• Home
  • »
  • News
  • »
  • state
  • »
  • Bharat Jodo Yatra: ಗುಂಡ್ಲುಪೇಟೆಯಿಂದ ಮೈಸೂರಿಗೆ ಭಾರತ್ ಜೋಡೋ; 2ನೇ ದಿನದ ಪಾದಯಾತ್ರೆ ಡೀಟೈಲ್ಸ್ ಇಲ್ಲಿದೆ

Bharat Jodo Yatra: ಗುಂಡ್ಲುಪೇಟೆಯಿಂದ ಮೈಸೂರಿಗೆ ಭಾರತ್ ಜೋಡೋ; 2ನೇ ದಿನದ ಪಾದಯಾತ್ರೆ ಡೀಟೈಲ್ಸ್ ಇಲ್ಲಿದೆ

ಭಾರತ್ ಜೋಡೋ ಯಾತ್ರೆ

ಭಾರತ್ ಜೋಡೋ ಯಾತ್ರೆ

ಸಂಜೆ 7 ಗಂಟೆಯವರಿಗೂ ಪಾದಯಾತ್ರೆ ನಡೆಯಲಿದೆ. ರಾತ್ರಿ ತಾಂಡವಪುರ ಎಂಐಟಿ ಕಾಲೇಜ್ ಗೇಟ್ ಬಳಿ ನಾಯಕರು ವಾಸ್ತವ್ಯ ಹೂಡಲಿದ್ದಾರೆ.

  • Share this:

ಜಿಟ ಜಿಟಿ ಮಳೆ (Rains) ನಡುವೆಯೇ ಕರ್ನಾಟಕದಲ್ಲಿ 2ನೇ ದಿನ ಭಾರತ್ ಜೋಡೋ ಱಲಿ (Bharat Jodo Rally) ಆರಂಭಗೊಂಡಿದೆ. ಶುಕ್ರವಾರ ಗುಂಡ್ಲುಪೇಟೆಯಲ್ಲಿ (Gundlupet, Chamarajanagara) ಪಾದಯಾತ್ರೆ ಅದ್ಧೂರಿ ಸಕ್ಸಸ್ ಬೆನ್ನಲ್ಲೇ ಕಾಂಗ್ರೆಸ್ ಪಾಳಯ ಇದೇ ಖುಷಿಯಲ್ಲಿ ಮಳೆಯ ಸಿಂಚನದ ನಡುವೆ ಹೆಜ್ಜೆ ಹಾಕುತ್ತಿದೆ. ಇಂದು ಬೇಗೂರಿನಿಂದ ತಾಂಡವಪುರಕ್ಕೆ  (Beguru To Tandavapura) ಪಾದಯಾತ್ರೆ ನಡೆಯಲಿದ್ದು, ಮಳೆಯಿಂದಾಗಿ ಮೂರು ಕಿಲೋ ಮೀಟರ್ ಪಾದಯಾತ್ರೆ ಮೊಟಕುಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬೆಳಗ್ಗೆ 11.00 ಗಂಟಗೆ ಕಳಲೆ ಗೇಟ್ ಬಳಿ ವಿರಾಮ ಇದೆ. 11 ಗಂಟೆಗೆ ಕೋಲೆಬಸವ ಸಮುದಾಯದ ಜೊತೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Former Congress President Rahul Gandhi) ಸಂವಾದ ನಡೆಸಲಿದ್ದಾರೆ.


ಇದಾದ ಬಳಿಕ ಸಾಹಿತಿ, ಕಲಾವಿದರ ಜೊತೆ ಸಂವಾದ ನಡೆಸಲಿದ್ದಾರೆ. ದ್ವೇಷ ರಾಜಕಾರಣ ವಿರೋಧಿಸುವ ಸಮಾನ ಮನಸ್ಕರ ಜೊತೆ ಸಂವಾದ ಕಾರ್ಯಕ್ರಮವಿದೆ. ಸಂಜೆ 4 ಗಂಟೆ ಸುಮಾರಿಗೆ ಕಳಲೆ ಗೇಟ್ ನಿಂದ ಯಾತ್ರೆ ಪುನಾರಂಭವಾಗಲಿದೆ. ಸಂಜೆ 7 ಗಂಟೆಯವರಿಗೂ ಪಾದಯಾತ್ರೆ ನಡೆಯಲಿದೆ. ರಾತ್ರಿ ತಾಂಡವಪುರ ಎಂಐಟಿ ಕಾಲೇಜ್ ಗೇಟ್ ಬಳಿ ನಾಯಕರು ವಾಸ್ತವ್ಯ ಹೂಡಲಿದ್ದಾರೆ.


ಒಗ್ಗಟ್ಟಿನ ಮಂತ್ರ ಜಪಿಸಿದ ರಾಹುಲ್ ಗಾಂಧಿ


ರಾಹುಲ್​ ಗಾಂಧಿ ಫಸ್ಟ್ ಡೇ ಫಸ್ಟ್ ಶೋನಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ರು. ಗುಂಡ್ಲುಪೇಟೆಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ನಗಾರಿ ಬಾರಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಐಕ್ಯತಾ ಯಾತ್ರೆಗೆ ಅದ್ಧೂರಿ ಚಾಲನೆ ದೊರೆಯಿತು. ಈ ವೇಳೆ ರಾಹುಲ್ ಗಾಂಧಿ ರಾಜ್ಯಕ್ಕೆ ಎಂಟ್ರಿ ಆಗುತ್ತಿದಂತೆಯೇ ಒಗ್ಗಟ್ಟಿನ ತಂತ್ರ ರೂಪಿಸಿದ್ದಾರೆ.


ಬಿಜೆಪಿಗೆ ಟಾಂಗ್ ಕೊಟ್ಟ ಡಿಕೆಶಿ


ಮೊದಲ ದಿನದ ಭಾರತ್ ಜೋಡೋ ಯಾತ್ರೆ  ನೂರಕ್ಕೆ ನೂರರಷ್ಟು ಸಕ್ಸಸ್ ಆಗಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿಯವರಿಗೆ ಇದನ್ನ ಸಹಿಸಿಕೊಳ್ಳಲು ಆಗ್ತಿಲ್ಲ. ಹೀಗಾಗಿ ಇಲ್ಲಸಲ್ಲದ ವಿಡಿಯೋ ಬಿಟ್ಟಿದ್ದಾರೆ ಅಂತಾ ಟಾಂಗ್ ಕೊಟ್ಟಿದ್ದಾರೆ.


Bharat Jodo yatra second day in karnataka mrq
ಭಾರತ್ ಜೋಡೋ ಯಾತ್ರೆ


ಇವತ್ತಿನ ಪಾದಯಾತ್ರೆಯ ವೇಳಾಪಟ್ಟಿ


9 AM : ಎಲಚಗೆರೆ ಬೋರೆ ಮೂಲಕ ಮೈಸೂರು ಜಿಲ್ಲೆ ಪ್ರವೇಶ


11 AM: ಮೈಸೂರು ಜಿಲ್ಲೆ ಕಳಲೆ ಗೇಟ್ ಬಳಿ ವಿಶ್ರಾಂತಿ


11 AM: ಕೋಲೆಬಸವ ಸಮುದಾಯದ ಜೊತೆ ಸಂವಾದ


12 PM: ಸಾಹಿತಿ, ಕಲಾವಿದರ ಜೊತೆ ಸಂವಾದ


4 PM:  ಯಾತ್ರೆ ಪುನರಾರಂಭ, 7 ಗಂಟೆಗೆ ವಾಸ್ತವ್ಯ


7 PM: ಮೈಸೂರು ಜಿಲ್ಲೆ ತಾಂಡವಪುರ ಬಳಿ ವಾಸ್ತವ್ಯ


ಇದನ್ನೂ ಓದಿ:  Free Site: ಅಗಲಿದ ಮಗನ ಹೆಸರಲ್ಲಿ ಮಹಾನ್ ಕಾರ್ಯಕ್ಕೆ ಮುಂದಾದ ತಂದೆ-ತಾಯಿ; 40 ಬಡ ಕುಟುಂಬಕ್ಕೆ ಉಚಿತ ಸೈಟ್ ಹಂಚಿಕೆ!


ಆಕ್ಸಿಜನ್ ದುರಂತ ಬಿಚ್ಚಿಟ್ಟ ಬಾಲಕಿ!


ಭಾರತ್‌ ಜೋಡೋ ಯಾತ್ರೆಯಲ್ಲಿ ಶುಕ್ರವಾರ (ಸೆಪ್ಟೆಂಬರ್ 30) ರಾಹುಲ್ ಗಾಂಧಿ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ್ದ ಕುಟುಂಬದ ಸದಸ್ಯರ ಜೊತೆಗೆ ಸಂವಾದ ನಡೆಸಿದ್ರು.


Bharat Jodo yatra second day in karnataka mrq
ಭಾರತ್ ಜೋಡೋ ಯಾತ್ರೆ


ಚಾಮರಾಜನಗರದ ಆಕ್ಸಿಜನ್ ದುರಂತದ ಬಗ್ಗೆ ಕುಟುಂಬಸ್ಥರು ಎಳೆಎಳೆಯಾಗಿ ಬಿಚ್ಚಿಟ್ರು. ರಾಜ್ಯ ಸರ್ಕಾರದಿಂದ ನಮಗೆ ಸೂಕ್ತ  ಪರಿಹಾರ ಸಿಕ್ಕಿಲ್ಲ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡ್ರು. ಇನ್ನು ಪುಟ್ಟ ಬಾಲಕಿಯೊಬ್ಬಳು, ನಮ್ಮ ತಂದೆ ಆಕ್ಸಿಜನ್‌ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ನಾನು ಮುಂದೆ ಓದಿ ಡಾಕ್ಟರ್‌ ಆಗ್ತೀನಿ, ಜನರ ಸೇವೆ ಮಾಡ್ತೀನಿ ಅಂತ ಹೇಳಿದಳು. ಈ ವೇಳೆ ಎಲ್ಲರ ಕಣ್ಣಗಳು ಒದ್ದೆಯಾಗಿದ್ವು. ಅಲ್ಲದೇ ಡಿ.ಕೆ ಶಿವಕುಮಾರ್​ ಸಂವಾದದಲ್ಲಿ ಭಾವುಕರಾದರು.


ಇದನ್ನೂ ಓದಿ:  Mallikarjun Kharge: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಖರ್ಗೆ ನಾಮಪತ್ರ, ಕನ್ನಡಿಗನ 'ಕೈ'ಗೆ ಸಿಗುತ್ತಾ ಅಧಿಕಾರ?


ಡ್ರೋನ್ ಕ್ಯಾಮೆರಾ ವಶಕ್ಕೆ


ಇನ್ನು ಭಾರತ್‌ ಜೋಡೋ ಯಾತ್ರೆಯಲ್ಲಿ ಡ್ರೋನ್ ಕ್ಯಾಮೆರಾ ಆತಂಕ ಶುರುವಾಗಿತ್ತು. ರಾಹುಲ್ ಗಾಂಧಿ ಭದ್ರತಾ ಸಿಬ್ಬಂದಿ ಡ್ರೋನ್ ಕ್ಯಾಮೆರಾ ವಶಕ್ಕೆ ಪಡೆದರು./ ಡಿಕೆಶಿ ಆಪ್ತ ಶಿವು ಡ್ರೋನ್ ಮೂಲಕ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಗಮನಿಸಿದ ರಾಹುಲ್ ಗಾಂಧಿ ಭದ್ರತಾ ಸಿಬ್ಬಂದಿ 2 ಬಾರಿ ವಾರ್ನ್ ಮಾಡಿದರು. ಆದ್ರೂ ಸುಮ್ಮನಾಗದಿದ್ದಕ್ಕೆ ಡ್ರೋನ್ ಕ್ಯಾಮೆರಾವನ್ನು ವಶಕ್ಕೆ ಪಡೆದರು.

Published by:Mahmadrafik K
First published: