• Home
 • »
 • News
 • »
 • state
 • »
 • Car Theft: ನಾಳೆ ನಿಮ್ಮ ಕಾರ್ ಬೈಕ್​​ಗಳು ಕಳುವಾಗಬಹುದು, ಇರಲಿ ಎಚ್ಚರ!

Car Theft: ನಾಳೆ ನಿಮ್ಮ ಕಾರ್ ಬೈಕ್​​ಗಳು ಕಳುವಾಗಬಹುದು, ಇರಲಿ ಎಚ್ಚರ!

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

ಹೌದು ಕಣ್ರಿ ಇತ್ತಿಚ್ಚಿಗೆ ಕಳ್ಳರ ಕಣ್ಣು ಎಲ್ಲದರ ಮೇಲೆ ಬೀಳುತ್ತಿದೆ. ಅದರೆ ಈಗ ಟಾರ್ಗೆಟ್ ಮಾಡಿ ಮಾರುತಿ ಸ್ವಿಫ್ಟ್ ಮತ್ತು ಹೀರೋ ಸ್ಪ್ಲೆಂಡರ್ ಗಾಡಿಗಳ್ಳನ್ನುಕದಿಯಲು ಆರಂಭಿಸಿದ್ದಾರೆ. ನಾಳೆ ನಿಮ್ಮ ಕಾರ್ ಬೈಕ್ಗಳು ಕಳುವಾಗಬಹುದು ಎಚ್ಚರ!

 • Share this:

  ಎನಪ್ಪಾ ಹಿಂಗೂ  ಕಳ್ಳರು (thieves) ಯೋಚನೆ ಮಾಡ್ತರಾ ಅಂತ ಗಾಬರಿ ಆಗ್ತಾ ಇದೆಯಾ. ಹೌದು ಕಣ್ರಿ ಇತ್ತಿಚ್ಚಿಗೆ ಕಳ್ಳರ ಕಣ್ಣು ಎಲ್ಲದರ ಮೇಲೆ ಬೀಳುತ್ತಿದೆ. ಅದರೆ ಈಗ ಟಾರ್ಗೆಟ್ (Target) ಮಾಡಿ ಮಾರುತಿ ಸ್ವಿಫ್ಟ್ ಮತ್ತು ಹೀರೋ ಸ್ಪ್ಲೆಂಡರ್ ಗಾಡಿಗಳ್ಳನ್ನುಕದಿಯಲು ಆರಂಭಿಸಿದ್ದಾರೆ. ಕಾರು ಕಳ್ಳತನದ (Car Theft) ಸುದ್ದಿಗಳು (News) ದಿನ ಬೆಳಗಾದರೆ ಕಿವಿಗೆ ಬೀಳುತ್ತಿರುತ್ತದೆ. ತಮ್ಮ ಕಾರು ಕಳ್ಳತನವಾಗದಂತೆ ತಡೆಯಲು ಅನೇಕರು ಪ್ರಯತ್ನ ಪಡುತ್ತಾರೆ (Many Try). ಆದರೆ, ಕಳ್ಳತನ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ (Not Decreasing). ನಿಮ್ಮ ಕಾರನ್ನು ಕದಿಯುವುದು  ಕಳ್ಳರಿಗೆ ಎಷ್ಟು ಸುಲಭ ಎನ್ನುವುದು ನೀವು ಬಳಸುತ್ತಿರುವ ಕಾರು ಯಾವುದು ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ (Depends). ವಿಮಾ ಕಂಪನಿ Acko ಇತ್ತೀಚೆಗೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ (Released the report). ಈ ವರದಿಯಲ್ಲಿ ಒಂದು ಆಘಾತಕಾರಿ (Shocking) ಅಂಶ ಹೊರ ಬಿದ್ದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರು (Maruthi Suzuki) ಮತ್ತು ಹೀರೋ ಸ್ಪ್ಲೆಂಡರ್ನಂತಹ ಬೈಕ್ಗಳನ್ನು ಬಳಸುತ್ತಿದ್ದವರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ.


  ಹೆಚ್ಚು ಕದ್ದ ಕಾರುಗಳು ಯಾವುದು ಗೊತ್ತಾ


  ಮಾರುತಿ ಸುಜುಕಿ ವ್ಯಾಗನ್ ಆರ್/ ಮಾರುತಿ ಸುಜುಕಿ ಸ್ವಿಫ್ಟ್,  ಹುಂಡೈ ಕ್ರೆಟಾ, ಹುಂಡೈ ಸ್ಯಾಂಟ್ರೋ, ಹೋಂಡಾ ಸಿಟಿ, ಹುಂಡೈ ಐ10 ಕಾರುಗಳು. ಇವನ್ನೆಲ್ಲಾ ಕಳ್ಳರು ಸುಲಭವಾಗಿ ಕದಿಯುತ್ತರೆ ಎಂದು ತಿಳಿದು ಬಂದಿದೆ. ಮತ್ತು ಇಂತಹ ಕಾರುಗಳ ಮಾಲಿಕರು ಜಾಗ್ರತೆವಾಹಿಸಬೇಕು ಎನ್ನುವ ಎಚ್ಚರಿಕೆಯನ್ನು ಸಹಾ ಪೊಲೀಸರು ನೀಡಿದ್ದಾರೆ. ಹಿಗಾಗಿ ಕಳೆದುಕೊಂಡವರು ಯಾವ ಮಾದರಿಯಲ್ಲಿ ಹುಡುಕಿದರು ಸಿಗದಂತೆ ಮಾಯವಾಗುತ್ತಿದೆ ಕಾರ್ ಗಳು.


  ಸಾಂಧರ್ಬಿಕ ಚಿತ್ರ


  ಕಳುವಾದ ಬೈಕ್ ಗಳು ಯಾವುದು ಗೊತ್ತ


  ಹೀರೋ ಸ್ಪ್ಲೆಂಡರ್, ಹೋಂಡಾ ಆಕ್ಟಿವಾ, ಬಜಾಜ್ ಪಲ್ಸರ್, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350,ಟಿವಿಎಸ್ ಅಪಾಚೆ ಇಂತಹ ಬೈಕ್ಗಳನ್ನು ಟಾರ್ಗೆಟ್ ಮಾಡಿ ಕದಿಯಲು ಆರಂಭಿಸಿದ್ದಾರೆ. ಇಲ್ಲೂ ಅಷ್ಟೆ ಕಳೆದುಕೊಂಡವರು ಯಾವ ಮಾದರಿಯಲ್ಲಿ ಹುಡುಕಿದರು ಸಿಗದಂತೆ ಮಾಯವಾಗುತ್ತಿದೆ ಕಾರ್ ಗಳು.


  ಇದನ್ನೂ ಓದಿ: Cars Theft: ಕಾರು ಕಳ್ಳರಿದ್ದಾರೆ ಹುಷಾರ್! ಈ ಬ್ರ್ಯಾಂಡ್​ ಕಾರುಗಳೇ ಇವರ ಟಾರ್ಗೆಟ್


  ದೆಹಲಿಯಲ್ಲಿ ಕಾರು ಕಳ್ಳತನ ಹೆಚ್ಚಾಗುತ್ತಿದೆ


  ಭಾರತದಲ್ಲಿ ದೆಹಲಿ-ಎನ್‌ಸಿಆರ್ ನಲ್ಲಿ ಕಾರು ಕಳ್ಳತನದ ಅಪಾಯ ಹೆಚ್ಚು ಎಂದು ಹೇಳಲಾಗಿದೆ. ದೆಹಲಿಯ ಉತ್ತರದ ಪ್ರದೇಶಗಳಾದ ರೋಹಿಣಿ, ಭಜನ್‌ಪುರ, ದಯಾಲ್‌ಪುರ ಮತ್ತು ಸುಲ್ತಾನ್‌ಪುರಿಗಳಲ್ಲಿ ಕಳ್ಳತನದ ಸಾಧ್ಯತೆಗಳು ಹೆಚ್ಚು. ಈ ಪಟ್ಟಿಯಲ್ಲಿ ನೋಯ್ಡಾದ ಸೆಕ್ಟರ್ 12, ಪಶ್ಚಿಮದಲ್ಲಿ ಉತ್ತಮ್ ನಗರ ಮತ್ತು ಗುರುಗ್ರಾಮ್‌ನ ದಕ್ಷಿಣ ನಗರವೂ ​​ಸೇರಿದೆ. ಎನ್‌ಸಿಆರ್‌ನಲ್ಲಿ ಪ್ರತಿ 12 ನಿಮಿಷಕ್ಕೊಂದು ವಾಹನ ಕಳ್ಳತನವಾಗುತ್ತಿದೆ ಎಂದು  ವರದಿಯಲ್ಲಿ ಹೇಳಲಾಗಿದೆ.


  ಇದನ್ನೂ ಓದಿ: ಕಾರು ಕಳ್ಳತನದ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳು ಯಾವುವು..? ಇಲ್ಲಿದೆ ವಿವರ


  ಬಣ್ಣದ ಕಾರುಗಳು ನಿಮ್ಮಲ್ಲಿದ್ರೆ ಎಚ್ಚರ


  ಬಿಳಿ ಬಣ್ಣದ ಕಾರುಗಲೇ ಕಳ್ಳರ  ಟಾರ್ಗೆಟ್ ಅಂತೆ.  ಬಿಳಿ ಬಣ್ಣದ ಕಾರನ್ನೇ ಟಾರ್ಗೆಟ್ ಮಾಡುವ ಹಿಂದಿನ ಉದ್ದೇಶವೆಂದರೆ  ಬಿಳಿ ಬಣ್ಣದ ಕಾರುಗಳು ಟ್ರಾಫಿಕ್‌ನೊಂದಿಗೆ ಬೆರೆಯುವುದು ತುಂಬಾ ಸುಲಭ.


  ಇದಲ್ಲದೇ ಬಿಳಿ ಬಣ್ಣದ ಕಾರುಗಳಿಗೆ ಬೇರೆ ಬಣ್ಣ ಬಳಿಯುವುದು ಕೂಡಾ ಸುಲಭ. ಮತ್ತು ಸುಲಭವಾಗಿ ನಂಬರ್ ಪ್ಲೇಟ್ ಚೆಂಜ್ ಮಾಡಲು ಆಗುತ್ತಂತೆ. ಹಾಗಾಗಿ ನೀವು ನಿಮ್ಮ ಕಾರ್ ನ ಬಗ್ಗೆ ಗಮನಹರಿಸುವುದು ಉತ್ತಮ. ಕಾರ್ ಗಳ ಸೇಫ್ಟಿಗೆ ಬೇಕಾಗುವಂತಹ ಎಲ್ಲ ಕೆಲಸವನ್ನು ಈಗಲೇ ಆರಂಭಿಸಿ.

  Published by:Harshith AS
  First published: