ತುಮಕೂರಲ್ಲಿ ಟೂಡಾ ಸೈಟ್ ಖರೀದಿ ಮಾಡೋ ಮುನ್ನ ಎಚ್ಚರ!

ತುಮಕೂರು ಮಹಾನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾಗುತಿದ್ದರಿಂದ ಸೈಟ್ ಗಳ ಬೆಲೆ ಗಗನಕ್ಕೇರಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಖದೀಮರು ಸೈಟ್ ಕೊಡಿಸೋದಾಗಿ ಹೇಳಿ ಮಧ್ಯಮ ವರ್ಗದ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೈಟ್​ಗಾಗಿ ನೀವು ಅರ್ಜಿ ಹಾಕಿದ್ದೀರಾ? ಅಲ್ಲಿ ಪುಟ್ಟದೊಂದು ಮನೆ ಕಟ್ಟಬೇಕೆಂಬ ಆಸೆ ಇದೆಯಾ? ಯಾವುದೇ ತೊಂದರೆ ಇಲ್ಲದೇ ಕೆಲಸ ಆಗಲಿ ಎಂದು ಬ್ರೋಕರ್ನಾ​ ಅನ್ನು ಹೀಡಿದಿದ್ದೀರಾ?  ಹಾಗಾದರೆ ಎಚ್ಚರ! ಬ್ರೋಕರ್ ಹೆಸರಲ್ಲಿ ನಿಮಗೆ ಪಂಗನಾಮ ಹಾಕುವ ಟೀಂ ಒಂದು ಹುಟ್ಟಿಕೊಂಡಿದೆ. ಸೈಟ್ ಕೊಡಿಸೋ ಆಸೆ ತೋರಿಸಿ ಹಣ ಗುಳುಂ ಮಾಡಿದ್ದಾರೆ. ತುಮಕೂರು ಮಹಾನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾಗುತಿದ್ದರಿಂದ ಸೈಟ್ ಗಳ ಬೆಲೆ ಗಗನಕ್ಕೇರಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಖದೀಮರು ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಸೈಟ್ ಕೊಡಿಸೋದಾಗಿ ಹೇಳಿ ಮಧ್ಯಮ ವರ್ಗದ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಲವು ಜನರಿಗೆ ಈ ಖತರ್ನಾಕ್ ಟೀಂ ಪಂಗನಾಮ ಹಾಕಿದ್ದು ಓರ್ವ ಮಾತ್ರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ತುಮಕೂರು ನಗರದ ಸದಾಶಿವನಗರದ ನಿವಾಸಿ ಅನ್ಸರ್ ಅಹಮದ್ ಖಾನ್ ಎಂಬುವವರಿಗೆ ಕಡಿಮೆ ಬೆಲೆಗೆ  ಟುಡಾ ಸೈಟ್ ಕೊಡಿಸೋದಾಗಿ ನಂಬಿಸಿ ಬರೋಬ್ಬರಿ 86 ಲಕ್ಷ ರೂ. ವಂಚಿಸಿದ್ದಾರೆ. ತುಮಕೂರು ಟೂಡಾ ಕಮಿಷನರ್ ಹೆಸರಿಗೆ ಡಿಡಿ ಪಡೆದು ವಂಚಿಸಿದ್ದಾರೆ. ವಂಚನೆಗೊಳಗಾದ ಅನ್ಸರ್ ಖಾನ್ ಕೊಟ್ಟ ದೂರಿನ ಮೇರೆಗೆ ತಿಲಪ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಪ್ರವೃತ್ತರಾದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಒಟ್ಟು 7 ಜನ ವೈಟ್ ಕಾಲರ್ ಆರೋಪಿಗಳನ್ನು ಬಂಧಿಸಿದ್ದಾರೆ.

ತುಮಕೂರು ನಗರದವರಾದ ಮಧು ಕುಮಾರ್,  ಗುರುಪ್ರಸಾದ್, ಶ್ರೀನಿವಾಸ್, ಆಯಾಜ್ ಅಹಮದ್, ಲೋಕೇಶ್ ಹಾಗೂ ಮಂಜುನಾಥ್ ಅವರನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದವರಾದ ಶೈಲಾ ಹಾಗೂ ಶ್ರೀನಿವಾಸ್ ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ 10 ಲಕ್ಷ ರೂ ನಗದು, ಕಾರು, ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರೋ ನೂತನ ಟೂಡಾ ಅಧ್ಯಕ್ಷ ನಾಗಣ್ಣ, ಸಾರ್ವಜನಿಕರು ಯಾವುದೇ ಬ್ರೋಕರ್ ಗಳ ಆಮಿಷಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಖತರ್ನಾಕ್ ಗ್ಯಾಂಗ್ ಹಲವು ಜನರಿಗೆ ಮೋಸ ಲಕ್ಷಾಂತರ ರೂ ಪಂಗನಾಮ ಹಾಕಿದೆ. ಕೆಲವರಿಗೆ ಬೆದರಿಕೆ ಹಾಕಿ ಸುಮ್ಮನಿರಿಸಿದೆ. ಇನ್ನೂ ಕೆಲವರು ಕೊಟ್ಟಂತಹ ಹಣವನ್ನು ಅರ್ಧಕರ್ಧ ವಾಪಸ್ ಪಡೆದುಕೊಂಡು ರಾಜಿಯಾಗಿದ್ದಾರೆ. ಆದರೆ ಅನ್ಸರ್ ಅಹಮದ್ ಅನ್ನೋರು ಮಾತ್ರ ಧೈರ್ಯದಿಂದ ದೂರು ಕೊಟ್ಟಿದ್ದಾರೆ. ಆ ಮೂಲಕ ವಂಚಕ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದು ಕಂಬಿ ಎಣಿಸುತಿದ್ದಾರೆ..
Published by:Sushma Chakre
First published: