ಸೆ.25ರಂದು ಭಾರತ್ ಬಂದ್ ಗೆ ರೈತರ ಹೋರಾಟ ಎಲ್ಲೆಲ್ಲಿ?: ಬೆಂಗಳೂರಿನಲ್ಲಿ ಪ್ರತಿಭಟನೆ ಬಿಸಿ ಎಲ್ಲೆಲ್ಲಿ ತಟ್ಟಲಿದೆ ಗೊತ್ತಾ? 

ನಾಳೆ ಪ್ರತಿಭಟನೆಯಿಂದ ಬೆಂಗಳೂರಿಗೆ ಟ್ರಾಫಿಕ್ ಬಿಸಿ ತಟ್ಟಿದ್ರೆ ಬೆಂಗಳೂರು ಸಂಪರ್ಕಿಸುವ ರಾಜ್ಯ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥವಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಸೆಪ್ಟೆಂಬರ್​. 24) :  ರಾಜ್ಯದಲ್ಲಿ ರೈತರ ಹೋರಾಟ  ತೀವ್ರ ಸ್ವರೂಪ ಪಡೆದುಕೊಳ್ತುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದ್ದು, ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ನಾಳೆ ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯ - ರಾಷ್ಟ್ರಿಯ ಹೆದ್ದಾರಿ ಬಂದ್ ಜೊತೆಗೆ ಬೃಹತ್ ಪ್ರತಿಭಟನೆಗೆ ರೈತ ಮುಖಂಡರು ನಿರ್ಧರಿಸಿದ್ದಾರೆ. ಕೊನೆಗೂ ರೈತ ಸಂಘಟನೆಗಳಲ್ಲಿನ ಗೊಂದಲಕ್ಕೆ ಬ್ರೇಕ್ ಬಿದ್ದಿದೆ. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹೆಸರಿನಲ್ಲಿ ನಡೆದ ಸುದ್ದಿಗೋಷ್ಟಿ ಗೊಂದಲಕ್ಕೆ ತಿಲಾಂಜಲಿ ಇಟ್ಟಿದೆ. ಪ್ರಮುಖ 9 ರೈತ ಪರ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್ ಗೆ ಕರೆಕೊಟ್ಟಿವೆ. ಎರಡು ರಾಜ್ಯ ರೈತ ಸಂಘಗಳು, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಕಾರ್ಯಕರ್ತೆಯರು, ಜನಶಕ್ತಿ ಸಂಘಟನೆ. ಸೆ. 25 ರಂದು ರಾಜ್ಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲು ರೈತರು ತೀರ್ಮಾನಿಸಿದ್ದಾರೆ.

ಈ‌ ಕುರಿತು ಅಖಿಲ‌ ಭಾರತ ರೈತ ಸಂಘರ್ಷ ಸಮಿತಿ ಸುದ್ದಿಗೋಷ್ಟಿ ನಡೆಸಿ, ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ರೈತ ಮುಖಂಡರೆಲ್ಲರೂ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆಗೆ ತೀರ್ಮಾನಿಸಿದ್ದಾರೆ. ಸಾವಿರಾರು ರೈತರು ‌ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಇನ್ನೂ ಬೆಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳು ಬಂದ್ ಆಗಲಿವೆ.

ಎಲ್ಲೆಲ್ಲಿ ರಸ್ತೆ ತಡೆ ?

ಬೆಳಗ್ಗೆ 8 ರಿಂದಲೇ ರಸ್ತೆ ತಡೆ, ಬೆಂಗಳೂರಿನಿಂದ ಮೈಸೂರು ಸಂಪರ್ಕ ಕಲ್ಪಿಸುವ - ಕೊಲೊಂಬಿಯಾ ಆಸ್ಪತ್ರೆ, ಬೆಂಗಳೂರಿನಿಂದ ತುಮಕೂರು ಸಂಪರ್ಕ ಕಲ್ಪಿಸುವ - ನವಯುಗ ಟೋಲ್,  ಬೆಂಗಳೂರಿನಿಂದ ಹೈದರಾಬಾದ್ ಸಂಪರ್ಕ ಕಲ್ಪಿಸುವ -  ಬಳ್ಳಾರಿ ರಸ್ತೆ ಹೆಬ್ಬಾಳ ಫ್ಲೈ ಓವರ್​, ಬೆಂಗಳೂರು ತಮಿಳುನಾಡು ಸಂಪರ್ಕ ‌ಕಲ್ಪಿಸುವ - ಹೊಸೂರು ರಸ್ತೆ,  ಸಿಲ್ಕ್ ಬೋರ್ಡ್ ಜಂಕ್ಷನ್​, ಕನಕಪುರ  ಸೇರಿದಂತೆ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ರಸ್ತೆಗಳು, ನಾಯಂಡಹಳ್ಳಿ , ಗೊರಗುಂಟೆ ಪಾಳ್ಯ ಜಂಕ್ಷನ್

ಎಲ್ಲೆಲ್ಲಿ ಪ್ರತಿಭಟನೆ ಬಿಸಿ?

ಬೆಳಿಗ್ಗೆ 11 ಗಂಟೆಯಿಂದ ಪ್ರತಿಭಟನೆ, ಬೆಂಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಬಿಸಿ, ಮೈಸೂರು ಬ್ಯಾಂಕ್ ವೃತ್ತ ಬಳಿಯ ಎಲ್ಲ ರಸ್ತೆಗಳೂ ಬಂದ್​​, ಕಾಪೋರೇಷನ್, ಕೆ ಆರ್ ವೃತ್ತ, ಆನಂದ್ ರಾವ್, ಮೆಜೆಸ್ಟಿಕ್, ಮೌರ್ಯ ವೃತ್ತ, ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳು ​​​​ಬಂದ್​ ಆಗಲಿವೆ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳಲ್ಲಿಯೂ ತೀವ್ರ ಪ್ರತಿಭಟನೆ ನೆಡೆಯಲಿವೆ.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ್ ಕುಮಾರ್ ಕೂಡ ಸುದ್ದಿಗೋಷ್ಟಿ ನಡೆಸಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಐಕ್ಯ ಸಮಿತಿ ಜೊತೆ ನಾನು ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇನೆ ಎಂದರು.

ಇದನ್ನೂ ಓದಿ :  ಸರ್ಕಾರಿ ಗೌರವ ಹಾಗೂ ಲಿಂಗಾಯತ ವಿಧಿ ವಿಧಾನಗಳ ಅನ್ವಯ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಅನ್ನದಾತರು ರಾಜಧಾನಿಗೆ ಬಂದು ನಾಲ್ಕು ದಿನ ಕಳೆದಿದೆ. ಚಳುವಳಿದಾರರ ಜೊತೆ ಚರ್ಚೆ ಮಾಡುವ ಸೌಜನ್ಯ ಸರ್ಕಾರ ಮಾಡಿಲ್ಲಾ.‌ ಜನತಂತ್ರ ವ್ಯವಸ್ಥೆಗೆ, ರೈತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದ್ದು ಅನ್ನದಾತನ ರಕ್ಷಣೆಗಾಗಿ ಬೆಂಬಲ ಕೊಡಿ ಎಂದರು.

ಬಂದ್ ಗೂ ಮುನ್ನವೇ ರಾಜ್ಯದ ಅನ್ನದಾತರು ಪ್ರತಿಭಟನೆ ಹಾಗೂ ರಸ್ತೆ ತಡೆ ಮೂಲಕ  ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ನಾಳೆ ಪ್ರತಿಭಟನೆಯಿಂದ ಬೆಂಗಳೂರಿಗೆ ಟ್ರಾಫಿಕ್ ಬಿಸಿ ತಟ್ಟಿದ್ರೆ ಬೆಂಗಳೂರು ಸಂಪರ್ಕಿಸುವ ರಾಜ್ಯ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥವಾಗಲಿದೆ.
Published by:G Hareeshkumar
First published: