ಕಾರವಾರ: ಭಟ್ಕಳದಲ್ಲಿ (Bhatkal)ಬ್ಲಾಸ್ಟ್ ಮಾಡುವುದಾಗಿ ಮಾಡೋದಾಗಿ ಬೆದರಿಕೆ ಹಾಕಿ ಪತ್ರ (Hoax Bomb Threat) ಬರೆದಿದ್ದ ಆರೋಪಿಯನ್ನು ಚೆನ್ನೈ ಪೊಲೀಸರು ಕೊನೆಗೂ ಬಂಧನ ಮಾಡಲು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಹೊಸ ವರ್ಷಾಚರಣೆ ವೇಳೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದಲ್ಲಿ ಬ್ಲಾಸ್ಟ್ ಮಾಡೋದಾಗಿ ಆರೋಪಿ ಪತ್ರ ಬರೆದಿದ್ದ, ಪತ್ರದ ಮೂಲವನ್ನು ಹುಡುಕಿ ಹೊರಟ್ಟಿದ್ದ ಪೊಲೀಸರು (Police), ಹೊಸಪೇಟೆ ಮೂಲದ ಹನುಮಂತಪ್ಪ ಎಂಬಾತನನ್ನು ಬಂಧನ ಮಾಡಿದ್ದಾರೆ. ಅಲ್ಲದೇ ಇದೊಂದು ಹುಸಿ ಬಾಂಬ್ ಬೆದರಿಕೆ ಪತ್ರ ಆಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಹೊಸ ವರ್ಷಕ್ಕೂ ಮುನ್ನ ಪತ್ರ ಬರೆದಿದ್ದ ಆರೋಪಿ
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಸಿದ್ಧತೆ ನಡೆಸಿದ್ದ ಜನರಿಗೆ ಎಚ್ಚರಿಕೆ ನೀಡುವ ಉದ್ದೇಶಿದಿಂದ ಎಂಬಂತೆ ಪೊಲೀಸರಿಗೆ ಭಟ್ಕಳ ಪೊಲೀಸರಿಗೆ ಪತ್ರವೊಂದು ಲಭ್ಯವಾಗಿತ್ತು. ಪತ್ರದಲ್ಲಿ ಉರ್ದು, ಇಂಗ್ಲೀಷ್ ಭಾಷೆಯಲ್ಲಿ ಬರೆದು ಪೋಸ್ಟ್ ಕಾರ್ಡ್ ರವಾನೆ ಮಾಡಲಾಗಿತ್ತು.
ಭಟ್ಕಳ ಪೊಲೀಸ್ ಠಾಣೆಗೆ ಪತ್ರ ಬಂದಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಈ ಡಿಸೆಂಬರ್ ತಿಂಗಳಲ್ಲೇ ಭಟ್ಕಳ ಠಾಣೆಗೆ ತಲುಪಿತ್ತು. ಆದರೆ ಇದು ಸೂಕ್ಷ್ಮ ವಿಷಯವಾಗಿದ್ದರಿಂದ ಪತ್ರವನ್ನು ಬಹಿರಂಗಪಡಿಸದೇ ಪೊಲೀಸರು ತನಿಖೆ ಆರಂಭಿಸಿದ್ದರು.
ಪತ್ರದಲ್ಲಿ ಏನು ಬರೆದಿದ್ದರು?
ಮುಂದಿನ ಡಿಸೆಂಬರ್ 25 ಮತ್ತು ಹ್ಯಾಪಿ ನ್ಯೂ ಇಯರ್ 2023 ನೆಕ್ಟ್ಸ್ ಟಾರ್ಕೆಟ್ ಎಂದು ಬರೆಯಲಾಗಿತ್ತು. ಭಟ್ಕಳ ಪೊಲೀಸರು ಮಾತ್ರವಲ್ಲದೇ ಚೆನ್ನೈ ಪೊಲೀಸರಿಗೂ ಇಂತಹುದೇ ಬೆದರಿಕೆ ಪತ್ರ ತಲುಪಿತ್ತು. ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪತ್ರವನ್ನು ಮಂಗಳೂರಿನ ಸುಬ್ರಹ್ಮಣ್ಯದಿಂದ ಪೋಸ್ಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.
ಇದನ್ನೂ ಓದಿ: Bhatkal Jasmine: ಈ ಮಲ್ಲಿಗೆಗೆ ಇದೆ ರಾಜ ಮರ್ಯಾದೆ! ಹೂಗಳ ಅನಭಿಷಿಕ್ತ ರಾಣಿ ಈಕೆ
ಭಟ್ಕಳ ಮಾತ್ರವಲ್ಲದೇ, ಧರ್ಮಸ್ಥಳ ಹಾಗೂ ಚೆನ್ನೈನಲ್ಲೂ ಬಾಂಬ್ ಬ್ಲಾಸ್ಟ್ ಮಾಡ್ತೀವಿ. ಹೊಸ ವರ್ಷ, ಕ್ರಿಸ್ಮಸ್ ವೇಳೆ ನಮ್ಮ ಟಾರ್ಗೆಟ್ ಆಗಿದೆ ಎಂದು ಉರ್ದು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪತ್ರ ಬರೆದು ರವಾನೆ ಮಾಡಿದ್ದನಂತೆ. ಡಿಸೆಂಬರ್ 16-17 ರಂದು ಭಟ್ಕಳದ ಪೊಲೀಸರಿಗೆ ತೆರೆದ ಪೋಸ್ಟ್ ಕಾರ್ಡ್ನಲ್ಲಿ ಬೆದರಿಕೆ ಪತ್ರ ಬಂದಿತ್ತು.
ಪತ್ರ ಬರೆಯಲು ಕಾರಣವೇನು ಗೊತ್ತಾ?
ಇನ್ನು, ಆರೋಪಿ ಹನುಮಂತಪ್ಪನನ್ನು ಬಂಧಿಸಿದ ಬಳಿಕ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಪತ್ರವನ್ನು ಏಕೆ ಬರೆದಿದ್ದಾನೆ ಎಂದು ಬಾಯಿಬಿಡಿಸಿದ್ದಾರೆ. ಆರೋಪಿ ಹನುಮಂತಪ್ಪ ತಾನು ಮಾಡಿದ್ದ ಕಳ್ಳತನದ ವಿಷಯ ಮುಚ್ಚಿಡಲು ಹುಸಿ ಬೆದರಿಕೆ ಪತ್ರ ಬರೆದು ಪೊಲೀಸರ ಡಿಕ್ಕು ತಪ್ಪಿಸಲು ಯತ್ನಿಸಿದ್ದನಂತೆ.
ಹೌದು, ಬಂಧಿತನ ವಿರುದ್ಧ ಲ್ಯಾಪ್ಟಾಪ್ ಕಳ್ಳತನ ಆರೋಪ ಮಾಡಲಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಖತರ್ನಾಕ್ ಪ್ಲಾನ್ ಮಾಡಿದ್ದ ಆರೋಪಿ, ಲ್ಯಾಪ್ಟಾಪ್ ಮಾರಾಟ ಮಾಡಲು ತೆರಳಿದ್ದ ಅಂಗಡಿ ಮಾಲೀಕನ ನಂಬರ್ ಹಾಕಿ ಪತ್ರ ಬರೆದಿದ್ದ. ಪತ್ರ ಆಧರಿಸಿ ತನಿಖೆ ನಡೆಸಿದ್ದ ಚೆನ್ನೈ ಪೊಲೀಸರ ಕೈಗೆ ಕಳ್ಳ ಸದ್ಯ ಸಿಕ್ಕಿ ಬಿದ್ದಿದ್ದಾನೆ. ಸದ್ಯನ ಕಳ್ಳನನ್ನು ಬಾಡಿ ವಾರೆಂಟ್ ಪಡೆದು ಕರೆತರಲು ಭಟ್ಕಳ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಆರೋಪಿ ಹನುಮಂತಪ್ಪ ಲ್ಯಾಪ್ಟಾಪ್ ಒಂದನ್ನು ಚೆನ್ನೈನ ರಿಪೇರಿ ಅಂಗಡಿಯಲ್ಲಿ ನೀಡಿದ್ದನಂತೆ. ಆದರೆ ರಿಪೇರಿ ಮಾಡಲು ಪಾಸ್ವರ್ಡ್ ಕೇಳಿದರೆ ಆರೋಪಿ ನೀಡಿರಲಿಲ್ಲವಂತೆ. ಇದರಿಂದ ಅನುಮಾನಗೊಂಡ ಅಂಗಡಿ ಮಾಲೀಕ, ಪಾಸ್ವರ್ಡ್ ಕೊಡು ಇಲ್ಲದಿದ್ದರೇ ಪೊಲೀಸರಿಗೆ ಮಾಹಿತಿ ನೀಡೋದಾಗಿ ಹೇಳಿದ್ದರಂತೆ. ಇದರಿಂದ ರೊಚ್ಚಿಗೆದ್ದಿದ್ದ ಆರೋಪಿ ಮಾಲೀಕನಿಗೆ ಕೊಲೆ ಬೆದರಿಕೆ ಕೂಡ ಹಾಕಿದ್ದನಂತೆ. ಅಲ್ಲದೇ ನಿನ್ನ ಮಕ್ಕಳನ್ನು ಕಿಡ್ನ್ಯಾಪ್ ಮಾಡೋದಾಗಿಯೂ ಹೇಳಿ ಬೆದರಿಕೆ ಹಾಕಿದ್ದನಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ