ತಿದೆ. ಮಳೆಯ ಕೊರತೆ, ನೈಸರ್ಗಿಕ ವಿಕೋಪದಿಂದ ಒಂದು ಬೆಳೆ ಕೈಕೊಟ್ಟಾಗ ಮತ್ತೊಂದು ಬೆಳೆ ಕೈಹಿಡಿಯುತ್ತಿದೆ.

news18-kannada
Updated:January 27, 2021, 1:20 PM IST
ಮಿಶ್ರ ಬೇಸಾಯ ಪದ್ಧತಿ ಮೂಲಕ ಬರಕ್ಕೆ ಸೆಡ್ಡು ಹೊಡೆದ ಬೀದರ್ ರೈತ
ಬೀದರ್ ರೈತ
  • Share this:
ಬೀದರ್(ಜ.27): ಬೀದರ್ ಜಿಲ್ಲೆ ಅಂದರೆ ನಮಗೆ ನೆನಪಿಗೆ ಬರೋದು ಬರ. ಪ್ರತಿ ವರ್ಷ ಅತಿವೃಷ್ಠಿ ಅನಾವೃಷ್ಠಿಯಿಂದಾಗಿ ರೈತ  ತೊಂದರೆ ಅನುಭವಿಸೋದು ಜಿಲ್ಲೆಯಲ್ಲಿ ಮಾಮೂಲಿ. ಆದರೆ ಇಂತಹ ಹತ್ತಾರು ಸಮಸ್ಯೆಗಳ ನಡುವೆ ಇಲ್ಲೊಬ್ಬ ರೈತರ ಮಿಶ್ರ ಬೇಸಾಯ ಪದ್ದತಿಯಲ್ಲಿ ಬೆಳೆ ಬೆಳೆಯುವುದರ ಮೂಲಕ ಅನಾವೃಷ್ಠಿ-ಅತಿವೃಷ್ಠಿಗೆ ಶೆಡ್ಡು ಹೊಡೆದು ನಿಂತಿದ್ದು ತಿಂಗಳಿಗೆ ಒಬ್ಬ ಸರಕಾರಿ ನೌಕರ ಪಡೆದುಕೊಳ್ಳುವ ಸಂಬಳಕ್ಕಿಂತ ಹೆಚ್ಚಿಗೆ ಗಳಿಸುತ್ತಿದ್ದಾರೆ.  ಬೀದರ್ ತಾಲೂಕಿನ ಚಿಟ್ಟಾ ಗ್ರಾಮದ ಪ್ರಗತಿಪರ ರೈತ ಜಾಫರ್ ಮೀಯಾ, ಬರಡು ಭೂಮಿಯಲ್ಲಿ ಕಡಿಮೆ ನೀರಿನಲ್ಲಿ ಸಮಗ್ರ ಕೃಷಿ ಮಾಡುವುದರ ಮೂಲಕ ಕೃಷಿಯಲ್ಲಿ ಯಶಸ್ವಿಯಾಗಿದ್ದಾನೆ. 

ಇನ್ನೂ ಕೃಷಿಯಲ್ಲಿ ಹೊಸ  ಪ್ರಯೋಗ ಮಾಡುವ ಮೂಲಕ ಬರಗಾಲದಲ್ಲಿ ನಿರಂತರ ಆದಾಯ ಗಳಿಸಿ ಜಿಲ್ಲೆಯ ರೈತರ ಗಮನ ಸೆಳೆದಿದ್ದಾರೆ. ಸಮಗ್ರ ಬೇಸಾಯದ ಮೂಲಕ ತಿಂಗಳಿಗೆ ಹತ್ತಾರು ಸಾವಿರ ರೂಪಾಯಿ ಆದಾಯ ಪಡೆಯುತ್ತಿರುವ ಜಾಫರ್ ಓದಿದ್ದು ಹತ್ತನೆಯ ತರಗತಿಯಾದರೂ ಕೃಷಿಯಲ್ಲಿ ಮಾತ್ರ ಆಗಾಧ ಸಾಧನೆಯನ್ನ ಮಾಡುತ್ತಿದ್ದಾರೆ. ತನ್ನ 10 ಎಕರೆ ಜಮೀನಿನಲ್ಲಿ ಶ್ರೀಗಂಧ, ಪಪ್ಪಾಯಿ, ಸೀತಾ ಫಲ, ಜೊತೆಗೆ ಹೈನುಗಾರಿಕೆ ದನಗಳಿಗೆ ಮೇವೂ ಕೂಡಾ ಅದರಲ್ಲಿಯೇ ಬೆಳೆಯುತ್ತಿದ್ದು ಒಂದು ಬೆಳೆ ಫಸಲು ಕೊಡುವುದನ್ನ ನಿಲ್ಲಿಸಿದ ಕೂಡಲೇ ಇನ್ನೊಂದು ಬೆಳೆ ಫಸಲು ಕೊಡಲು ಆರಂಭಿಸುವುದರಿಂದ ಪ್ರತಿ ತಿಂಗಳು ಆದಾಯ ಗಳಿಸುತ್ತಿದ್ದು ಕುಟುಂಬಸ್ಥರು ಸಂತೋಷದಿಂದ ಇದ್ದೇವೆಂದು ರೈತ ಜಾಫರ್ ಹೇಳುತ್ತಿದ್ದಾರೆ.

ಕಬ್ಬು ಬೆಳೆಗೆ ಸೀಮಿತವಾಗಿದ್ದ ಭೂಮಿಯಲ್ಲಿ ಈಗ ಶ್ರೀಗಂಧ, ಮಾವು, ಪಪ್ಪಾಯಿ, ಸೀತಾಫಲ, ಬೆಳೆಸಿದ್ದಾನೆ. ಮಿಶ್ರ ಬೇಸಾಯವು ಅವರಿಗೆ ಮೇಲಿಂದ ಮೇಲೆ ಆದಾಯ ತಂದುಕೊಡುತ್ತಿದೆ. ಮಳೆಯ ಕೊರತೆ, ನೈಸರ್ಗಿಕ ವಿಕೋಪದಿಂದ ಒಂದು ಬೆಳೆ ಕೈಕೊಟ್ಟಾಗ ಮತ್ತೊಂದು ಬೆಳೆ ಕೈಹಿಡಿಯುತ್ತಿದೆ. ಇನ್ನೂ ತಮ್ಮ ಹೊಲದ ಬದುವಿನಲ್ಲಿ ಮಾವು, ಶ್ರೀಗಂಧ ಗಿಡಗಳನ್ನ ನಾಟಿ ಮಾಡಿದ್ದಾರೆ. ಸರಿ ಸುಮಾರು 8 ನೂರು ಗಿಡಗಳನ್ನ ನಾಟಿ ಮಾಡಿದ್ದಾರೆ. ಇವುಗಳು ಹತ್ತು ವರ್ಷದ ಬಳಿಕ ಒಂದು ಗಿಡಗಳು 10 ರಿಂದ 15 ಸಾವಿರ ರೂಪಾಯಿ ಮಾರಾಟವಾಗುತ್ತದೆ. ಬಂದ ಹಣದಲ್ಲಿ ಮಕ್ಕಳ ಮದುವೆ ಶಿಕ್ಷಣಕ್ಕೆ ಬಳಕೆ ಮಾಡಬಹುದೆಂದು ರೈತ ಹೇಳುತ್ತಿದ್ದಾನೆ.

ವ್ಯಾಲಂಟೈನ್ಸ್​ ಡೇ ದಿನ ಡಿಕೆಶಿ ಮಗಳ ಮದುವೆಯಾಗಲಿ ಅಂತ ತಮಾಷೆ ಮಾಡಿದ್ದೆ; ಈಗ ಹಾಗೆಯೇ ಆಗುತ್ತಿದೆ; ವಿನಯ್ ಗುರೂಜಿ

ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಸಮರ್ಥ ನೀರಿನ ಬಳಕೆಗಾಗಿ ಹನಿ ನೀರಾವರಿ ಪದ್ಧತಿಯಲ್ಲದೆ ವಿದ್ಯುತ್ ಕೊರತೆಯಾದಾಗ ಬೆಳೆಗಳಿಗೆ ನೀರೊದಗಿಸಲು 4 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶೇಖರಣಾ ತೊಟ್ಟಿ ನಿರ್ಮಿಸಿದ್ದಾರೆ. ಮುಂದೆ ಹನಿ ನೀರಾವರಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಇಂಗಿತ ಹೊಂದಿದ್ದಾರೆ. ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮುಂತಾದ ಕೃಷಿ ಉಪಕರಣ ಮತ್ತು ಕೃಷಿ ಯಂತ್ರೋಪಕರಣಗಳನ್ನು ಸಂಗ್ರಹಿಸಿಟ್ಟುಕೊಂಡು ಸಮರ್ಪಕವಾಗಿ ಉಪಯೋಗಿಸುತ್ತಿದ್ದಾರೆ.

ಇನ್ನೂ ಇವರು  ಬೆಳೆದಿರುವ ಬೆಳೆಗಳನ್ನ ರಕ್ಷಿಸಲು ಕೋಲ್ಡ್ ಸ್ಟೋರೇಜ್ ಅವ್ಯಶ್ಯಕಥೆಯಿಂದ ಇವರೊಬ್ಬರದೇ ಅಲ್ಲ ಎಲ್ಲ ರೈತರ ಸಮಸ್ಯೆಯೂ ಇದೇ ಆಗಿದೆ. ಸರಕಾರ ನಮ್ಮ ರೈತರು ಬೆಳೆದ ಬೆಳೆಯನ್ನ ಸಂರಕ್ಷಣೆ ಮಾಡುವ ಗೋದಾಮಿ ನಿರ್ಮಾಣ ಮಾಡಿ ಎಂದು ಹೇಳುತ್ತಿದ್ದಾರೆ. ಸಾಧಕ ರೈತನ ಬಗ್ಗೆ ಇಲ್ಲಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ರೈತರು ಒಂದೇ ಬೆಳೆಗೆ ಸೀಮಿತವಾಗದೆ ಸಮಗ್ರ ಪದ್ದತ್ತಿ ಮೂಲಕ ಕೃಷಿ ಮಾಡಿದರೆ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಕೈ ಹಿಡಿಯುತ್ತದೆ.
Youtube Video
2018-19 ನೇ ಸಾಲಿನಲ್ಲಿ ಸುಮಾರು 8 ನೂರು ಶ್ರೀಗಂಧದ ಸಸಿಗಳನ್ನ ಅರಣ್ಯ ಇಲಾಖೆಯಿಂದ ಪಡೆದು ತಮ್ಮ ಹೊಲದಲ್ಲಿ ನಾಟಿ ಮಾಡಿದ್ದಾನೆ. ಇದಕ್ಕೆ ಅರಣ್ಯ ಇಲಾಖೆಯೂ ಕೂಡಾ ಸಹಾಯಧನ ನೀಡುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
Published by: Latha CG
First published: January 27, 2021, 1:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories