HOME » NEWS » State » BHEEMA RIVER KILLER WIFE DIED IN ACCIDENT IN VIJAYPURA GNR

ವಿಜಯಪುರದಲ್ಲಿ ಭೀಕರ ಅಪಘಾತ; ಭೀಮಾ ತೀರದ ಹಂತಕ ಭಾಗಪ್ಪ ಹರಿಜನ‌ ಹೆಂಡತಿ ಸಾವು

ಪ್ರಸ್ತುತ ಈ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತಕ್ಕೆ ಕಾರಣವೇನು ಎಂದು ತನಿಖೆ ನಡೆಸುತ್ತಿದ್ಧಾರೆ.

news18
Updated:October 1, 2019, 6:42 PM IST
ವಿಜಯಪುರದಲ್ಲಿ ಭೀಕರ ಅಪಘಾತ; ಭೀಮಾ ತೀರದ ಹಂತಕ ಭಾಗಪ್ಪ ಹರಿಜನ‌ ಹೆಂಡತಿ ಸಾವು
ಪ್ರಾತಿನಿಧಿಕ ಚಿತ್ರ
  • News18
  • Last Updated: October 1, 2019, 6:42 PM IST
  • Share this:
ಬೆಂಗಳೂರು(ಅ.01): ವಿಜಯಪುರದ ‌ಇಂಡಿ ತಾಲೂಕಿನ ಗ್ರಾಮವೊಂದರ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಇಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ಕಪನಿಂಬರಗಿ ಬಳಿ ಮಹೀಂದ್ರಾ ಏಕ್ಸ್ ಯುವಿ​, ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ವೇಳೆ ಮಹೀಂದ್ರಾ ಏಕ್ಸ್ ಯುವಿ ಕಾರಿನಲ್ಲಿದ್ದ ಬಾಗಪ್ಪ ಹರಿಜನ ಎಂಬುವರ ಹೆಂಡತಿ ಶೋಭಾ ಭಜಂತ್ರಿ (45) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಭೀಕರ ಅಪಘಾತಕ್ಕೆ ಬಲಿಯಾದವರು ಭೀಮಾ ತೀರದ‌ ಹಂತಕ ಭಾಗಪ್ಪ ಹರಿಜನ ಹೆಂಡತಿ ಶೋಭಾ ಭಜಂತ್ರಿ ಎಂದು ಗುರುತಿಸಲಾಗಿದೆ. ಮೃತ ಶೋಭಾ ಭಜಂತ್ರಿಯವರು ವಿಜಯಪುರದಿಂದ ತಮ್ಮ ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಮೃತ ಶೋಭಾರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹೊರ್ತಿ ಸರ್ಕಾರಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ. ಅಲ್ಲದೇ ಅಪಘಾತದಲ್ಲಿ ಎರಡೂ ವಾಹನದ ಚಾಲಕರಿಗೂ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಭೀಮಾ ತೀರದ‌ ಹಂತಕ ಭಾಗಪ್ಪ ಹರಿಜನ ಹೆಂಡತಿ ಶೋಭಾ ಭಜಂತ್ರಿ ಚಿಕ್ಕೋಡಿಯ ಪ್ರಧಾನ ನ್ಯಾಯಾಲದಲ್ಲಿ ಎಪಿಪಿ ಆಗಿದ್ದರು. ಇದೀಗ ಹೆಂಡತಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಭಾಗಪ್ಪ ಹರಿಜನ ಹಾಗೂ ಆತನ ಸಹಚರರು ಅಸ್ಪತ್ರೆಗೆ ದೌಡಾಯಿಸಿದ್ದಾರೆ.

ಇದನ್ನೂ ಓದಿ: 370ನೇ ವಿಧಿ ರದ್ದು ಪ್ರಶ್ನಿಸಿದ್ದ ಅರ್ಜಿಗಳಿಗೆ 28 ದಿನಗಳಲ್ಲಿ ಉತ್ತರಿಸಬೇಕು; ಕೇಂದ್ರಕ್ಕೆ ಸುಪ್ರೀಂ ಸೂಚನೆ

ಪ್ರಸ್ತುತ ಈ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತಕ್ಕೆ ಕಾರಣವೇನು ಎಂದು ತನಿಖೆ ನಡೆಸುತ್ತಿದ್ಧಾರೆ.
---------
First published: October 1, 2019, 6:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories