Bharat Bandh: ರಾಜ್ಯಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತ್​ ವಹಿಸಲು ಡಿಜಿಪಿ ಆದೇಶ

ಎರಡು ದಿನ ರಾಜ್ಯಾದ್ಯಂತ ಬಂದ್​ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಡಿಜಿಪಿ ನೀಲಮಣಿ ರಾಜು ಎಲ್ಲ ಪೊಲೀಸ್​ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

sushma chakre | news18
Updated:January 8, 2019, 10:17 AM IST
Bharat Bandh: ರಾಜ್ಯಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತ್​ ವಹಿಸಲು ಡಿಜಿಪಿ ಆದೇಶ
ಪ್ರಾತಿನಿಧಿಕ ಚಿತ್ರ
sushma chakre | news18
Updated: January 8, 2019, 10:17 AM IST
ಮುನಿರಾಜು

ಬೆಂಗಳೂರು (ಜ.8): ಎರಡು ದಿನ ರಾಜ್ಯಾದ್ಯಂತ ಬಂದ್​ ಇರುವುದರಿಂದ ಬಿಗಿ ಬಂದೋಬಸ್ತ್ ಒದಗಿಸುವಂತೆ ಡಿಜಿಪಿ ನೀಲಮಣಿ ರಾಜು ಪೊಲೀಸ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳು, ಪಟ್ಟಣಗಳಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಬಂದೋಬಸ್ತ್​ಗಾಗಿ 54 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ನಗರ ಸಶಸ್ತ್ರ ಮೀಸಲು‌ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಭಾರತ್ ಬಂದ್ : ರಸ್ತೆಗಿಳಿಯದ ಬಿಎಂಟಿಸಿ : ಕೆಎಸ್​ಆರ್​ಟಿಸಿ - ರಾಜ್ಯಾದ್ಯಂತ ಸಾಂಕೇತಿಕ ಬೆಂಬಲ

ಎರಡು ದಿನಗಳ ಬಂದ್​ ಘೋಷಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಭಾರೀ ಬಂದೋಬಸ್ತ್​ ಕಲ್ಪಿಸಲಾಗಿದ್ದು, ಭದ್ರತೆಗಾಗಿ 15 ಡಿಸಿಪಿ, 31 ಎಸಿಪಿ, 143 ಇನ್​ಸ್ಪೆಕ್ಟರ್, 354 ಎಸ್ಐ, ಸೇರಿ 10 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. 30 ಕೆ ಎಸ್ ಆರ್ ಪಿ ತುಕಡಿ, 30 ಸಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ. 900 ಗೃಹ ರಕ್ಷಕ ದಳ, 270 ಹೊಯ್ಸಳ, 1300 ಚೀತಾ ಬೈಕ್, ಪೊಲೀಸರ ನಿಯೋಜನೆ ಮಾಡಲಾಗಿದೆ. ಆಯಾ ವಿಭಾಗಗಳಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದ್ದು, ಕಿಡಿಗೇಡಿಗಳು ತೊಂದರೆ ನೀಡಿದಲ್ಲಿ ಅವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಭಾರತ್​ ಬಂದ್​: ಮನೆಯಿಂದ ಹೊರಬರುವ ಮೊದಲು ಏನಿದೆ,ಏನಿಲ್ಲ ಎಂಬುದನ್ನೊಮ್ಮೆ ಓದಿಬಿಡಿ

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಜಿಲ್ಲೆಗಳ ಎಸ್​ಪಿ, ವಲಯ ಐಜಿಪಿಗಳು, ಕಮೀಷನರೇಟ್​ಗಳಿಗೆ ಡಿಜಿಪಿ ನೀಲಮಣಿ ರಾಜು ಆದೇಶ ನೀಡಿದ್ದಾರೆ. ಹಾಗೇ, ಬಲವಂತವಾಗಿ ಬಂದ್ ಮಾಡುವುದು, ಬಂದ್ ವೇಳೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್​ ಇಲಾಖೆ ಸೂಚಿಸಿದೆ.
Loading...

 

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ