Bidar Accident: ದೇವರ ದರ್ಶನಕ್ಕೆ ಹೊರಟವರು ಮಸಣ ಸೇರಿದ್ರು! ಬೀದರ್​​ನಲ್ಲಿ ದುರಂತ

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ರಜೆ ಇದ್ದಿದ್ದರಿಂದ ಅವರೆಲ್ಲಾ ದೇವರ ದರ್ಶನಕ್ಕೆ ಹೊರಟಿದ್ದರು. ಆದರೆ ಎರ್ಟಿಗಾ ಕಾರು ಮತ್ತು ಕಂಟೈನರ್‌ ನಡುವೆ ಭಾರೀ ಡಿಕ್ಕಿ ಸಂಭವಿಸಿ 5 ಮಂದಿ ಸಾವನ್ನಪ್ಪಿದ್ದಾರೆ. ಬೀದರ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ಈ ದುರ್ಘಟನೆ ಸಂಭವಿಸಿದೆ.

ಬೀದರ್​​ನಲ್ಲಿ ಭೀಕರ ರಸ್ತೆ ಅಪಘಾತ

ಬೀದರ್​​ನಲ್ಲಿ ಭೀಕರ ರಸ್ತೆ ಅಪಘಾತ

 • Share this:
  ಅವರೆಲ್ಲಾ ಖುಷಿ ಖುಷಿಯಾಗಿ ತಮ್ಮ ಕುಟುಂಬ (Family) ಸಮೇತ ದೇವಸ್ಥಾನಕ್ಕೆ (Temple) ತೆರಳುತ್ತಿದ್ದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ರಜೆ ಇದ್ದಿದ್ದರಿಂದ ಅವರೆಲ್ಲಾ ದೇವರ (God) ದರ್ಶನ ಪಡೆದುಕೊಂಡು ಪುನೀತರಾಗಬೇಕು ಅಂತಾ ಅಂದುಕೊಂಡಿದ್ದರು. ಆದ್ರೆ ವಿಧಿಯ ಲೆಕ್ಕಾಚಾರವೇ ಬೇರೆಯಾಗಿತ್ತು ನೋಡಿ. ಎರ್ಟಿಗಾ ಕಾರು (Car) ಮತ್ತು ಕಂಟೈನರ್‌ ನಡುವೆ ಭಾರೀ ಡಿಕ್ಕಿ ಸಂಭವಿಸಿ ಕ್ರೂರ ವಿಧಿಯ ಆಟಕ್ಕೆ ದಾರಿಯ ಮಧ್ಯದಲ್ಲಿಯೇ ಐವರು ಸಾವನ್ನಪ್ಪಿದ್ದಾರೆ. ಭಾರಿ ಅಪಘಾತದಲ್ಲಿ (Accident) ಕುಟುಂಬದ ಅರ್ಧ ಜನ ಸ್ಥಳದಲ್ಲಿಯೇ ಪ್ರಾಣ  (Death) ಕಳೆದುಕೊಂಡಿದ್ದಾರೆ. ದೇವಸ್ಥಾನಕ್ಕೆ ತೆರಳಬೇಕಾದವರು ನಡುರಸ್ತೆಯಲ್ಲೇ ಅಂತ್ಯವಾಗಿರೋದನ್ನು ಕಂಡು ಜನರು ಆ ಕ್ರೂರ ವಿಧಿಗೆ ಶಪಿಸುತ್ತಿದ್ದಾರೆ.

  ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ರಜೆ ಇದ್ದಿದ್ದರಿಂದ ಅವರೆಲ್ಲಾ ದೇವರ ದರ್ಶನಕ್ಕೆ ಹೊರಟಿದ್ದರು. ಆದರೆ ಎರ್ಟಿಗಾ ಕಾರು ಮತ್ತು ಕಂಟೈನರ್‌ ನಡುವೆ ಭಾರೀ ಡಿಕ್ಕಿ ಸಂಭವಿಸಿ 5 ಮಂದಿ ಸಾವನ್ನಪ್ಪಿದ್ದಾರೆ. ಬೀದರ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ಈ ದುರ್ಘಟನೆ ಸಂಭವಿಸಿದೆ.

  ದೇವರ ದರ್ಶನಕ್ಕೆ ಹೊರಟವರು ದಾರುಣ ಅಂತ್ಯ..!

  ಎರ್ಟಿಗಾ ಕಾರು ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ 5 ಮಂದಿ ಸಾವನ್ನಪ್ಪಿದ್ದಾರೆ. ಇನ್ನೋರ್ವ ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ 5 ಮಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಮೃತಪಟ್ಟ ಎಲ್ಲರೂ ಹೈದ್ರಾಬಾದ್​​ನ ಬೇಗಂಪೇಟ್ ನಿವಾಸಿಗಳು.

  Bidar accident 5 people death Those who went to see God
  ಬೀದರ್​​ನಲ್ಲಿ ಭೀಕರ ರಸ್ತೆ ಅಪಘಾತ


  ಹೈದ್ರಾಬಾದ್​​​ನಿಂದ ಕಲಬುರಗಿಯ ಗಾಣಗಾಪುರ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ರೂರ ವಿಧಿಯ ಆಟಕ್ಕೆ ಕುಟುಂಬವೇ ದಾರುಣ ಅಂತ್ಯ ಕಂಡಿದೆ.

  ಇದನ್ನೂ ಓದಿ: ಕಾಂಗ್ರೆಸ್​​ನಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆ, ಎಲ್ಲಾ ಕಡೆ ಟ್ರಾಫಿಕ್ ಜಾಮ್

  ಗಾಣಗಾಪುರ ದೇಗುಲಕ್ಕೆ ಹೊರಟಿದ್ರು

  ಕುಟುಂಬ ಸದಸ್ಯರು ಎಲ್ಲರೂ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಹೊರಟಿದ್ದರು. ಆದ್ರೆ ದೇಗುಲ ತಲುಪುವ ಮುನ್ನವೇ ಎಲ್ಲರೂ ದಾರುಣ ಅಂತ್ಯ ಕಂಡಿದ್ದಾರೆ. ಎರ್ಟಿಗಾ ಕಾರಿನಲ್ಲಿ ಒಟ್ಟು 10 ಜನರು ಪ್ರಯಾಣಿಸುತ್ತಿದ್ದರು.

  ಇದನ್ನೂ ಓದಿ: ಹಿಂದೂಗಳು ತಮ್ಮ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ! ಕರೆ ಕೊಟ್ಟಿದ್ದೇಕೆ ಪ್ರಮೋದ್ ಮುತಾಲಿಕ್?

  5 ಮಂದಿ ಸ್ಥಳದಲ್ಲೇ ಸಾವು

  ಎರ್ಟಿಗಾ ಕಾರು ಹಾಗೂ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 5 ಜನ ಸ್ಥಳದಲ್ಲೇ ಅಸುನೀಗಿದ್ದಾರೆ. ಕಾರು ಚಾಲಕ ದಿನೇಶ್(35) ಗಿರಿಧರ್ (45) ಪ್ರಿಯಾ (15) ಅನಿತಾ (36) ನಾಯಕ್ (2) ಸ್ಥಳದಲ್ಲಿಯೇ ಮೃತಪಟ್ಟವರು.

  ಬೀದರ್​ನಲ್ಲಿ ಭೀಕರ ರಸ್ತೆ ಅಪಘಾತ

  ಬೀದರ್ ತಾಲೂಕಿನ ಬಂಗೂರ ರಾಷ್ಟೀಯ ಹೆದ್ದಾರಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ 5 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಹೈದರಾಬಾದ್ ನ ಬೇಗಂಪೇಟೆ ನಿವಾಸಿಗಳು. ಬೇಗಂಪೇಟೆ ನಿವಾಸಿಗಳು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ದೇವಸ್ಥಾನಕ್ಕೆ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

  ಇನ್ನು ಅಪಘಾತದಲ್ಲಿ ಐದು ಮಂದಿಗೆ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ ಜಿಲ್ಲಾ ಆಸ್ಪತ್ರೆ ದಾಖಲು ಮಾಡಲಾಗಿದೆ. ಮನ್ನಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  ಇಷ್ಟಾರ್ಥ ನೆರವೇರುತ್ತೆ ಅನ್ನೋ ನಂಬಿಕೆ

  ಇನ್ನು ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಭಕ್ತಿ ಭಾವದಿಂದ  ನಡೆದುಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಅಂದುಕೊಂಡ ಕಾರ್ಯಗಳು ನೆರವೇರುತ್ತವೆ ಎನ್ನುವುದು ಭಕ್ತರ ಪಾಲಿನ  ನಂಬಿಕೆ. ಹೀಗಾಗಿ ಈ ದೇಗುಲಕ್ಕೆ ಮಹಾರಾಷ್ಟ, ತೆಲಂಗಾಣ, ಹೈದ್ರಾಬಾದ್, ಕರ್ನಾಟಕ ಸೇರಿದಂತೆ ಹೀಗೆ ಹಲವಾರು ಕಡೆಗಳಿಂದ ಭಕ್ತರು ಆಗಮಿಸ್ತಾರೆ. ದೂರದೂರಿನಿಂದ ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ.

  ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ

  ಅದೇರೀತಿ ದರ್ಶನಕ್ಕೆಂದು ಹೈದ್ರಾಬಾದ್​​ನಿಂದ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಹೊರಟವರು ದಾರಿಮಧ್ಯೆಯೇ ನಡುರಸ್ತೆ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದ ಸದಸ್ಯರು ಆಸ್ಪತ್ರೆ ಪಾಲಾಗಿದ್ದಾರೆ. ರಜಾ ದಿನ ಸಂತೋಷದಲ್ಲಿ ದೇಗುಲಕ್ಕೆ ಹೊರಟವರನ್ನು ಯಮ ಕಣ್ಣೀರ ಕಡಲಲ್ಲಿ ತೇಲಿಸಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

  ವರದಿ: ಚಮನ್ ಹೊಸಮನಿ, ನ್ಯೂಸ್​ 18 ಕನ್ನಡ ಬೀದರ್
  Published by:Thara Kemmara
  First published: