Bharat Bandh: ನಾಳೆ ಭಾರತ್ ಬಂದ್, ಕರ್ನಾಟಕದಲ್ಲಿ ಬಂದ್​ ಯಶಸ್ವಿಯಾಗುತ್ತಾ? ಅಂದು ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

ಮೈಸೂರಿನಲ್ಲೂ ಭಾರತ್ ಬಂದ್ ಯಶಸ್ವಿಗೊಳಿಸಲು ನಿರ್ಧಾರ ಮಾಡಲಾಗಿದೆ. ನಾಗರೀಕರು ನಾಳಿನ ಬಂದ್​ಗೆ ಬೆಂಬಲ ಸೂಚಿಸುವಂತೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಮನವಿ ಮಾಡುತ್ತಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಸೆ.26): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ(Agri Laws) ವಿರುದ್ಧ  ರೈತಪರ ಸಂಘಟನೆಗಳು(Farmers Associations) ಮತ್ತೆ  ಸಿಡಿದೆದ್ದಿದ್ದು,  ನಾಳೆ ಅಂದರೆ ಸೆ.27ರಂದು ಭಾರತ್​ ಬಂದ್​ಗೆ(Bharat Bandh) ಕರೆ ನೀಡಿವೆ. ಹೀಗಾಗಿ ಕೆಲವು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಸೋಮವಾರ ಭಾರತ್ ಬಂದ್​​ಗೆ ಕರೆ ನೀಡಿರುವ ಹಿನ್ನೆಲೆ, ಕರ್ನಾಟಕ(Karnataka Bandh)ವೂ ಬಹುತೇಕ ಬಂದ್ ಆಗುವ ನಿರೀಕ್ಷೆ ಇದೆ. ಸಂಯುಕ್ತ ಕಿಸಾನ್ ಮೋರ್ಚಾ(Samyuktha Kisan Morcha) ಭಾರತ್ ಬಂದ್​ಗೆ ಕರೆ ಕೊಟ್ಟಿದ್ದು, ಇನ್ನೂ ಹಲವು ಸಂಘಟನೆಗಳು ಬೆಂಬಲ ನೀಡಿವೆ. ದೇಶಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳು ಭಾರತ್​ ಬಂದ್​ಗೆ ಬೆಂಬಲ ನೀಡಲಿವೆ.

  ಕರ್ನಾಟಕ ಬಂದ್​​ಗೆ ಕಬ್ಬು ಬೆಳೆಗಾರರ ಸಂಘ, ರೈತ ಸಂಘ, ಹಸಿರು ಸೇನೆ ಸೇರಿ ಕೆಲ ಸಂಘಟನೆಗಳು ಬೆಂಬಲ ನೀಡಲಿವೆ.  ಬಂದ್​​​ ಇದ್ರೂ ಕರ್ನಾಟಕದಲ್ಲಿ ಎಲ್ಲವೂ ಯಥಾಸ್ಥಿತಿ ಇರುವ ಸಾಧ್ಯತೆ ಇದೆ. ಬಹುತೇಕ ಸಂಘಟನೆಗಳು ಬಂದ್​ಗೆ ನೈತಿಕ ಬೆಂಬಲ ನೀಡಲಿವೆ. ನೈತಿಕ ಬೆಂಬಲ ನೀಡುತ್ತೇವೆ, ಆದ್ರೆ ಅಂಗಡಿ ಮುಂಗಟ್ಟು ಬಂದ್​ ಮಾಡಲ್ಲ ಎಂದು ಹೇಳುತ್ತಿದ್ದಾರೆ.

  ಬಂದ್​​ಗೆ ಯಾರೆಲ್ಲಾ ಬೆಂಬಲ ನೀಡ್ತಿದಾರೆ?

  KSRTC, BMTC ಸಂಚಾರ ಇರುತ್ತೆ, ನೈತಿಕ ಬೆಂಬಲ ಮಾತ್ರ ನೀಡುತ್ತಿವೆ. ಅದೇ ರೀತಿ ಆಟೋ, ಊಬರ್, ಓಲಾ ಸಂಘಟನೆಗಳೂ ಸಹ ನೈತಿಕ ಬೆಂಬಲ ನೀಡಲಿವೆ. ರಾಜ್ಯ ಹೋಟೆಲ್ ಮಾಲೀಕರ ಸಂಘ ನಾಳೆ ತೀರ್ಮಾನ ಮಾಡಿ ಬೆಂಬಲ ನೀಡುವ ಬಗ್ಗೆ ತಿಳಿಸಲಿದೆ. ಇನ್ನು ಲಾರಿ ಮಾಲೀಕರು, ಮಾರ್ಕೆಟ್ ವರ್ತಕರ ಸಂಘವೂ ಸಹ ಬಂದ್​ಗೆ ನೈತಿಕ ಬೆಂಬಲ ನೀಡಲಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಈ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ.

  ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಸೋಮವಾರ (ಸೆ.27) ಕರ್ನಾಟಕದಲ್ಲಿ ಏನಿರುತ್ತೆ, ಏನಿರಲ್ಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.  ಏನಿರುತ್ತೆ? ಏನಿರಲ್ಲ?

  KSRTC - ಇರುತ್ತೆ

  BMTC - ಇರುತ್ತೆ

  ಮೆಟ್ರೋ - ಇರುತ್ತೆ

  ಆಟೋ - ಇರುತ್ತೆ

  ಟ್ಯಾಕ್ಸಿ - ಇರುತ್ತೆ

  ಕ್ಯಾಬ್​​ - ಇರುತ್ತೆ

  ಹೋಟೆಲ್​ - ಇರುತ್ತೆ

  ಬೀದಿಬದಿ ವ್ಯಾಪಾರ - ಇರುತ್ತೆ

  ಶಾಲಾ-ಕಾಲೇಜು - ಇರುತ್ತೆ

  ನೈತಿಕ ಬೆಂಬಲ ಯಾರದ್ದು?

  ಸಂಯುಕ್ತ ಕಿಸಾನ್​ ಮೋರ್ಚಾ - ನೈತಿಕ ಬೆಂಬಲ
  ರಾಜ್ಯ ರೈತ ಸಂಘ - ನೈತಿಕ ಬೆಂಬಲ
  ರಾಜ್ಯ ಹಸಿರು ಸೇನೆ - ನೈತಿಕ ಬೆಂಬಲ
  ರಾಜ್ಯ ಪ್ರಾಂತ ರೈತ ಸಂಘ - ನೈತಿಕ ಬೆಂಬಲ
  ರೈತ ಕಾರ್ಮಿಕರ ಸಂಘ - ನೈತಿಕ ಬೆಂಬಲ
  ಅಖಿಲ ಭಾರತ್​ ಕಿಸಾನ್​ ಸಭಾ - ನೈತಿಕ ಬೆಂಬಲ
  ಆಟೋ ಮಾಲೀಕರು - ನೈತಿಕ ಬೆಂಬಲ
  ಕ್ಯಾಬ್ ಚಾಲಕರ ಸಂಘ - ನೈತಿಕ ಬೆಂಬಲ
  ಬ್ಯಾಂಕ್ ಒಕ್ಕೂಟ - ನೈತಿಕ ಬೆಂಬಲ

  ಮೈಸೂರಿನಲ್ಲೂ ಬಂದ್​​ ಯಶಸ್ವಿಗೆ ಯತ್ನ

  ರಾಜ್ಯದ ಹಲವೆಡೆ ಭಾರತ್​ ಬಂದ್​ ಯಶಸ್ವಿಗೊಳಿಸಲು ರೈತಪರ ಸಂಘಟನೆಗಳು ನಿರ್ಧಾರ ಮಾಡಿವೆ.  ಕೇಂದ್ರದ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್​ಗೆ ಕರೆ ನೀಡಿವೆ. ಮೈಸೂರಿನಲ್ಲೂ ಭಾರತ್ ಬಂದ್ ಯಶಸ್ವಿಗೊಳಿಸಲು ನಿರ್ಧಾರ ಮಾಡಲಾಗಿದೆ. ನಾಗರೀಕರು ನಾಳಿನ ಬಂದ್​ಗೆ ಬೆಂಬಲ ಸೂಚಿಸುವಂತೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಮನವಿ ಮಾಡುತ್ತಿವೆ. ವ್ಯಾಪಾರಸ್ಥರು, ಕಾರ್ಮಿಕರು, ಆಟೋ ಚಾಲಕರು, ಸೇರಿದಂತೆ ಎಲ್ಲರೂ ಸ್ವಯಂಪ್ರೇರಿತವಾಗಿ ಬಂದ್‌ ಬೆಂಬಲಿಸಲಿದ್ದಾರೆ.

  ನಿನ್ನೆಯಷ್ಟೇ ರೈತರು ಚಡ್ಡಿ ಮೆರವಣಿಗೆ ಮಾಡಿ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಕಾರ್ಮಿಕ ಸಂಘಟನೆಗಳು  ಬಂದ್ ಬೆಂಬಲಿಸುವಂತೆ ನಗರದ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿದ್ದಾರೆ. ಮತ್ತೊಂದೆಡೆ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ, ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಹೋಟೆಲ್ ಮಾಲೀಕರ ಸಂಘ ಹೇಳಿದೆ. ಬಂದ್‌ಗೆ ಕರೆ ನೀಡಿರುವ ಹಿನ್ನಲೆ, ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
  Published by:Latha CG
  First published: