Bharat Bandh: ರೈತರಿಂದ ನಾಳೆ ಹೆದ್ದಾರಿ ಬಂದ್, ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡಬೇಡಿ..!

ರೈತ ಪರ ಹೋರಾಟಗಾರ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲೂ ಬಂದ್ ಯಶಸ್ವಿಯಾಗಲಿದೆ. 250ಕ್ಕೂ ಹೆಚ್ಚು ಸಂಘಟನೆಗಳು ಬಂದ್​​ಗೆ ಬೆಂಬಲ ಸೂಚಿಸಿವೆ. ಬೆಂಗಳೂರಿನಲ್ಲಿ ಅಭೂತಪೂರ್ವವಾಗಿ ಬಂದ್ ಕಾರ್ಯ ನಡೆಯುತ್ತೆ. ದೂರದ ಪ್ರಯಾಣ ಬೆಳೆಸುವವರು ಒಂದು ದಿನ ಮುಂದೂಡಿ ಎಂದು ಮನವಿ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು(ಸೆ.26): ನಾಳೆ ದೂರ ದೂರದ ಊರಿಗೆ ಹೋಗುವ ಪ್ಲಾನ್ ಇದೆಯಾ..? ಹಾಗಾದರೆ ನೀವು ನಿಮ್ಮ ಯೋಜನೆಯನ್ನು ಮುಂದೂಡುವುದು ಒಳ್ಳೆಯದು. ಯಾಕೆಂದರೆ ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾದಿಂದ ಭಾರತ್ ಬಂದ್(Bharat Bandh) ಗೆ ಕರೆ ನೀಡಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ(Samyukta Kisan Morcha) ಕರೆಗೆ ಕರ್ನಾಟಕದ ರೈತರು ಬೆಂಬಲ ನೀಡುತ್ತಿದ್ದಾರೆ. ಮೋದಿ ಸರ್ಕಾರದ ಮೂರು ಕೃಷಿ ಮಸೂದೆಗಳ(Agri Laws) ವಿರುದ್ದ ಮತ್ತೆ ಅನ್ನದಾತರು ಸಮರ ಸಾರಿದ್ದಾರೆ.

    ಹಾಗಾದ್ರೆ ಸೋಮವಾರ ಕರ್ನಾಟಕದಲ್ಲಿ ಹೇಗಿರಲಿದೆ ಬಂದ್ ಅನ್ನೋದನ್ನ ನೋಡೋದಾದ್ರೆ,  ರೈತರ ಪರ ಸಂಘಟನೆಗಳಿಂದ ಪ್ರತಿಭಟನೆ, ಧರಣಿ, ಮೆರವಣಿಗೆ, ಹೆದ್ದಾರಿ ಬಂದ್ ಇರುತ್ತದೆ.  ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ ವರೆಗೆ ರೈತರಿಂದ ಬೃಹತ್ ಪ್ರತಿಭಟನೆ ರ್ಯಾಲಿ ನಡೆಯಲಿದೆ.

     ಏನಿರುತ್ತೆ..ಏನಿರಲ್ಲ..?

    • ಹಾಲು, ತರಕಾರಿ, ಮೆಡಿಕಲ್, ಆಸ್ಪತ್ರೆ, ಆ್ಯಂಬುಲೆನ್ಸ್, ಹೋಟೆಲ್- ಓಪನ್

    • ಕೆಎಸ್ಆರ್ಟಿಸಿ-ಇರುತ್ತೆ.

    • ಬಿಎಂಟಿಟಿ- ಇರುತ್ತೆ..

    • ಮೆಟ್ರೋ- ಇರುತ್ತೆ..

    • ಆಟೋ- ಇರುತ್ತೆ..

    • ಟ್ಯಾಕ್ಸಿ- ಇರುತ್ತೆ.

    • ಕ್ಯಾಬ್ - ಇರುತ್ತೆ.

    • ಬೀದಿ ವ್ಯಾಪಾರ- ಇರುತ್ತೆ.

    • ಶಾಲಾ ಕಾಲೇಜು ಇರುತ್ತೆ.

    • ಸರ್ಕಾರಿ ಕಚೇರಿ ಇರುತ್ತೆ.


    ಬಂದ್ ಗೆ ಯಾರೆಲ್ಲ ಬೆಂಬಲ..?

    ಇದನ್ನೂ ಓದಿ:Bharat Bandh: ನಾಳೆ ಭಾರತ್ ಬಂದ್, ಕರ್ನಾಟಕದಲ್ಲಿ ಬಂದ್​ ಯಶಸ್ವಿಯಾಗುತ್ತಾ? ಅಂದು ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ



    • ಸಂಯುಕ್ತ ಕಿಸಾನ್ ಮೋರ್ಚಾ

    • ರಾಜ್ಯ ರೈತ ಸಂಘ

    • ರಾಜ್ಯ ಹಸಿರು ಸೇನೆ

    • ರಾಜ್ಯ ಪ್ರಾಂತ ರೈತ ಸಂಘ

    • ರೈತ ಕಾರ್ಮಿಕ ಸಂಘ

    • ಅಖಿಲ ಭಾರತ್ ಕಿಸಾನ್ ಸಭಾ

    • ವಾಟಾಳ್ ನಾಗರಾಜ್ ಬೆಂಬಲ ನೀಡಲಿದ್ದಾರೆ.


    ಯಾರೆಲ್ಲಾ ನೈತಿಕ ಬೆಂಬಲ ನೀಡಲಿದ್ದಾರೆ?

    • ಕರವೇ ನಾರಾಯಣಗೌಡ ಬಣ ಬಂದ್​ಗೆ ನೈತಿಕ ಬೆಂಬಲ ನೀಡಲಿದೆ. ಹೋರಾಟಕ್ಕೆ ಮಾತ್ರ ಬೆಂಬಲ,  ಬಂದ್​​ಗೆ ಬೆಂಬಲವಿಲ್ಲ.

    • ಕೆಎಸ್ಆರ್ಟಿಸಿ ಬಿಎಂಟಿಸಿ ನೌಕರರ ಸಂಘ ನೈತಿಕ ಬೆಂಬಲ

    • ಆಟೋ ಊಬರ್ ಓಲಾ ಸಂಘಟನೆಗಳು ನೈತಿಕ ಬೆಂಬಲ

    • ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ

    • ಲಾರಿ ಮಾಲೀಕರ ಸಂಘ- ನೈತಿಕ ಬೆಂಬಲ

    • ರುಪ್ಸಾ, ಕ್ಯಾಮ್ಸ್ ಸಂಘಟನೆ - ನೈತಿಕ ಬೆಂಬಲ


    ಭಾರತ್ ಬಂದ್ ಬೆಂಬಲಿಸುವಂತೆ ರೈತ ಪರ ಸಂಘಟನೆಗಳು ಮನವಿ ಮಾಡಿವೆ.

    ಓಲಾ, ಊಬರ್ ಇರುತ್ತಾ?

    ಕೃಷಿ ಮಸೂದೆಗಳನ್ನ ಖಂಡಿಸಿ ರೈತರಿಂದ ನಾಳೆ ಭಾರತ್ ಬಂದ್ ಹಿನ್ನೆಲೆ, ಸೋಮವಾರ ಓಲಾ, ಊಬರ್ ಟ್ಯಾಕ್ಸಿ ಸೇವೆಗೆ ಅಡ್ಡಿಯಿಲ್ಲ. ಎಂದಿನಂತೆ ಓಲಾ ಊಬರ್ ಟ್ಯಾಕ್ಸಿ ಸೇವೆ ಇರಲಿದೆ. ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲಿದ್ದೇವೆ. ಓಲಾ ಊಬರ್ ಟ್ಯಾಕ್ಸಿ ಸೇವೆ ಎಂದಿನಂತೆ ಇರಲಿದೆ ಎಂದು ಓಲಾ ಊಬರ್ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್
    ಅಧ್ಯಕ್ಷ ತನ್ವೀರ್ ಷಾಷ ಮಾಹಿತಿ ನೀಡಿದ್ದಾರೆ.

    ಆಟೋ, ಟ್ಯಾಕ್ಸಿ ಇರುತ್ತಾ?

    ಇನ್ನು,  ಬೆಂಗಳೂರು ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ ನೈತಿಕ ಬೆಂಬಲ ನೀಡುತ್ತಿದೆ. ಆದರ್ಶ ಆಟೋ ಚಾಲಕರ ಸಂಘದಿಂದಲೂ ನೈತಿಕ ಬೆಂಬಲ ಸಿಗಲಿದೆ. ಆದರ್ಶ್ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ನೈತಿಕ ಬೆಂಬಲ ನೀಡಲಿದ್ದಾರೆ.

    ಬೀದಿಬದಿ ವ್ಯಾಪಾರಿಗಳ ನೈತಿಕ ಬೆಂಬಲ

    ಬೀದಿ ಬದಿ ವ್ಯಾಪಾರಿಗಳು  ಭಾರತ್ ಬಂದ್  ನೈತಿಕ ಬೆಂಬಲ ನೀಡಲಿದ್ದಾರೆ ಎಂದು  ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.

    ಮಾರುಕಟ್ಟೆ ಓಪನ್ ಇದೆಯಾ?

    ಸೋಮವಾರ ಎಂದಿನಂತೆ ಎಪಿಎಂಸಿ ಮಾರುಕಟ್ಟೆ ಓಪನ್ ಇರಲಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆ ಎಂದಿನಂತೆ ಓಪನ್ ಇರಲಿದೆ ಎಂದು ಯಶವಂತಪುರ ಎಪಿಎಂಸಿ ಕಾರ್ಮಿಕ ಸಂಘದ ಅಧ್ಯಕ್ಷ ಅರುಣ್ ಪರಮೇಶ್ ಮಾಹಿತಿ ನೀಡಿದ್ದಾರೆ.

    ಲಾರಿ ಸಂಚಾರ ಇರುತ್ತಾ?

    ರಾಜ್ಯದಲ್ಲಿ ಸೋಮವಾರ ಎಂದಿನಂತೆ ಲಾರಿಗಳು ಸಂಚಾರ ಮಾಡಲಿವೆ. ಲಾರಿ ಸಂಚಾರದಲ್ಲಿ ಸೋಮವಾರ ಯಾವುದೇ ವ್ಯತ್ಯಯ ಇಲ್ಲ. ಎಂದಿನಂತೆ ಲಾರಿ ರಾಜ್ಯಾದ್ಯಂತ ಓಡಾಟ ನಡೆಸಲಿವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಆಧ್ಯಕ್ಷ ಷಣ್ಮಗಪ್ಪ ಮಾಹಿತಿ ನೀಡಿದ್ದಾರೆ.

    ಹೋಟೆಲ್ ಓಪನ್ ಇರುತ್ತಾ?

    ರಾಜ್ಯದಲ್ಲಿ ಎಂದಿನಂತೆ ಹೋಟೆಲ್ ಮತ್ತು ರೆಸ್ಟೋರೆಂಟ್ ಸೇವೆ ಇರುತ್ತೆ. ಭಾರತ್ ಬಂದ್​​ಗೆ ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳು ನೈತಿಕ ಬೆಂಬಲ ನೀಡಿವೆ.  ಹೋಟೆಲ್ ಹಾಗೂ ರೆಸ್ಟೋರೆಂಟ್ ಮುಚ್ಚಿದ್ರೆ ತೊಂದರೆ ಆಗುತ್ತೆ. ಸೋಮವಾರ ರಾಜ್ಯಾದ್ಯಂತ ಹೋಟೆಲ್ ಹಾಗೂ ರೆಸ್ಟೋರೆಂಟ್ ಓಪನ್ ಇರುತ್ತೆ ಎಂದು ಕರ್ನಾಟಕ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಮಾಹಿತಿ ನೀಡಿದ್ದಾರೆ. ಕೊರೋನಾದಿಂದ ಸಂಕಷ್ಟದಲ್ಲಿದ್ದೇವೆ. ಹೀಗಿರುವಾಗ ಹೋಟೆಲ್ ಮುಚ್ಚಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಶಾಲಾ-ಕಾಲೇಜು ಓಪನ್ ಇರುತ್ತಾ?

    ಒಂದೂವರೆ ವರುಷದಿಂದ ಶಾಲಾ-ಕಾಲೇಜು ತೆರೆದಿಲ್ಲ. ಇದೀಗ ಶಾಲಾಕಾಲೇಜು ಆರಂಭವಾಗಿವೆ. ಭಾರತ್ ಬಂದ್ ಗೆ ನೈತಿಕ‌ ಬೆಂಬಲ ನೀಡಲಾಗುವುದು. ಎಂದಿನಂತೆ ಶಾಲಾ-ಕಾಲೇಜು ಓಪನ್ ಇರಲಿದೆ ಎಂದು ರುಪ್ಸಾ ಹಾಗೂ ಕ್ಯಾಮ್ಸ್ ಖಾಸಗಿ ಶಾಲಾ ಸಂಘಟನೆಗಳು ಸ್ಪಷ್ಟನೆ ನೀಡಿದೆ.

    ನಾಳೆ ರೈತ ನಾಯಕರು ಹೆದ್ದಾರಿ ತಡೆ ಕಾರ್ಯಕ್ರಮವನ್ನೂ  ಹಮ್ಮಿಕೊಂಡಿದ್ದಾರೆ.

    ಬೆಂಗಳೂರಿನ ಯಾವೆಲ್ಲಾ ರಸ್ತೆಗಳು ಬಂದ್?

    • ಹಳೆ ಮದ್ರಾಸ್ ರೋಡ್ ಲಾಕ್

    • ಬೆಂಗಳೂರು-ಮೈಸೂರು ರೋಡ್

    • ಬಿಡದಿ ಮತ್ತು ಮಂಡ್ಯ ಬಳಿ ರಸ್ತೆ ತಡೆಗೆ ನಿರ್ಧಾರ.

    • ಬೆಂಗಳೂರು - ಗೋವಾ ( ರಾಷ್ಟ್ರೀಯ ಹೆದ್ದಾರಿ)

    • ಬೆಂಗಳೂರು - ಹೈದರಾಬಾದ್ (ರಾಷ್ಟ್ರೀಯ ಹೆದ್ದಾರಿ)

    • ಬೆಂಗಳೂರು - ಚೆನ್ನೈ (ರಾಷ್ಟ್ರೀಯ ಹೆದ್ದಾರಿ)

    • ಬೆಂಗಳೂರು - ಮೈಸೂರು ರೋಡ್( ರಾಜ್ಯ ಹೆದ್ದಾರಿ)

    • ಬೆಂಗಳೂರು - ಚಾಮರಾಜನಗರ( ರಾಜ್ಯ ಹೆದ್ದಾರಿ)

    • ಬೆಂಗಳೂರು - ಮಾಗಡಿ ರೋಡ್ ( ರಾಜ್ಯ ಹೆದ್ದಾರಿ)

    • ಬೆಂಗಳೂರು - ಶಿವಮೊಗ್ಗ ( ರಾಜ್ಯ ಹೆದ್ದಾರಿ)

    • ಬೆಂಗಳೂರು - ದೊಡ್ಡಬಳ್ಳಾಪುರ ( ರಾಜ್ಯ ಹೆದ್ದಾರಿ)


    ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಆಗುವ ಸಾಧ್ಯತೆ ಇರುತ್ತದದೆ. ಆ ಭಾಗದ ರೈತರನ್ನ ಒಟ್ಟಿಗೆ ಸೇರಿಸಿ ಬಂದ್ ಮಾಡುವ ಸಾಧ್ಯತೆ ಇದೆ.

    ನಾಳೆ ಭಾರತ್ ಬಂದ್ ಹಿನ್ನೆಲೆ,  ರೈತ ಪರ ಹೋರಾಟಗಾರ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲೂ ಬಂದ್ ಯಶಸ್ವಿಯಾಗಲಿದೆ. 250ಕ್ಕೂ ಹೆಚ್ಚು ಸಂಘಟನೆಗಳು ಬಂದ್​​ಗೆ ಬೆಂಬಲ ಸೂಚಿಸಿವೆ. ಬೆಂಗಳೂರಿನಲ್ಲಿ ಅಭೂತಪೂರ್ವವಾಗಿ ಬಂದ್ ಕಾರ್ಯ ನಡೆಯುತ್ತೆ. ದೂರದ ಪ್ರಯಾಣ ಬೆಳೆಸುವವರು ಒಂದು ದಿನ ಮುಂದೂಡಿ ಎಂದು ಮನವಿ ಮಾಡಿದ್ದಾರೆ.

    ಬಂದ್ ಇರೋ ಕಾರಣ ಪ್ರಯಾಣಿಕರಿಗೆ ತೊಂದರೆ ಆಗಬಹುದು. ಹೀಗಾಗಿ ದೂರದ ಪ್ರಯಾಣ ಇದ್ದವರು ಸೋಮವಾರ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದಾರೆ. ರಾಜ್ಯದ ವಕೀಲರಿಗೂ ಮನವಿ ಮಾಡಲಾಗಿದೆ. ನೈತಿಕ ಬೆಂಬಲ‌ ನೀಡಿರುವ ವಕೀಲರು ನಾಳೆ‌ ಒಂದು ದಿನ ನಿಮ್ಮ ಕೆಲಸವನ್ನ ಮುಂದೂಡಿ. ನೀವು ರೈತಾಪಿ ವರ್ಗದಿಂದಲೇ ಬಂದಿರೋ‌ ಕಾರಣ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿ ಎಂದು ಭಾರತ್ ಬಂದ್ ಸಂಬಂಧ ವಕೀಲರಿಗೆ ಬಡಗಲಪುರ ನಾಗೇಂದ್ರ ಕೋರಿದ್ದಾರೆ.
    Published by:Latha CG
    First published: