• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BK Sangamesh: ಇನ್ನೊಂದು ತಿಂಗಳೊಳಗೆ ಬಿಎಸ್​ವೈ, ಈಶ್ವರಪ್ಪ ದಾಖಲೆ ಬಿಡುಗಡೆ; ಶಾಸಕ ಸಂಗಮೇಶ್​​

BK Sangamesh: ಇನ್ನೊಂದು ತಿಂಗಳೊಳಗೆ ಬಿಎಸ್​ವೈ, ಈಶ್ವರಪ್ಪ ದಾಖಲೆ ಬಿಡುಗಡೆ; ಶಾಸಕ ಸಂಗಮೇಶ್​​

ಶಾಸಕ ಸಂಗಮೇಶ್

ಶಾಸಕ ಸಂಗಮೇಶ್

ಬಿಜೆಪಿಗೆ ಭದ್ರಾವತಿಯಲ್ಲಿ ನೆಲೆಯೇ ಇಲ್ಲ. ಹಾಗಾಗಿ ಅಲ್ಲಿ ಬಿಜೆಪಿ ಬೀಜ ಬಿತ್ತಬೇಕು ಎಂದು ಗಲಾಟೆ ಮಾಡಿಸುತ್ತಿದ್ದಾರೆ. ಸೌಹಾರ್ದತೆ ಪ್ರೀತಿಯಿಂದ ಭದ್ರಾವತಿ ಜನ ಬದುಕುತ್ತಿದ್ದಾರೆ. ಆದರೆ, ಯಡಿಯೂರಪ್ಪ, ರಾಘವೇಂದ್ರ, ಈಶ್ವರಪ್ಪ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ

  • Share this:

    ಬೆಂಗಳೂರು (ಮಾ. 6):  ಆಡಳಿತ ಪಕ್ಷದವರು ವಿಪಕ್ಷದವರಿಗೆ ಕಾಟ ಕೊಡಬಾರದು. ಯಡಿಯೂರಪ್ಪ ಈಶ್ವರಪ್ಪ ಎಲ್ಲಿದ್ದರು. ಎಲ್ಲಿಂದ ಎಲ್ಲಿಗೆ ಬಂದ್ದರು ಎನ್ನುವುದು ನನಗೆ ಗೊತ್ತಿದೆ. ರಾಘವೇಂದ್ರ ಎಲ್ಲಿದ್ದರು ಎಲ್ಲಿಗೆ ಬಂದರು ಎನ್ನುವುದರ ಸಂಪೂರ್ಣ ದಾಖಲೆ ನನ್ನ ಹತ್ತಿರ ಇದೆ. ಸಮಯ ಬಂದಾಗ ಯಡಿಯೂರಪ್ಪ ದಾಖಲೆ ಬಿಡುಗಡೆ ಮಾಡುತ್ತೇನೆ. ಇದರ ಜೊತೆಗೆ ಈಶ್ವರಪ್ಪನ ದಾಖಲೆ ಕೂಡ ಬಿಡುಗಡೆ ಮಾಡುತ್ತೇನೆ. ಇನ್ನೊಂದು  ತಿಂಗಳೊಳಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಕಾಂಗ್ರೆಸ್​ ಶಾಸಕ ಬಿಕೆ ಸಂಗಮೇಶ್​ ತಿಳಿಸಿದ್ದಾರೆ. ಮಗನ ಬಂಧನದ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ನಾನು ದಾಖಲೆಗಳನ್ನು ಹಿಡಿದುಕೊಂಡು ಬ್ಲಾಕ್​ಮೇಲ್​ ಮಾಡುತ್ತಿಲ್ಲ. ಆ ರೀತಿ ಬ್ಲಾಕ್​ ಮೇಲ್​ ಮಾಡುವ ಜನರೇ ಬೇರೆ. ನಾನೇ ಬೇರೆ. ಬಿಜೆಪಿ ಸರ್ಕಾರ ಎಕ್ಕುಟ್ಟೋಗುತ್ತೆ ನೋಡುತ್ತಾ ಇರಿ. ಇವರಿಂದಾಗಿ ನಮಗೂ ಮರ್ಯಾದೆ ಇಲ್ಲದಾಗಿದೆ. ಜನರ ಸೇವೆ ಮಾಡಿ ಎಂದರೆ ಇಲ್ಲಿ ಮಜಾ ಮಾಡುತ್ತಾರೆ ಎಂದು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.


    ರಾಜ್ಯ ಬಿಜೆಪಿ ಸರ್ಕಾರ ಬಂದಾಗಿಂದ ನಮ್ಮ ಜನರ ಮೇಲೆ ಬಹಳಷ್ಡು ದ್ವೇಷ ಮಾಡುತ್ತಿದ್ದಾರೆ. ಸುಳ್ಳು ಮೊಕ್ಕದ್ದಮೆಗಳನ್ನು ಹೂಡಿಸಿ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಅಧಿಕಾರದ ವ್ಯಾಮೋಹದಿಂದ ಇಂಥ ಕೆಲಸ ಮಾಡಿದ್ದಾರೆ. ಬಿಜೆಪಿಗೆ ಭದ್ರಾವತಿಯಲ್ಲಿ ನೆಲೆಯೇ ಇಲ್ಲ. ಹಾಗಾಗಿ ಅಲ್ಲಿ ಬಿಜೆಪಿ ಬೀಜ ಬಿತ್ತಬೇಕು ಎಂದು ಗಲಾಟೆ ಮಾಡಿಸುತ್ತಿದ್ದಾರೆ. ಆದರೆ ಭದ್ರಾವತಿ ಜನ ಬಿಜೆಪಿಯನ್ನು ಒಪ್ಪುವುದಿಲ್ಲ. ಸೌಹಾರ್ದತೆ ಪ್ರೀತಿಯಿಂದ ಭದ್ರಾವತಿ ಜನ ಬದುಕುತ್ತಿದ್ದಾರೆ. ಆದರೆ, ಯಡಿಯೂರಪ್ಪ, ರಾಘವೇಂದ್ರ, ಈಶ್ವರಪ್ಪ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ನನ್ನ ವಿರುದ್ಧ ದಾಖಲಾದ ಕ್ರಿಮಿನಲ್​ ಮೊಕ್ಕದ್ಧಮೆ ಕುರಿತು ಅಧಿವೇಶನದಲ್ಲಿ ಗಮನ ಸೆಳೆಯಲು ಮುಂದಾದೆ. ಆದರೆ, ಸ್ಪೀಕರ್ ನನ್ನ ಮನವಿಗೆ ಮನ್ನಣೆ ಕೊಡಲಿಲ್ಲ. ಶರ್ಟ್ ಬಿಚ್ಚಿದರಾದರೂ ಮನ್ನಣೆ ಕೊಡುತ್ತಾರೆ ಎಂದುಕೊಂಡೆ. ಆದರೆ ಸ್ಪೀಕರ್ ನಡೆದುಕೊಂಡಿದ್ದು ಯಾವ ಪ್ರಜಾಪ್ರಭುತ್ವ ಎಂದು ಪ್ರಶ್ನಿಸಿದ ಅವರು, ಈ ಸರ್ಕಾರಕ್ಕೆ ಎರಡು ಮೂರು ತಿಂಗಳು ಮಾತ್ರ ಆಯುಷ್ಯ ಇರುವುದು ಎಂದು ಭವಿಷ್ಯ ನುಡಿದರು.


    ಇದನ್ನು ಓದಿ: ಕಾಂಗ್ರೆಸ್​ ಶಾಸಕ ಸಂಗಮೇಶ್​ ಮಗ ಬಸವೇಶ್​ ಬಂಧನ


    ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಆಗುತ್ತಾರೆ. ಮಂಗಳವಾರದಿಂದ ನಮ್ಮ ಜಿಲ್ಲೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ನಮ್ಮ ಕುಟುಂಬದವರೂ ಮುತ್ತಿಗೆ ಹಾಕುತ್ತೇವೆ. ನಮ್ಮ 35 ಜನರನ್ನು ಬಂಧಿಸಲಾಗಿದೆ. ಮುಂದಿನ‌ ಶನಿವಾರ ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಕೂಡ ನಮ್ಮ ಜಿಲ್ಲೆ ಎಸ್ ಪಿ ಆಫೀಸ್ ಮುಂದೆ ಪ್ರತಿ ಭಟನೆ ಮಾಡುತ್ತಾರೆ ಎಂದರು.


    ಇದೇ ವೇಳೆ ಅವರ ಜೊತೆ ಇದ್ದ ಲಿಂಗಾಯತ ಗಾಣಿಗ ಸ್ವಾಮೀಜಿ ಯೋಗಿ ಕಲ್ಲಿನಾಥ ಮಾತನಾಡಿದ ಅವರು, ಭದ್ರಾವತಿ ಕ್ಷೇತ್ರದಲ್ಲಿ ಜನರ ಮನಸ್ಸು ಗೆದ್ದು ಇತಿಹಾಸ ಬರೆದವರು ಸಂಗಮೇಶ್. ಭದ್ರಾವತಿ ಕ್ಷೇತ್ರದ ಪ್ರತಿ ಮತದಾರರನ್ನು ಎಲ್ಲ ಸಮುದಾಯಗಳನ್ನು ಸಂಗಮೇಶ್ ಗಣನೆಗೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. 2023ರ ಚುನಾವಣೆಗೆ ಬಿಜೆಪಿಗೆ ಭದ್ರಾವತಿಯಲ್ಲಿ ಅಭ್ಯರ್ಥಿ ಇಲ್ಲ. ಅದಕ್ಕಾಗಿ ಗಾಣಿಗ ಸಮುದಾಯದವರನ್ನು ತುಳಿಯುವುದಕ್ಕೆ ವಿಪಕ್ಷ ಬಿಜೆಪಿ ಇಂಥ ಕೆಲಸ ಮಾಡುತ್ತಿದ್ದಾರೆ. ಸಂಗಮೇಶ್ ನಮ್ಮ ಸಮಾಜದ ಶಾಸಕರು, ಅವರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು. ಇಲ್ಲದೆ ಹೋದರೆ ರಾಜ್ಯಾದ್ಯಂತ ಗಾಣಿಗ ಸಮುದಾಯ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    Published by:Seema R
    First published: