• Home
  • »
  • News
  • »
  • state
  • »
  • Bhavani Revanna: ನನ್ನ ಹೆಸರು ಪಸ್ತಾಪ ಆಗಿಲ್ಲ, ಶೇ.70ರಷ್ಟು ನಮ್ಮ ತಾಯಿಗೆ ಟಿಕೆಟ್: ಸೂರಜ್ ರೇವಣ್ಣ ಹೇಳಿಕೆ

Bhavani Revanna: ನನ್ನ ಹೆಸರು ಪಸ್ತಾಪ ಆಗಿಲ್ಲ, ಶೇ.70ರಷ್ಟು ನಮ್ಮ ತಾಯಿಗೆ ಟಿಕೆಟ್: ಸೂರಜ್ ರೇವಣ್ಣ ಹೇಳಿಕೆ

ಸೂರಜ್ ರೇವಣ್ಣ ಮತ್ತು ಭವಾನಿ ರೇವಣ್ಣ

ಸೂರಜ್ ರೇವಣ್ಣ ಮತ್ತು ಭವಾನಿ ರೇವಣ್ಣ

ನಮ್ಮ ಕಾರ್ಯಕರ್ತರು ಸೂರಜ್ ರೇವಣ್ಣ ಆಕಾಂಕ್ಷೆಯಿದ್ದಾರೆ ಟಿಕೆಟ್ ಕೊಡಿ ಅಂಥಾ ಕೇಳಲು ಹೋಗಿಲ್ಲ. ನಿನ್ನೆ ನಡೆದ ಸಭೆಯಲ್ಲಿ ಶೇ.70 ಭಾಗ ಭವಾನಿ ಅಮ್ಮನವರಿಗೆ ಟಿಕೆಟ್ ಕೊಡಿ ಅಂಥಾ ಕೇಳಿದ್ದಾರೆ ಎಂಬ ಮಾಹಿತಿ ಬಿಚ್ಚಿಟ್ಟರು.

  • Share this:

ಹಾಸನ: ಈ ಹಿಂದೆ ಲೋಕಸಭೆ ಚುನಾವಣೆ (Loksabha Election) ವೇಳೆ ಮಾಧ್ಯಮಗಳಲ್ಲಿ ನನ್ನ ಹೆಸರು ಕೇಳಿಬಂದಿತ್ತು. ಆಮೇಲೆ ಯಾರೂ ಅಭ್ಯರ್ಥಿ ಆದರೂ ನಿಮಗೂ ಗೊತ್ತು. ವಿಧಾನ ಪರಿಷತ್ ಚುನಾವಣೆಗೆ (Karnataka Legislative Council Election) ಯಾರೂ ಅಭ್ಯರ್ಥಿ ಆಗುತ್ತಾರೆ ಇನ್ನೂ ನನಗೆ ಗೊತ್ತಿಲ್ಲ. ನಮ್ಮ ತಂದೆ ಅವರಾಗಲಿ, ನಮ್ಮ ತಾತ (HD Deve Gowda) ಅವರಾಗಲಿ, ಆರು ಜನ ಶಾಸಕರಾಗಲಿ (MLA) ಅವರು ಯಾವ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ ನನಗೆ ಮಾಹಿತಿ ಇಲ್ಲ. ಎಂ.ಎಲ್.ಸಿ. ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಕಾಂಕ್ಷೆ ನನಗೆ ಇಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಅವರ ಪುತ್ರ ಸೂರಜ್ ರೇವಣ್ಣ (Suraj Revanna) ಹೇಳಿದ್ದಾರೆ.


ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಘನ್ನಿಕಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸೂರಜ್ ರೇವಣ್ಣ, ನಮ್ಮ ತಾಯಿಯ (Bhavani Revanna) ಅವರ ಹೆಸರು   ಹೇಳಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ನನಗೆ ಹೊಳೆನರಸೀಪುರ ತಾಲ್ಲೂಕಿನ ಎರಡು ಹೋಬಳಿ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.


ತಂದೆಯವರ ನಿರ್ಧಾರಕ್ಕೆ ಬದ್ಧ


ಡಿಸಿಸಿ ಬ್ಯಾಂಕ್ ನ ನಿರ್ದೇಶಕನಾಗಿದ್ದೇನೆ. ಲೋನ್ ವ್ಯವಸ್ಥೆ, ಬ್ಯಾಂಕ್ ವ್ಯವಸ್ಥೆ ನೋಡಿಕೊಂಡು ಹಿರಿಯರ ಮಾರ್ಗದರ್ಶನದಂತೆ ನಡೆದುಕೊಂಡು ಬರುತ್ತಿದ್ದೇನೆ. ನಮ್ಮ ತಾತ, ಶಾಸಕರು ಮುಖ್ಯವಾಗಿ ನಮ್ಮ ತಂದೆ ಇವರೆಲ್ಲಾ ಕುಳಿತುಕೊಂಡು ಒಮ್ಮತವಾಗಿ ಏನು ನಿರ್ಧಾರ ಮಾಡುತ್ತಾರೆ ಅದಕ್ಕೆ ನಾವು ಭಾಗಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.


ಇದನ್ನೂ ಓದಿ:  Ramesh Jarkiholi: ಸಿಎಂ ಮನೆಗೆ ರಮೇಶ್ ಜಾರಕಿಹೊಳಿ: ಸಾಹುಕಾರನ ಮನವಿಗೆ ಸ್ಪಂದಿಸ್ತಾರಾ ಮುಖ್ಯಮಂತ್ರಿಗಳು?


ಶೇ.70 ಅಮ್ಮನಿಗೆ ಟಿಕೆಟ್


ಒಂದೇ ಮಾತು ಹೇಳಬೇಕೆಂದರೆ ಇದುವರೆಗೂ ಎಂ.ಎಲ್.ಸಿ. ಚುನಾವಣೆ ಬಗ್ಗೆ ನಾನು ಪ್ರಸ್ತಾಪ ಮಾಡಿಲ್ಲ. ನನಗೆ ಸಂಬಂಧಪಟ್ಟ ಹಾಗೆ ನಮ್ಮ ಕಾರ್ಯಕರ್ತರು ಸೂರಜ್ ರೇವಣ್ಣ ಆಕಾಂಕ್ಷೆಯಿದ್ದಾರೆ ಟಿಕೆಟ್ ಕೊಡಿ ಅಂಥಾ ಕೇಳಲು ಹೋಗಿಲ್ಲ. ನಿನ್ನೆ ನಡೆದ ಸಭೆಯಲ್ಲಿ ಶೇ.70 ಭಾಗ ಭವಾನಿ ಅಮ್ಮನವರಿಗೆ ಟಿಕೆಟ್ ಕೊಡಿ ಅಂಥಾ ಕೇಳಿದ್ದಾರೆ ಎಂಬ ಮಾಹಿತಿ ಬಿಚ್ಚಿಟ್ಟರು.


ಪಕ್ಷದ ಕಮಿಟಿ ತೆಗೆದುಕೊಳ್ಳುವ ನಿರ್ಧಾರದಂತೆ ನಾವೆಲ್ಲ ನಡೆದುಕೊಳ್ಳುತ್ತೇವೆ. ನನ್ನ ಸ್ಪರ್ಧೆ ಬಗ್ಗೆ ಗೊತ್ತಿಲ್ಲ. ನನಗೆ ಟಿಕೆಟ್ ಅನೌನ್ಸ್ ಆದಮೇಲೆ ಪ್ರತಿಕ್ರಿಯೆ ಕೊಡಬಹುದು. ಏನು ಆಗುತ್ತೆ ಎಲ್ಲರೂ ಕಾದುನೋಡಬೇಕು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.


ಇದನ್ನೂ ಓದಿ:  ಟಿಕೆಟ್ ರೇಸ್​​ನಲ್ಲಿ ಸೊಸೆ ಭವಾನಿ, ಮೊಮ್ಮೊಗ ಸೂರಜ್ ಹೆಸರು; ನನಗೆ ಕೆಟ್ಟ ಹೆಸರು ಬೇಡ ಎಂದ HD Deve Gowda


ನನ್ನ ಹೆಸರು ಪ್ರಸ್ತಾಪ ಆಗಿಲ್ಲ


ಎಲ್ಲರ ಬೆಂಬಲಿಗರಿಗೂ, ಕಾರ್ಯಕರ್ತರಿಗೂ ಅವರ ನಾಯಕರು ಉನ್ನತ ಸ್ಥಾನದಲ್ಲಿ ಇರಬೇಕೆಂಬ ಆಸೆ ಇರುತ್ತೆ. ನಿನ್ನೆ ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಭವಾನಿ ಅಮ್ಮ ಜಿ.ಪಂ. ಸದಸ್ಯೆಯಾಗಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ನಮ್ಮ ತಂದೆಯವರ ಜೊತೆ ಸತತವಾಗಿ ಮೂವತ್ತು ವರ್ಷ ರಾಜಕೀಯ ಅನುಭವ ನೋಡಿಕೊಂಡು ಬಂದಿದ್ದಾರೆ ಎಂದು ತಾಯಿ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು.


ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಲ್ಲರೂ ಕಾದುನೋಡಬೇಕಿದೆ. ಎರಡು, ಮೂರು ದಿನ ಕಾಲಾವಕಾಶ ಇದೆ, ಯಾವಾಗ ಬೇಕಾದರೂ ಅಭ್ಯರ್ಥಿ ಅನೌನ್ಸ್ ಮಾಡಬಹುದು. ನಾನು ಕೂಡ ಕಾರ್ಯಕರ್ತನೆ, ನನಗೂ ಕೂಡ ಜವಾಬ್ದಾರಿ ವಹಿಸದ್ದಾರೆ. ನಾವು ಕೊಡುಗೆ ಕೊಡಬೇಕು ಅದನ್ನು ಮಾಡುತ್ತೇವೆ ಎಂದರು.


ಯಾರೇ ಅಭ್ಯರ್ಥಿಯಾದ್ರೂ ಗೆಲ್ಲಿಸುವ ಜವಾಬ್ದಾರಿ ನಮ್ಮದು


ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ‌ನಾವೆಲ್ಲ ದುಡಿಯಬೇಕು. ಹಿಂದೆ ತಪ್ಪು ಮಾಡಿಕೊಂಡು ಎಂ.ಎಲ್.ಸಿ. ಕಳೆದುಕೊಂಡಿದ್ದೇವೆ. ಹಾಸನದ ರಾಜಕೀಯ ಇತಿಹಾಸದಲ್ಲಿ ಕಪ್ಪುಚುಕ್ಕೆ ನಡೆದಿತ್ತು. ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಅದನ್ನ ನಾವೆಲ್ಲ ಸರಿಪಡಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ, ಸಕ್ರಿಯವಾಗಿ ಪಾಲ್ಗೊಂಡು ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Published by:Mahmadrafik K
First published: