ಸಾಮಾನ್ಯವಾಗಿ ಬೆಂಗಳೂರಿನಲ್ಲಿ (Bengaluru) ಒಂದೆಲ್ಲ ಒಂದು ಸಮಸ್ಯೆ (Problem) ಇರುತ್ತದೆ. ಸರಿಯಾದ ಸಮಯಕ್ಕೆ ನೀರು ಬರುವುದಿಲ್ಲ, ಕೆಲವೊಮ್ಮೆ ಪವರ್ ಕಟ್ (Power Cut) ಸಮಸ್ಯೆಯಾಗುತ್ತದೆ. ಇದೆಲ್ಲದರ ಜೊತೆಗೆ ಇಲ್ಲಿ ಯಾವಾಗ ಮಳೆ (Rain) ಬರುತ್ತದೆ ಎಂಬುದನ್ನ ಹೇಳುವುದು ಸಾಧ್ಯವಿಲ್ಲ. ಮಳೆ ಬಂದರೆ ಮರಗಳು (Tree) ಉರುಳಿ ಬೀಳುತ್ತದೆ. ಅವುಗಳನ್ನು ತೆರವುಗೊಳಿಸಲು ಯಾರಿಗಾದರೂ ಹೇಳಬೇಕು, ಹೀಗೆ ಒಂದಲ್ಲ ಎರೆಡಲ್ಲ ಸಾವಿರಾರು ಸಮಸ್ಯೆಗಳು ಎನ್ನಬಹುದು. ಆದರೆ ಹಲವಾರು ಜನರಿಗೆ ಈ ಸಮಸ್ಯೆಗಳಾದಾಗ ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿದಿರುವುದಿಲ್ಲ. ಅದರಲ್ಲೂ ಇಲ್ಲಿ ಪವರ್ ಕಟ್ ಸಮಸ್ಯೆ ಮುಗಿಯದ ಗೋಳು ಎನ್ನಬಹುದು. ಯಾವಾಗ ಹೋಗುತ್ತದೆ, ಬರುತ್ತದೆ ಎಂಬುದು. ದಿನಕ್ಕೋಮದು ನೆಪ ಹೇಳಿ ಇಲ್ಲಿ ಕರೆಂಟ್ ತೆಗೆಯಲಾಗುತ್ತದೆ. ಅದು ಪ್ರಶ್ನಿಸಲು ಇಷ್ಟು ದಿನ ಒಂದೇ ಸಹಾಯವಾಣಿ ಇತ್ತು. ಆದರೆ ಈಗ ವಾಟ್ಸ್ಅಪ್ ನಂಬರ್ ಸಹ ಬಿಡುಗಡೆ ಮಾಡಲಾಗಿದೆ.
ಹೌದು, ಇಷ್ಟು ದಿನ ಬೆಸ್ಕಾಂಗೆ ದೂರು ನೀಡಲು ಕೇವಲ 1912 ಹೆಲ್ಪ್ಲೈನ್ ನಂಬರ್ ಇತ್ತು, ಈಗ ಇಂಧನ ಸಚಿವ ಸುನೀಲ್ ಕುಮಾರ್ ವಾಟ್ಸ್ ಅಪ್ ನಂಬರ್ ಬಿಡುಗಡೆ ಮಾಡಿದ್ದಾರೆ. ಇಂದು ಬೆಸ್ಕಾಂ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿದ್ಯುತ್ ಸಮಸ್ಯೆ ಬಗೆ ಹರಿಸಲು ವಾಟ್ಸ್ ಅಪ್ ನಂಬರ್ ಬಿಡುಗಡೆ ಮಾಡಲಾಗಿದ್ದು, ಮೊದಲ ಬಾರಿಗೆ ವಾಟ್ಸ್ ಅಪ್ ಮೂಲಕ ದೂರು ನೀಡಲು ಅವಕಾಶ ನೀಡಿದ್ದೇವೆ ಎಂದಿದ್ದಾರೆ. ಇನ್ನು ಪ್ರತಿ ಜಿಲ್ಲೆಗೂ ಅಂದರೆ ಬೆಸ್ಕಾಂ ಅಡಿಯಲ್ಲಿ ಬರುವ 8 ಜಿಲ್ಲೆಗಳಿಗೆ ಬೇರೆ ಬೇರೆ ವಾಟ್ಸ್ಅಪ್ ಸಹಾಯವಾಣಿ ಬಿಡುಗಡೆ ಮಾಡಲಾಗುತ್ತದ ಎಎಂದು ತಿಳಿಸಿದ್ದಾರೆ. ಇನ್ನು ಸದ್ಯ ಬೆಂಗಳೂರಿಗೆ ಒಟ್ಟು 4 ವಾಟ್ಸ್ ಅಪ್ ನಂಬರ್ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೂರು ಸಲ್ಲಿಸುವ ನಂಬರ್ಗಳು ಹೀಗಿದೆ
ಬೆಂಗಳೂರು ದಕ್ಷಿಣ 8277884011
ಬೆಂಗಳೂರು ಪಶ್ಚಿಮ 8277884012
ಬೆಂಗಳೂರು ಪೂರ್ವ 8277884013
ಬೆಂಗಳೂರು ಉತ್ತರ 8277884014
ಕೋಲಾರ ಜಿಲ್ಲೆ 8277884015
ಚಿಕ್ಕಬಳ್ಳಾಪುರ ಜಿಲ್ಲೆ 8277884016
ಬೆಂಗಳೂರು ಗ್ರಾಮಾಂತರ 8277884017
ರಾಮನಗರ ಜಿಲ್ಲೆ 8277884018
ತುಮಕೂರು ಜಿಲ್ಲೆ 8277884019
ಚಿತ್ರದುರ್ಗ ಜಿಲ್ಲೆ 8277884020
ದಾವಣಗೆರೆ ಜಿಲ್ಲೆ 8277884021
ಈ ಜಿಲ್ಲೆಗಳ ಜನರು ಯಾವುದೇ ವಿದ್ಯುತ್ ಸಮಸ್ಯೆ ಎದುರಿಸಿದ್ದಲ್ಲಿ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ಸರ್ಕಾರದ ವಿರುದ್ಧ ಸಿಎಂ ಇಬ್ರಾಹಿಂ ವಾಗ್ದಾಳಿ, "ಇದು ಗಂಡಸೂ ಅಲ್ಲ, ಹೆಂಗಸೂ ಅಲ್ಲ" ಎಂದ ಜೆಡಿಎಸ್ ರಾಜ್ಯಾಧ್ಯಕ್ಷ!
ಇನ್ನು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ, ಮಳೆಯ ಅವಾಂತರಕ್ಕೆ ಯಾರನ್ನು ಸಂಪರ್ಕಿಸಬೇಕು ಎಂಬುದು ಇಲ್ಲಿದೆ.
ನೀರಿನ ಸಮಸ್ಯೆಗೆ
ಬೆಂಗಳೂರಿನಲ್ಲಿ ಕರೆಂಟ್ ಸಮಸ್ಯೆ ನಂತರ ಹೆಚ್ಚು ಜನರು ಪರದಾಡುವುದು ನೀರಿಗೆ. ನೀರು ಒಂದು ದಿನ ಬಂದರೆ ಇನ್ನೊಂದು ದಿನ ಬರುತ್ತದೆ, ಕೆಲವೊಮ್ಮೆ 2 ರಿಂದ 3 ದಿನ ಬರುವುದಿಲ್ಲ. ಒಂದು ದಿನಕ್ಕೆ ಎಂದರೆ ನೀರನ್ನು ಇಟ್ಟುಕೊಳ್ಳಲು ಪಾತ್ರೆಗಳಿರುತ್ತದೆ, ಆದರೆ 2 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಆದರೆ ಜನರಿಗೆ ಮೊದಲೇ ತಿಳಿದಿರಬೇಕು ಇಲ್ಲದಿದ್ದಲ್ಲಿ ನೀರಿಗಾಗಿ ಪರದಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ನೀವು ಸಂಪರ್ಕಿಸಬೇಕು.
ಇದನ್ನೂ ಓದಿ: Sorry ಅಂತ ಇಡೀ ಊರೆಲ್ಲ ಬರೆದ ಪಾಗಲ್ ಪ್ರೇಮಿ! ಕೊನೆಗೆ ಕ್ಷಮಿಸಿದಳಾ ಆ ಬೆಳದಿಂಗಳ ಬಾಲೆ?
ಮಳೆಯ ಅವಾಂತರಕ್ಕೆ
ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು ಅವಾಂತರಗಳು ಬಹಳಷ್ಟು ಆಗುತ್ತದೆ. ರಸ್ತೆಗಳಲ್ಲಿ ನೀರು ನಿಲ್ಲುತ್ತದೆ, ಮರಗಳು ಉರುಳಿ ಬೀಳುತ್ತವೆ. ಅಲ್ಲದೇ ಕೆಲ ಮನೆ ಒಳಗೆ ನೀರು ನುಗ್ಗಿ ಜನರು ಪರದಾಡುವ ಸಮಸ್ಯೆ ಉಂಟಾಗುತ್ತದೆ. ಈ ಸಮಯದಲ್ಲಿ ನೀವು 080-22221188 ಈ ನಂಬರ್ಗೆ ಕರೆ ಮಾಡಿದರೆ ತಕ್ಷಣವೇ ಪರಿಹಾರ ಲಭಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ