LIVE NOW

(LIVE) ಭಾರತ ಬಂದ್ ಮುಕ್ತಾಯ, ಭಾರೀ ಯಶಸ್ವಿ ಎಂದ ವಿರೋಧ ಪಕ್ಷಗಳು, ಗೂಂಡಾಗಿರಿಯ ಬಂದ್ ಎಂದ ಬಿಜೆಪಿ

Kannada.news18.com | September 10, 2018, 5:36 PM IST
facebook Twitter google Linkedin
Last Updated September 10, 2018
auto-refresh
ಬೆಂಗಳೂರು(ಸೆ.10): ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು ಭಾರತ್ ಬಂದ್​ಗೆ ಕರೆ ನೀಡಿವೆ. ಬಂದ್​ಗೆ ಹಲವು ರಾಜ್ಯಗಳು ಬೆಂಬಲ ವ್ಯಕ್ತಪಡಿಸಿವೆ. ರಾಜ್ಯದಲ್ಲೂ ಬಂದ್​ಗೆ ವ್ಯಾಪಲ ಬೆಂಬಲ ವ್ಯಕ್ತವಾಗಿದ್ದು, ಸೋಮವಾರ ಬೆಳಗ್ಗೆಯಿಂದಲೇ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಆಟೋ ರಿಕ್ಷಾಗಳು ಸೇರಿದಂತೆ ಖಾಸಗಿ ಟ್ಯಾಕ್ಸಿಗಳು ರಸ್ತೆಗೆ ಇಳಿದಿಲ್ಲ. ಬಸ್​ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನು ದಿನನಿತ್ಯದ ವ್ಯವಹಾರ ಎಂದಿನಂತೆ ಸಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಬಂದ್ ನಡೆಯಲಿದೆ. ಬಂದ್​ಗೆ ಕರೆ ನೀಡಿದ್ದು ಕಾಂಗ್ರೆಸ್ ಮತ್ತು ಇನ್ನಿತರ ವಿರೋಧಪಕ್ಷಗಳೇ ಆಗಿರುವುದರಿಂದ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಬಂದ್ ಬಿಸಿ ಹೆಚ್ಚಾಗುವ ಸಾಧ್ಯತೆ ಇದ್ದು, ಕರ್ನಾಟಕಕ್ಕೂ ಆ ಬಿಸಿ ತಟ್ಟಲಿದೆ. ಬಿಎಂಟಿಸಿ ಬಸ್, ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳಲಿದ್ದು, ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಬಿಜೆಪಿ ಬೆಂಬಲಿಗರು ಬಂದ್ ವಿಫಲಗೊಳಿಸುವ ಯತ್ನ ಕೂಡ ನಡೆಸಿದ್ದು, ಎಂದಿಗಿಂತ ಒಂದುಗಂಟೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವಂತೆ ಪ್ರಚಾರ ನಡೆಸಿದ್ದಾರೆ. ‘
ಗೋವಾದಲ್ಲಿ ಕಾಂಗ್ರೆಸ್ ಸಮಿತಿ ಬಂದ್ ಯಶಸ್ವಿಯಾಗುವಂತೆ ನೋಡಿಕೊಳ್ಳಲು ಮುಂದಾಗಿದ್ದು,. ಮಹಾರಾಷ್ಟ್ರದಲ್ಲಿ ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ, ಹರ್ಯಾಣದಲ್ಲಿ ಐಎನ್ಎಲ್ಡಿ ಬಂದ್ಗೆ ಬೆಂಬಲಿಸಿದ್ದಾರೆ.

ಇನ್ನು ಬಂದ್ ಬಿಸಿ ತಾಗಿದ ಹಿನ್ನಲೆ ರಾಜಸ್ಥಾನ ಮುಖ್ಯಮಂತ್ರಿ ಕಳೆದ ರಾತ್ರಿ ಪೆಟ್ರೋಲ್ ಮೇಲಿನ ಶೇ 4ರಷ್ಟು ವಾಟ್ ಇಳಿಸಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಂದ್ ಜನರಿಗೆ ಯಾವ ರೀತಿ ಪರಿಣಾಮ ಬೀರಿದೆ ಎಂಬ ಕುರಿತ ಕ್ಷಣ ಕ್ಷಣದ ಮಾಹಿತಿ ನಿಮ್ಮ ನ್ಯೂಸ್ 18 ಕನ್ನಡದಲ್ಲಿ
4:59 pm (IST)

ರಾಜ್ಯದಲ್ಲಿ ಭಾರತ ಬಂದ್​ ಸಂಪೂರ್ಣ ವಿಫಲವಾಗಿದೆ

ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಇದು ಸರ್ಕಾರಿ ಪ್ರಾಯೋಜಿತ ಬಂದ್- ಕೋಟ ಶ್ರೀನಿವಾಸ ಪೂಜಾರಿ

ಬಂದ್ ಹೆಸರಲ್ಲಿ ಕಾಂಗ್ರೆಸ್ ಗಲ್ಲಿ ಗಲ್ಲಿಗಳಲ್ಲಿ ಹಿಂಸಾಚಾರ ನಡೆಸಿದೆ

ಬಂಟ್ವಾಳದಲ್ಲಿ ಬಿಜೆಪಿ ಶಾಸಕರಿಗೆ ಕಲ್ಲು ತೂರಾಟ ನಡೆಸಲಾಗಿದೆ

ಮೈತ್ರಿ ಸರ್ಕಾರ, ಕಾರ್ಯಕರ್ತರ ಕೈಗೆ ದೊಣ್ಣೆ ಕೊಟ್ಟು ಬೀದಿಗಿಳಿಸಿದೆ

ಬಂದ್​ನಿಂದಾಗಿ ರಾಜ್ಯಾದ್ಯಂತ ಕಾಂಗ್ರೆಸ್​ನಿಂದ ಗೂಂಡಾಗಿರಿ ನಡೆದಿದೆ

ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪ

4:56 pm (IST)
Load More