ಇಂದು, ನಾಳೆ ಭಾರತ್ ಬಂದ್​​; ಬೆಂಗಳೂರಿಗೆ ತಟ್ಟಿದ ಬಿಸಿ, ಕೆಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ

ರಾಜ್ಯದಲ್ಲಿ ಕೆಲವೆಡೆ ಬಸ್​ ಸಂಚಾರ ಸ್ಥಗಿತಗೊಂಡಿದ್ದು,  ಎಂದಿನಂತೆ ಆಟೋ, ಕ್ಯಾಬ್ ಸಂಚಾರ ಇರಲಿದೆ. ಎಐಟಿಯುಸಿ, ಸಿಐಟಿಯು ಬೆಂಬಲಿತ ಆಟೋ ಸಂಘಟನೆಗಳಿಂದ ಬಂದ್​ಗೆ ಬೆಂಬಲ ಘೋಷಿಸಲಾಗಿದೆ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಜನಜೀವನ ಎಂದಿನಂತಿದೆ.

sushma chakre | news18
Updated:January 8, 2019, 8:21 AM IST
ಇಂದು, ನಾಳೆ ಭಾರತ್ ಬಂದ್​​; ಬೆಂಗಳೂರಿಗೆ ತಟ್ಟಿದ ಬಿಸಿ, ಕೆಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ
ಸಾಂದರ್ಭಿಕ ಚಿತ್ರ
sushma chakre | news18
Updated: January 8, 2019, 8:21 AM IST
ಬೆಂಗಳೂರು (ಜ. 8): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಇಂದಿನಿಂದ 2 ದಿನಗಳ ಕಾಲ ಭಾರತ್ ಬಂದ್​ಗೆ  ಕರೆ ನೀಡಿವೆ. ಇಂದು ಮುಂಜಾನೆಯಿಂದಲೇ ಕೆಲವೆಡೆ ಬಂದ್​ನ ಬಿಸಿ ತಟ್ಟಿದ್ದು, ಇನ್ನು ಕೆಲವೆಡೆ ಪರಿಸ್ಥಿತಿ ಮಾಮೂಲಿನಂತಿದೆ.

ಇಂದು ಕೆಎಸ್​ಆರ್​ಟಿಸಿ ಬಸ್​ ಸಂಚಾರ ಸ್ಥಗಿತಗೊಳ್ಳಲಿದ್ದು, ಕೆಲವು ಭಾಗಗಳಿಗೆ ಬಿಎಂಟಿಸಿ ಬಸ್​ಗಳು ಸಂಚಾರ ಮಾಡುತ್ತಿವೆ. ಪ್ರತಿಭಟನೆಯ ಬಿಸಿ ಹೆಚ್ಚಾಗಿ ತಟ್ಟದ ಮಾರ್ಗಗಳಲ್ಲಿ ಬೆಳಗಿನ ಜಾವ ಬಿಎಂಟಿಸಿ ಬಸ್​ಗಳು ಸಂಚರಿಸುತ್ತಿವೆ. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಕಲಾಸಿಪಾಳ್ಯ, ಯಶವಂತಪುರ, ಮೈಸೂರು ರಸ್ತೆ ಭಾಗದಲ್ಲಿ ಬಸ್​ ಸಂಚಾರ ಸ್ತಬ್ಧವಾಗಿದೆ. ಮೆಜೆಸ್ಟಿಕ್​, ಉತ್ತರಹಳ್ಳಿ, ಜಯನಗರ, ಬಸವನಗುಡಿ ಕಡೆಗಳಿಗೆ ತೆರಳುವ ಬಸ್​ಗಳು ಎಂದಿನಂತೆ ಸಂಚಾರ ಮಾಡುತ್ತಿವೆ. ಹಾಗೇ,  ಇಂದು ಮತ್ತು ನಾಳೆ ಬ್ಯಾಂಕ್​ಗಳು ಮುಚ್ಚಿರುತ್ತವೆ.

ಇದನ್ನೂ ಓದಿ:  ಭಾರತ್​ ಬಂದ್​: ಮನೆಯಿಂದ ಹೊರಬರುವ ಮೊದಲು ಏನಿದೆ,ಏನಿಲ್ಲ ಎಂಬುದನ್ನೊಮ್ಮೆ ಓದಿಬಿಡಿ

ಎಪಿಎಂಸಿಯಲ್ಲಿ ಎಂದಿನಂತೆ ವ್ಯಾಪಾರ:

ಯಶವಂತಪುರದ ಎಪಿಎಂಸಿಯಿಂದ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿಲ್ಲ. ಹೂವು, ತರಕಾರಿಗಳು ಕೊಳೆತು ಹೋಗುವ ಕಾರಣ ಸಾಕಷ್ಟು ನಷ್ಟವಾಗುತ್ತದೆ. ಬೇರೆ ಜಿಲ್ಲೆಗಳು, ರಾಜ್ಯಗಳಿಂದ ಜನರು ತರಕಾರಿ, ಹಣ್ಣು, ಹೂವುಗಳನ್ನು ತರುತ್ತಿದ್ದಾರೆ. ಹೀಗಾಗಿ ನಾವು ಪ್ರತಿಭಟನೆಗೆ ಬೆಂಬಲ ಸೂಚಿಸಿಲ್ಲ ಎಂದು ಎಪಿಎಂಸಿ ವರ್ತಕ ಮಲ್ಲೇಶ್​ ನ್ಯೂಸ್​18 ಕನ್ನಡಕ್ಕೆ ತಿಳಿಸಿದ್ದಾರೆ.

ಬಂದ್​ ಇರುವುದರಿಂದ ಇಂದು ಹಲವೆಡೆ ಇಂದಿರಾ ಕ್ಯಾಂಟೀನ್​ಗಳಲ್ಲಿ ವ್ಯಾಪಾರ ತೀವ್ರ ಇಳಿಮುಖವಾಗಿದೆ. ಮಾರ್ಕೆಟ್​, ಮೆಜೆಸ್ಟಿಕ್​ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್​ನಲ್ಲಿ ಬೆಳಗ್ಗೆಯಿಂದ ಪ್ರತಿದಿನ ಸಾಲಿನಲ್ಲಿ ನಿಂತು ಟೋಕನ್ ತೆಗೆದುಕೊಳ್ಳುತ್ತಿದ್ದರು. ಆದರೆ, ಇಂದು ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಜನಜೀವನ ಎಂದಿನಂತಿದೆ. ಇಲ್ಲಿ ಬಸ್​ಗಳೂ ಸಂಚರಿಸುತ್ತಿದ್ದು, ಅಂಗಡಿ-ಮುಂಗಟ್ಟುಗಳು ತೆರೆಯಲಾರಂಭಿಸಿವೆ.

ಇದನ್ನೂ ಓದಿ: ಭಾರತ್ ಬಂದ್: ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Loading...

ಬೆಳಗ್ಗೆಯಿಂದ ಕೆಲವು ಪ್ರದೇಶಗಳಲ್ಲಿ ಬಸ್​ ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ಭಾರೀ ಕಡಿಮೆಯಿದೆ. ಒಂದುವೇಳೆ ಪ್ರತಿಭಟನೆಯ ಕಾವು ಹೆಚ್ಚಾದರೆ ಮಧ್ಯದಲ್ಲೇ ಸಿಲುಕಿಕೊಳ್ಳಬೇಕಾದೀತು ಎಂಬ ಭಯದಿಂದ ಯಾರೂ ಬಸ್​ಗಳಲ್ಲಿ ಸಂಚರಿಸುತ್ತಿಲ್ಲ. ಹಾಗೇ, ಇಂದು ಶಾಲಾ-ಕಾಲೇಜು ಮತ್ತು ಆಫೀಸ್​ಗಳಿಗೆ ರಜೆ ಘೋಷಿಸಿರುವುದರಿಂದ ಬಸ್​ನಲ್ಲಿ ಸಂಚರಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಮಲ್ಲೇಶ್ವರದಲ್ಲಿ ಕಲ್ಲು ತೂರಾಟ:

ಭಾರತ್ ಬಂದ್ ಹಿನ್ನಲೆ ಮಲ್ಲೇಶ್ವರದಲ್ಲಿ‌ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬೈಕ್​ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಪೀಣ್ಯದಿಂದ ಮೆಜೆಸ್ಟಿಕ್ ಗೆ ಬರುತ್ತಿದ್ದ ಬಸ್​ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ, ಪ್ರಯಾಣಿಕರನ್ನು ಅರ್ಧ ಧಾರಿಯಲ್ಲೇ ಇಳಿಸಲಾಗಿದೆ. ಬಸವೇಶ್ವರನಗರದಿಂದ ಮೆಜೆಸ್ಟಿಕ್​ಗೆ ಬರುತ್ತಿದ್ದ ಬಸ್​ ಕಿಟಕಿಗೆ ಕಲ್ಲು ಹೊಡೆದು ಒಡೆದುಹಾಕಿರುವ ಘಟನೆ ಕೃಷ್ಣ ಫ್ಲೋರ್​ ಮಿಲ್​ ಬಳಿ ನಡೆದಿದೆ.

ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ:

ಎರಡು ದಿನಗಳ ಕಾಲ ನಡೆಯುವ ಭಾರತ್ ಬಂದ್​ಗೆ ಬಳ್ಳಾರಿಯಲ್ಲಿ  ಭಾರೀ ಬೆಂಬಲ ಸೂಚಿಸಲಾಗಿದೆ. ಸರಕಾರಿ ಶಾಲಾಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಪರ್ಯಾಯವಾಗಿ ಶನಿವಾರ ತರಗತಿ ತೆಗೆದುಕೊಳ್ಳುವಂತೆ ಡಿಸಿ ಡಾ ರಾಮ್ ಪ್ರಸಾತ್ ಸೂಚನೆ ನೀಡಿದ್ದಾರೆ. ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ಮುಷ್ಕರಕ್ಕೆ ಆಟೋ, ಕ್ಯಾಬ್ ಸಂಘಟನೆ ಬೆಂಬಲ ನೀಡಿದ್ದು, ಸರಕಾರಿ, ಖಾಸಗಿ ಆಸ್ಪತ್ರೆ ಸೇವೆ, ಹೋಟೆಲ್​ಗಳು ಎಂದಿನಂತೆ ಇರಲಿದೆ.

ಇದನ್ನೂ ಓದಿ: ಭಾರತ್ ಬಂದ್ : ರಸ್ತೆಗಿಳಿಯದ ಬಿಎಂಟಿಸಿ : ಕೆಎಸ್​ಆರ್​ಟಿಸಿ - ರಾಜ್ಯಾದ್ಯಂತ ಸಾಂಕೇತಿಕ ಬೆಂಬಲ

ವಿಜಯಪುರದಲ್ಲೂ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ. ಆದರೆ, ಶಾಲಾ-ಕಾಲೇಜುಳಿಗೆ ರಜೆ ಘೋಷಿಸಲಾಗಿಲ್ಲ.  ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಗದಗ, ಧಾರವಾಡ, ಮಂಡ್ಯ , ರಾಮನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಉತ್ತರಕನ್ನಡ, ರಾಯಚೂರು, ಚಿತ್ರದುರ್ಗ, ಹುಬ್ಬಳ್ಳಿ, ದಕ್ಷಿಣಕನ್ನಡ, ಉಡುಪಿ, ಕಲಬುರ್ಗಿ, ಬೀದರ್, ಮಂಡ್ಯ, ಬಾಗಲಕೋಟೆ, ಬೆಳಗಾವಿ, ಯಾದಗಿರಿಯಲ್ಲಿ ಬಂದ್​ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಶಾಲಾ-ಕಾಲೇಜುಗಳಿಗೆರಜೆ ಘೋಷಿಸಿ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಇನ್ನು, ರಾಜ್ಯದಲ್ಲಿ ಕೆಲವೆಡೆ ಬಸ್​ ಸಂಚಾರ ಸ್ಥಗಿತಗೊಂಡಿದ್ದು,  ಎಂದಿನಂತೆ ಆಟೋ, ಕ್ಯಾಬ್ ಸಂಚಾರ ಇರಲಿದೆ. ಎಐಟಿಯುಸಿ, ಸಿಐಟಿಯು ಬೆಂಬಲಿತ ಆಟೋ ಸಂಘಟನೆಗಳಿಂದ ಬಂದ್​ಗೆ ಬೆಂಬಲ ಘೋಷಿಸಲಾಗಿದೆ. ಏರ್​​ಪೋರ್ಟ್​ ಟ್ಯಾಕ್ಸಿಗಳ ಸಂಚಾರಕ್ಕೂ ತಡೆ ನೀಡಲಾಗಿಲ್ಲ.

 

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ