ರಾಕೇಶ್​ ಸಾವಿಗೆ ನಾನೇಕೆ ಕಾರಣವಾಗಲಿ, ಎಂಟಿಬಿ ಹತಾಶೆಯಿಂದ ಹೇಳ್ತಿದ್ದಾರೆ; ಭೈರತಿ ಸುರೇಶ್​

ಎಂಟಿಬಿ ಒಂದು ಸಾವನ್ನು ರಾಜಕೀಯಕ್ಕೆ  ಬಳಸಿಕೊಳ್ಳುತ್ತಿರುವುದನ್ನು ನೋಡಿದರೆ ಅಲ್ಲಿ ಅವರ ಹತಾಶೆ ಎದ್ದು ಕಾಣುತ್ತಿದೆ. ರಾಕೇಶ್ ಸಾವಿಗೆ ಸಿದ್ದರಾಮಯ್ಯ ನವರು ಮಾತನಾಡಬೇಕಿದೆ. ಎಂಟಿಬಿ ಮೂರನೇ ವ್ಯಕ್ತಿ ಆತನಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು.

Latha CG | news18-kannada
Updated:September 22, 2019, 5:23 PM IST
ರಾಕೇಶ್​ ಸಾವಿಗೆ ನಾನೇಕೆ ಕಾರಣವಾಗಲಿ, ಎಂಟಿಬಿ ಹತಾಶೆಯಿಂದ ಹೇಳ್ತಿದ್ದಾರೆ; ಭೈರತಿ ಸುರೇಶ್​
ಭೈರತಿ ಸುರೇಶ್​
  • Share this:
ಬೆಂಗಳೂರು(ಸೆ.22): ಮಾಜಿ ಸಿಎಂ ಸಿದ್ದರಾಮಯ್ಯನವರ ಮಗ ರಾಕೇಶ್​ ಸಾವಿಗೆ ಭೈರತಿ ಸುರೇಶ್ ನೇರ​ ಕಾರಣ ಎಂಬ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಆರೋಪಕ್ಕೆ ಭೈರತಿ ಸುರೇಶ್​ ತಿರುಗೇಟು ನೀಡಿದ್ದಾರೆ. "ನಾನೇ ಕುಡಿಯಲ್ಲ, ರಾಕೇಶ್​​ಗ್ಯಾಕೆ ಕುಡಿಸಲಿ? ರಾಕೇಶ್ ನನ್ನ ತಮ್ಮ. ಅವನ ಸಾವಿಗೆ ನಾನೇಕೆ ಕಾರಣವಾಗಲಿ? ಎಂಟಿಬಿ ಹತಾಶೆಯಿಂದ ಆರೋಪ‌ ಮಾಡುತ್ತಿದ್ದಾರೆ. ರಾಕೇಶ್ ಸಾವಿನ ಬಗ್ಗೆ ರಾಜಕೀಯ ಮಾಡಬಾರದು" ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರ ನೈತಿಕ ಸ್ಥೈರ್ಯ ಕುಗ್ಗಿಸಲು, ಎಂಟಿಬಿ ಅವರ ಮಗ ರಾಕೇಶ್ ಸಾವಿನ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟು ಕೀಳುಮಟ್ಟದ ರಾಜಕಾರಣ ಮಾಡಬಾರದು. ರಾಕೇಶ್ ಸಾವಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ರಾಮಯ್ಯ ಆಸ್ಪತ್ರೆ ಬಳಿ ರಾಕೇಶ್​​ಗೆ​​​ ಅಪಘಾತವಾಗಿತ್ತು.  ಅಪಘಾತದಲ್ಲಿ ಪ್ಯಾಂಕ್ರಿಯಾಸ್ ಡ್ಯಾಮೇಜ್ ಆಗಿತ್ತು. ಎಂಟಿಬಿ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದು ಭೈರತಿ ಸುರೇಶ್​ ಎಂಟಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಟಿಬಿ ಒಂದು ಸಾವನ್ನು ರಾಜಕೀಯಕ್ಕೆ  ಬಳಸಿಕೊಳ್ಳುತ್ತಿರುವುದನ್ನು ನೋಡಿದರೆ ಅಲ್ಲಿ ಅವರ ಹತಾಶೆ ಎದ್ದು ಕಾಣುತ್ತಿದೆ. ರಾಕೇಶ್ ಸಾವಿಗೆ ಸಿದ್ದರಾಮಯ್ಯನವರು ಮಾತನಾಡಬೇಕಿದೆ. ಎಂಟಿಬಿ ಮೂರನೇ ವ್ಯಕ್ತಿ ಆತನಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಮಗ ರಾಕೇಶ್ ಸಿದ್ದರಾಮಯ್ಯ ಸಾವಿಗೆ ಭೈರತಿ ಸುರೇಶ್​​ ನೇರ ಕಾರಣ; ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ ಎಂಟಿಬಿ ನಾಗರಾಜ್!

ಎಂಟಿಬಿ ಕಾಂಗ್ರೆಸ್​​ಗೆ ದ್ರೋಹ ಬಗೆದು ಹೋಗಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯನವರನ್ನು ಟೀಕಿಸಲು ನಿಮಗೆ ಯಾವುದೇ ನೈತಿಕತೆ ಇಲ್ಲ. ನಿಮ್ಮ ಬಂಡವಾಳ ನೀವು ನಡೆಸಿರುವ ಹಗರಣಗಳ ಬಗ್ಗೆ ನಮಗೂ ಗೊತ್ತು ಎಂದು ಟೀಕಿಸಿದರು.

ನಾನು ಗ್ರಾ.ಪಂ. ಸದಸ್ಯನಾಗಿದ್ದಾಗ ಎಂಟಿಬಿ ನಾಗರಾಜ್ ಎಲ್ಲಿದ್ದರು? ಎನ್ನುವುದನ್ನು ತಿಳಿದುಕೊಳ್ಳಲಿ. ಗ್ರಾಪಂ ಸದಸ್ಯನಿಂದ ಹಿಡಿದು ಈಗ ಶಾಸಕನಾಗಿದ್ದೇನೆ ನಾನು ಬಚ್ಚಾ ಅಲ್ಲ. ಬೇರೆ ಮನೆಯಿಂದ ಬಂದು ಕಾಂಗ್ರೆಸ್​​ನಲ್ಲಿ ವಾಸ ಅಂತೀರಲ್ಲ, ನೀವು ಈಗ ಮಾಡುತ್ತಿರುವುದು ಏನು? ಹೊಸಕೋಟೆಯಲ್ಲಿ ಬಚ್ಚೇಗೌಡ ಕಟ್ಟಿ ಬೆಳಿಸಿದಂತಹ ಮನೆಯಲ್ಲಿ ನೀವು ವಾಸ ಮಾಡಲು ಹೋಗುತ್ತಿರುವುದು ಸರೀಯೇ ? ಎಂದು ತಿರುಗೇಟು ನೀಡಿದರು.

First published: September 22, 2019, 5:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading