ಬೆಂಗಳೂರಲ್ಲಿ ಕ್ಯಾಬ್, ಬಿಎಂಟಿಸಿ​ ಸೇರಿದಂತೆ ಸರ್ಕಾರಿ ಬಸ್​ ಸೇವೆ ಇಲ್ಲ; ಶಾಲೆಗಳು ಬಹುತೇಕ ಬಂದ್

news18
Updated:September 9, 2018, 10:41 PM IST
ಬೆಂಗಳೂರಲ್ಲಿ ಕ್ಯಾಬ್, ಬಿಎಂಟಿಸಿ​ ಸೇರಿದಂತೆ ಸರ್ಕಾರಿ ಬಸ್​ ಸೇವೆ ಇಲ್ಲ; ಶಾಲೆಗಳು ಬಹುತೇಕ ಬಂದ್
news18
Updated: September 9, 2018, 10:41 PM IST
ನ್ಯೂಸ್​ 18 ಕನ್ನಡ

ಬೆಂಗಳೂರು: ಪೆಟ್ರೋಲ್​, ಡಿಸೇಲ್​ ಬೆಲೆ ಹೆಚ್ಚಳ ಹಿನ್ನಲೆ ಕಾಂಗ್ರೆಸ್​ ನೀಡಿರುವ ದೇಶದ್ಯಾಂತ ಬಂದ್​ಗೆ ನಮ್ಮ ಬೆಂಬಲವಿದೆ ಎಂದು  ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸೋಮವಾರದ ಬಂದ್​ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಪರಮೇಶ್ವರ್​, ದೇಶದ್ಯಾಂತ ಕಾಂಗ್ರೆಸ್​ ಕರೆ ನೀಡಿರುವ ಬಂದ್​ಗೆ ಜೆಡಿಎಸ್ ಕೂಡ ಬಂದ್ ಗೆ ಬೆಂಬಲ. ನೀಡಿದೆ, ಪೆಟ್ರೋಲ್ ಬೆಲೆ ಪದೇ ಪದೇ ಬೆಲೆ ಏರಿಕೆಯಾಗುತ್ತಿದ್ದು, ಜನಸಮಾನ್ಯರಿಗೆ ತೊಂದರೆಯಾಗುತ್ತಿದೆ ಹೀಗಾಗಿ ಬಂದ್ ಗೆ ನಮ್ಮ ಬೆಂಬಲವಿದೆ.

ಸರ್ಕಾರದಲ್ಲಿದ್ದರೂ ಜನಸಮಾನ್ಯರ ಒಳಿತಿಗಾಗಿ ಬಂದ್ ಗೆ ಬೆಂಬಲ ನೀಡುತ್ತಿದ್ದೇವೆ.  ರಾಜ್ಯ ಸರ್ಕಾರಕ್ಕೆ ಬರುವ ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡಲು ಆಗುವುದಿಲ್ಲ ಆದರೆ, ಕೇಂದ್ರ ಸರ್ಕಾರ ಪೆಟ್ರೋಲ್ ಡೀಸಲ್ ಕಡಿಮೆ ಮಾಡಲು ಸಾಧ್ಯ ಎಂದರು.

ಬಿಎಂಟಿಸಿ ಸೇವೆ ಇಲ್ಲ: ಬಂದ್​ಗೆ ಸರ್ಕಾರ ಬೆಂಬಲ ನೀಡಿದ ಹಿನ್ನಲೆ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ, ಈಶಾನ್ಯಸಾರಿಗೆ ಬಸ್​ಗಳು ಬೆಂಬಲ ನೀಡಿದ್ದು, ನಾಳೆ ಬೆಳಗ್ಗೆಯಿಂದ ಸಂಜೆವರೆಗೂ ರಸ್ತೆಗಳು ರಸ್ತೆಗೆ ಇಳಿಯುವುದಿಲ್ಲ.

ಆಟೋ, ಟ್ಯಾಕ್ಸಿ,ಕ್ಯಾಬ್​ ಕೂಡ ಬೆಂಬಲ: ಟ್ಯಾಕ್ಸಿ ಚಾಲಕರು ಕೂಡ ಬಂದ್​ಗೆ ಬೆಂಗಲ ನೀಡಿದ ಹಿನ್ನಲೆ ಓಲಾ, ಉಬರ್​ ಸೇರಿದಂತೆ ಅನೇಕ ಕ್ಯಾಬ್​, ಟ್ಯಾಕ್ಸಿ ಸೇವೆಗಳು ಕೂಡ ಇರುವುದಿಲ್ಲ. ಏರ್ಪೋರ್ಟ್ ಟ್ಯಾಕ್ಸಿ ಚಾಲಕರಿಂದ ಬಂದ್ ಗೆ ನಿರ್ಧಾರಿಸಿದ್ದು, ಪ್ರಯಾಣಿಕರು ಸಹಕರಿಸುವಂತೆ ಏರ್ಪೋರ್ಟ್ ಟ್ಯಾಕ್ಸಿ  ಚಾಲಕರ ಮನವಿ ಮಾಡಿದ್ದಾರೆ. ಆಟೋ ಸೇವೆ ಕೂಡ ಜನರಿಗೆ ಅಲಭ್ಯವಾಗಲಿದ್ದು, ಮೆಟ್ರೋ ಎಂದಿನಂತೆ ಓಡಾಟ ನಡೆಸಲಿದೆ.

ಖಾಸಗಿ ಶಾಲೆಗೆ ರಜೆ : ಬಂದ್​ ಹಿನ್ನಲೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಿದ್ದು, ನಾಳೆ ರಜೆ ನೀಡಿದ್ದು ಸೆ.15ರ ಶನಿವಾರದಂದು ಫುಲ್​ ಕ್ಲಾಸ್​ ನಡೆಸಲು ಕೆಲವು ಸಂಸ್ಥೆಗಳು ತೀರ್ಮಾನಿಸಿದೆ.

ಸರ್ಕಾರಿ ಶಾಲೆಗಳಿಗೆ ಬಂದ್​ ತೀವ್ರತೆ ಗಮನಿಸಿ ರಜೆ ಘೋಷಣೆ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಸಿ ಜಾಫರ್​ ತಿಳಿಸಿದ್ದಾರೆ.  ಅದರಂತೆ ಸರ್ಕಾರಿ ಪಿಯು ಕಾಲೇಜುಗಳು ಕಾರ್ಯ ನಿರ್ವಾಹಿಸುವಂತೆ ಬಂದ್​ ತೀವ್ರತೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿನಂತೆಯೇ ಕಾರ್ಯನಿರ್ವಹಿಸುವಂತೆ ಎಲ್ಲಾ ಜಿಲ್ಲೆಗಳ ಶಿಕ್ಷಣಾಧಿಕಾರಿಗಳಗೆ ಸೂಚನೆ ನೀಡಿರುವುದಾಗಿ ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.
Loading...

ನಾಳಿನ 'ಭಾರತ್ ಬಂದ್'​ಗೆ ರಾಜ್ಯದಲ್ಲಿ ಯಾರೆಲ್ಲರ ಬೆಂಬಲವಿದೆ; ಯಾವೆಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ?

ಕನ್ನಡ ಪರ ಸಂಘಟನೆಗಳ ಬೆಂಬಲ : ಕನ್ನಡಪರ ಸಂಘಟನೆಗಳು ಕೂಡ ಬಂದ್​ಗೆ ಬೆಂಬಲ ನೀಡಿದ್ದು, ನಾಳೆ ಈ ಕುರಿತು ಸಾಕೇಂತಿಕ ಪ್ರತಿಭಟನೆ ನಡೆಸಿ ಈ ಬಗ್ಗೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಪೊಲೀಸ್​ ಬಿಗಿ ಭದ್ರತೆ : ಬಂದ್​ ಹಿನ್ನಲೆಯಲ್ಲಿ ಮುಜಾಗ್ರತಾ ಕ್ರಮವಾಗಿ 30 ಕೆಎಸ್​ಆರ್​ಪಿಸಿ, 30 ಸಿಎಆರ್​​ ತುಕಡಿ, ಆಯಾ ಠಾಣಾ ವ್ತಾಪ್ತಿಯ ಹೊಯ್ಸಳ ಗಸ್ತು ತಿರುಗುವಂತೆ ಸೂಚನೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, 15 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...