ಬೆಂಗಳೂರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸೈಟ್‌ ಮಾರುತ್ತಿದ್ದ ಜಾಲ ಪತ್ತೆ: ಐವರು ಆರೋಪಿಗಳ ಬಂಧನ

ಆರೋಪಿಗಳು ವ್ಯವಸ್ಥಿತವಾಗಿ ಜನನ ಪ್ರಮಾಣ ಪತ್ರ, ಮರಣ ಪ್ರಮಾಣಪತ್ರ ಮತ್ತು ಸೈಟಿನ ಮೂಲ ದಾಖಲಾತಿಯನ್ನು ಸೃಷ್ಟಿಸಿ ಸೈಟ್​​ ನ್ನು ಮಾರಾಟ ಮಾಡುತ್ತಿದ್ದರು

ನಕಲಿ ದಾಖಲೆಗಳು

ನಕಲಿ ದಾಖಲೆಗಳು

  • Share this:
ಬೆಂಗಳೂರು(ಮಾ. 18): ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೈಟ್​ಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬಸವೇಶ್ವರ ನಗರ ಪೊಲೀಸರು ಭೇದಿಸಿದ್ದು, ಐವರನ್ನು ಬಂಧಿಸಿದ್ದಾರೆ. ವಿನಯ್, ವಿಶ್ವನಾಥ್, ಸೈಯದ್ ಯೂಸೂಫ್ , ಚಂದ್ರಶೇಖರ್ ಹಾಗೂ ಶಿವಮ್ಮ ಬಂಧಿತ ಅರೋಪಿಗಳು.

ಆರೋಪಿಗಳಿಂದ 71 ನಕಲಿ ಸರ್ಕಾರಿ ಸೀಲ್​ಗಳು, ಹಕ್ಕು ಪತ್ರ, ಶಾಲಾ ವರ್ಗಾವಣೆ ಪತ್ರ, ಎಂಐಐ ಗೃಹ ನಿರ್ಮಾಣ ಸಹಕಾರಿ ಸಂಘದ ಸೈಟಿಗೆ ಸೇರಿದ್ದ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ವ್ಯವಸ್ಥಿತವಾಗಿ ಜನನ ಪ್ರಮಾಣ ಪತ್ರ, ಮರಣ ಪ್ರಮಾಣಪತ್ರ ಮತ್ತು ಸೈಟಿನ ಮೂಲ ದಾಖಲಾತಿಯನ್ನು ಸೃಷ್ಟಿಸಿ ಸೈಟ್​​ ನ್ನು ಮಾರಾಟ ಮಾಡುತ್ತಿದ್ದರು. ವಿನಯ್ ಕುಮಾರ್ ಅಲಿಯಾಸ್ ಸ್ಟಾಂಪ್ ವಿನಿ ಈ ಜಾಲದ ಮುಖ್ಯಸ್ಥನಾಗಿದ್ದ ಎನ್ನಲಾಗಿದೆ.

ನಕಲಿ ದಾಖಲೆಗಳನ್ನು ಬಳಸಿ ಇಲ್ಲಿಯವರೆಗೆ ಒಂಬತ್ತು ಸೈಟುಗಳನ್ನು ಆರೋಪಿಗಳು ಮಾರಾಟ ಮಾಡಿದ್ದಾರೆ. ವಿದೇಶದಲ್ಲಿ ಇರುವಂತಹ ವ್ಯಕ್ತಿಗಳ ಸೈಟುಗಳನ್ನು ಇವರು ಗುರುತಿಸುತ್ತಿದ್ದರು. ನಂತರ ಸೈಟ್​​ನ ನಕಲಿ ದಾಖಲೆಗಳನ್ನು ತಯಾರಿಸಿ ಸೈಟ್​ಗಳನ್ನು ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ : ವಿದೇಶದಿಂದ ಮರಳಿದವರ ಬಡಾವಣೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ; ಸೂಚನೆ ಪಾಲಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ

ನಕಲಿ ದಾಖಲೆ ನೀಡಿ ಬ್ಯಾಂಕ್​ವೊಂದರಲ್ಲಿ 70 ಲಕ್ಷ ಸಾಲ ರೂಪಾಯಿ ಸಾಲವನ್ನು ಸಹ  ಆರೋಪಿಗಳು ಪಡೆದಿದ್ದರು. ಕಳೆದ ಒಂದು ವರ್ಷದಿಂದ ಇವರು ನಕಲಿ ಸೈಟ್​​ಗಳನ್ನು ಮಾರಾಟ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ.
First published: