• Home
 • »
 • News
 • »
 • state
 • »
 •  Bharat Jodo Yatra: ‘ಭಾರತ್‌ ಜೋಡೋ’ಗೆ ಸೋನಿಯಾ ‘ಬಲ’; ಅಕ್ಟೋಬರ್ 7ರಂದು ಮಂಡ್ಯಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ

 Bharat Jodo Yatra: ‘ಭಾರತ್‌ ಜೋಡೋ’ಗೆ ಸೋನಿಯಾ ‘ಬಲ’; ಅಕ್ಟೋಬರ್ 7ರಂದು ಮಂಡ್ಯಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ

ಭಾರತ್ ಜೋಡೋ ಯಾತ್ರೆ

ಭಾರತ್ ಜೋಡೋ ಯಾತ್ರೆ

ಅಕ್ಟೋಬರ್​ 7ಕ್ಕೆ ಮಂಡ್ಯಗೆ ಪ್ರಿಯಾಂಕಾ ವಾದ್ರಾ ಆಗಮಿಸಲಿದ್ದಾರೆ. ನಾಗಮಂಗಲದಲ್ಲಿ ರಾಹುಲ್​ ಜೊತೆ ಪ್ರಿಯಾಂಕಾ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

 • Share this:

  ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು (AICC Interim president Sonia Gandhi) ಇಂದು ರಾಜ್ಯಕ್ಕೆ ಆಗಮಿಸ್ತಿದ್ದಾರೆ. ಸೋನಿಯಾ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್​​ನಿಂದ (KPCC) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಮಧ್ಯಾಹ್ನ 3ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ಏರ್​ಪೋರ್ಟ್‌ಗೆ (Mysuru Airport) ಸೋನಿಯಾ ಗಾಂಧಿ ಬಂದಿಳಿಯಲಿದ್ದಾರೆ. ಏರ್​ಪೋರ್ಟ್​​ನಿಂದ 3.30ಕ್ಕೆ ಕೊಡಗಿಗೆ (Kodagu) ಹೆಲಿಕಾಪ್ಟರ್​​ನಲ್ಲಿ ಪ್ರಯಾಣಿಸಲಿದ್ದಾರೆ. ಅಕ್ಟೋಬರ್​ 4 ಮತ್ತು 5ರಂದು ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಬ್ರೇಕ್ ಹಾಕಿದ್ದು, ಕೊಡಗಿನಲ್ಲಿ ಚುನಾವಣೆ ಬಗ್ಗೆ ಸರಣಿ ಸಭೆ ನಡೆಯಲಿದೆ. ಅಕ್ಟೋಬರ್​​ 6ರಿಂದ ಮೇಲುಕೋಟೆಯಿಂದ ಮತ್ತೆ ಪಾದಯಾತ್ರೆ ಆರಂಭವಾಗಲಿದ್ದು. ಮೇಲುಕೋಟೆ (Melukote) ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗವಹಿಸಲಿದ್ದಾರೆ. ಬಳಿಕ ಅಲ್ಲಿಂದ ಸೋನಿಯಾ ಗಾಂಧಿ ದೆಹಲಿಗೆ ವಾಪಸ್​ ತೆರಳಲಿದ್ದಾರೆ.


  ಇನ್ನು ಅಕ್ಟೋಬರ್​ 7ಕ್ಕೆ ಮಂಡ್ಯಗೆ ಪ್ರಿಯಾಂಕಾ ವಾದ್ರಾ ಆಗಮಿಸಲಿದ್ದಾರೆ. ನಾಗಮಂಗಲದಲ್ಲಿ ರಾಹುಲ್​ ಜೊತೆ ಪ್ರಿಯಾಂಕಾ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಆದಿಚುಂಚನಗಿರಿ ಮಠಕ್ಕೂ ರಾಹುಲ್​​-ಪ್ರಿಯಾಂಕ ಭೇಟಿ ನೀಡುವ ಸಾಧ್ಯತೆಯಿದೆ.


  ನಾಲ್ಕನೇ ದಿನದ ಯಾತ್ರೆ ಹೀಗಿದೆ


  ಮೈಸೂರು ನಗರದ ಆರ್​ ಗೇಟ್​ನಿಂದ ಪಾದಯಾತ್ರೆ ಪುನರಾರಂಭಗೊಳ್ಳಲಿದೆ. ಬೆಳಗ್ಗೆ 11 ಗಂಟೆಗೆ ವ್ಯಾಲಿ ಇನ್ ರೆಸಾರ್ಟ್​ ತಲುಪಲಿದೆ. ಸಂಜೆ 4 ಗಂಟೆ ವೇಳೆಗೆ ಶ್ರೀರಂಗಪಟ್ಟಣದ ಬಸ್​ ನಿಲ್ದಾಣದಿಂದ ಪಾದಯಾತ್ರೆ ಪುನರಾರಂಭಗೊಂಡು ಸಂಜೆ 7 ಗಂಟೆಗೆ ಪಾಂಡವಪುರದ ಟಿಎಸ್ ಛತ್ರ ಗ್ರಾಮದಲ್ಲಿ ಇಂದು ಅಂತ್ಯವಾಗಲಿದೆ.


  Bharat jodo yatra 4th day in karnataka
  ನಂಜುಂಡೇಶ್ವರನ ದರ್ಶನ ಪಡೆದ ರಾಹುಲ್ ಗಾಂಧಿ


  ಕಾಂಗ್ರೆಸ್ ನಾಯಕರ ಶಕ್ತಿ ಪ್ರದರ್ಶನ


  ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ತಲುಪಿದೆ. ಮೈಸೂರಿನ ಬಂಡಿಪಾಳ್ಯದಲ್ಲಿ ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿನ್ನೆ ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ರು.


  ಮಳೆ ಬಂದ್ರೂ ಭಾಷಣ ನಿಲ್ಲಿಸದ ರಾಹುಲ್ ಗಾಂಧಿ


  ಧಾರಾಕಾರ ಮಳೆಯ ನಡುವೆ ನಾಯಕರು ವೇದಿಕೆ ಮೇಲೆ ಕೈ ಎತ್ತಿ ಹಿಡಿದು ಶಕ್ತಿ ಪ್ರದರ್ಶಿಸಿದ್ರೆ, ಮತ್ತೊಂದೆಡೆ ಮಳೆಯನ್ನು ಲೆಕ್ಕಿಸದೇ ರಾಹುಲ್‌ ಗಾಂಧಿ ಭಾಷಣ ಮಾಡಿದ್ರು. ಭಾರತ್ ಜೋಡೋ ಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ನಡೆಯುತ್ತೆ. ಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಎಷ್ಟೇ ಹಿಂಸೆ ಕೊಟ್ಟರೂ ಭಾರತ್​ ಜೋಡೋ ಯಾತ್ರೆ ನಿಲ್ಲಲ್ಲ.


  Bharat jodo yatra 4th day in karnataka
  ನಂಜನಗೂಡು ದೇವಾಲಯದಲ್ಲಿ ಕಾಂಗ್ರೆಸ್ ನಾಯಕರು


  ಇದನ್ನೂ ಓದಿ:  Prices Hike: ಆಯುಧ ಪೂಜೆ ಹಿನ್ನೆಲೆ ಗಗನಕ್ಕೇರಿದೆ ಹೂವಿನ ಬೆಲೆ; ದುಪ್ಪಟ್ಟಾಯ್ತು ಕುಂಬಳಕಾಯಿ ರೇಟ್


  ಗಾಂಧಿ ಜಯಂತಿ ಹಿನ್ನೆಲೆ ಕಾಂಗ್ರೆಸ್ ನಾಯಕರು ಐತಿಹಾಸಿಕ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದ್ರು. ಖಾದಿ ಗ್ರಾಮೋದ್ಯಗ ಕೇಂದ್ರದಲ್ಲಿ ಮಹಿಳೆಯರ ಜೊತೆ ಸಂವಾದ ಮಾಡಿದ್ರು. ಬಳಿಕ ಶಾಲೆಯ ಕಾಂಪೌಂಡ್​​ಗೆ ಬಣ್ಣ ಬಳಿಯೋ ಮೂಲಕ ಶ್ರಮದಾನ ಮಾಡಿದ್ರು.


  NSUI ಕಾರ್ಯಕರ್ತರಿಂದ ಪಕೋಡಾ ಅಭಿಯಾನ


  ಭಾರತ್ ಜೋಡೋ ಪಾದಯಾತ್ರೆಯಲ್ಲಿ NSUI ಕಾರ್ಯಕರ್ತರು ಪಕೋಡಾ ಅಭಿಯಾನ ನಡೆಸಿದ್ರು. ಪದವಿ ಗೌನ್ ಹಾಕಿ ಪಕೋಡಾ ಮಾರಾಟ ಮಾಡುತ್ತಾ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯ ಮಾಡಿದ್ರು. ಪಕೋಡಾ ಮಾರುವ ಮೂಲಕ ನಿರುದ್ಯೋಗ ಸಮಸ್ಯೆ ಬಗ್ಗೆ ಗಮನ ಸೆಳೆದರು.


  ಡಿಕೆಶಿಗೆ ‘ಹೆರಾಲ್ಡ್’ ಕಂಟಕ


  ಭಾರತ್ ಜೋಡೋದಲ್ಲಿರುವ ಡಿ.ಕೆ ಶಿವಕುಮಾರ್​ಗೆ ED ಶಾಕ್ ಕೊಟ್ಟಿದೆ. ನ್ಯಾಷನಲ್ ಹೆರಾಲ್ಡ್ ಕೇಸ್‌ಗೆ ಸಂಬಂಧಿಸಿದಂತೆ, ಅಕ್ಟೋಬರ್​ 7ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ನೋಟಿಸ್ ಬಗ್ಗೆ ಮಾತಾಡಿರೋ ಡಿಕೆಶಿ, ನಮ್ಮ ಆಸ್ತಿ ಬಗ್ಗೆ ಈಗಾಗಲೇ ಸಿಬಿಐನವರು ತನಿಖೆ ಮಾಡುತ್ತಿದ್ದಾರೆ. ಅದ್ಯಾಕೇ ಇಬ್ಬರು ತನಿಖೆ ಮಾಡ್ತಿದ್ದಾರೋ ಗೊತ್ತಿಲ್ಲ. ಹೊಸದಾಗಿ ನೋಟಿಸ್ ಕೊಟ್ಟಿದ್ದಾರೆ. ನಾನು ಯಂಗ್ ಇಂಡಿಯಾಗೆ ಡೊನೇಶನ್ ಕೊಟ್ಟಿದ್ದೇನೆ. ಎಷ್ಟು ಕೊಟ್ಟಿದ್ದೇನೆ ಅನ್ನೋದನ್ನು ಈಗ ಹೇಳೋಕೆ ಆಗಲ್ಲ. ಮುಂದೇ ಮಾಹಿತಿ ನೀಡುತ್ತೇನೆ ಎಂದರು.


  Bharat jodo yatra 4th day in karnataka
  ನಂಜುಂಡೇಶ್ವರನ ದರ್ಶನ ಪಡೆದ ರಾಹುಲ್ ಗಾಂಧಿ


  ಇದನ್ನೂ ಓದಿ:  Karnataka Weather Report: ಮುಂಗಾರು ಅಂತ್ಯದಲ್ಲಿಯೂ ವರುಣನ ಅಬ್ಬರ; ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?


  ಡಿಕೆಶಿ ವಿರುದ್ಧ ಸಿ.ಟಿ.ರವಿ ವಾಗ್ದಾಳಿ


  ಡಿಕೆ ಶಿವಕುಮಾರ್​ ವಿರುದ್ಧ ಸಿ.ಟಿ.ರವಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಡಿಕೆಶಿ ಒಳಗಡೆ ಇಂತಹ ಕಲಾವಿದ ಇದ್ದಾನೆಂದು ನಾನು ಅಂದುಕೊಂಡಿರಲಿಲ್ಲ. ಡಿಕೆಶಿ ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು. ಡಿ.ಕೆ.ಶಿವಕುಮಾರ್ ಅವರು ತುಂಬಾ ಚೆನ್ನಾಗಿ ನಟನೆ ಮಾಡ್ತಾರೆ. ಬಣ್ಣ ಹಾಕದೇ, ಗ್ಲಿಸರಿನ್ ಹಾಕದೇ ಕಣ್ಣೀರು ಹಾಕುವ ಕಲೆ ಡಿ.ಕೆ.ಶಿವಕುಮಾರ್​ಗೆ ಬೈ ಬರ್ತ್ ಬಂದಿದೆ ಎಂದು ಕಿಡಿಕಾರಿದ್ರು.

  Published by:Mahmadrafik K
  First published: