ಭಾರತ್​ ಬಂದ್​: ಮನೆಯಿಂದ ಹೊರಬರುವ ಮೊದಲು ಏನಿದೆ, ಏನಿಲ್ಲ ಎಂಬುದನ್ನೊಮ್ಮೆ ಓದಿಬಿಡಿ

ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್​ ಆಗಲಿದೆ. ಹಾಗಾಗಿ ಇಂದು ನಡೆವ ಬಂದ್​ನಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಲಿದೆ.

Rajesh Duggumane | news18
Updated:January 8, 2019, 9:23 AM IST
ಭಾರತ್​ ಬಂದ್​: ಮನೆಯಿಂದ ಹೊರಬರುವ ಮೊದಲು ಏನಿದೆ, ಏನಿಲ್ಲ ಎಂಬುದನ್ನೊಮ್ಮೆ ಓದಿಬಿಡಿ
ಸಾಂದರ್ಭಿಕ ಚಿತ್ರ
Rajesh Duggumane | news18
Updated: January 8, 2019, 9:23 AM IST
ಬೆಂಗಳೂರು(ಜ.08): ಕೇಂದ್ರದ ಕಾರ್ಮಿಕ ವಿರೋಧಿ ನೀತಿ, ಬೆಲೆ ಏರಿಕೆ ತಡೆ ಸೇರಿ 12 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಬಂದ್​ಗೆ ಕರೆ ನೀಡಿವೆ. ಇದಕ್ಕೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಹಾಗಾಗಿ, ಇಂದು,ನಾಳೆ ದೇಶ ಬಹುತೇಕ ಸ್ತಬ್ಧವಾಗುವುದು ಖಚಿತ.

ಬಿಎಂಟಿಸಿ, ಕೆಎಸ್​ಆರ್​ಟಿಸಿ, ಆಟೋ, ಬ್ಯಾಂಕ್​, ಅಂಚೇ ಕಚೇರಿ, ಸರ್ಕಾರಿ ಕಚೇರಿ, ಬಿಎಸ್​ಎನ್​ಎಲ್​ ಕಚೇರಿ ಸೇವೆ, ಎಪಿಎಂಸಿ ಸೇವೆ, ಕೈಗಾರಿಕೆ ಹಾಗೂ ಶಾಲಾ ಕಾಲೇಜುಗಳು ಇಂದು ಕಾರ್ಯಾ ನಿರ್ವಹಿಸುವುದಿಲ್ಲ. ಸಾರಿಗೆ ವ್ಯವಸ್ಥೆ ಸಂಪೂರ್ಣ ನಿಶಬ್ದವಾಗುವ ಕಾರಣ, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲ ಲಕ್ಷಣ ಗೋಚರವಾಗಲಿದೆ. ಎರಡು ದಿನ ಬಂದ್​ ಇರುವ ಕಾರಣ, ದೂರದ ಊರುಗಳಿಗೆ ಹೋಗುವವರಿಗೆ ತೊಂದರೆ ಎದುರಾಗಬಹುದು.

ಇದನ್ನೂ ಓದಿ: ಭಾರತ್ ಬಂದ್ : ರಸ್ತೆಗಿಳಿಯದ ಬಿಎಂಟಿಸಿ : ಕೆಎಸ್​ಆರ್​ಟಿಸಿ - ರಾಜ್ಯಾದ್ಯಂತ ಸಾಂಕೇತಿಕ ಬೆಂಬಲ

ಹೋಟೆಲ್​ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿಲ್ಲ. ಹಾಗಾಗಿ ಇಂದು ಎಲ್ಲ ಹೋಟೆಲ್​ಗಳು ತೆರೆದಿಡುತ್ತವೆ. ಉಳಿದಂತೆ ಪೆಟ್ರೋಲ್​ ಬಂಕ್​, ಆಸ್ಪತ್ರೆ, ಅಂಗಡಿ, ಮಾರುಕಟ್ಟೆ, ಹಾಲು ತರಕಾರಿ ಸರಬರಾಜು, ಲಾರಿ ಸಂಚಾರ, ಆ್ಯಪ್​ ಆಧಾರಿತ ಟ್ಯಾಕ್ಸಿ, ಮೆಟ್ರೋ ಸೇವೆಗಳ ಮೇಲೆ ಬಂದ್​ ಬಿಸಿ ತಾಗುವುದಿಲ್ಲ. ಹಾಗಾಗಿ ಸಾರ್ವಜನಿಕರು ಕೊಂಚ ನಿಟ್ಟುಸಿರು ಬಿಡಬಹುದು. ಇನ್ನು, ಬಂದ್ ಹಿನ್ನೆಲೆಯಲ್ಲಿ ಮಂಗಳವಾರ, ಬುಧವಾರ ನಡೆಯಬೇಕಿದ್ದ ಅನೇಕ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ.

ಬಂದ್​ ವಿರೋಧಿಸಿ ಇಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಈ ಮೂಲಕ ಬಿಜೆಪಿ ವಿರೋಧಿ ಗುಂಪುಗಳು ಒಟ್ಟಾಗಿ ಮುಷ್ಕರಕ್ಕೆ ಕರೆ ನೀಡಿವೆ ಎಂಬುದು ಸ್ಪಷ್ಟವಾಗಿದೆ. ಇನ್ನು, ಐಟಿಬಿಟಿ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. 12 ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ಎಲ್‍ಪಿಎಫ್ ಕಾರ್ಮಿಕ ಸಂಘಟನೆಗಳು ಬಂದ್‍ಗೆ ಕರೆನೀಡಿವೆ.

ಬಂದ್​ ಉದ್ದೇಶವೇನು?:
ಬೆಲೆ ಏರಿಕೆ ತಡೆ, ಉದ್ಯೋಗ ಸೃಷ್ಟಿ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಡಾ. ಸ್ವಾಮೀನಾಥ್​ ಆಯೋಗದ ಶಿಫಾರಸು ಜಾರಿ, ಮೋಹಾನ ವಾಹನ (ತಿದ್ದುಪಡಿ) ಮಸೂದೆ 2017 ಹಿಂಪಡೆಯಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರು ಸೇರಿ ಮತ್ತಿತರ ಸ್ಕೀಂ ನೌಕರರ ಖಾಯಮಾತಿ ಮಾಡುವುದು ಪ್ರಮುಖ ಬೇಡಿಕೆಗಳು.
Loading...

ಇದನ್ನೂ ಓದಿ: ಭಾರತ್ ಬಂದ್: ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ