Chitradurga: ಮತಾಂತರ ಆರೋಪ, ಬೈಬಲ್ ಪ್ರತಿಗಳನ್ನು ಸುಟ್ಟ ಭಜರಂಗ ದಳ ಕಾರ್ಯಕರ್ತರು

ಹಳ್ಳಿಯೊಂದರಲ್ಲಿ ಕ್ರೈಸ್ತ ಧರ್ಮದ ಪ್ರಾರ್ಥನೆ (Prayer) ಮಾಡುತ್ತಿದ್ದ ವೇಳೆ ಭಜರಂಗ ದಳ ಕಾರ್ಯಕರ್ತರು ದಾಳಿ ಮಾಡಿ‌ ಬೈಬಲ್ (Bible) ಗ್ರಂಥದ ಪ್ರತಿಗಳನ್ನ ಸುಟ್ಟು ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿತ್ರದುರ್ಗ(ಜೂ.30): ಬಡ ಕುಟುಂಬಗಳ ಆರೋಗ್ಯ, ಆರ್ಥಿಕ ಕಷ್ಟ ಪರಿಹಾರದ ಸೋಗಿನಲ್ಲಿ ಹಿಂದೂ ಕುಟಂಬಗಳನ್ನ ಕ್ರೈಸ್ತ ಧರ್ಮಕ್ಕೆ (Christianity) ಮತಾಂತರ (Conversion) ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನಲೆ ರಾತ್ರಿ ವೇಳೆ ಹಳ್ಳಿಯೊಂದರಲ್ಲಿ ಕ್ರೈಸ್ತ ಧರ್ಮದ ಪ್ರಾರ್ಥನೆ (Prayer) ಮಾಡುತ್ತಿದ್ದ ವೇಳೆ ಭಜರಂಗ ದಳ ಕಾರ್ಯಕರ್ತರು ದಾಳಿ ಮಾಡಿ‌ ಬೈಬಲ್ (Bible) ಗ್ರಂಥದ ಪ್ರತಿಗಳನ್ನ ಸುಟ್ಟು ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.  ಕಳೆದ ಮೂರ್ನಾಲ್ಕು ವರ್ಷಗಳಿಂದ ಇತ್ತೀಚೆಗೆ ಹಿಂದೂಗಳನ್ನ (Hindu) ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಅನ್ನೋ ಚರ್ಚೆ ಇಡೀ ಕರ್ನಾಟಕ (Karnataka) ರಾಜ್ಯಾದ್ಯಂತ ಜೋರಾಗಿ ನಡೆದಿದೆ.

ಅಲ್ಲದೇ ಅದಕ್ಕೆ ಸರಿಯಾಗಿ ರಾಜ್ಯದ ನಾನಾ ಭಾಗಗಳಲ್ಲಿ ಮತಾಂತರ ಮಾಡಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ ರಾಜ್ಯದಲ್ಲಿ ಮತಾಂತರ ನಡೆಯುತ್ತಿದೆ, ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದೂಗಳ ಆರೋಗ್ಯದ ದೌರ್ಭಲ್ಯವನ್ನ ದಾಳವಾಗಿ ಬಳಸಿ ಆರ್ಥಿಕ ಸಹಾಯದ ಆಮೀಶ ಹೊಡ್ಡಿ ಹಿಂದೂಗಳನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಸ್ವತಃ ಸದನದಲ್ಲಿ ಭಲವಂತದ ಮತಾಂತರದ ವಿರುದ್ದ ದ್ವನಿ ಎತ್ತಿದ್ದರು.

ಆರೋಗ್ಯ ಸಮಸ್ಯೆ ಗುಣಪಡಿಸುವ  ಸೋಗು

ಅಲ್ಲದೇ ನನ್ನ ತಾಯಿಯನ್ನೂ ಆರೋಗ್ಯ ಸಮಸ್ಯೆ ಬಗರಹರಿಸುವ ನೆಪದಲ್ಲಿ ಭಲವಂತದಿಂದ ಮತಾಂತರ ಮಾಡಿದ್ದಾರೆ, ಅಂಥವರ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ದರು.

ಬಲವಂತದ ಮತಾಂತರ ಪ್ರಕರಣ

ಇದಾದ ಬಳಿಕ ರಾಜ್ಯದಲ್ಲಿ ಭಲವಂತದ ಮತಾಂತರ ತಡೆಯೋಕೆ ಅಂತಲೇ ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ ಒಂದು ತೀರ್ಮಾನಕ್ಕೆ ಬಂದ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದೆ. ಅಲ್ಲದೇ ಎಲ್ಲೆಲ್ಲಿ ಬಲವಂತದ ಮತಾಂತರ ಪ್ರಕರಣಗಳು ನಡೆಯುತ್ತವೆ ಆ ಕುರಿತು ಗಂಬೀರವಾಗಿ ಕಾನೂನು ಕ್ರಮ ಕೈಗೊಳ್ಳಿ ಅಂತ ಪೋಲೀಸ್ ಇಲಾಖೆಗೆ ಸೂಚನೆ ಕೂಡಾ ನೀಡಿದೆ.

ಇದನ್ನೂ ಓದಿ: Puttur: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ತೆರೆಯಲು ಸರಕಾರ ನಿರ್ಧಾರ

ಆದರೇ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿ ಇರುವಾಗಲೂ ಅಂಥ ಪ್ರಕರಣಗಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಇದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಮಲ್ಲೇಣು ಗ್ರಾಮದಲ್ಲಿ ಇಂಥದೊಂದು ಘಟನೆ ನಡೆದಿದೆ. ಅದೇನಂದ್ರೆ ಹಿರಿಯೂರು ತಾಲ್ಲೂಕಿನಾದ್ಯಂತ ಮತಾಂತರ ವ್ಯಾಪಿಸುತ್ತಿದೆ ಎಂಬ ಶಂಕೆ ವ್ಯಕ್ತವಾಗಿ,, ವದಂತಿ ಹಬ್ಬಿತ್ತು.

ಇದಕ್ಕೆ ಇಂಬು ನೀಡುವಂತೆ ಮಲ್ಲೇಣು ಗ್ರಾಮದಲ್ಲಿ‌ ಮತಾಂತರ ಮಾಡಲಾಗುತ್ತದೆ ಎಂಬ ಖಚಿತ ಮಾಹಿತಿ ಆಧರಿಸಿ, ಶ್ರೀನಿವಾಸ್ ಎಂಬ ಹಿಂದೂ ಕಾರ್ಯರ್ತನ ನೇತೃತ್ವದಲ್ಲಿ ಭಜರಂಗದಳ ಕಾರ್ಯಕರ್ತರು, ದಾಳಿ ಮಾಡಿದ್ದಾರೆ. ಅಲ್ಲಿ ಹಿಂದೂ ಜನರಿಗೆ ಪ್ರಾರ್ಥನೆ ಹೇಳಿ ಕೊಡಲು ಬಂದಿದ್ದ ಕ್ರಿಶ್ಚಿಯನ್‌ ಮಹಿಳೆಗೆ ಹಿಂದೂ ಪರ ಕಾರ್ಯಕರ್ತರು ಕ್ಲಾಸ್ ತೆಗೆದುಕೊಂಡು ಕ್ರಿಶ್ಚಿಯನ್ ಮಹಿಳೆ‌ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ನಿರುದ್ಯೋಗಿಗಳು ವಡಾಪಾವ್, ಮಿರ್ಚಿ ಮಾಡಿ ಮಾರುವಂತೆ ಸಲಹೆ ಕೊಟ್ಟ BJP ವಕ್ತಾರೆ

ಅಲ್ಲಿ ಅಶಕ್ತ, ಹಾಗೂಆರೋಗ್ಯ, ಕಷ್ಟ ಪರಿಹಾರ ಆಗುತ್ತದೆ ಎಂದು ಹಿರಿಯೂರು ನಗರದ ಚರ್ಚ್ ಮೂಲದ ಫಾದರ್ಗಳು ಹಿಂದೂಗಳನ್ನು ಕ್ರಿಶ್ಚಿಯನ್ ಗೆ ಮತಾಂತರಕ್ಕೆ ಆಮೀಶ ಹೊಡ್ಡಿದ್ದಾರೆ ಎಂದು ಭಜರಂಗದಳದ  ಶ್ರೀನಿವಾಸ್ ನೇತೃತ್ವದ ತಂಡ ಆರೋಪ ಮಾಡಿದೆ.

ಬೈಬಲ್ ಗ್ರಂಥದ ಪ್ರತಿಗಳನ್ನ ಹರಿದು ಸುಟ್ಟು ಹಾಕಿ ಆಕ್ರೋಶ

ಅಲ್ಲದೇ ಇದೇ ಸಮಯದಲ್ಲಿ ಕ್ರಿಶ್ಚಿಯನ್ ಮಹಿಳೆಯರ ಬಳಿ ಇದ್ದ ಬೈಬಲ್ ಗ್ರಂಥದ ಪ್ರತಿಗಳನ್ನ ಹರಿದು ಸುಟ್ಟು ಹಾಕಿ ಮತಾಂತರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Published by:Divya D
First published: