ಬೀದರ್ ಶಾಲಾ ಮಕ್ಕಳ ದೇಶದ್ರೋಹ ಪ್ರಕರಣ : ಶಿಕ್ಷಕಿ, ಬಾಲಕಿಯ ತಾಯಿಗೆ ಜಾಮೀನು ಮಂಜೂರು

ಫೆಬ್ರವರಿ 11ರಂದು ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದರು. 11 ಜನ ವಕೀಲರ ಜೊತೆ ಹಿರಿಯ ವಕೀಲ ಬಿಟಿ ವೆಂಕಟೇಶ್‌ ಆರೋಪಿಗಳ ಪರವಾಗಿ ವಾದ ಮಂಡಿಸಿದ್ದರು.

G Hareeshkumar | news18-kannada
Updated:February 14, 2020, 8:55 PM IST
ಬೀದರ್ ಶಾಲಾ ಮಕ್ಕಳ ದೇಶದ್ರೋಹ ಪ್ರಕರಣ : ಶಿಕ್ಷಕಿ, ಬಾಲಕಿಯ ತಾಯಿಗೆ ಜಾಮೀನು ಮಂಜೂರು
ನಾಟಕ ಮಾಡಿದ ಮಕ್ಕಳ ಬಳಿ ವಿಚಾರಣೆ ನಡೆಸುತ್ತಿರುವ ಪೊಲೀಸರು.
  • Share this:
ಬೀದರ್​ (ಫೆ.14) : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ನಾಟಕ ಪ್ರಕರಣ ಹಿನ್ನೆಲೆಯಲ್ಲಿ ಬಂಧಿತ ಶಿಕ್ಷಕಿ ಫರೀನಾ ಬೇಗಂ, ಬಾಲಕಿಯ ತಾಯಿ ಅನುಜಾ ಮಿನ್ಸಾ ಅವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

ಫೆಬ್ರವರಿ 11ರಂದು ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದರು. 11 ಜನ ವಕೀಲರ ಜೊತೆ ಹಿರಿಯ ವಕೀಲ ಬಿಟಿ ವೆಂಕಟೇಶ್‌ ಆರೋಪಿಗಳ ಪರವಾಗಿ ವಾದ ಮಂಡಿಸಿದ್ದರು. ವಾದ ವಿವಾದ ಆಲಿಸಿದ್ದ ನ್ಯಾಯಾಲಯ ಫೆಬ್ರವರಿ 14ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಅದರಂತೆ ತೀರ್ಪು ಹೊರಬಿದ್ದಿದ್ದು ಜಾಮೀನು ನೀಡಲಾಗಿದೆ

ಏನಿದು ಪ್ರಕರಣ ?

ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ದೇಶವ್ಯಾಪಿ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಜನವರಿ 21ರಂದು ಬೀದರ್​ನ ಶಾಹೀನ್ ಶಾಲೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆದಿತ್ತು. ಅದರಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಡೈಲಾಗ್​ಗಳನ್ನ ಮಕ್ಕಳಿಂದ ಹೇಳಿಸಲಾಗಿತ್ತು. ಮಕ್ಕಳ ಪೋಷಕರೊಬ್ಬರು ಈ ನಾಟಕವನ್ನು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಸ್ಟ್ರೀಮ್ ಪ್ರಸಾರ ಮಾಡಿದ್ದರು. ಐದು ದಿನಗಳ ನಂತರ ಎಬಿವಿಪಿ ಕಾರ್ಯಕರ್ತ ನೀಲೇಶ್ ರಕ್ಷಲಾ ಎಂಬುವವರು ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ದೂರು ದಾಖಲಿಸಿದರು.

ಈ ದೂರಿನ ಮೇರೆಗೆ ಕಾರ್ಯಾಚರಣೆ ಮಾಡಿದ ಪೊಲೀಸರು ಶಾಹೀನ್ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಮ್ ಮತ್ತು ವಿದ್ಯಾರ್ಥಿಯ ತಾಯಿ ನಜಬುನ್ನೀಸಾ ಎಂಬಿಬ್ಬರನ್ನು ಬಂಧಿಸಿದರು. ಸಮಾದಲ್ಲಿ ಹಿಂಸೆ ನಡೆಸಲು ಮತ್ತು ನರೇಂದ್ರ ಮೋದಿ ವಿರುದ್ಧ ಧ್ವೇಷ ಸಾಧಿಸಲು ಮಕ್ಕಳಿಗೆ ಪ್ರಚೋದನೆ ಕೊಡಲಾಯಿತು ಎಂದು ಪೊಲೀಸರು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು.

 
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ