• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bhagavad Gita Teaching: ಶಾಲಾ ಕಾಲೇಜುಗಳಲ್ಲಿ ಅಗತ್ಯವಾಗಿ ಭಗವದ್ಗೀತೆ ಬೋಧಿಸಬೇಕು: ಸಂಸದ ಪ್ರತಾಪ್ ಸಿಂಹ 

Bhagavad Gita Teaching: ಶಾಲಾ ಕಾಲೇಜುಗಳಲ್ಲಿ ಅಗತ್ಯವಾಗಿ ಭಗವದ್ಗೀತೆ ಬೋಧಿಸಬೇಕು: ಸಂಸದ ಪ್ರತಾಪ್ ಸಿಂಹ 

ಪ್ರತಾಪ್ ಸಿಂಹ

ಪ್ರತಾಪ್ ಸಿಂಹ

ಭಗವದ್ಗೀತೆ (Bhagavad Gita) ಅದು ಒಂದು ಧಾರ್ಮಿಕ ಗ್ರಂಥವಲ್ಲ. ಅದರಲ್ಲಿ ಜೀವನದ ಪಾಠವಿದೆ, ಹೇಗೆ ಬದುಕುವುದು ಎಂಬುದನ್ನು ಹೇಳಿಕೊಡುತ್ತದೆ. ಜೀವನದ ಮೌಲ್ಯ(Life Values)ಗಳನ್ನು ಹೇಳಿಕೊಡುತ್ತದೆ.

  • Share this:

ಕೊಡಗು: ರಾಜ್ಯ ಸರ್ಕಾರ ಶಾಲೆ(Government School)ಗಳಲ್ಲಿ ಕಡ್ಡಾಯವಾಗಿ ಬೋಧಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ (MP Pratap Simha) ಹೇಳಿದ್ದಾರೆ. ಮಡಿಕೇರಿ(Madikeri)ಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭಗವದ್ಗೀತೆ (Bhagavad Gita) ಅದು ಒಂದು ಧಾರ್ಮಿಕ ಗ್ರಂಥವಲ್ಲ. ಅದರಲ್ಲಿ ಜೀವನದ ಪಾಠವಿದೆ, ಹೇಗೆ ಬದುಕುವುದು ಎಂಬುದನ್ನು ಹೇಳಿಕೊಡುತ್ತದೆ. ಜೀವನದ ಮೌಲ್ಯ(Life Values)ಗಳನ್ನು ಹೇಳಿಕೊಡುತ್ತದೆ. ಅದರಲ್ಲಿ ನೈತಿಕತೆ (Moral) ಇದೆ ಎಂದು ಹೇಳಿದ್ದಾರೆ. ಬೈಬಲ್(Bible)ಹಾಗೂ ಖುರಾನ್ (Quran) ಗಳು ಧಾರ್ಮಿಕ ಗ್ರಂಥಗಳು ಆದರೆ. ಆದರೆ ಭಗವದ್ಗೀತೆ ಹಾಗಲ್ಲ, ಯಾವುದು ಸರಿ ಯಾವುದು ತಪ್ಪು, ಯಾವುದು ನ್ಯಾಯ, ಅನ್ಯಾಯ ಎಂಬುದನ್ನು ಬೋಧಿಸುತ್ತದೆ. ಅದರಲ್ಲಿ ಜೀವನದ ಪಾಠವಿದೆ. ಹೀಗಾಗಿ ಭಗವದ್ಗೀತೆಯನ್ನು ಒಂದು ಧರ್ಮಗ್ರಂಥ ಎಂದು ಭಾವಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.


ಭಗವದ್ಗೀತೆಯನ್ನು ಕಡ್ಡಾಯವಾಗಿ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಬೋಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ರಾಜ್ಯ ಉಚ್ಛ ನ್ಯಾಯಾಲಯವು (Karnataka High court) ಹಿಜಾಬ್ ಕುರಿತು ನೀಡಿರುವ ತೀರ್ಪನ್ನು ವಿರೋಧಿಸಿ ಮುಸ್ಲಿಂ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಸಂವಿಧಾನ, ದೇಶಕ್ಕಿಂತ ಧರ್ಮವೇ ಮುಖ್ಯ ಎಂದು ಭಾವಿಸಿರುವವರು ಇನ್ನೇನನ್ನು ಮಾಡಲು ಸಾಧ್ಯ. ಇಂತಹ ವರ್ತನೆಗಳು ನಿಜಕ್ಕೂ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಇದನ್ನೂ ಓದಿ: Bhagavad Gita Teaching: ಭಗವದ್ಗೀತೆ, ಕುರಾನ್, ಬೈಬಲ್​ಗೆ ವಿರೋಧವಿಲ್ಲ-ಸಿದ್ದು, ಕುಮಾರಸ್ವಾಮಿ ಅಪಸ್ವರ, ಕೊರೊನಾಗಿಂತ ಮಾರಕ-ತನ್ವೀರ್​


ಅಂಬೇಡ್ಕರ್ ಅವರ ಮಾತು ಇಂದು ಸರಿಯಾಗಿ ಅರ್ಥವಾಗ್ತಿದೆ


ಅಂದೇ ಅಂಬೇಡ್ಕರ್ ಅವರೇ ಸ್ಪಷ್ಟವಾಗಿ ಹೇಳಿದ್ದರು. ಹಿಂದು ಮುಸ್ಲಿಂ ಇಬ್ಬರು ಇಬ್ಬರು ಒಂದಾಗಿ ಬಾಳೋದು ಕಷ್ಟ, ಸಾಧ್ಯವಿಲ್ಲ ಎಂದಿದ್ದರು. ಅವರ ಮಾತು ನಮಗೆ ಇಂದು ಸರಿಯಾಗಿ ಅರ್ಥವಾಗುತ್ತಿದೆ ಎಂದರು. ಮೊದಲು ದೇಶ ಅನಂತರ ನಮ್ಮ ವೇಷ, ಭಾಷೆ ಸಂಸ್ಕೃತಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.


ಕುಶಾಲನಗರದಿಂದ ಸಂಪಾಜೆವರೆಗೆ ಚತುಷ್ಪಥ ರಸ್ತೆ ನಿರ್ಮಾಣ


ಇನ್ನು ಕೊಡಗಿನ ಕುಶಾಲನಗರದಿಂದ ಸಂಪಾಜೆವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಆಗಲಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈಗಾಗಲೇ ಬೆಂಗಳೂರಿನಿಂದ ಮೈಸೂರುವರೆಗೆ ಒಂಭತ್ತುವರೆ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗುತ್ತಿದೆ. ಇದಕ್ಕೆ ಡೀವಿಯೇಷನ್ ಆಗಿ ಶ್ರೀರಂಗಪಟ್ಟಣದಿಂದ ಕೊಡಗಿನ ಕುಶಾಲನಗರದವರೆಗೆ 4 ಸಾವಿರ ಕೋಟಿ ರೂಪಾಯಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಆಗಲಿದೆ.


ಆದರೆ ಕುಶಾಲನಗರದಿಂದ ಸಂಪಾಜೆವರೆಗೆ ಈಗ ಇರುವ ಎರಡು ಪಥದ ರಸ್ತೆಯೇ ಇರಲಿದೆ. ಆದರೆ ರಸ್ತೆಯ ಪಾದಚಾರಿ ಮಾರ್ಗ ಏನಿದೆ ಅದನ್ನು ಮಾತ್ರವೇ ಸ್ವಲ್ಪ ಪ್ರಮಾಣದಲ್ಲಿ ವಿಸ್ತರಿಸಿ ಅದನ್ನು ಅಭಿವೃದ್ಧಿಗೊಳಿಸಲಾಗುವುದು ಎಂದಿದ್ದಾರೆ.


22 ಕಡೆ ತಡೆಗೋಡೆ, ಎರಡು ಸೇತುವೆ ನಿರ್ಮಾಣ ಆಗಬೇಕಿದೆ


2018 ರಿಂದ ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ಭೂಕುಸಿತವಾಗಿದ್ದರಿಂದ ಮಡಿಕೇರಿಯಿಂದ ಸಂಪಾಜೆವರೆಗೆ ಹಲವೆಡೆ ರಸ್ತೆ ಕುಸಿದು ಹೋಗಿತ್ತು. ಹೀಗಾಗಿ 18 ಕಡೆಗಳಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಇನ್ನೂ 22 ಕಡೆಗಳಲ್ಲಿ ತಡೆಗೋಡೆ ಮತ್ತು ಎರಡು ಬ್ರಿಡ್ಜ್ ಗಳ ನಿರ್ಮಾಣ ಅಗತ್ಯವಾಗಿ ಆಗಬೇಕಾಗಿದೆ. ಆ ಕೆಲಸಗಳನ್ನು ಮಾಡಲಾಗುವುದು ಎಂದಿದ್ದಾರೆ. ಮಡಿಕೇರಿಯಿಂದ ಸಂಪಾಜೆವರೆಗೆ ರಸ್ತೆ ಅಗಲೀಕರಣ ಮಾಡುವುದಕ್ಕೆ ಜಿಲ್ಲೆಯ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.


ಇದನ್ನೂ ಓದಿ: The Kashmir Files ಬಗ್ಗೆ ಹೀಗೆಲ್ಲಾ ಹೇಳಿದ್ರಾ ಪ್ರಕಾಶ್ ರಾಜ್? ಇತ್ತ "ನಾ ಸಿನಿಮಾ ನೋಡಲ್ಲ" ಅಂದ್ರು ಸಿದ್ದರಾಮಯ್ಯ!


ಭಗವದ್ಗೀತೆ ಕುರಿತು ಶಿಕ್ಷಣ ಸಚಿವರ ಸ್ಪಷ್ಟನೆ 


ಗುಜರಾತ್ ನಂತರದಲ್ಲಿ ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಕರ್ನಾಟಕ ರಾಜ್ಯ ಮುಂದಾಗಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಅಂತಹ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿಲ್ಲ. ಈ ವರ್ಷ ರಾಜ್ಯದ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಸೇರಿಸುತ್ತಲೂ ಇಲ್ಲ. ಇಂತಹ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ತಜ್ಞರ ಜತೆ ನಾವು ಚರ್ಚೆ ಮಾಡುತ್ತೇವೆ. ಒಂದು ವೇಳೆ ತೀರ್ಮಾನಿಸಿದಲ್ಲಿ ಹೇಗೆ ಜಾರಿ ಮಾಡಬೇಕು ಎಂದು ಮುಂದೆ ನಿರ್ಧಾರ ತೆಗೆದುಕೊಳ್ಳುತ್ತೇವೆ," ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.

First published: