Bharath Bandh: ಸೋಮವಾರ ಭಾರತ್ ಬಂದ್: ಹೋಟೆಲ್ ಓಪನ್, ಮುಷ್ಕರ ಇದೆ.. ಉಳಿದಂತೆ ಏನಿರುತ್ತೆ? ಏನಿರಲ್ಲ?

Bharath Bandh on September 27th: ಕರ್ನಾಟಕ ಬಂದ್​​ಗೆ ಕಬ್ಬು ಬೆಳೆಗಾರರ ಸಂಘ,  ರೈತ ಸಂಘ, ಹಸಿರು ಸೇನೆ ಸೇರಿ ಕೆಲ ಸಂಘಟನೆಗಳು ಬೆಂಬಲ ನೀಡಲಿವೆ. ದೇಶಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್​ಗೆ ಕರೆ ನೀಡಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು(ಸೆ.24): ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತಪರ ಸಂಘಟನೆಗಳು ಮತ್ತೆ ಸಿಡಿದೆದ್ದಿವೆ. ಹೀಗಾಗಿ ಸೆ.27ರ ಸೋಮವಾರ ಭಾರತ್​ ಬಂದ್​ ಮಾಡಲು ನಿರ್ಧಾರ ಮಾಡಲಾಗಿದೆ. ಸಂಯುಕ್ತ ಕಿಸಾನ್​ ಮೋರ್ಚಾ ಭಾರತ್​ ಬಂದ್​ಗೆ ಕರೆ ಕೊಟ್ಟಿದೆ.  ಹೀಗಾಗಿ ಸೆ.27ರ ಸೋಮವಾರ ಕರ್ನಾಟಕವೂ ಬಂದ್​ ಆಗುವ ಸಾಧ್ಯತೆ ಇದೆ. ಕರ್ನಾಟಕ ಬಂದ್​ಗೆ ಕೆಲವು ಸಂಘಟನೆಗಳು ಬೆಂಬಲ ನೀಡಲಿವೆ. ಕರ್ನಾಟಕ ಬಂದ್​​ಗೆ ಕಬ್ಬು ಬೆಳೆಗಾರರ ಸಂಘ,  ರೈತ ಸಂಘ, ಹಸಿರು ಸೇನೆ ಸೇರಿ ಕೆಲ ಸಂಘಟನೆಗಳು ಬೆಂಬಲ ನೀಡಲಿವೆ. ದೇಶಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್​ಗೆ ಕರೆ ನೀಡಲಾಗಿದೆ.

  ಬಂದ್​​​ ಇದ್ರೂ ಕರ್ನಾಟಕದಲ್ಲಿ ಎಲ್ಲವೂ ಯಥಾಸ್ಥಿತಿ ಇರುವ ಸಾಧ್ಯತೆ ಇದೆ. ಬಹುತೇಕ ಸಂಘಟನೆಗಳು ಬಂದ್​ಗೆ ನೈತಿಕ ಬೆಂಬಲ ನೀಡಲಿವೆ. ನೈತಿಕ ಬೆಂಬಲ ನೀಡುತ್ತೇವೆ, ಆದ್ರೆ ಅಂಗಡಿ ಮುಂಗಟ್ಟು ಬಂದ್​ ಮಾಡಲ್ಲ ಎಂದು ಹೇಳುತ್ತಿದ್ದಾರೆ.

  ಬಂದ್​​ಗೆ ಯಾರೆಲ್ಲಾ ಬೆಂಬಲ ನೀಡ್ತಿದಾರೆ?

  KSRTC, BMTC ಸಂಚಾರ ಇರುತ್ತೆ, ನೈತಿಕ ಬೆಂಬಲ ಮಾತ್ರ ನೀಡುತ್ತಿವೆ. ಅದೇ ರೀತಿ ಆಟೋ, ಊಬರ್, ಓಲಾ ಸಂಘಟನೆಗಳೂ ಸಹ ನೈತಿಕ ಬೆಂಬಲ ನೀಡಲಿವೆ. ರಾಜ್ಯ ಹೋಟೆಲ್ ಮಾಲೀಕರ ಸಂಘ ನಾಳೆ ತೀರ್ಮಾನ ಮಾಡಿ ಬೆಂಬಲ ನೀಡುವ ಬಗ್ಗೆ ತಿಳಿಸಲಿದೆ. ಇನ್ನು ಲಾರಿ ಮಾಲೀಕರು, ಮಾರ್ಕೆಟ್ ವರ್ತಕರ ಸಂಘವೂ ಸಹ ಬಂದ್​ಗೆ ನೈತಿಕ ಬೆಂಬಲ ನೀಡಲಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಈ ಬಗ್ಗೆ  ಇನ್ನೂ ತೀರ್ಮಾನ ಕೈಗೊಂಡಿಲ್ಲ.

  ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಸೋಮವಾರ(ಸೆ.27) ಕರ್ನಾಟಕದಲ್ಲಿ ಏನಿರುತ್ತೆ, ಏನಿರಲ್ಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

  ಏನಿರುತ್ತೆ? ಏನಿರಲ್ಲ?

  KSRTC - ಇರುತ್ತೆ

  BMTC - ಇರುತ್ತೆ

  ಮೆಟ್ರೋ - ಇರುತ್ತೆ

  ಆಟೋ - ಇರುತ್ತೆ

  ಟ್ಯಾಕ್ಸಿ - ಇರುತ್ತೆ

  ಕ್ಯಾಬ್​​ - ಇರುತ್ತೆ

  ಹೋಟೆಲ್​ - ಇರುತ್ತೆ

  ಬೀದಿಬದಿ ವ್ಯಾಪಾರ - ಇರುತ್ತೆ

  ಶಾಲಾ-ಕಾಲೇಜು - ಇರುತ್ತೆ

  ನೈತಿಕ ಬೆಂಬಲ ಯಾರದ್ದು?

  ಸಂಯುಕ್ತ ಕಿಸಾನ್​ ಮೋರ್ಚಾ - ನೈತಿಕ ಬೆಂಬಲ
  ರಾಜ್ಯ ರೈತ ಸಂಘ - ನೈತಿಕ ಬೆಂಬಲ
  ರಾಜ್ಯ ಹಸಿರು ಸೇನೆ - ನೈತಿಕ ಬೆಂಬಲ
  ರಾಜ್ಯ ಪ್ರಾಂತ ರೈತ ಸಂಘ - ನೈತಿಕ ಬೆಂಬಲ
  ರೈತ ಕಾರ್ಮಿಕರ ಸಂಘ - ನೈತಿಕ ಬೆಂಬಲ
  ಅಖಿಲ ಭಾರತ್​ ಕಿಸಾನ್​ ಸಭಾ - ನೈತಿಕ ಬೆಂಬಲ
  ಆಟೋ ಮಾಲೀಕರು - ನೈತಿಕ ಬೆಂಬಲ
  ಕ್ಯಾಬ್ ಚಾಲಕರ ಸಂಘ - ನೈತಿಕ ಬೆಂಬಲ
  ಬ್ಯಾಂಕ್ ಒಕ್ಕೂಟ - ನೈತಿಕ ಬೆಂಬಲ
  Published by:Latha CG
  First published: