Azan Vs Bhajan: ಅಜಾನ್ ವಿರುದ್ಧ ಭಜನೆ: ದೇವಸ್ಥಾನಗಳಲ್ಲಿ ಮೊಳಗಿದ ರಾಮಜಪ, ಹನುಮಾನ್ ಚಾಲೀಸಾ

ಇಂದು ಬೆಳಗ್ಗೆ 4.50 ಕ್ಕೆ ರಾಜ್ಯಾದ್ಯಂತ ಆಜನ್ ವಿರೋಧಿಸಿ ರಾಮಜಪ, ಹನುಮಾನ್ ಚಾಲಿಸ್ ಮೊಳಗಿಸಿದ್ದೇವೆ. ಇನ್ಮೇನಾಲದರೂ ಸರ್ಕಾರ ಎಚ್ಚೆತ್ತುಕೊಂಡು ಮಸೀದಿಗಳ ಮೈಕ್‌ ಗಳಿಂದ ಉಂಟಾಗ್ತಿರೋ ಕಿರಿಕಿರಿ ತಡೆಯಬೇಕು. ರಾಜ್ಯದ 1000 ದೇಗುಲಗಳಲ್ಲಿ ಸುಪ್ರಭಾತ, ಭಜನೆ ಮೊಳಗಿಸಲಾಗಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಅಜಾನ್ (Azan) ವಿರುದ್ಧ ಅಭಿಯಾನ ಆರಂಭಿಸಿರುವ ಹಿಂದೂ ಸಂಘಟನೆಗಳು (Hindu Organization) ಇಂದು ದೇವಸ್ಥಾನಗಳಲ್ಲಿ ಲೌಡ್ ಸ್ಪೀಕರ್ ಅಳವಡಿಸಿ ರಾಮಜಪ (Rama Japa), ಹನುಮಾನ್ ಚಾಲೀಸಾ (Hanuman Chalisa), ಸುಪ್ರಭಾತ (Suprabhata) ಮೊಳಗಿಸಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳ ದೇವಸ್ಥಾನಗಳಲ್ಲಿ (Temple) ಇಂದು ಅಜಾನ್ ಜೊತೆಯಲ್ಲಿ ಸುಪ್ರಭಾತ ಮೊಳಗಿದೆ. ಆದ್ರೆ ಕೆಲವು ದೇವಸ್ಥಾನಗಳಲ್ಲಿ ಯಾವುದೇ ಮಂತ್ರ, ರಾಮ ಜಪ ಮೊಳಗಲಿಲ್ಲ. ಮೈಸೂರಿನಲ್ಲಿ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ (Pramod Mutalik), ಸರ್ಕಾರಕ್ಕೆ ಗಡುವು ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸರ್ಕಾರ (Government) ಕೇವಲ ನೋಟಿಸ್ ಕೊಟ್ಟಿ ಕಣ್ಣೋರಿಸುವ ಕೆಲಸ ಮಾಡಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳ ವಿರುದ್ಧ contempt of court ಕೇಸ್ ಹಾಕುತ್ತೇವೆ ಎಂದು ಗುಡುಗಿದರು.

ಆಜಾನ್ ನಿಲ್ಲಿಸಲು ಕ್ರಮ ಕೈಗೊಳ್ಳಲಿಲ್ಲ. ಆಜಾನ್‌ ನಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು ಸಭ್ಯ ನಾಗರೀಕರಿಗೆ ತೊಂದರೆಯಾಗುತ್ತಿದೆ. ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದರು.

ದೇವಸ್ಥಾನದಲ್ಲಿ ಪೂಜೆ ಮಾಡಿದ್ರೆ ಅಪರಾಧಾನಾ?

ಬೆಂಗಳೂರಿನಲ್ಲಿ ಕಾರ್ಯಕರ್ತರು ವಶಕ್ಕೆ ಪಡೆದಿದ್ದಕ್ಕೆ ಆಕ್ರೋಶ ಹೊರ ಹಾಕಿದ ಪ್ರಮೋದ್ ಮುತಾಲಿಕ್, ಅತ್ಯಂತ ಖಂಡನೀಯವಾದ್ದು. ನಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ಇದೇನು ಅಪರಾಧನಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  High Court: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ: ಸೋಮನಾಥ ನಾಯಕ್​ಗೆ ಶಿಕ್ಷೆ ಖಾಯಂ

ಇಲ್ಲಿ ಯಾವ ಕಾನೂನು ಇದೆ? ನಾವು ಯಾವ ದೇಶದಲ್ಲಿದ್ದೇವೆ ? ಪೂಜೆ ಮಾಡಲು ಸ್ವಾತಂತ್ಯ ಇಲ್ಲವಾ ? ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ದ.ಕ ಜಿಲ್ಲೆಯಲ್ಲಿ ಮೊಳಗದ ಸುಪ್ರಭಾತ

ಅಜಾನ್ ಗೆ ವಿರುದ್ಧವಾಗಿ ಶ್ರೀರಾಮಸೇನೆಯ ಸುಪ್ರಭಾತ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಬಲ ಸಿಕ್ಕಿಲ್ಲ. ದ.ಕ ಜಿಲ್ಲೆಯಲ್ಲಿ ಶ್ರೀರಾಮಸೇನೆ ಪ್ರಬಲವಾಗಿರದ ಹಿನ್ನೆಲೆ ಎಲ್ಲಿಯೂ ಸುಪ್ರಭಾತ ಮೊಳಗಿಲ್ಲ. ಶ್ರೀರಾಮಸೇನೆ ಅಭಿಯಾನದಿಂದ ಇತರ ಹಿಂದೂ ಸಂಘಟನೆಗಳು ಅಂತರ ಕಾಯ್ದುಕೊಂಡಿವೆ.

ಶ್ರೀರಾಮಸೇನೆಯ ಕಾರ್ಯಕರ್ತರು ದೇವಸ್ಥಾನಗಳಿಗೆ ಕೇವಲ ಮನವಿ ಮಾಡಿಕೊಂಡಿದ್ರು. ಅಜಾನ್ ಗೆ ವಿರುದ್ಧವಾಗಿ ಸುಪ್ರಭಾತ ಅಭಿಯಾನಕ್ಕೆ ದೇವಸ್ಥಾನದ ಆಡಳಿತ ಮಂಡಳಿಗಳು ಸಮ್ಮತಿ ಸೂಚಿಸಿರಲಿಲ್ಲ.

ಸಿದ್ದಲಿಂಗ ಸ್ವಾಮೀಜಿಯಿಂದ ಸುಪ್ರಭಾತಕ್ಕೆ ಚಾಲನೆ

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದಲ್ಲಿ ಮೈಕ್‌ಸೆಟ್‌ ಆನ್ ಮಾಡುವುದರ ಮೂಲಕ ಸುಪ್ರಭಾತಕ್ಕೆ ಶ್ರೀರಾಮಸೇನೆಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಆಂದೋಲ ಗ್ರಾಮದ ಮಸೀದಿಯ ಪಕ್ಕದಲ್ಲಿರುವ ಕರುಣೇಶ್ವರ ಮಠದಲ್ಲಿ ಸುಪ್ರಭಾತ ಮೊಳಗಿಸಲಾಯ್ತು.

ಇಂದು ಬೆಳಗ್ಗೆ 4.50 ಕ್ಕೆ ರಾಜ್ಯಾದ್ಯಂತ ಆಜನ್ ವಿರೋಧಿಸಿ ರಾಮಜಪ, ಹನುಮಾನ್ ಚಾಲಿಸ್ ಮೊಳಗಿಸಿದ್ದೇವೆ. ಇನ್ಮೇನಾಲದರೂ ಸರ್ಕಾರ ಎಚ್ಚೆತ್ತುಕೊಂಡು ಮಸೀದಿಗಳ ಮೈಕ್‌ ಗಳಿಂದ ಉಂಟಾಗ್ತಿರೋ ಕಿರಿಕಿರಿ ತಡೆಯಬೇಕು. ರಾಜ್ಯದ 1000 ದೇಗುಲಗಳಲ್ಲಿ ಸುಪ್ರಭಾತ, ಭಜನೆ ಮೊಳಗಿಸಲಾಗಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಹುನುಮಾನ್ ಚಾಲೀಸಾ, ಭಜನೆ, ಮಂತ್ರಪಠಣ ಅತ್ಯಂತ ಯಶಸ್ವಿಯಾಗಿದೆ.  ಬೆಂಗಳೂರಿನ ಆಂಜನೆಯ ದೇವಸ್ಥಾನದಲ್ಲಿ ಮಂತ್ರ ಪಠಣ ಹಾಗೂ ಹನುಮಾನ್ ಚಾಲೀಸಾಗೆ ಪೊಲೀಸರು ಅವಕಾಶ ನೀಡಲಿಲ್ಲ. ಆಂಜನೇಯ ದೇವಸ್ಥಾನ ಏನ್ ಪಾಕಿಸ್ತಾನದಲ್ಲಿಲ್ಲ.. ಕರ್ನಾಟಕದಲ್ಲಿಯೆ ಇದೆ ಎಂದು ಪೊಲೀಸರ ನಡೆಗೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ಹೊರ ಹಾಕಿದರು. ಮಂತ್ರ ಪಠಣ, ವೇಧಘೋಷಕ್ಕೆ ಅಡ್ಡಿಪಡಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದರು.

ಇದನ್ನೂ ಓದಿ:  PSI Recruitment Scam: ಹಾಸನದಲ್ಲಿ ತಂದೆ-ಮಗ ಸೇರಿ ಮೂವರ ಬಂಧನ; ಒಂದೇ ಕುಟುಂಬದ ಮೂವರು ಪೊಲೀಸ್ ಅಧಿಕಾರಿಗಳ ವಿಚಾರಣೆ

ಇನ್ನುಳಿದಂತೆ ಬಾಗಲಕೋಟೆ, ಗದಗ, ತುಮಕೂರು, ಯಾದಗಿರಿ, ಧಾರವಾಡ ಜಿಲ್ಲೆಗಳಲ್ಲಿ ಸುಪ್ರಭಾತ ಅಭಿಯಾನ ಯಶಸ್ವಿಯಾಗಿದೆ.
Published by:Mahmadrafik K
First published: