• Home
  • »
  • News
  • »
  • state
  • »
  • Bharat Jodo Yatra: ರಾಜ್ಯದಲ್ಲಿ ಮೂರನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ; ಬಿಜೆಪಿ ಟೀಕೆಗೆ ಸೀಮಿತವಾಯ್ತಾ?

Bharat Jodo Yatra: ರಾಜ್ಯದಲ್ಲಿ ಮೂರನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ; ಬಿಜೆಪಿ ಟೀಕೆಗೆ ಸೀಮಿತವಾಯ್ತಾ?

ಭಾರತ್ ಜೋಡೋ ಯಾತ್ರೆ

ಭಾರತ್ ಜೋಡೋ ಯಾತ್ರೆ

ಭಾರತ್​ ಜೋಡೋ ಯಾತ್ರೆ ಬಿಜೆಪಿ ಟೀಕೆಗೆ ಮಾತ್ರ ಸೀಮಿತವಾಯ್ತಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಕನ್ನಡ ಭಾಷೆ, ಸಂಸ್ಕೃತಿ, ಉದ್ಯೋಗದ ಬಗ್ಗೆ ಮಾತನಾಡುತ್ತವೆ ಅನ್ನೋರ ಬಾಯಿ ಮುಚ್ಚಿಸುವ ಕೆಲಸ ಆಗ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

  • Share this:

ಕರ್ನಾಟಕದಲ್ಲಿ ಎರಡು ದಿನ ಭಾರತ್ ಜೋಡೋ (Bharat Jodo Ytara_ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ಗಾಂಧಿ ಜಯಂತಿ (Gandhi Jayanti) ಹಿನ್ನೆಲೆ ಪಾದಯಾತ್ರೆಗೆ ಬ್ರೇಕ್ ನೀಡಲಾಗಿದೆ. ಬದನವಾಳು ಗ್ರಾಮದಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಭೇಟಿ ನೀಡಿದರು. ಈ ವೇಳೆ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ನಾಯಕರ ಶ್ರಮದಾನ ಮಾಡುತ್ತಿದ್ದಾರೆ. ಮಧ್ಯಾಹ್ನ ಮೂರು ಗಂಟೆಯವರೆಗೆ ಶ್ರಮದಾನ ಮಾಡಲಿದ್ದಾರೆ. ಶ್ರಮದಾನದ ಬಳಿಕ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ (Nanjunagudu Temple) ಭೇಟಿ ನೀಡಿ ನಂಜುಂಡೇಶ್ವರನ ದರ್ಶನ ಪಡೆದ ನಂತರ ಭಾರತ್ ಜೋಡೋ ಯಾತ್ರೆ ಸೇರಿಕೊಳ್ಳಲಿದ್ದಾರೆ. ಮೈಸೂರು ಹೊರವಲಯದ ಕಡಕೊಳದಿಂದ ಪಾದಯಾತ್ರೆ ನಡೆಯಲಿದೆ. ಸಂಜೆ 7ರ ಹೊತ್ತಿಗೆ ಮೈಸೂರಿನ ಬಂಡಿಪಾಳ್ಯ ಮೈದಾನದದಲ್ಲಿ ಇಂದಿನ ಕಾಲ್ನಡಿಗೆ ಅಂತ್ಯವಾಗಲಿದೆ.


ಭಾರತ್​ ಜೋಡೋ ಬಿಜೆಪಿ ಟೀಕೆಗೆ ಸೀಮಿತವಾಯ್ತಾ?


ಭಾರತ್​ ಜೋಡೋ ಯಾತ್ರೆ ಬಿಜೆಪಿ ಟೀಕೆಗೆ ಮಾತ್ರ ಸೀಮಿತವಾಯ್ತಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಕನ್ನಡ ಭಾಷೆ, ಸಂಸ್ಕೃತಿ, ಉದ್ಯೋಗದ ಬಗ್ಗೆ ಮಾತನಾಡುತ್ತವೆ ಅನ್ನೋರ ಬಾಯಿ ಮುಚ್ಚಿಸುವ ಕೆಲಸ ಆಗ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.


ಅರುಣ್​​ ಜಾವಗಲ್​ ಸರಣಿ ಟ್ವೀಟ್


ಈ ಬಗ್ಗೆ ಕನ್ನಡಪರ ಹೋರಾಟಗಾರ ಅರುಣ್​​ ಜಾವಗಲ್​ ಸರಣಿ ಟ್ವೀಟ್ ಮಾಡಿದ್ದಾರೆ. ಐಕ್ಯತಾ ಯಾತ್ರೆ ಸಮಯದಲ್ಲಿ ಮಾತನಾಡಲು ಹೋಗಿದ್ದೆ. ಒಕ್ಕೂಟ ವ್ಯವಸ್ಥೆ, ಹಿಂದಿ ಹೇರಿಕೆ ಬಗ್ಗೆ ಕಾಂಗ್ರೆಸ್​ಗೆ ಪ್ರಶ್ನೆ ಮಾಡಲಾಯ್ತು. RSS, BJP ಬಗ್ಗೆ ಮಾತನಾಡುವವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಬೇರೆ ವಿಚಾರ ಮಾತನಾಡುವವರಿಗೆ ಅವಕಾಶ ಸಿಗಲಿಲ್ಲ. ಅವಕಾಶ ಸಿಗದ ಕಾರಣಕ್ಕೆ ಅರ್ಧದಲ್ಲೇ ಎದ್ದು ಬಂದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.


RSS/‌BJP ವಿರೋಧವಿರೋ ಜನರ ಮತಗಳ ಟಾರ್ಗೆಟ್. ಒಕ್ಕೂಟ ವ್ಯವಸ್ಥೆ ಉಳಿವಿನ ಬಗ್ಗೆ ಚಿಂತನೆಯೇ ಇಲ್ಲ, 2026ರ ಕ್ಷೇತ್ರ ಮರುವಿಂಗಡಣೆಯ ರೂಪುರೇಷೆಗಳೇ ಇಲ್ಲ. ಯಾವ ಯೋಚನೆಗಳೂ ಇಲ್ಲ ಅನ್ನೋದು ಸ್ಪಷ್ಟ. ಕರೆಯೋ ಮುನ್ನವೇ ತಿಳಿಸಿಬಿಡಿ, ಪೆಟ್ರೋಲ್ ಉಳಿಯುತ್ತೆ ಎಂದು ಅರುಣ್ ಜಾವಗಲ್ ಟ್ವೀಟ್ ಮಾಡಿದ್ದಾರೆ.


ಸಿದ್ದರಾಮಯ್ಯ ತವರಿನಲ್ಲಿ ಅಪಾರ ಬೆಂಬಲಿಗರು


ರಾಜ್ಯದಲ್ಲಿ ಸಂಚರಿಸುತ್ತಿರುವ ಕಾಂಗ್ರೆಸ್ ‘ಭಾರತ್ ಜೋಡೋ’ ಯಾತ್ರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತವರಿನಲ್ಲಿ ನಡೆದ ಯಾತ್ರೆಯಲ್ಲಿ ಅಪಾರ ಪ್ರಮಾಣ ಬೆಂಬಲಿಗರು ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್‌ ಬೆಂಬಲಿಗರು ಕೂಡ ಚನ್ನಪಟ್ಟಣ, ಕನಕಪುರ ಮೊದಲಾದ ಕಡೆಗಳಿಂದ ಬಂದಿದ್ರು


ಇದನ್ನೂ ಓದಿ:  Road Repair: ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯ ನರಕ ದರ್ಶನ; ತಾವೇ ದುರಸ್ತಿಗೆ ಮುಂದಾದ ಗ್ರಾಮಸ್ಥರು


ಪೇ ಸಿಎಂ ಟೀ ಶರ್ಟ್​ ವಿವಾದ


ಭಾರತ್ ಜೋಡೋ ಯಾತ್ರೆಯಲ್ಲಿ ‘ಪೇ ಸಿಎಂ’ ಟಿ ಶರ್ಟ್​ ಹಾಕಿದ ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿದೆ. ನಾವೇ ಟಿ ಶರ್ಟ್​ ಹಾಕ್ತೀವಿ, ಬನ್ನಿ ನೋಡೋಣ ಅಂತ ಬಿಜೆಪಿ ನಾಯಕರಿಗೆ ಡಿಕೆಶಿ ಸವಾಲು ಹಾಕಿದ್ರು.ಇನ್ನು ಭಾರತ್‌ ಜೋಡೋ ಯಾತ್ರೆ, ಇದೊಂತರಾ ಶೋ. ರಾಜಕೀಯ ಅಸ್ತಿತ್ವಕ್ಕೆ ಉಳಿಸಿಕೊಳ್ಳಲ ಕಾಂಗ್ರೆಸ್ ಮಾಡ್ತಿದೆ ಅಂತ ಸಿಎಂ ಬೊಮ್ಮಾಯಿ ಲೇವಡಿ ಮಾಡಿದ್ರು. ಸಚಿವ ಆರ್ ಅಶೋಕ್ ಮಾತನಾಡಿದ್ದು, ಕಾಂಗ್ರೆಸ್ ಭಾರತ್ ಜೋಡೋ ಅಲ್ಲ, ತೋಡೋ ಯಾತ್ರೆ ಟೀಕಿಸಿದ್ರು.


ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ #ಭಾರತ‌ಐಕ್ಯತಾಯಾತ್ರೆ ಬಗೆಗೆ ಬಿಜೆಪಿ ಪಕ್ಷ ನೀಡಿರುವ ಸುಳ್ಳು ಆರೋಪಗಳ, ಕೀಳು ಪದಬಳಕೆಯ ಜಾಹಿರಾತು ಅವರ ಹತಾಶ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಬಿಜೆಪಿಯ ಸುಳ್ಳಿನ ಸಾಮ್ರಾಜ್ಯದ ಪತನದ ಮುನ್ಸೂಚನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.


ಇದನ್ನೂ ಓದಿ: Teacher: ನಿವೃತ್ತ ಶಿಕ್ಷಕರಿಗೆ 50 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ನೀಡಿ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು


1937ರಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಸಾವರ್ಕರ್‌ ಅವರು ಹಿಂದೂ ಮತ್ತು ಮುಸ್ಲಿಂಮರನ್ನು ಒಳಗೊಂಡ ಭಾರತ ಒಂದು ದೇಶವಾಗಿ ಇರಲು ಸಾಧ್ಯವಿಲ್ಲ, ದೇಶವಿಭಜನೆ ಆಗಲೇಬೇಕು ಎಂದು ಬಲವಾಗಿ ಪ್ರತಿಪಾದನೆ ಮಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನಗೈದು, ಸ್ವಾತಂತ್ರ್ಯ ನಂತರ 600ಕ್ಕೂ ಅಧಿಕ ಸಣ್ಣ ಪುಟ್ಟ ರಾಜ್ಯಗಳನ್ನು ಒಟ್ಟುಗೂಡಿಸಿ ಭಾರತವೆಂಬ ಭವ್ಯ ರಾಷ್ಟ್ರ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶದ ಸ್ವಾತಂತ್ರ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿ ಕೊಡಗು ಏನು ಎಂದು ಪ್ರಶ್ನೆ ಮಾಡಿದ್ದಾರೆ.

Published by:Mahmadrafik K
First published: