• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bhagavad Gita: ರಾಜ್ಯದ ಶಾಲೆಗಳಲ್ಲಿ ಸದ್ಯಕ್ಕಿಲ್ಲ ಭಗವದ್ಗೀತೆ ಕಲಿಕೆ! ಗುಜರಾತ್‌ ಶಾಲೆಗಳಲ್ಲಿ ಬೋಧನೆ

Bhagavad Gita: ರಾಜ್ಯದ ಶಾಲೆಗಳಲ್ಲಿ ಸದ್ಯಕ್ಕಿಲ್ಲ ಭಗವದ್ಗೀತೆ ಕಲಿಕೆ! ಗುಜರಾತ್‌ ಶಾಲೆಗಳಲ್ಲಿ ಬೋಧನೆ

'ಭಗವದ್ಗೀತಾ' ಗ್ರಂಥ

'ಭಗವದ್ಗೀತಾ' ಗ್ರಂಥ

ಗುಜರಾತ್‌ನಲ್ಲಿ ಶಾಲಾ ಮಕ್ಕಳಿಗೆ 'ಭಗವದ್ಗೀತೆ' ಭೋದಿಸುವ ಕುರಿತಂತೆ ಅಲ್ಲಿನ ಸರ್ಕಾರ ಆದೇಶ ಮಾಡಿದೆ. 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುವುದು ಎಂದು ಶಿಕ್ಷಣ ಸಚಿವ ಜಿತು ವಘಾನಿ ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲೂ ಬಗ್ಗೆ ಚರ್ಚೆ ನಡೆದಿದೆ.

  • Share this:

ಭಗವದ್ಗೀತೆಯನ್ನು (Bhagavad Gita) ಶಾಲಾ ಮಕ್ಕಳಿಗೆ (School Students) ಕಲಿಸುವಂತೆ ಈ ಹಿಂದೆ ಬಿಜೆಪಿ (BJP) ಅನೇಕ ಸಲ ಹೇಳಿತ್ತು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ (State) ಶಾಲಾ ಮಕ್ಕಳ ಪಠ್ಯದಲ್ಲಿ (Text Book) ಭಗವದ್ಗೀತೆ ಅಳವಡಿಸೋ ಬಗ್ಗೆ ಹಲವು ಸಲ ಭರವಸೆ ನೀಡಿತ್ತು. ಇದೀಗ ಗುಜರಾತ್‌ನಲ್ಲಿ (Gujarat) ಶಾಲಾ ಮಕ್ಕಳಿಗೆ ಭಗವದ್ಗೀತೆ ಭೋದಿಸುವ ಕುರಿತಂತೆ ಅಲ್ಲಿನ ಸರ್ಕಾರ (Government) ಆದೇಶ ಮಾಡಿದೆ. ಗುಜರಾತ್‌ನಲ್ಲಿ6 ರಿಂದ 12 ನೇ ತರಗತಿಯ (Class) ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುವುದು ಎಂದು ಗುಜರಾತ್ ಶಿಕ್ಷಣ ಸಚಿವ (Education Minister) ಜಿತು ವಘಾನಿ (Jitu Vaghani) ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲೂ (Karnataka) ಬಗ್ಗೆ ಚರ್ಚೆ ನಡೆದಿದೆ. ಇದರ ಕುರಿತಂತೆ ಖುದ್ದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C. Nagesh) ಅವರೇ ವಿಧಾನಸಭೆಯಲ್ಲಿ (Vidhana sabhe) ಸ್ಪಷ್ಟನೆ ನೀಡಿದ್ದಾರೆ.


“ಕರ್ನಾಟಕದಲ್ಲಿ ಸದ್ಯಕ್ಕಿಲ್ಲ ಭಗವದ್ಗೀತೆ ಬೋಧನೆ”


ಕರ್ನಾಟಕದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಭೋದಿಸುವ ಕುರಿತಂತೆ ವಿಧಾನಸಭೆಯಲ್ಲಿಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಆ ರೀತಿಯ ಯಾವುದೇ ಚರ್ಚೆ ನಮ್ಮಲ್ಲಿ ನಡೆದಿಲ್ಲ. ಆದರೆ ಮಕ್ಕಳಿಗೆ ಮಾರಲ್ ಸೈನ್ಸ್ ಬೋಧನೆ ಬೇಕು ಎನ್ನುವ ಬೇಡಿಕೆ ಇದೆ. ಇತ್ತೀಚಿನ ಮಕ್ಕಳಲ್ಲಿ ಮಾರಲ್ ಸೈನ್ಸ್ ಬಗ್ಗೆ ಹೆಚ್ಚಿನ ಒಲವಿಲ್ಲ. ಹೀಗಾಗಿ ಪ್ರಾಥಮಿಕ ಶಾಲೆಯಿಂದಲೇ ಮಕ್ಕಳಲ್ಲಿ ಈ ಬಗೆಗಿನ ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದಿದ್ದಾರೆ.


“ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬಗ್ಗೆ ನೋಡೋಣ”


ಈ ಬಗ್ಗೆ ಮುಂದೆ ಚರ್ಚೆ ಮಾಡಿ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಮಾಡಲಾಗುತ್ತೆ. ಪಠ್ಯ ಪುಸ್ತಕ ರಚನಾ ಸಮಿತಿ ಇದೆ, ಅವರ ಅಭಿಪ್ರಾಯವೂ ಮುಖ್ಯವಾಗುತ್ತೆ ಮುಂದಿನ ಸಾಲಿನಿಂದ ಬೇಕಿದ್ದರೆ ಈ ಬಗ್ಗೆ ಯೋಚನೆ ಮಾಡೋಣ ಅಂತ ನಾಗೇಶ್ ಹೇಳಿದ್ದಾರೆ.


ಇದನ್ನೂ ಓದಿ: 2020ರ SSLC ಮೌಲ್ಯಮಾಪನ ವೇಳೆ ಶಿಕ್ಷಕರಿಂದ ದೋಷ: 51 ಲಕ್ಷ ದಂಡದಲ್ಲಿ 10 ಲಕ್ಷ ಮಾತ್ರ ಪಾವತಿಸಿದ ಶಿಕ್ಷಕರು


 ಗುಜರಾತ್‌ ಶಾಲೆಗಳಲ್ಲಿ ಭಗವದ್ಗೀತೆ ಕಡ್ಡಾಯ


ಮತ್ತೊಂದೆಡೆ ಗುಜರಾತ್ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಭಗವದ್ಗೀತೆ, ಪವಿತ್ರ ಮಹಾಕಾವ್ಯವನ್ನು ಕಡ್ಡಾಯಗೊಳಿಸಲಾಗಿದೆ. 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುವುದು ಎಂದು ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ಹೇಳಿಕೆ ನೀಡಿದ್ದಾರೆ.


ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ


ವರದಿಗಳ ಪ್ರಕಾರ, ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದ ಕಡ್ಡಾಯ ಭಾಗವನ್ನಾಗಿ ಮಾಡುವ ಹಿಂದಿನ ಆಲೋಚನೆಯು 'ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ವ್ಯವಸ್ಥೆಯನ್ನು' ಪೋಷಿಸುವುದು. ಮುಂಬರುವ ಶೈಕ್ಷಣಿಕ ವರ್ಷ, 2022-23 ರಿಂದ ಗುಜರಾತ್ ಶಾಲೆಗಳಲ್ಲಿ ಈ ಹಂತವನ್ನು ಜಾರಿಗೆ ತರಲು ಯೋಚಿಸಲಾಗಿದೆ.


ಬೇರೆ ಬೇರೆ ರೀತಿಯಲ್ಲಿ ಭಗವದ್ಗೀತೆ ಬೋಧನೆ


ಭಗವದ್ಗೀತೆಯ ಪರಿಚಯವನ್ನು ಬೇರೆ ಬೇರೆ ಭಾಗಗಳಲ್ಲಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ವಘಾನಿ ಹೇಳಿದ್ದಾರೆ. 6 ರಿಂದ 8 ನೇ ತರಗತಿಗಳಿಗೆ, ಈ ಪವಿತ್ರ ಪಠ್ಯವನ್ನು ಪಠ್ಯಪುಸ್ತಕಗಳಲ್ಲಿ ಕಥೆ ಮತ್ತು ಪಠಣದ ರೂಪದಲ್ಲಿ ಪರಿಚಯಿಸಲಾಗುತ್ತದೆ. 9 ರಿಂದ 12 ನೇ ತರಗತಿಗಳಿಗೆ, ಇದನ್ನು ಮೊದಲ ಭಾಷೆಯ ಪಠ್ಯ ಪುಸ್ತಕದಲ್ಲಿ ಕಥೆ ಮತ್ತು ವಾಚನದ ರೂಪದಲ್ಲಿ ಪರಿಚಯಿಸಲಾಗುವುದು ಎಂದಿದ್ದಾರೆ. .


ಇದನ್ನೂ ಓದಿ: SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರೆಡಿ ಆಗ್ತಾ ಇದ್ದೀರಾ? ಹಾಗಾದ್ರೆ ಬೆಂಗಳೂರು ಆಕಾಶವಾಣಿಯಲ್ಲಿ ಪಾಠ ಕೇಳಿ!


2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ 6 ರಿಂದ 12 ನೇ ತರಗತಿಗಳಿಗೆ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು ಗುಜರಾತ್ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಪ್ರಕಟಿಸಿದೆ. ಶಿಕ್ಷಣ ಸಚಿವ ಜಿತು ವಘಾನಿ ಅವರು ಶಿಕ್ಷಣ ಇಲಾಖೆಗೆ ಬಜೆಟ್‌ನಲ್ಲಿ ಮೀಸಲಿಡುವ ಚರ್ಚೆಯ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ಈ ಘೋಷಣೆ ಮಾಡಿದರು.

Published by:Annappa Achari
First published: