news18-kannada Updated:November 21, 2020, 7:23 AM IST
ಭೈರತಿ ಸುರೇಶ್.
ದೇವನಹಳ್ಳಿ : ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿರಲು ಯೋಗ್ಯತೆ ಇಲ್ಲವೆಂದು ಹೇಳಿಕೆ ನೀಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿಕೆಗೆ ಹೆಬ್ಬಾಳ ಶಾಸಕ ಬೈರತಿ ಸುರೇಶ್ ತಿರುಗೇಟು ನೀಡಿದ್ದಾರೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, "ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಬಿ ಫಾರಂ ತಗೋಂಡು ಎಮ್ಎಲ್ಎ ಆದಾಗ ಡಾಕ್ಟರ್ ಸುಧಾಕರ್ ಅವರಿಗೆ ಬುದ್ದಿ, ಜ್ಞಾನ ಇರ್ಲಿಲ್ವಾ?" ಎಂದು ವ್ಯಂಗ್ಯವಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾದ ವಿ. ಪ್ರಸಾದ್ ರವರಿಗೆ ಶುಭಾಶಯ ಕೋರಲು ಬಂದಿದ್ದ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬುಧವಾರ ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕೆ. ಸುಧಾಕರ್ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿರಲು ಯೋಗ್ಯತೆ ಇಲ್ಲವೆಂದು ದೂರಿದ್ದರು. ಹೀಗಾಗಿ ಆರೋಗ್ಯ ಸಚಿವರ ಹೇಳಿಕೆಗೆ ತಿರುಗೇಟು ನೀಡಿರುವ ಭೈರತಿ ಸುರೇಶ್ ಎರಡು ಸಲ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ತಗೊಂಡ್ ಎಮ್ಎಲ್ಎ ಆಗುವಾಗ ಬುದ್ದಿ, ಜ್ಞಾನ ಇರ್ಲಿಲ್ವಾ? ಡಾಕ್ಟರ್ ಆಗಿದ್ದವರಿಗೆ ಬುದ್ದಿ ಇರ್ಲಿಲ್ವಾ?
ಇದನ್ನೂ ಓದಿ : ಕಾವೇರುತ್ತಿರುವ ತಮಿಳುನಾಡು ಚುನಾವಣಾ ಕಣ; ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ಪುತ್ರ ಉದಯನಿಧಿ ಬಂಧನ ಬಿಡುಗಡೆ
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸರ್ಕಾರದಲ್ಲಿ ಸಾವಿರಾರು ಕೋಟಿ ಅನುದಾನ ತಗೊಂಡು ತಮ್ಮ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸ್ವಅಭಿವೃದ್ಧಿಯಾಗುವಾಗ ಬುದ್ದಿ ಇರ್ಲಿಲ್ವಾ? ದೊಡ್ಡದಾಗಿ ಡಾಕ್ಟರೇಟ್ ಪದವಿ ಬೇರೆ ಇವರಿಗೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, ಇವರಿಗೆ ಈಗ ಗೊತ್ತಾಯ್ತಾ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿರಲು ಯೋಗತ್ಯೆ ಇಲ್ಲ ಅನ್ನೋದು. 2023ರಲ್ಲಿ ಕಾಂಗ್ರೆಸ್ 140 ಕ್ಕೂ ಹೆಚ್ಚು ಸ್ಥಾನ ಗಳಿಸುತ್ತೆ ಆಗ ಯಾರು ಎಲ್ಲಿರ್ಬೇಕು? ಅನ್ನೊದು ಗೊತ್ತಾಗುತ್ತೆ ಎಂದು ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
Published by:
MAshok Kumar
First published:
November 21, 2020, 7:23 AM IST