ಬೆಂಗಳೂರು (ಅ. 1): ಸಾಮಾಜಿಕ ಜಾಲತಾಣದ (Social Media) ಮೂಲಕ ಕೆಲವರು ಉದ್ದೇಶಪೂರ್ವಕವಾಗಿ ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸುವ ಮೂಲಕ ಅವರ ಮೇಲೆ ದೌರ್ಜನ್ಯ (harassment) ನಡೆಸುತ್ತಿರುತ್ತಾರೆ. ಇಂತಹ ಅನೇಕ ಪ್ರಕರಣಗಳನ್ನು ಅನೇಕ ವೇಳೆ ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಕೆಲ ಕಿಡಿಗೇಡಿಗಳು ಮಾತ್ರ ಇದನ್ನೇ ಕಾಯಕವಾಗಿ ಮಾಡಿಕೊಂಡಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸುಸಂಸ್ಕೃತರಂತೆ ಫೋಸ್ ನೀಡುತ್ತ ಮಹಿಳೆಯರಿಗೆ ಸಂದೇಶದ ಮೂಲಕ ತೇಜೋವಧೆ ಮಾಡುತ್ತಿರುತ್ತಾರೆ. ಅಂತಹದ್ದೆ ಒಬ್ಬ ಕೀಚಕನ ಮುಖವನ್ನು ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹ ಮೂರ್ತಿ ( Bhavya Narasimhamurthy) ಬಯಸಿಗೆ ಎಳೆದಿದ್ದಾರೆ. ಹಲವು ತಿಂಗಳಗಳ ಹಿಂದೆಯೇ ಈ ರೀತಿಯ ವ್ಯಕ್ತಿಯೊಬ್ಬ ಅಶ್ಲೀಲ ಸಂದೇಶದ ಮೂಲಕ ಸಂದೇಶ ಕಳುಹಿಸುತ್ತಿದ್ದ. ಆದರೆ, ಇದನ್ನು ನಾನು ನಿರ್ಲಕ್ಷಿಸಿದೆ. ಆದರೆ, ಈತನಿಂದ ಇತರೆ ಮಹಿಳೆಯರಿಗೆ ತೊಂದರೆಯಾಗುತ್ತಿರುವ ಹಿನ್ನಲೆ ಬಹಿರಂಗ ಪಡಿಸಿರುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ( @rational_sapien ಎಂಬ ವ್ಯಕ್ತಿ ತಮಗೆ ಹೇಗೆಲ್ಲ ಕಿರುಕುಳದ ಸಂದೇಶವನ್ನು ಕಳುಹಿಸಿದ್ದಾನೆ ಎಂಬುದನ್ನು ಸ್ಕ್ರೀನ್ ಶಾಟ್ (Screen Shot) ಸಮೇತ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯರು ಎಂಬ ಬಗ್ಗೆ ಕೊಂಚವೂ ಗೌರವ, ಅಭಿಮಾನವಿಲ್ಲದೇ, ಆಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹೇಗೆ ದೌರ್ಜನ್ಯ ನಡೆಸುತ್ತಿದ್ದಾನೆ ಎಂಬುದನ್ನು ಸಾಕ್ಷಿ ಸಮೇತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ (twitter) ಬಹಿರಂಗ ಪಡಿಸಿದ್ದಾರೆ.
Saw couple of women writing about the harassment from @rational_sapien .Remembered he had sent creepy messages to me as well. Did not think he is a habitual offender n that he will bother other women. Else I would have exposed him long back. Here is screenshot of his messages 1/5 pic.twitter.com/MwvAotBjZa
— Bhavya Narasimhamurthy (@Bhavyanmurthy) October 1, 2021
4/5 pic.twitter.com/3HJ6KPzK35
— Bhavya Narasimhamurthy (@Bhavyanmurthy) October 1, 2021
ಇದನ್ನು ಓದಿ: ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದ ಕ್ಯಾಪ್ಟನ್; ಸಿಧು ವಿರೋಧಿ ಬಣದ 'ಕೈ' ನಾಯಕರನ್ನ ಸೆಳೆಯುವ ಪ್ರಯತ್ನ!
ಅಲ್ಲದೇ ಈ ರೀತಿ ಮೊದ ಮೊದಲು ನನಗೆ ಸಂದೇಶಗಳು ಬಂದಾಗ ನನಗೆ ಭಯವಾಗುತ್ತಿದ್ದವು. ಈಗ ಇವುಗಳನ್ನು ನಿರ್ಲಕ್ಷ್ಯ ಮಾಡುತ್ತೇನೆ. ಆದರೆ, ಬೇರೆಯವರ ಕಾಳಜಿಯನ್ನು ನಾವು ಮಾಡಬೇಕಿದೆ. ಇದೇ ಕಾರಣಕ್ಕೆ ಏನಾದರೂ ಮಾಡಬೇಕು ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಗಾಂಧಿ ಜಯಂತಿ ಅಂಗವಾಗಿ ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಪರಿಸರ ಕಾಳಜಿ ಕಾರ್ಯಕ್ರಮ
ನಿಮ್ಮಂತಹವರಿಗೆ ಎಚ್ಚರಿಕೆ
ಭವ್ಯ ನರಸಿಂಹಮೂರ್ತಿ ಟ್ವೀಟ್ ಮಾಡುತ್ತಿದ್ದಂತೆ ಕಳೆದ ಹಲವು ತಿಂಗಳ ಹಿಂದೆ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆದ @rational_sapien ಎಂಬ ವ್ಯಕ್ತಿ. ಇಷ್ಟೆಲ್ಲಾ ಸ್ಕ್ರೀನ್ ಶಾಟ್ ಇದ್ದರೆ ಪೊಲೀಸ್ಗೆ ದೂರು ನೀಡಿ ಎಂದು ದರ್ಪ ಮೆರೆದಿದ್ದಾನೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ, ನಿಮಗೆ ಸಾರ್ವಜನಿಕವಾಗಿ ಛೀಮಾರಿ ಹಾಕಿಸಬೇಕು. ಇದೇ ಉದ್ದೇಶದಿಂದ ಇಲ್ಲಿ ಬಹಿರಂಗ ಪಡಿಸಿದ್ದೇನೆ. ಇಂತಹ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ವಿಕೃತಿ ಮೆರೆಯುತ್ತಾರೆ ಎಂದು ಇತರೆ ಮಹಿಳೆಯರಿಗೆ ತಿಳಿಯಬೇಕು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ