ಕರಾವಳಿಯಲ್ಲಿ ಅಯ್ಯಪ್ಪ ಭಕ್ತರಿಂದ 'ಭವನಂ ಸನ್ನಿಧಾನಂ' ಅಭಿಯಾನ

ಅಭಿಯಾನದ ಪ್ರಕಾರ ಮನೆಯಲ್ಲೇ ಇದ್ದು ಕುಟುಂಬ ಸಮೇತ ಅಯ್ಯಪ್ಪ ಆರಾಧನೆ ಮಾಡಲು ನಿರ್ಧರಿಸಿದ್ದಾರೆ.

 ಅಯ್ಯಪ್ಪ ಭಕ್ತ

ಅಯ್ಯಪ್ಪ ಭಕ್ತ

  • Share this:
ಉಡುಪಿ (ಡಿ. 2):  ಕೇರಳ ಸರಕಾರದ ವಿರುದ್ಧ ಉಡುಪಿಯ 70 ಸಾವಿರ ಅಯ್ಯಪ್ಪ ಭಕ್ತರು ಆಕ್ರೋಶಗೊಂಡಿದ್ದಾರೆ. ಶಬರಿಮಲೆ ಪ್ರವೇಶ ಮುನ್ನ ಎರಡು ಬಾರಿ ಕೋವಿಡ್ ಟೆಸ್ಟ್  ನಿಯಮ ರೂಪಿಸಿರುವ ಪಿಣರಾಯಿ ಸರ್ಕಾರದ ವಿರುದ್ಧ ಈಗ ಕರಾವಳಿಯಲ್ಲಿ ಭವನಂ ಸನ್ನಿಧಾನಂ ಅಭಿಯಾನ ಶುರುವಾಗಿದೆ.  ಜಿಲ್ಲೆಯಿಂದ ಪ್ರತಿವರ್ಷ 70 ಸಾವಿರಕ್ಕಿಂತಲೂ ಹೆಚ್ಚು ಮಂದಿ ಕೇರಳದ ಶಬರಿಮಲೆಗೆ ಧಾರ್ಮಿಕ ಯಾತ್ರೆ ಮಾಡುತ್ತಾರೆ. ಜನವರಿ ತಿಂಗಳಲ್ಲಿ ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕೆ 40 ಸಾವಿರಕ್ಕಿಂತಲೂ ಹೆಚ್ಚು ಭಕ್ತರು ತೆರಳುತ್ತಾರೆ. ವಿಶ್ವಾದ್ಯಂತ ವ್ಯಾಪಿಸಿರುವ ಕರೋನಾ ಮಹಾಮಾರಿ ರೋಗದಿಂದ ಈ ಬಾರಿ ಶಬರಿಮಲೆ ಪ್ರವೇಶ ಕಷ್ಟಕರವಾಗಿದೆ. ಕೇರಳ ಸರ್ಕಾರ ಲೆಕ್ಕಕ್ಕಿಂತ ಹೆಚ್ಚು ನಿಯಮಾವಳಿಗಳನ್ನು ವಿಧಿಸಿದೆ. ಕರ್ನಾಟಕದಿಂದ ತೆರಳುವ ಭಕ್ತರು ಕೋವಿಡ್ ಟೆಸ್ಟ್ ಮಾಡಿರಬೇಕು. ನೀಲಕಲ್ ಎಂಬಲ್ಲಿ ಇನ್ನೊಂದು ಕೋವಿಡ್ ಟೆಸ್ಟ್ ಮಾಡಿಸಬೇಕು. ಪಂಪಾ ನದಿ ತೀರದಲ್ಲಿ ಮತ್ತೊಂದು ಬಾರಿ ಟೆಸ್ಟ್ ಮಾಡಿಸಬೇಕು ಎಂದಿದೆ. ಈ ದುಬಾರಿ ನಿಯಮ ಉಡುಪಿಯ ಅಯ್ಯಪ್ಪ ಭಕ್ತರನ್ನ ಕೆರಳಿಸಿದೆ.

ಇಷ್ಟೆಲ್ಲಾ ನಿಯಮಾವಳಿಯ ಸಹವಾಸವೇ ಬೇಡ ಅಂತ ಪಂದಳಕಂದನ ಸನ್ನಿಧಾನಕ್ಕೆ ತೆರಳದೆ 'ಭವನಂ ಸನ್ನಿಧಾನಂ' ಅಭಿಯಾನವನ್ನು ಉಡುಪಿಯಲ್ಲಿ ಶುರುಮಾಡಿದ್ದಾರೆ. ಈ ಅಭಿಯಾನದ ಪ್ರಕಾರ ಮನೆಯಲ್ಲೇ ಇದ್ದು ಕುಟುಂಬ ಸಮೇತ ಅಯ್ಯಪ್ಪ ಆರಾಧನೆ ಮಾಡಲು ನಿರ್ಧರಿಸಿದ್ದಾರೆ. ಎರಡೆರಡು ಕೋವಿಡ್ ಟೆಸ್ಟ್ ಮಾಡಲಿರುವ, ಇರುಮುಡಿ ವಾಪಾಸ್ ಕೊಡದ, ಭಕ್ತರ ತುಪ್ಪ ಸ್ವೀಕರಿಸದ, ಊಟ ಹಾಗೂ ತಂಗಲು ವ್ಯವಸ್ಥೆ ಮಾಡದ ದೇಗಲ ಆಡಳಿತ ಮಂಡಳಿ, ಕೇರಳ ಸರಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಹಿಂದೂಗಳ ಧಾರ್ಮಿಕ ಭಾವನೆಯೊಂದಿಗೆ ಕೇರಳ ಸರ್ಕಾರ ಚೆಲ್ಲಾಟವಾಡುತ್ತಿದೆ. ಮೂರು ಮೂರು ಬಾರಿ ಕೋವಿಡ್ ಟೆಸ್ಟ್ ಮಾಡುವ ಅವಶ್ಯಕತೆ ಏನಿದೆ ಎಂದು ಅಯ್ಯಪ್ಪ ಭಕ್ತರು  ಅಯ್ಯಪ್ಪ ಮಂದಿರಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈ ಆಕ್ರೋಶದ ಫಲವೇ ಇದೀಗ ಉಡುಪಿ ಜಿಲ್ಲೆಯ ಅಯ್ಯಪ್ಪ ಮಾಲಾಧಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಅಯ್ಯಪ್ಪ ಭಕ್ತರು ಭವನಂ ಸನ್ನಿಧಾನಂ ಅಭಿಯಾನದ ಜೊತೆ ಕೈಜೋಡಿಸಿ ಅಯ್ಯಪ್ಪ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸುವುದು ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ನಡೆಸುವುದು. ಯಾವುದೇ ಶಿಬಿರಗಳನ್ನು ಮಾಡದೆ ಮನೆಗಳಲ್ಲೇ ಅಯ್ಯಪ್ಪ ದೇವರನ್ನ ಕುಟುಂಬ ಸಮೇತವಾಗಿ ನಿಯಮ ನಿಷ್ಠೆಯಿಂದ ಆರಾಧಿಸಲು ತೀರ್ಮಾನಿಸಿದ್ದಾರೆ
Published by:Seema R
First published: