Bhang: ಎನ್​​ಡಿಪಿಎಸ್​​ ಕಾಯ್ದೆಯಡಿ ಭಾಂಗ್ ನಿಷೇಧಿತ ಡ್ರಗ್ ಅಲ್ಲ ಎಂದ ಕರ್ನಾಟಕ ಹೈಕೋರ್ಟ್​!

ಭಾಂಗ್ ಅನ್ನು ಚರಸ್ ಅಥವಾ ಗಾಂಜಾ ಎಲೆಗಳು ಅಥವಾ ಗಾಂಜಾ ಬೀಜಗಳಿಂದ ತಯಾರಿಸಲಾಗುತ್ತದೆ ಎಂದು ತೋರಿಸಲು ಕೋರ್ಟ್​ ಮುಂದೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನ್ಯಾಯಮೂರ್ತಿ ಕೆ ನಟರಾಜನ್ ಹೇಳಿದರು. ಬಳಿಕ ಆರೋಪಿ ರೋಷನ್​ ಕುಮಾರ್ ಮಿಶ್ರಾಗೆ ಜಾಮೀನು ನೀಡಿದ್ದಾರೆ.

ಭಾಂಗ್

ಭಾಂಗ್

  • Share this:
ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಭಾಂಗ್​ ನಿಷೇಧಿತ ಡ್ರಗ್ ಅಥವಾ ಡ್ರಿಂಕ್ ಎಂದು ಘೋಷಿಸಲಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೆ, 29 ಕೆಜಿಯಷ್ಟು ಭಾಂಗ್ ಪೌಡರ್​​​ ಹೊಂದಿದ್ದ ವ್ಯಕ್ತಿಯೋರ್ವನಿಗೆ ಬೇಲ್​ ಕೂಡ ಮಂಜೂರು ಮಾಡಿದೆ. ಬೇಗೂರು ಪೊಲೀಸರು ಜೂನ್ 1 ರಂದು ಬಿಹಾರ ಮೂಲದ ರೋಷನ್ ಕುಮಾರ್ ಮಿಶ್ರಾ ಎಂಬಾತನನ್ನು ಬಂಧಿಸಿದ್ದರು.  ಬಂಧಿತನಿಂದ 400 ಗ್ರಾಂ ಗಾಂಜಾ ಜೊತೆಗೆ ಬ್ರಾಂಡ್ 'ಭಾಂಗ್' ಅನ್ನು ವಶಪಡಿಸಿಕೊಂಡಿದ್ದರು. ಬಂಧಿತ ಮಿಶ್ರಾನಿಗೆ ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ರೋಷನ್ ಕುಮಾರ್ ಮಿಶ್ರಾ ಕರ್ನಾಟಕ ಹೈಕೋರ್ಟ್​​ಗೆ ಮನವಿ ಸಲ್ಲಿಸಿದ್ದ.

ಭಾಂಗ್​ ನಿಷೇಧಿತ ಡ್ರಗ್ ಅನ್ನೋದಕ್ಕೆ ವೈಜ್ಞಾನಿಕ ಪುರಾವೆ ಇಲ್ಲ
ಭಾಂಗ್ ಅನ್ನು ಚರಸ್ ಅಥವಾ ಗಾಂಜಾ ಎಲೆಗಳು ಅಥವಾ ಗಾಂಜಾ ಬೀಜಗಳಿಂದ ತಯಾರಿಸಲಾಗುತ್ತದೆ ಎಂದು ತೋರಿಸಲು ಕೋರ್ಟ್​ ಮುಂದೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನ್ಯಾಯಮೂರ್ತಿ ಕೆ ನಟರಾಜನ್ ಹೇಳಿದರು. ಬಳಿಕ ಆರೋಪಿ ರೋಷನ್​ ಕುಮಾರ್ ಮಿಶ್ರಾಗೆ ಜಾಮೀನು ನೀಡಿದ್ದಾರೆ.

ಶಿವರಾತ್ರಿ ಹಬ್ಬದಲ್ಲಿ ಭಾಂಗ್​ ಬಳಸಲಾಗುತ್ತೆ
ಆರೋಪಿ ರೋಷನ್ ಕುಮಾರ್ ಮಿಶ್ರಾ ಪರ ವಕೀಲ ಎಸ್ ಮನೋಜ್ ಕುಮಾರ್ ವಾದ ಮಂಡಿಸಿ, "ಉತ್ತರ ಭಾರತದ ಲಸ್ಸಿ ಅಂಗಡಿಗಳಲ್ಲಿ ಭಾಂಗ್ ಸಾಮಾನ್ಯವಾಗಿ ಮಾರಾಟವಾಗುವ ಪಾನೀಯವಾಗಿದೆ. ಇದು ನಿಷೇಧಿತ ಡ್ರಗ್ ಅಲ್ಲ.  ಶಿವರಾತ್ರಿ ಹಬ್ಬದ ಸಮಯದಲ್ಲಿ ಈ ಪಾನೀಯವನ್ನು ಬಳಸಲಾಗುತ್ತದೆ ಅಂದರು.

Bhang is not a prohibited drug under NDPS Act Kanrataka High Court
ಭಾಂಗ್


ಇದು ನಿಷೇಧಿತ ಪಾನೀಯವಲ್ಲ. ಇದು NDPS ಕಾಯಿದೆ ಅಡಿಯಲ್ಲಿ ಬರುವುದೇ ಇಲ್ಲ ಅಂತ ವಾದ ಮಂಡಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ಪರ ವಕೀಲರು, ಭಾಂಗ್ ಅನ್ನು ಗಾಂಜಾ ಎಲೆಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ, ಇದು ಗಾಂಜಾ ಉತ್ಪನ್ನ. ಎನ್​​ಡಿಪಿಎಸ್​ ಅಡಿ ಬರುತ್ತದೆ ಅಂತ ಪ್ರತಿವಾದ ಮಂಡಿಸಿದ್ದರು.

ಇದನ್ನೂ ಓದಿ: Shocking News: ಈ ವ್ಯಕ್ತಿಯ ಮಲದಲ್ಲಿ ಸಿಕ್ಕ ವಸ್ತು ಕಂಡು ಶಾಕ್ ಆದ ಪೊಲೀಸರು!

ಎರಡು ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್​​
ಇಬ್ಬರ ವಾದ ಆಲಿಸಿದ ನ್ಯಾಯಮೂರ್ತಿಗಳು, ಭಾಂಗ್ ಅನ್ನು ಚರಸ್ ಅಥವಾ ಗಾಂಜಾ ಎಲೆಗಳು ಅಥವಾ ಗಾಂಜಾ ಬೀಜಗಳಿಂದ ತಯಾರಿಸಲಾಗುತ್ತದೆ ಎಂದು ತೋರಿಸಲು ಕೋರ್ಟ್​ ಮುಂದೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದರು. ಅಲ್ಲದೆ, ರೋಷನ್ ಕುಮಾರ್ ಮಿಶ್ರಾ ಪ್ರಕರಣದಲ್ಲಿ ಬೇಲ್​ ನೀಡುವಾಗ ಹೈಕೋರ್ಟ್​ ಎರಡು ಪ್ರಕರಣಗಳನ್ನು ಉಲ್ಲೇಖಿಸಿದೆ.

ಮಧುಕರ್ ವರ್ಸಸ್ ಮಹಾರಾಷ್ಟ್ರ ಸರ್ಕಾರ ಮತ್ತು ಅರ್ಜುನ್ ಸಿಂಗ್ ವರ್ಸಸ್  ಹರಿಯಾಣ ಸರ್ಕಾರ ಪ್ರಕರಣಗಳಲ್ಲಿ ಭಾಂಗ್ ಗಾಂಜಾ ಅಲ್ಲ ಮತ್ತು ಎನ್‌ಡಿಪಿಎಸ್ ಕಾಯ್ದೆಯಡಿ ಬರುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯವು ತನ್ನ ವರದಿಯನ್ನು ನೀಡುವವರೆಗೆ, ಭಾಂಗ್ ಅನ್ನು ಚರಸ್ ಅಥವಾ ಗಾಂಜಾದಿಂದ ತಯಾರಿಸಲಾಗುತ್ತದೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಅಂತ ಹೇಳಿದರು.

Bhang is not a prohibited drug under NDPS Act Kanrataka High Court
ಭಾಂಗ್


ರೋಷನ್ ಕುಮಾರ್ ಜಾಮೀನಿಗೆ ಅರ್ಹರು
ಅಲ್ಲದೆ, ರೋಷನ್ ಕುಮಾರ್ ಮಿಶ್ರಾ ಬಂಧನದಲ್ಲಿದ್ದ ಕಾರಣ ಜಾಮೀನಿಗೆ ಅರ್ಹರಾಗಿದ್ದರು.  ಬಂಧನದ ವೇಳೆ ಮಿಶ್ರಾ ಬಳಿ 400 ಗ್ರಾಂ ಗಾಂಜಾ ಇತ್ತು. ಇದು ಕಡಿಮೆ ಪ್ರಮಾಣ ಆಗಿರೋದ್ರಿಂದ ಜಾಮೀನು ಪಡೆಯಲು ಅರ್ಹರು ಅಂತಲೂ ನ್ಯಾಯಮೂರ್ತಿಗಳು ಹೇಳಿದ್ದಾರೆ. ರೋಷನ್​ ಕುಮಾರ್​ಗೆ ಜಾಮೀನು ಷರತ್ತಿನಂತೆ 2 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಯಸ್ಸಿನಲ್ಲಿ ಗಾಂಜಾ ಸೇವಿಸಿದ್ರೆ ಹೃದಯಾಘಾತ ಗ್ಯಾರೆಂಟಿ!

ಭಾಂಗ್​ ಎಲ್ಲಾ ಕಡೆ ಲಭ್ಯವಿದೆ
ಭಾಂಗ್ ಒಂದು ಸಾಂಪ್ರದಾಯಿಕ ಪಾನೀಯವಾಗಿದೆ ಎಂದು ನಮೂದಿಸಲು ಯೋಗ್ಯವಾಗಿದೆ. ಉತ್ತರ ಭಾರತದಲ್ಲಿ ಹೆಚ್ಚಿನ ಜನರು ಅದರಲ್ಲೂ ವಿಶೇಷವಾಗಿ ಶಿವ ದೇವಾಲಯಗಳ ಬಳಿ ಭಾಂಗ್​ ಕುಡಿಯುತ್ತಿದ್ದರು. ಇದು ಇತರ ಎಲ್ಲಾ ಪಾನೀಯಗಳಂತೆ ಲಸ್ಸಿ ಅಂಗಡಿಗಳಲ್ಲಿಯೂ ಲಭ್ಯವಿದೆ. ಅದನ್ನು ಹೊರತುಪಡಿಸಿ, ಭಾಂಗ್ ಅನ್ನು ಬ್ರಾಂಡ್​​ಗಳ ಮೂಲಕವೂ ಈಗ ಮಾರಾಟ ಮಾಡಲಾಗುತ್ತಿದೆ ಅಂತ ಹೈಕೋರ್ಟ್​ ಅಭಿಪ್ರಾಯ ಪಟ್ಟಿದೆ.
Published by:Thara Kemmara
First published: