• Home
  • »
  • News
  • »
  • state
  • »
  • Bharath Jodo Yatre: ವರುಣನ ಆರ್ಭಟಕ್ಕೂ ಜಗ್ಗಲಿಲ್ಲ ರಾಹುಲ್ ಗಾಂಧಿ; ಮಳೆಯ ನಡುವೆಯೂ ಗುಡುಗಿದ 'ರಾಗಾ'

Bharath Jodo Yatre: ವರುಣನ ಆರ್ಭಟಕ್ಕೂ ಜಗ್ಗಲಿಲ್ಲ ರಾಹುಲ್ ಗಾಂಧಿ; ಮಳೆಯ ನಡುವೆಯೂ ಗುಡುಗಿದ 'ರಾಗಾ'

ಮಳೆಯಲ್ಲೇ ರಾಹುಲ್ ಭಾಷಣ

ಮಳೆಯಲ್ಲೇ ರಾಹುಲ್ ಭಾಷಣ

ಎಪಿಎಂಸಿ ಸಮೀಪದಲ್ಲಿ ನಡೆದ ಕಾರ್ನರ್ ಮೀಟಿಂಗ್‌ನಲ್ಲಿ ಮಳೆಯಲ್ಲೇ ಭಾಷಣ ಮಾಡಿದ ರಾಹುಲ್‌, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇನೆ ಎಂದಿದ್ದಾರೆ.

  • Share this:

ಮೈಸೂರು (ಅ.2): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ (Bharath Jodo Yatre)  ಪಾದಯಾತ್ರೆಯ ಮೈಸೂರು ತಲುಪಿದೆ. ಬಂಡೀಪಾಳ್ಯ ಸಮೀಪ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣದ ವೇಳೆ ಭಾರೀ ಮಳೆಯಾಗಿದೆ. ಮಳೆಯಲ್ಲು ಜಗ್ಗದೆ ರಾಹುಲ್​ ಗಾಂಧಿ ಭಾಷಣ (Speech) ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕಾಂಗ್ರೆಸ್​ ನಾಯಕರು (Congress Leaders) ಸಹ ಮಳೆಯಲ್ಲಿ ನೆನೆಯುತ್ತಾ ವೇದಿಕೆ ಮೇಲೆಯೇ ಕುಳಿತುಕೊಂಡಿದ್ದರು. 


ಮಳೆಯಲ್ಲೂ ರಾಹುಲ್​ ಗಾಂಧಿ ಭಾಷಣ


ನಂಜನಗೂಡು ತಾಲ್ಲೂಕು ಕಡಕೊಳದ ಕಾಳಿಬೀರಮ್ಮ ದೇವಸ್ಥಾನದ ಬಳಿಯಿಂದ 4.46ಕ್ಕೆ ಹೊರಟ ಪಾದಯಾತ್ರೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ರಾಹುಲ್ ಜೊತೆ ನಾಯಕರೂ ಹೆಜ್ಜೆ ಹಾಕಿದರು. ಜಾನಪದ ಕಲಾ ತಂಡಗಳು ಮೆರುಗು ನೀಡಿದವು. ಸಂಜೆ 6.40ರ ಸುಮಾರಿಗೆ ಬಂಡೀಪಾಳ್ಯ ಸಮೀಪಿಸುತ್ತಿದ್ದಂತೆಯೇ ಜೋರು ಮಳೆಯಾಗಿದೆ ಮಳೆಯಲ್ಲೂ ರಾಹುಲ್​ ಗಾಂಧಿ ಭಾಷಣ ಮಾಡಿದ್ದಾರೆ
ಎಪಿಎಂಸಿ ಸಮೀಪದಲ್ಲಿ ನಡೆದ ಕಾರ್ನರ್ ಮೀಟಿಂಗ್‌ನಲ್ಲಿ ಮಳೆಯಲ್ಲೇ ಭಾಷಣ ಮಾಡಿದ ರಾಹುಲ್‌, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇನೆ. ಯಾವ ಕಾರಣಕ್ಕೂ ಯಾತ್ರೆ ನಿಲ್ಲುವುದಿಲ್ಲ. ಈಗ ಮಳೆ ಬರುತ್ತಿದೆ, ಹಾಗೆಂದು ಪಾದಯಾತ್ರೆ ನಿಲ್ಲಿಸಿದೆವೆಯೇ ಎಂದುರಾಹುಲ್​ ಗಾಂಧಿ ಪ್ರಶ್ನಿಸಿದರು.
ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಯಾತ್ರೆ ನಡೆಯಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನದಿಗಳು ಹರಿಯುವಂತೆಯೇ ಮುಂದುವರಿಯುತ್ತದೆ. ಇಲ್ಲಿ, ಯಾವುದೇ ದ್ವೇಷ–ಅಸೂಯೆ ಕಾಣುವುದಿಲ್ಲ. ಕೇವಲ ಪ್ರೀತಿ–ಸಹನೆಯ ಸಂದೇಶವನ್ನಷ್ಟೆ ನೀಡಲಾಗುತ್ತಿದೆ. ಇದೇ ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ಹೇಳಿದ್ರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಶೇ.40ರಷ್ಟು ಕಮಿಷನ್ ಕೊಡಲಾಗದೆ ಆ ಪಕ್ಷದ ಮುಖಂಡರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಇದು ಭ್ರಷ್ಟಾಚಾರಕ್ಕೆ ಉದಾಹರಣೆಯಾಗಿದೆ’ ಎಂದು ರಾಹುಲ್​ ಕಿಡಿಕಾರಿದ್ದಾರೆ.


ಇದನ್ನೂ ಓದಿ: Cleanest City: ಅತ್ಯಂತ ಸ್ವಚ್ಛನಗರವಾಗಿ ಹೊರಹೊಮ್ಮಿದ ಇಂದೋರ್‌, ಮೈಸೂರಿಗೆ ಎಷ್ಟನೇ ಸ್ಥಾನ ಗೊತ್ತಾ?


bharat jodo yatra Rahul Gandhi speech in the rain
ಮಳೆಯಲ್ಲೇ ರಾಹುಲ್ ಭಾಷಣ


ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ದ್ವೇಷ ಹರಡಿಸುತ್ತಿದ್ದಾರೆ ಎಂದು ದೂರಿದ ಅವರು, ಒಂದೆಡೆ ನಿರುದ್ಯೋಗ ಹೆಚ್ಚುತ್ತಿದೆ. ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಬಡ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಧ್ವನಿಯಾಗಿ ಯಾತ್ರೆ ನಡೆಸುತ್ತಿದ್ದೇವೆ. ಭಾರತವನ್ನು ಜೋಡಿಸುವ ಕೆಲಸವನ್ನು ಮಾಡಿಯೇ ತೀರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.


ಇದನ್ನೂ ಓದಿ: Rain Update: ಮತ್ತೆ ಹಲವೆಡೆ ವರುಣನ ಆರ್ಭಟ; ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ


ಬಳಿಕ ದಿನದ ಯಾತ್ರೆಯು ಬಂಡಿಪಾಳ್ಯದ ಬಳಿ ಅಂತ್ಯಗೊಂಡಿತು. ಅ.3(ಸೋಮವಾರ) ಬೆಳಿಗ್ಗೆ ಇಲ್ಲಿನ ಜಯಚಾಮರಾಜೇಂದ್ರ ವೃತ್ತದಿಂದ ಮೈಸೂರು–ಬೆಂಗಳೂರು ಹೆದ್ದಾರಿಯ ಕಡೆಗೆ ಸಂಚರಿಸಲಿದೆ.


 ಬದನವಾಳು ಖಾದಿ, ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ


ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಆವರಣದಲ್ಲಿ ಗಾಂಧಿ ಜಯಂತಿ ಅಂಗವಾಗಿ ಪ್ರಾರ್ಥನೆಯನ್ನು ಆಯೋಜಿಸಲಾಗಿತ್ತು. ಪಾದಯಾತ್ರೆ ಬಳಿಕ ರಾಹುಲ್​ ಗಾಂಧಿ ನಂಜನಗೂಡಿನ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಮಹಾತ್ಮ ಗಾಂಧಿಯವರು 1927ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಚಾಲನೆ ನೀಡಿದ್ದರು.


ಇಲ್ಲಿಗೆ ಇದೀಗ ರಾಹುಲ್ ಗಾಂಧಿಯೊಂದಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಲ್ಲಿಯ ನೇಕಾರರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಭಾರತ ಐಕ್ಯತಾ ಯಾತ್ರೆ ಮೂಲಕ ಮೈಸೂರು ಜಿಲ್ಲೆ ಪ್ರವೇಶಿಸಿರುವ ರಾಹುಲ್ ಗಾಂಧಿ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ನಡೆದ ಗಾಂಧಿ ಜಯಂತಿ ಹಾಗೂ ಶ್ರಮದಾನದಲ್ಲಿ ಭಾಗಿ ಆಗಿದ್ದಾರೆ.

Published by:ಪಾವನ ಎಚ್ ಎಸ್
First published: