HOME » NEWS » State » BEWARE OF DATA THEFT JUICE JACKING THROUGH MOBILE CHARGING POINTS SHB SNVS

ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಚಾರ್ಜ್ ಬೇಡ; ಜ್ಯೂಸ್ ಜ್ಯಾಕಿಂಗ್ ಮಾಡುವ ಡಾಟಾ ಕಳ್ಳರಿದ್ದಾರೆ ಎಚ್ಚರ

ಪಬ್ಲಿಕ್ ಪ್ಲೇಸ್​ನಲ್ಲಿ ಯುಎಸ್​ಬಿ ಕೇಬಲ್​ನ ಚಾರ್ಜಿಂಗ್ ಪಾಯಿಂಟ್​ಗಳಲ್ಲಿ ನೀವು ಮೊಬೈಲ್ ಚಾರ್ಜ್ ಮಾಡಿದರೆ ಡಾಟಾ ಕಳ್ಳತನವಾಗುವ ಸಾಧ್ಯತೆ ಇದೆ. ಮಾಲ್​ವೇರ್ ಮೂಲಕ ನಿಮ್ಮ ಮೊಬೈಲ್​ಲ್ಲಿರುವ ಮಾಹಿತಿಯನ್ನು ಕದ್ದುಬಿಡುತ್ತಾರೆ ಸೈಬರ್ ಕಳ್ಳರು ಹುಷಾರ್.

news18-kannada
Updated:December 3, 2020, 7:43 AM IST
ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಚಾರ್ಜ್ ಬೇಡ; ಜ್ಯೂಸ್ ಜ್ಯಾಕಿಂಗ್ ಮಾಡುವ ಡಾಟಾ ಕಳ್ಳರಿದ್ದಾರೆ ಎಚ್ಚರ
ಮೊಬೈಲ್ ಚಾರ್ಜಿಂಗ್
  • Share this:
ಬೆಂಗಳೂರು: ಸಾರ್ವಜನಿಕ ಪ್ರದೇಶದಲ್ಲಿ ನೀವು ಮೊಬೈಲ್ ಚಾರ್ಜಿಂಗ್ ಹಾಕ್ತಿದ್ದೀರಾ..? ಬ್ಯಾಟರಿ ಲೋ ಅಂತ ಸಿಕ್ಕ ಸಿಕ್ಕ ಕಡೆ ಕಡೆಯೆಲ್ಲಾ ಚಾರ್ಜ್ ಹಾಕಬೇಡಿ. ಸ್ವಲ್ಪ ಯಾಮಾರಿದರೂ ನಿಮ್ಮ ಮೊಬೈಲ್ ಡಾಟಾ ಹ್ಯಾಕ್ ಆಗುತ್ತೆ ಹುಷಾರ್..! ಶಾಪಿಂಗ್ ಮಾಲ್, ಸಿನಿಮಾ ಮಂದಿರ, ಬಸ್‌ ನಿಲ್ದಾಣ, ರೈಲ್ವೇ  ವಿಮಾನ ನಿಲ್ದಾಣ, ನಿಲ್ದಾಣ ಸೇರಿದಂತೆ ಸಾರ್ವಜನಿಕ‌ ಸ್ಥಳಗಳಲ್ಲಿ ನಿಮ್ಮ ಮೊಬೈಲ್ ಚಾರ್ಜ್ ಹಾಕುವ ಮುನ್ನ ಗಮನಿಸಿ. ಯಾಕೆಂದರೆ ಅಲ್ಲಿ ಯುಎಸ್​ಬಿ (ಯೂನಿವರ್ಸಲ್ ಸೀರಿಯಲ್ ಬಸ್) ಚಾರ್ಜರ್ ಇದ್ದರೆ ನಿಮ್ಮ ಮೊಬೈಲ್ ಚಾರ್ಜ್ ಮಾಡೋದನ್ನ ತಪ್ಪಿಸಿ. ಯಾಕೆಂದರೆ ಇಂಥ ಉಪಕರಣದಿಂದ ನಿಮ್ಮ ಮೊಬೈಲ್ ಮಾಹಿತಿಯನ್ನ ಸುಲಭವಾಗಿ ಕಳವು ಮಾಡಲು ಸೈಬರ್ ಕಳ್ಳರು ರೆಡಿಯಾಗಿ ಕಾದು ಕುಳಿತಿರುತ್ತಾರೆ. ಮೊಬೈಲ್‌ ಅನ್ನು ಚಾರ್ಜಿಂಗ್‌ಗೆ ಹಾಕಿದಾಗ ಮೊಬೈಲ್‌ನಲ್ಲಿರುವ ಡೇಟಾ ಆ ಕೇಬಲ್‌ ಗೆ ಸಂಗ್ರಹವಾಗುತ್ತದೆ. ಈ ಕುರಿತು ಸೈಬರ್ ತಜ್ಞರು ಭಯಾನಕ ಸತ್ಯ ಬಿಚ್ಚಿಟ್ಟಿದ್ದಾರೆ. ನೆಟ್ ಬ್ಯಾಂಕಿಂಗ್ ಮಾಹಿತಿ ಕದ್ದು ನಿಮ್ಮ ಬ್ಯಾಂಕ್ ಅಕೌಂಟ್​ಗೂ ಕನ್ನ ಹಾಕಬಹುದು ಎಂದು ಸೈಬರ್ ತಜ್ಞ ಬಿ ಎನ್‌ ಫಣೀಂದ್ರ ಹೇಳುತ್ತಾರೆ.

ಜ್ಯೂಸ್ ಜ್ಯಾಕಿಂಗ್ ಎನ್ನುವ ಹೊಸ ತಂತ್ರದೊಂದಿಗೆ ಮಾಲ್ ವೇರ್ ಸಾಫ್ಟವೇರ್ ಸಹಾಯದಿಂದ ಸೈಬರ್ ಖದೀಮರು  ನಿಮ್ಮ ಮೊಬೈಲ್ ನಲ್ಲಿರುವ ಫೋಟೋ, ವೀಡಿಯೋ, ಪರ್ಸನಲ್ ಡಾಟಾ, ಕಾಂಟಾಕ್ಟ್ ಎಲ್ಲವೂ ಕದೀತಾರೆ. ನೀವೇನೋ ಚಾರ್ಜ್​ಗೆ ಇಟ್ಟೀದ್ದೀವಿ ಅನ್ಕೊಳ್ತೀರಿ. ಆದ್ರೆ ಅದೊಂದು ಮಹಾಮೋಸ ಅಂತ ನಿಮಗೆ ಗೊತ್ತಾಗೋದೇ ಇಲ್ಲ. ನಿಮ್ಮ ಗೂಗಲ್ ಪೇ, ಫೋನ್ ಪೇ ಹಾಗೂ ಇತರೆ ಬ್ಯಾಂಕಿಂಗ್ ಆಪ್​ಗಳ‌ ಮಾಹಿತಿನೂ ಸಲೀಸಾಗಿ ಎಗರಿಸುತ್ತಾರೆ.  ಹ್ಯಾಕರ್​ಗಳು ಪಾಸ್​ವರ್ಡ್ ಸೇರಿದಂತೆ ಡೇಟಾವನ್ನು ಓದಬಹುದು ಮತ್ತು ರಫ್ತು ಮಾಡಬಹುದು, ಗ್ಯಾಜೆಟ್ ಗಳನ್ನು ಲಾಕ್ ಕೂಡ ಮಾಡಬಹುದು. ಜ್ಯೂಸ್ ಜ್ಯಾಕಿಂಗ್ ಮಾಡಿ ನಿಮ್ಮ ಅಕೌಂಟ್ ಗೂ ಕನ್ನ ಹಾಕ್ತಾರೆ. ನೀವೇನಾದರೂ ಬ್ಯಾಂಕ್ ಅಕೌಂಟ್​ನಲ್ಲಿ ಲಕ್ಷ‌ಲಕ್ಷ ಇಟ್ಟಿದ್ದರೆ ಕ್ಷಣ ಮಾತ್ರದಲ್ಲಿ ಉಂಡೇನಾಮ ಬೀಳೋದು ಗ್ಯಾರಂಟಿ.

Cyber crime expert BN Phaneendra
ಸೈಬರ್ ಕ್ರೈಮ್ ತಜ್ಞ ಬಿ ಎನ್ ಫಣೀಂದ್ರ


ಜನರು ಹೇಗೆ ಜಾಗರೂಕರಾಗಬೇಕು?
* ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜಿಂಗ್ ಬೇಡ;
* ಅನಿವಾರ್ಯವಿದ್ದರೆ ಜಾರ್ಜಿಂಗ್‌ ಮಾಡುವಾಗ ಎಚ್ಚರವಹಿಸಿ;
* ಯುಎಸ್​ಬಿ ಕೇಬಲ್ ಇದ್ದರೆ ಹೊರಗಡೆ ಚಾರ್ಜಿಂಗ್ ಮಾಡಬೇಡಿ;* ಚಾರ್ಜ್ ಮಾಡುವ ಮೊಬೈಲ್ ಫೋನ್‌ ಲಾಕ್ ಇದೆಯಾ ಎಂದು ಖಚಿತಪಡಿಸಿಕೊಳ್ಳಿ;
* ಕಚೇರಿ, ಮನೆಯಲ್ಲಿದ್ದಾಗಲೇ ಮೊಬೈಲ್ ಚಾರ್ಜ್ ಮಾಡಿಕೊಳ್ಳಿ;
* ಹೊರಗಡೆ ನಿಮ್ಮದೇ ಮೊಬೈಲ್‌ ಚಾರ್ಜರ್, ಪವರ್ ಬ್ಯಾಂಕ್ ಬಳಸಿ;
* ಅನಾಮಿಕ‌ ಸಂದೇಶಗಳ ಮೇಲೆ‌ ಕ್ಲಿಕ್ ಮಾಡಬೇಡಿ;
* ಪದೇ ಪದೇ ಆಂಡ್ರಾಯ್ಡ್ ಸಾಫ್ಟ್​ವೇರ್ ಅಪ್​ಡೇಟ್ ಲಿಂಕ್ ಒತ್ತಬೇಡಿ;
* ಮೊಬೈಲ್​ನಲ್ಲಿರುವ ಸೆಟ್ಟಿಂಗ್ ಆಪ್​ನಲ್ಲಿ ಮಾತ್ರ ಅಪ್​ಡೇಟ್ ಮಾಡಬೇಕು;
* ಪ್ಲೇಸ್ಟೋರ್ ಹೊರತುಪಡಿಸಿ ಉಳಿದ ವೆಬ್​ಸೈಟ್ ಮೂಲಕ ಬೇರೆ ಆಪ್ ಡೌನ್​ಲೋಡ್ ಮಾಡಬೇಡಿ;
* ಫ್ರೀ ವೈಫೈ ಸಿಗುತ್ತದೆಂದು ಅದರಲ್ಲಿ ಹೆಚ್ಚು ಬಳಸಬೇಡಿ. ಅವಶ್ಯಕತೆಯಿದ್ದು ಬಳಸಿದರೂ ಬ್ಯಾಂಕ್, ವಾಲೆಟ್ ಪೇಮೆಂಟ್ ಆಪ್ ಬಳಸಬೇಡಿ

ಇದನ್ನೂ ಓದಿ: ಸ್ಯಾಮ್​ಸಂಗ್​ ಹೊರಡಿಸಿದೆ ಸ್ಪೆಷಲ್​ ಆಫರ್​; ಆಕರ್ಷಕ ಬೆಲೆಗೆ ಸ್ಮಾರ್ಟ್​ಫೋನ್​ಗಳು

ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಡೇಟಾ ಕಳವು ಪ್ರಕರಣ ವರುಷದಿಂದ ವರುಷಕ್ಕೆ ಹೆಚ್ವಾಗ್ತಿದೆ. ಕಳೆದೆರಡು ವರುಷ ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಪವರ್ ಕನೆಕ್ಷನ್ ಇರುವ ಕೇಬಲ್‌ ಮೂಲಕ ಜಾರ್ಜಿಂಗ್ ‌ಹಾಕುವುದರಿಂದ ಮೊಬೈಲ್‌ ಡೇಟಾಗೆ ತೊಂದರೆ ಇಲ್ಲ. ಆದರೆ ಯುಎಸ್​ಬಿ ಮೂಲಕ ಮೊಬೈಲ್ ಚಾರ್ಜ್ ಇದ್ದರೆ ಅಂಥ ಮೊಬೈಲ್​ಗಳ ಡಾಟಾವನ್ನು ಮಾಲ್​​ವೇರ್‌ ಮೂಲಕ ಹ್ಯಾಕ್‌ ಮಾಡಿ ಸೈಬರ್‌ ವಂಚಕರು ಅದರಲ್ಲಿ ನೆಟ್ ಬ್ಯಾಂಕಿಂಗ್, ಹಣಕಾಸು ಆಪ್​ಗಳ ಮೂಲಕ ನಿಮ್ಮ ಹಣವನ್ನು ದೋಚಿಬಿಡ್ತಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.

ವರದಿ: ಶರಣು ಹಂಪಿ
Published by: Vijayasarthy SN
First published: December 3, 2020, 7:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories