ಬೆಂಗಳೂರಿನ ಅಕ್ಕ-ಪಕ್ಕದಲ್ಲೇ ಇವೆ ಬೆಸ್ಟ್​ ಟ್ರೆಕ್ಕಿಂಗ್ ಪ್ಲೇಸ್​ಗಳು; ವೀಕೆಂಡ್​ನಲ್ಲಿ ಹೋಗಿ ಎಂಜಾಯ್ ಮಾಡಿ..!

ಬೆಂಗಳೂರಿನಿಂದ 60 ಕಿಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿದುರ್ಗ, ಬೆಂಗಳೂರಿನಿಂದ 48 ಕಿಮೀ ದೂರದ ಸಾವನದುರ್ಗ ಬೆಟ್ಟ ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದ ಜಾಗವಾಗಿದೆ.

ಟ್ರೆಕ್ಕಿಂಗ್ ಸ್ಥಳಗಳು

ಟ್ರೆಕ್ಕಿಂಗ್ ಸ್ಥಳಗಳು

 • Share this:
  ಚಿಕ್ಕಬಳ್ಳಾಪುರ(ಜು.31): ಕೊರೋನಾ ಲಾಕ್‌ಡೌನ್‌ನಿಂದ ಲಾಕ್ ಆಗಿದ್ದ ಜೀವನ ಇದೀಗ ಹಂತ ಹಂತವಾಗಿ ತೆರೆಯುತ್ತಿದೆ. ಈ ನಡುವೆ ಮನರಂಜನೆ ಹಾಗೂ ಆರೋಗ್ಯ ದೃಷ್ಟಿಯಿಂದ ಉಪಯುಕ್ತವಾದ ಟ್ರೆಕ್ಕಿಂಗ್ ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಯುವ ಜನತೆ ಬೆಟ್ಟಗಳತ್ತ ಮುಖ ಮಾಡುತ್ತಿದ್ದಾರೆ. ರಾಜಧಾನಿ ಆಸುಪಾಸಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಸೇರಿ ಇತರೆ ಜಿಲ್ಲೆಗಳಲ್ಲಿ ಟ್ರೆಕಿಂಗ್ ತಾಣಗಳಿಗೆ ಚಾರಣಿಗರು ಬರುತ್ತಿದ್ದು ಪ್ರವಾಸೋದ್ಯಮಕ್ಕೆ ಮರುಜೀವ ಸಿಗಲಾರಂಭಿಸಿದೆ.

  ಚಾರಣ ಕೇಂದ್ರಗಳೇ ಟಾರ್ಗೆಟ್​

  ರಾಜಧಾನಿಯ ಐಟಿ ಕ್ಷೇತ್ರಗಳಲ್ಲಿ ವರ್ಕ್ ಫ್ರಂ ಹೋಂ ಪರಿಣಾಮದಿಂದಾಗಿ ಅನೇಕ ಯುವಕರು ವೀಕೆಂಡ್ ಟ್ರೆಕ್ಕಿಂಗ್ ಪ್ಲಾನ್ ಮಾಡುತ್ತಿದ್ದು, ಚಾರಣ ಕೇಂದ್ರಗಳೇ ಟಾರ್ಗೆಟ್ ಆಗುತ್ತಿವೆ. ಬೆಂಗಳೂರಿನಿಂದ 60 ಕಿಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿದುರ್ಗ, ಬೆಂಗಳೂರಿನಿಂದ 48 ಕಿಮೀ ದೂರದ ಸಾವನದುರ್ಗ ಬೆಟ್ಟ ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದ ಜಾಗವಾಗಿದೆ.

  ಬೆಂಗಳೂರಿನಿಂದ 55 ಕಿಮೀ ದೂರದಲ್ಲಿರುವ ರಾಮನಗರದ ಶಿವರಾಮಗಿರಿ, ಯತಿರಾಜಗಿರಿ, ಸೋಮಗಿರಿ, ಕೃಷ್ಣಗಿರಿ, ರೇವಣ ಸಿದ್ದೆಶ್ವರ ಬೆಟ್ಟ, ಜಲ ಸಿದ್ದೆಶ್ವರ ಬೆಟ್ಟ, ಸಿಡಿಲಕಲ್ಲಿ ಬೆಟ್ಟ ಟ್ರೆಕ್ಕಿಂಗ್ ಪ್ರಿಯರ ನೆಚ್ಚಿನ ತಾಣಗಳಾಗಿವೆ. ಸೂರ್ಯೋದಯದ ಸೊಬಗು ಮತ್ತು ಮುಂಜಾನೆ ಟ್ರೆಕ್ಕಿಂಗ್‌ಗೆ ಜನಪ್ರಿಯವಾಗಿರುವ ನಂದಿಬೆಟ್ಟ ಬೆಂಗಳೂರಿನಿಂದ 60 ಕಿಮೀ ದೂರದಲ್ಲಿದ್ದು ಚಾರಣಕ್ಕೆ ಕೈಬೀಸಿ ಕರೆಯುತ್ತಿದೆ.

  ಇದನ್ನೂ ಓದಿ:Karnataka Cabinet Expansion: ಬೊಮ್ಮಾಯಿ ಸಂಪುಟ ಸೇರಲು ಬೆಳಗಾವಿ ಬಿಜೆಪಿ ಶಾಸಕರಲ್ಲಿ ತೀವ್ರ ಪೈಪೋಟಿ; 13 ಮಂದಿ ಪೈಕಿ ಯಾರಿಗೆ ಒಲಿಯಲಿದೆ ಅದೃಷ್ಟ?

  ಇದಲ್ಲದೇ ಚಿಕ್ಕಬಳ್ಳಾಪುರದ ಸ್ಕಂದಗಿರಿ, ತುಮಕೂರಿನ ದೇವರಾಯನ ದುರ್ಗ, ಪ್ರಕೃತಿಗೆ ಸೊಬಗಿಗೆ ಹೆಸರಾಗಿರುವ ಬಿಳಿಕಲ್ ರಂಗಸ್ವಾಮಿ ಬೆಟ್ಟ, ಅಂತರಗಂಗೆ, ಪುರಾತನ ಕೋಟೆಗಳ ತಾಣವಾಗಿರುವ ಚನ್ನರಾಯನ ದುರ್ಗ ಸೇರಿದಂತೆ ಇನ್ನಿತರೆ ಬೆಟ್ಟಗಳಿಗೆ ಯುವಪಡೆ ವೀಕೆಂಡ್ ರಜಾದಿನಗಳಲ್ಲಿ ಮುತ್ತಿಗೆ ಹಾಕುತ್ತಿರುವುದು ಕಂಡು ಬರುತ್ತಿದೆ.

  ಕಟ್ಟು ನಿಟ್ಟಿನ ಕ್ರಮ

  ಬೆಂಗಳೂರಿನ ಕೂಗಳತೆ ದೂರದಲ್ಲಿನ ಕೆಲ ಬೆಟ್ಟಗಳಿಗೆ ಸಂರಕ್ಷಿತ ಅರಣ್ಯವೆಂಬ ಹಣೆಪಟ್ಟಿಯಿದೆ. ಇಂಥಹ ಪ್ರದೇಶಗಳಿಗೆ ಜನರ ಪ್ರವೇಶ ನಿಷಿದ್ಧವಿದ್ದರೂ ನಿಯಮ ಉಲ್ಲಂಘನೆ ಸಾಮಾನ್ಯವೆಂಬಂತಾಗಿದೆ. ಇಂತಹ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಪ್ರತ್ಯಕ್ಷರಾಗಿ ದಂಡ ವಿಧಿಸುವುದು ಕಂಡುಬರುತ್ತಿದೆ. ಈ ಪ್ರದೇಶಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಗಾರ್ಡ್​​ಗಳನ್ನು ನೇಮಕ ಮಾಡುವ ಮೂಲಕ ಹೊರಜಿಲ್ಲೆಗಳ ಪ್ರವಾಸಿಗರಿಗೆ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಆ ಮೂಲಕ ಚಾರಣಿಗರ ಜೇಬಿಗೆ ಬೀಳಬಹುದಾದ ದಂಡದ ಹೊರೆಯನ್ನು ಇಳಿಸುವ ಕೆಲಸವಾಗಬೇಕೆನ್ನುವುದು ಚಾರಣಿಗೆ ಪ್ರಶಾಂತ್ ಅಭಿಪ್ರಾಯ.

  ಚಾರಣಿಗರೇ ಎಚ್ಚರ!

  ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ತುಮಕೂರಿನ ಬೆಟ್ಟಗಳು ಮಳೆಯಿಂದಾಗಿ ಹಸಿರಿನ ಸೊಬಗನ್ನು ಹೊದ್ದಿವೆ. ಈ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ವೀಕೆಂಡ್‌ಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಬರುತ್ತಿರುವ ಚಾರಣಿಗರು ಎಚ್ಚರ ತಪ್ಪುತ್ತಿರುವುದು ಕಂಡುಬರುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಅನೇಕರು ಬಂಡೆಗಲ್ಲುಗಳ ಮೇಲೆ ಹತ್ತಲು ಹೋಗಿ, ಸೆಲಿ ತೆಗೆದುಕೊಳ್ಳಲು ನಿಂತು ಕಾಲು ಜಾರಿ, ಆಯ ತಪ್ಪಿ ಬಿದ್ದು ಪ್ರಾಣ ಬಿಟ್ಟಿರುವ ಉದಾಹರಣೆಗಳಿವೆ. ಈ ಹಿನ್ನೆಲೆ ಪ್ರವಾಸಿಗರು ಬೆಟ್ಟ ಹತ್ತುವ ಉತ್ಸಾಹದಲ್ಲಿ ಪ್ರಾಣದ ಕಡೆ ಹೆಚ್ಚಿನ ಎಚ್ಚರಿಕೆಯನ್ನಿರಿಸಬೇಕಾದ ಅನಿವಾರ್ಯ ಸ್ಥಿತಿಯಿದೆ ಎನ್ನುವುದು ನಮ್ಮ ಕಳಕಳಿ.

  ಇದನ್ನೂ ಓದಿ:ಮಂತ್ರಿಮಂಡಲ ರಚನೆಗೆ ನಾನು ಮಧ್ಯಪ್ರವೇಶ ಮಾಡಲ್ಲ ಎಂದರೂ ಬಿಎಸ್​ವೈ ಭೇಟಿಗೆ ಬರುತ್ತಿರುವ ಶಾಸಕರು

  ಆರೋಗ್ಯಕ್ಕೆ ಚಾರಣ 

  * ಮನಸ್ಸಿನ ಆರೋಗ್ಯ ಸಹಕಾರಿ

  * ಉಸಿರಾಟದ ಸಮಸ್ಯೆ ಸಹಾಯಕ

  * ದೇಹವನ್ನು ಸದೃಢಗೊಳಿಸಲು ಚಾರಣ ಸಹಕಾರಿ

  * ಕಾಲುಗಳಿಗೆ ಉತ್ತಮ ವ್ಯಾಯಾಮ

  * ಶುದ್ದಗಾಳಿ ಪಡೆಯಲು,ಮನಸ್ಸಿಗೆ ಉತ್ತಮ ವ್ಯಾಯಾಮ

  ಹೆಚ್ಚಿದ ನಿರೀಕ್ಷೆ

  ಕೊರೋನಾ ನಂತರ ಯುವಕರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿದ್ದು, ಟ್ರೆಕ್ಕಿಂಗ್​​ಗೆ ಯುವಕರು ಮುಂದಾಗುತ್ತಿದ್ದಾರೆ. ಚಾರಣ ತಾಣಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದರೆ ಮತ್ತಷ್ಟು ಮಂದಿ ಟ್ರೆಕ್ಕಿಂಗ್ ಕಡೆಗೆ ಬರುವ ನಿರೀಕ್ಷೆಯಿದೆ.
  Published by:Latha CG
  First published: